ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

|

ಜಾಗತಿಕವಾಗಿ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಟಾಪ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌. ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಹಂತ ಹಂತವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ.ಇನ್ನು ನೀವು ಅನೇಕ ವಾಟ್ಸಾಪ್ ಖಾತೆಗಳನ್ನು ಹೊಂದಿದ್ದರೆ, ಒಂದೇ ಸಂಖ್ಯೆಗೆ ನಿಮ್ಮ ವಾಟ್ಸಾಪ್‌ ಖಾತೆಗೆ ಬದಲಾಯಿಸಿಕೊಳ್ಳಲು ಬಯಸಿದರೆ ಅದಕ್ಕೂ ಸಹ ಅವಕಾಶವಿದೆ. ಫೇಸ್‌ಬುಕ್ ಒಡೆತನದ ವಾಟ್ಸಾಪ್ ನಿಮ್ಮ ವಾಟ್ಸಾಪ್‌ ಸಂಖ್ಯೆಯನ್ನು ಬದಲಾಯಿಸಲು ಸಹ ಅನುಮತಿಸುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರು ವಾಟ್ಸಾಪ್ ಖಾತೆಗೆ ಸಂಬಂಧಿಸಿದ ಫೋನ್ ಸಂಖ್ಯೆಯನ್ನು ಬದಲಾಯಿಸಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಇರುವ ವಾಟ್ಸಾಪ್‌ ಖಾತೆಯಿಂದ ಮತ್ತೊಂದು ಸಂಖ್ಯೆಗೆ ವಾಟ್ಸಾಫ್‌ ಖಾತೆ ಬದಲಾಯಿಸಿದರೆ ನಿಮ್ಮ ಡೇಟಾ ಕಳೆದು ಹೋಗುವುದಿಲ್ಲ.ಇದಕ್ಕೆ ವಾಟ್ಸಾಪ್‌ ಕೆಲವು ಹಂತಗಳಲ್ಲಿ ಅವಕಾಶವನನ್ಉ ನೀಡಿದ್ದು, ಇದರ ಮೂಲಕ ನಿಮ್ಮ ಹೊಸ ಸಂಖ್ಯೆಯನ್ನು ಸಹ ನೀವು ವಾಟ್ಸಾಪ್‌ನಲ್ಲಿ ಬಳಸಬಹುದು. ಹಾಗಾದ್ರೆ ವಾಟ್ಸಾಪ್‌ ಖಾತೆಯನ್ನು ಹೊಸ ನಂಬರ್‌ಗೆ ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವ ಮೊದಲು, ನಿಮ್ಮ ಹೊಸ ಫೋನ್ ಸಂಖ್ಯೆ SMS ಅಥವಾ ಫೋನ್ ಕರೆಗಳನ್ನು ಸ್ವೀಕರಿಸಲಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ನೀವು ಸಕ್ರಿಯ ಸೆಲ್ಯುಲಾರ್ ಸಂಪರ್ಕವನ್ನು ಹೊಂದಿದ್ದೀರಾ ಎಂದು ಪರಿಶೀಲಿಸಬೇಕು. ಅಲ್ಲದೆ, ನಿಮ್ಮ ಹಳೆಯ ಫೋನ್ ಸಂಖ್ಯೆಯನ್ನು ಪ್ರಸ್ತುತ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಾಟ್ಸಾಪ್ ಸೆಟ್ಟಿಂಗ್‌ಗಳನ್ನು ತೆರೆಯುವ ಮೂಲಕ ಮತ್ತು ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ನೀವು ಕಾಣಬಹುದಾಗಿದೆ.

ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ ಫೋನ್‌ನಲ್ಲಿ ವಾಟ್ಸಾಪ್‌ ಮೆಸೇಜಿಂಗ್ ಅಪ್ಲಿಕೇಶನ್ ತೆರೆಯಿರಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ:2 ಖಾತೆ ವಿಭಾಗಕ್ಕೆ ಭೇಟಿ ನೀಡಿ ಮತ್ತು ಬದಲಾವಣೆ ಸಂಖ್ಯೆಯನ್ನು ಟ್ಯಾಪ್ ಮಾಡಿ.

ಹಂತ:3 ನಂತರ ನಿಮ್ಮ ಹಳೆಯ ಸಂಖ್ಯೆ ಮತ್ತು ಹೊಸ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.

ಹಂತ:4 ಅದರ ನಂತರ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸಬೇಕು.

ವಾಟ್ಸಾಪ್

ಇನ್ನು ನಿಮ್ಮ ವಾಟ್ಸಾಪ್ ಖಾತೆಯನ್ನು ಅಳಿಸಲು ನೀವು ಬಯಸಿದರೆ, ವಾಟ್ಸಾಪ್‌ ಸೆಟ್ಟಿಂಗ್ಸ್‌> ಅಕೌಂಟ್‌> ಡಿಲಿಟ್‌ ಅಕೌಂಟ್‌. ಅನ್ನು ಸರಿಸಬೇಕಾಗಿದೆ. ಅಲ್ಲದೆ ನಿಮ್ಮ ಫೋನ್ ಸಂಖ್ಯೆ ಮತ್ತು ಪ್ರದೇಶವನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಒಮ್ಮೆ ನೀವು "NEXT" ಅನ್ನು ಒತ್ತಿದರೆ, ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ಡಿಲೀಟ್‌ ಮಾಡಲು ಕಾರಣವನ್ನು ಕೇಳುತ್ತದೆ. ಆಯ್ಕೆ ಮಾಡಲು ನಿಮಗೆ ಕೆಲವು ಆಯ್ಕೆಗಳನ್ನು ನೀಡಲಾಗುವುದು. ನೀವು ಅದನ್ನು ಮಾಡಿದ ನಂತರ, ನಿಮ್ಮ ಖಾತೆಯನ್ನು ಡಿಲೀಟ್‌ ಮಾಡಲಾಗುತ್ತದೆ. ಆದರೆ, ಅದಕ್ಕೂ ಮೊದಲು, ನಿಮ್ಮ ಎಲ್ಲಾ ಡೇಟಾವನ್ನು ನೀವು ಬ್ಯಾಕಪ್ ಮಾಡಬೇಕಾಗುತ್ತದೆ.

Best Mobiles in India

Read more about:
English summary
WhatsApp is one of the most used messaging apps all over the world. But, if you have multiple WhatsApp accounts and are tired of using them, you can easily delete them. The Facebook-owned company eve.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X