Home
ಸುದ್ದಿಜಾಲ

ಯುಟ್ಯೂಬ್‌ನಲ್ಲಿ ನಿಮ್ಮ ಚಾನಲ್ ಹೆಸರು ಬದಲಾಯಿಸುವುದು ಈಗ ಇನ್ನಷ್ಟು ಸುಲಭ!

ಗೂಗಲ್‌ ಒಡೆತನದ ಯೂಟ್ಯೂಬ್ ಈಗಾಗಲೇ ವಿಶ್ವದಾದ್ಯಂತ ಜನಪ್ರಿಯಗಳಿಸಿರುವ ವೀಡಿಯೊ ಪ್ಲಾಟ್‌ಫಾರ್ಮ್ ಆಗಿದೆ. ಯೂಟ್ಯೂಬ್ ತನ್ನ ವಿಶೇಷ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಆಗಿದ್ದು, ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಮ್ಯೂಸಿಕ್ ಮತ್ತು ವಿಡಿಯೋ ಎರಡನ್ನು ಒಳಗೊಂಡಿರುವ ಯೂಟ್ಯೂಬ್ ಬಳಕೆದಾರರಿಗೆ ನೆಚ್ಚಿನ ಮನರಂಜನೆಯ ತಾಣವಾಗಿದೆ. ಅಷ್ಟೇ ಅಲ್ಲ ಬಳಕೆದದಾರರು ತಮ್ಮದೇ ಆದ ಯುಟ್ಯೂಬ್‌ ಚಾನಲ್‌ ಕ್ರಿಯೆಟ್‌ ಮಾಡುವ ಅವಕಾಶ ಇರುವುದರಿಂದ ಯುವಜನತೆ ಯುಟ್ಯೂಬ್‌ ಕಡೆಗೆ ಹೆಚ್ಚಿನ ಒಲವು ಹೊಂದಿದ್ದಾರೆ.

ಯುಟ್ಯೂಬ್‌

ಹೌದು, ಯುಟ್ಯೂಬ್‌ ನಲ್ಲಿ ಬಳಕೆದಾರರು ತಮ್ಮದೇ ಆದ ಚಾನೆಲ್‌ ಕ್ರಿಯೆಟ್‌ ಮಾಡಬಹುದು. ಸದ್ಯ ಇದೀಗ ಬಳಕೆದಾರರು ತಮ್ಮ ಗೂಗಲ್‌ ಅಕೌಂಟ್‌ಗೆ ಯಾವುದೇ ಧಕ್ಕೆಯಾಗದಂತೆ ತಮ್ಮ ಚಾನಲ್ ಹೆಸರು ಮತ್ತು ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಯುಟ್ಯೂಬ್‌ ಇದೀಗ ಅವಕಾಶ ನೀಡಿದೆ. ಯುಟ್ಯೂಬ್‌ ಕ್ರಿಯೆಟರ್ಸ್‌ ಇದೀಗ ತಮ್ಮ ಗೂಗಲ್‌ ಅಕೌಂಟ್‌ನಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾದ ಚಾನಲ್ ಹೆಸರು ಮತ್ತು ಪ್ರೊಫೈಲ್ ಅನ್ನು ಸೆಟ್‌ ಮಾಡಲು ಸಾಧ್ಯವಾಗುತ್ತದೆ. ಹಾಗಾದ್ರೆ ಯುಟ್ಯೂಬ್‌ ಕಲ್ಪಿಸಿರುವ ಈ ಹೊಸ ಅವಕಾಶದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚಾನಲ್

ಇಲ್ಲಿ ತನಕ ನಿಮ್ಮ YouTube ಚಾನಲ್ ಹೆಸರು ಅಥವಾ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವುದರಿಂದ ನಿಮ್ಮ Google ಖಾತೆಯಲ್ಲೂ ಮತ್ತು Gmail ನಲ್ಲಿಯೂ ಇದೇ ಬದಲಾಗುತ್ತಿತ್ತು. ಆದರೆ ಇದೀಗ ಗೂಗಲ್‌ ಅಕೌಂಟ್‌ನಲ್ಲಿ ಪ್ರೋಫೈಲ್‌ ಚೇಂಜ್‌ ಮಾಡದೆ ಯುಟ್ಯೂಬ್‌ ಚಾನೆಲ್‌ನಲ್ಲಿ ಚೇಂಜ್‌ ಮಾಡುವ ಅವಕಾಶವನ್ನು ನೀಡಿಎ. YouTube, Gmail ಮತ್ತು ಇತರ ಸೇವೆಗಳಿಗಾಗಿ ಕೇವಲ ಒಂದು Google ಖಾತೆಯನ್ನು ಮಾತ್ರ ಇರಿಸಲು ಬಯಸುವ ಯುಟ್ಯೂಬ್‌ ಕ್ರಿಯೆಟರ್ಸ್‌ಗೆ ಈ ಹೊಸ ಅಪ್ಡೇಟ್‌ ಸಹಾಯಕವಾಗಿರಲಿದೆ.

ಯುಟ್ಯೂಬ್‌

ಇನ್ನು ಯುಟ್ಯೂಬ್‌ ಚಾನಲ್ ಹೆಸರಿನ ಸಮಸ್ಯೆಯಿಂದಾಗಿ ಈಗ ಯುಟ್ಯೂಬ್‌ ಕ್ರಿಯೆಟರ್ಸ್‌ ಯೂಟ್ಯೂಬ್‌ಗಾಗಿ ಮತ್ತೊಂದು ಗೂಗಲ್‌ ಅಕೌಂಟ್‌ ಅನ್ನು ರಚಿಸಬೇಕಾದ ಅವಶ್ಯಕತೆ ಇಲ್ಲ. ಈ ಹೊಸ ಅಪ್ಡೇಟ್‌ನ ನಂತರ ತಮ್ಮ ಚಾನಲ್ ಹೆಸರನ್ನು ಬದಲಾಯಿಸಲು ಆರಿಸಿದರೆ ಯುಟ್ಯೂಬ್‌ ಕ್ರಿಯೆಟರ್ಸ್‌ ಪರಿಶೀಲನೆ ಬ್ಯಾಡ್ಜ್‌ಗೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಈಗಾಗಲೇ ಪರಿಶೀಲಿಸಿದ ಬ್ಯಾಡ್ಜ್ ಹೊಂದಿರುವ ಕ್ರಿಯೆಟರ್ಸ್‌ ಅನ್ನು ಇದು ನಿರಾಶೆಗೊಳಿಸಬಹುದು. ಆದರೆ ವೈಯಕ್ತಿಕ ಯೂಟ್ಯೂಬರ್‌ಗಳು ಮತ್ತು ಬ್ರಾಂಡ್ ಖಾತೆಗಳು ಇದೀಗ ತಮ್ಮ ಚಾನಲ್ ಹೆಸರುಗಳನ್ನು ಬದಲಾಯಿಸಲು ಸುಲಭವಾಗಲಿದೆ. ಹಾಗಾದ್ರೆ ನಿಮ್ಮ ಯುಟ್ಯೂಬ್‌ ಚಾನಲ್‌ ಹೆಸರು ಬದಲಾಯಿಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ನಿಮ್ಮ YouTube ಚಾನಲ್ ಹೆಸರನ್ನು ಬದಲಾಯಿಸುವುದು ಹೇಗೆ?

ನಿಮ್ಮ YouTube ಚಾನಲ್ ಹೆಸರನ್ನು ಬದಲಾಯಿಸುವುದು ಹೇಗೆ?

ಹಂತ:1 ಡೆಸ್ಕ್‌ಟಾಪ್‌ನಲ್ಲಿ YouTube ಸ್ಟುಡಿಯೋ ತೆರೆಯಿರಿ.

ಹಂತ:2 ಮೆನು ಬಾರ್ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಗ್ರಾಹಕೀಕರಣವನ್ನು ಆರಿಸಿ.

ಹಂತ:3 ನಿಮ್ಮ ಚಾನಲ್ ಹೆಸರನ್ನು ಬದಲಾಯಿಸಲು ‘ಮೂಲ ಮಾಹಿತಿ' ಆಯ್ಕೆಮಾಡಿ ಮತ್ತು ಪೆನ್ಸಿಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ:4 ಮೊಬೈಲ್‌ನಲ್ಲಿ, ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

ಹಂತ:5 ‘ನಿಮ್ಮ ಚಾನಲ್' ಟ್ಯಾಪ್ ಮಾಡಿ ಮತ್ತು ಸಂಪಾದನೆ ಚಾನಲ್ ಆಯ್ಕೆಮಾಡಿ.

ಹಂತ:6 ಇಲ್ಲಿಗೆ ಒಮ್ಮೆ, ನಿಮ್ಮ ಚಾನಲ್ ಹೆಸರನ್ನು ಬದಲಾಯಿಸಲು ಪೆನ್ಸಿಲ್ ಐಕಾನ್ ಟ್ಯಾಪ್ ಮಾಡಿ.

ಈ ಮೂಲಕ ನಿಮ್ಮ ಯುಟ್ಯೂಬ್‌ ಚಾನಲ್‌ ಹೆಸರನ್ನು ಬದಲಾಯಿಸಬಹುದಾಗಿದೆ.

Best Mobiles in India

English summary
How to change YouTube channel name without changing google account.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+