ವಾಟ್ಸಾಪ್ ಚಾಟ್ ತೆರೆಯದೆ ನಿಮ್ಮ ಸ್ನೇಹಿತರ ಸಂದೇಶಗಳನ್ನು ಓದುವುದು ಹೇಗೆ?

|

ವಾಟ್ಸಾಪ್‌ ವಿಶ್ವದಲ್ಲಿಯೇ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಅಲ್ಲದೆ ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ವಾಟ್ಸಾಪ್‌ ಮೂಲಕ ಚಾಟ್‌ ಮಾಡೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ವಾಟ್ಸಾಪ್‌ ಚಾಟ್‌ ಮಾಡುವಾಗಲೂ ಕೂಡ ನೀವು ಕೆಲವೊಂದು ಹಿಡನ್‌ ಫಿಚರ್ಸ್‌ಗಳನ್ನು ಬಳಸಬಹುದಾಗಿದೆ. ಅದರಲ್ಲೂ ಕೆಲವೊಮ್ಮೆ ನೀವು ಕಂಟ್ಯಾಕ್ಟ್‌ ಚಾಟ್‌ ತೆರೆಯದ ಮೆಸೇಜ್‌ ಓದಲು ಬಯಸಿದರೆ ಅದಕ್ಕೂ ಕೂಡ ಅವಕಾಶವಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ನೀವು ನಿಮ್ಮ ಸ್ನೇಹಿತರ ಕಂಟ್ಯಾಕ್ಟ್‌ ಚಾಟ್‌ ತೆರೆಯದೆ ಅವರ ಸಂದೇಶಗಳನ್ನು ಓದಬೇಕಾ? ಕೆಲವು ಸಂದರ್ಭಗಳಲ್ಲಿ ಚಾಟ್‌ ತೆರೆಯದೆ ಮೆಸೇಜ್‌ ಓದುವ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೆಸೇಜ್‌ ಅನ್ನು ಓದುವುದು ಹೇಗೆ ಅನ್ನೊ ಪ್ರಶ್ನೆ ಮೂಡಲಿದೆ. ವಾಟ್ಸಾಪ್‌ ನೊಟೀಫಿಕೇಶನ್‌ ಸ್ಕ್ರೀನ್‌ನಲ್ಲಿ ನೀವು ಯಾವಾಗಲೂ ಎಲ್ಲಾ ಸಂದೇಶಗಳನ್ನು ಓದಬಹುದಾದರೂ. ಆಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಪರೀಕ್ಷಿಸಲು ಇನ್ನೊಂದು ವಿಧಾನವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಚಾಟ್ ತೆರೆಯದೆ ನಿಮ್ಮ ಸ್ನೇಹಿತರ ಸಂದೇಶಗಳನ್ನು ಓದುವುದು ಹೇಗೆ?

ವಾಟ್ಸಾಪ್ ಚಾಟ್ ತೆರೆಯದೆ ನಿಮ್ಮ ಸ್ನೇಹಿತರ ಸಂದೇಶಗಳನ್ನು ಓದುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ ಹೋಮ್ ಸ್ಕ್ರೀನ್ ಮೇಲೆ ಲಾಂಗ್‌ ಪ್ರೆಸ್‌ ಮಾಡಿ ಮತ್ತು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್ ಮೇಲೆ ಮೆನು ಪಾಪ್ ಅಪ್ ಆಗುತ್ತದೆ.

ಹಂತ 2: ವಿಜೆಟ್‌ಗಳನ್ನು ಟ್ಯಾಪ್ ಮಾಡಿ. ನೀವು ಅಲ್ಲಿ ಸಾಕಷ್ಟು ಶಾರ್ಟ್‌ಕಟ್‌ಗಳು ಸಿಗಲಿವೆ. ಇದರಲ್ಲಿ ವಾಟ್ಸಾಪ್‌ ಗಾಗಿ ಶಾರ್ಟ್ಕಟ್ ಅನ್ನು ಕಂಡುಹಿಡಿಯಬೇಕು.

ಹಂತ 3: ನೀವು ವಿವಿಧ ವಾಟ್ಸಾಪ್‌ ವಿಜೆಟ್ಗಳನ್ನು ಪಡೆಯುತ್ತೀರಿ. ನೀವು "4 x 1 WhatsApp" ವಿಜೆಟ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಹಂತ 4: ಆ ವಿಜೆಟ್ ಅನ್ನು ಟ್ಯಾಪ್‌ ಮಾಡಿ ಪ್ರೆಸ್‌ ಮಾಡಿ, ತದನಂತರ ಅದನ್ನು ನಿಮ್ಮ ಹೋಮ್ ಸ್ಕ್ರೀನ್ ಒಂದರಲ್ಲಿ ಬಿಡಿ. ಅದನ್ನು ನಿಮ್ಮ ಸ್ಕ್ರೀನ್‌ಗೆ ಸೇರಿಸಿದ ನಂತರ, ಅದನ್ನು ವಿಸ್ತರಿಸಲು ನೀವು ವಿಜೆಟ್ ಮೇಲೆ ಲಾಂಗ್‌ ಪ್ರೆಸ್‌ ಮಾಡಿ.

ಈ ಮೂಲಕ ನೀವು ಯಾವುದೇ ವಾಟ್ಸಾಪ್‌ ಚಾಟ್ ತೆರೆಯದೆ ಸಂದೇಶಗಳನ್ನು ಓದಬಹುದು. ನಿಮ್ಮ ಎಲ್ಲಾ ಹಳೆಯ (ಓದದ) ಸಂದೇಶಗಳನ್ನು ಸಹ ನೀವು ಓದಲು ಸಾಧ್ಯವಾಗುತ್ತದೆ. ನೀವು ಯಾವುದೇ ಚಾಟ್‌ಗಳನ್ನು (ವಿಜೆಟ್‌ನಲ್ಲಿ) ಟ್ಯಾಪ್ ಮಾಡಿದರೆ, ವಾಟ್ಸಾಪ್ ಆ ಚಾಟ್ ತೆರೆಯುತ್ತದೆ ಮತ್ತು ನೀವು ಸಂದೇಶಗಳನ್ನು ಓದಿದ್ದೀರಿ ಎಂದು ಕಳುಹಿಸುವವರಿಗೆ ತಿಳಿಯುತ್ತದೆ ಎಂಬುದನ್ನು ಗಮನಿಸಿ.

ವಾಟ್ಸಾಪ್‌ ವೆಬ್‌ನಲ್ಲಿ ಚಾಟ್ ತೆರೆಯದೆ ಸಂದೇಶಗಳನ್ನು ಹೇಗೆ ಓದುವುದು?

ವಾಟ್ಸಾಪ್‌ ವೆಬ್‌ನಲ್ಲಿ ಚಾಟ್ ತೆರೆಯದೆ ಸಂದೇಶಗಳನ್ನು ಹೇಗೆ ಓದುವುದು?

ಚಾಟ್ ತೆರೆಯದೆ ವಾಟ್ಸಾಪ್ ವೆಬ್ ಸಂದೇಶಗಳನ್ನು ಓದಲು ಬಯಸುವವರಿಗೆ ಕೂಡ ಉತ್ತಮ ಅವಕಾಶವಿದೆ. ಇದಕ್ಕಾಗಿ ವಾಟ್ಸಾಪ್ ವೆಬ್‌ನಲ್ಲಿ ನೀವು ಯಾವುದೇ ಸಂದೇಶವನ್ನು ಸ್ವೀಕರಿಸಿದ ನಂತರ ನೀವು ಕರ್ಸರ್ ಅನ್ನು ಚಾಟ್‌ನಲ್ಲಿ ಇರಿಸಿ. ಬಳಕೆದಾರರು ನಂತರ ತೇಲುವ ಸಂದೇಶವನ್ನು ನೋಡುತ್ತಾರೆ. ಈ ರೀತಿಯಾಗಿ ವೆಬ್ ಆವೃತ್ತಿಯಲ್ಲಿ ಇತ್ತೀಚಿನ ಸಂದೇಶವನ್ನು ಪರಿಶೀಲಿಸಲು ನೀವು ಚಾಟ್ ತೆರೆಯುವ ಅಗತ್ಯವಿಲ್ಲ. ನೀವು ಇತ್ತೀಚಿನ ಸಂದೇಶಗಳನ್ನು ಮಾತ್ರ ಓದುತ್ತೀರಿ ಮತ್ತು ಹಳೆಯ ಸಂದೇಶಗಳನ್ನು ಅಲ್ಲ ಎಂಬುದನ್ನು ಗಮನಿಸುವುದು ಮುಖ್ಯ.

Most Read Articles
Best Mobiles in India

English summary
WhatsApp: While you can always read all the messages in the notifications panel.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X