SBI ಬ್ಯಾಂಕ್‌ನಲ್ಲಿ ಅಕೌಂಟ್ ಇದೀಯಾ? ಈ ನಿಯಮ ಅನುಸರಿಸಿ ತಕ್ಷಣವೇ ಬ್ಯಾಲೆನ್ಸ್ ಚೆಕ್ ಮಾಡಿ!
SBI ಬ್ಯಾಂಕ್ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ. ತನ್ನ ವಿಶೇಷ ಸೇವೆಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಅಲ್ಲದೆ ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾ ಸಾಗಿದೆ. ಅದರಂತೆ ಹಲವು ಸೇವೆಗಳನ್ನು ನಿಮ್ಮ ಬೆರಳತುದಿಯಲ್ಲಿಯೇ ನೀಡುತ್ತಿದೆ.
ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಲವು ಸೇವೆಗಳನ್ನು ಸುಲಭವಾಗಿ ದೊರೆಯುವಂತೆ ಮಾಡಿದೆ. ಅದರಂತೆ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದಕ್ಕೆ ಬ್ಯಾಂಕ್‌ಗೆ ಹೋಗಬೇಕಾದ ಅನಿವಾರ್ಯತೆಯಿಲ್ಲ. ತಾವು ಕುಳಿತಲ್ಲಿಯೇ ವಾಟ್ಸಾಪ್, ಎಸ್‌ಎಂಎಸ್ ಮತ್ತು ಮಿಸ್ಡ್ ಕಾಲ್ ಮೂಲಕ ಕೂಡ ಪರಿಶೀಲಿಸಬಹುದಾಗಿದೆ. ಹಾಗಾದ್ರೆ SBI ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಲು ನೀವು ಅನುಸರಿಸಬಹುದಾದ ವಿವರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿಯೇ SBI ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ತಿಳಿಯಲು ಹೀಗೆ ಮಾಡಿ!
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿದ್ದರೆ ನಿಮ್ಮ ಖಾತೆ ಬ್ಯಾಲೆನ್ಸ್ ಅನ್ನು ವಾಟ್ಸಾಪ್ ಮೂಲಕ ಕೂಡ ಚೆಕ್ ಮಾಡಬಹುದಾಗಿದೆ ಇದಕ್ಕಾಗಿ ನೀವು ಎಸ್‌ಬಿಐ ಬ್ಯಾಂಕ್ ನೀಡಿರುವ +919022690226 ಚಾಟ್‌ಬಾಟ್ ನಂಬರ್‌ಗೆ ವಾಟ್ಸಾಪ್ ಮೂಲಕ ಹಾಯ್ ಅಂತಾ ಕಳುಹಿಸಬೇಕಾಗುತ್ತದೆ. ಚಾಟ್‌ಬಾಟ್ ನೀಡಿದ ಸುಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.
SMS ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ!
ಮೊದಲಿಗೆ ನೀವು 07208933148 ಗೆ 'REG ಖಾತೆ ಸಂಖ್ಯೆ' ಕಳುಹಿಸುವ ಮೂಲಕ ರಿಜಿಸ್ಟರ್ ಆಗಬೇಕಾಗುತ್ತದೆ. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ +919223766666 ಸಂಖ್ಯೆಗೆ BAL ಎಂದು ಟೈಪ್ ಮಾಡಿ ಸಂದೇಶವನ್ನು ಕಳುಹಿಸಿದರೆ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಸಂದೇಶದ ರೂಪದಲ್ಲಿ ಬರಲಿದೆ.
ಮಿಸ್ಡ್ ಕಾಲ್ ಬಳಸಿ SBI ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ
ನಿಮ್ಮ ಮೊಬೈಲ್ ನಂಬರ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್‌ನಲ್ಲಿ ನೋಂದಾಯಿಸಿದ್ದರೆ ಮಾತ್ರ ಈ ಸೇವೆ ಲಭ್ಯವಾಗಲಿದೆ. ನಂತರ ನೀವು ಬ್ಯಾಂಕ್‌ಗೆ ನೋಂದಾಯಿಸಿದ ಸಂಖ್ಯೆಯಿಂದ +919223766666 ನಂಬರ್‌ಗೆ ಮಿಸ್ಡ್ ಕಾಲ್ ನೀಡಿದರೆ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲಿದೆ.

ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆ ಬಳಸಿರಿ
ನೀವು https://www.onlinesbi.sbi/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಅಕೌಂಟ್ ಬ್ಯಾಲೆನ್ಸ್ ತಿಳಿಯಬಹುದಾಗಿದೆ. ಇಲ್ಲಿ ನೀವು ನಿಮ್ಮ ನೆಟ್‌ಬ್ಯಾಕಿಂಗ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವುದು ಕಡ್ಡಾಯವಾಗಿದೆ.
ಎಸ್‌ಬಿಐ ಕ್ವಿಕ್ ಅಪ್ಲಿಕೇಶನ್ ಬಳಸಿ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ
ಎಸ್‌ಬಿಐ ಕ್ವಿಕ್ ಅಪ್ಲಿಕೇಶನ್ ಅನ್ನೊದು ಎಸ್‌ಬಿಐ ಬ್ಯಾಂಕ್ ನೀಡುವ ಸರ್ವಿಸ್ ಅಪ್ಲಿಕೇಶನ್ ಆಗಿದೆ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಮಾತ್ರವಲ್ಲದೆ ಬ್ಯಾಂಕ್‌ನ ಎಲ್ಲಾ ಸೇವೆಗಳಿಗೂ ಲಾಗಿನ್ ಮಾಡಬಹುದಾಗಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್‌ಗಳ ಕಾಟ ಹೆಚ್ಚಾಗಿರುವುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ ಅವುಗಳನ್ನು ನೀವು ಅನುಸರಿಸುವುದು ಅವಶ್ಯವಾಗಿದೆ. ಅದು ಏನೆಂಬುದು ಇಲ್ಲಿದೆ.
*ನೀವು ಪಾವತಿಯನ್ನು ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಯುಪಿಐ ಐಡಿಯನ್ನು ನಮೂದಿಸುವ ಅಗತ್ಯವಿಲ್ಲ. ಅಕಸ್ಮಾತ್ ಯುಪಿಐಐಡಿ ನಮೂದಿಸಬೇಕು ಎಂದು ಕೇಳಿದರೆ ಅದು ಖಂಡಿತಾ ಮೋಸಗೊಳಿಸುವ ತಂತ್ರವಾಗಿದೆ ಎಂದರ್ಥ.
* ನಿಮ್ಮ ಯುಪಿಐ ಪಿನ್ ಅನ್ನು ಎಂದಿಗೂ ಹಾಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ.ಇದರಿಂದ ಹೆಚ್ಚು ಭದ್ರತೆ ಸಿಗಲಿದ್ದು, ನೀವು ಸುರಕ್ಷತೆಯ ವಹಿವಾಟು ನಡೆಸಬಹುದಾಗಿದೆ. -ಇದಿಷ್ಟೇ ಅಲ್ಲದೆ ಆಗಾಗ್ಗೆ ನಿಮ್ಮ ಯುಪಿಐ ಪಿನ್ ಅನ್ನು ಬದಲಾವಣೆ ಮಾಡುವುದು ಅನಿವಾರ್ಯ. ಇದು ಕೇವಲ ಯುಪಿಐಗಷ್ಟೇ ಸೀಮಿತವಲ್ಲದೆ, ಬ್ಯಾಂಕ್‌ನ ಇತರೆ ವ್ಯವಹಾರದಲ್ಲೂ ಈ ಕ್ರಮ ಅನುಸರಿಸಿ.
* ನೀವು ಸಾಮಾನ್ಯವಾಗಿ ಯಾರಿಗೆ ಹಣವನ್ನು ಕಳುಹಿಸುತ್ತೀರ ಎಂದು ಮೊದಲು ಪರಿಶೀಲಿಸಿ, ಯಾಕೆಂದರೆ ಒಂದೇ ಹೆಸರಿನ ಹಲವರು ಇರಬಹುದು ಇದು ನಿಮ್ಮನ್ನು ಗೊಂದಲಕ್ಕೆ ದೂಡುತ್ತದೆ.


Click it and Unblock the Notifications








