ಗೂಗಲ್‌ಪೇ 2020 ರಿವೈಂಡ್‌ ಟ್ಯಾಪ್‌ ಮಾಡಿ ನಿಮ್ಮ ಖರ್ಚುವೆಚ್ಚಗಳ ಮಾಹಿತಿ ಪಡೆಯಿರಿ!

|

ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಗೂಗಲ್‌ ಪೇ ತನ್ನ ಆಕರ್ಷಕ ಕ್ಯಾಶಬ್ಯಾಕ್‌ಗಳಿಂದ ಪಾವತಿದಾರರ ಮನಗೆದ್ದಿದೆ. ಸದ್ಯ ಇದೀಗ ಹೊಸ ವರ್ಷದ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಅವಕಾಶವೊಂದನ್ನು ನೀಡಿದೆ. ಬಳಕೆದಾರರು ತಮ್ಮ ವಹಿವಾಟಿನ ಬಗ್ಗೆ ನಿಗಾ ಇಡಲು ವಿಫಲವಾದ ಕೆಲವು ಬಳಕೆದಾರರಿಗೆ ರಿಯಾಲಿಟಿ ಚೆಕ್ ಮಾಡಲು ಅವಕಾಶವನ್ನು ನೀಡಿದೆ. ಇದಕ್ಕಾಗಿ 2020 ರಿವೈಂಡ್ ಬೈ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ಪೇ ಬಳಸಿ 2020 ರಲ್ಲಿ ನೀವು ಎಷ್ಟು ಪಾವತಿ ಮಾಡಿದ್ದೀರಿ, ಏನೆಲ್ಲಾ ವಹಿವಾಟು ನಡೆಸಿದ್ದೀರಾ ಅನ್ನೊದನ್ನ 2020 ರಿವೈಂಡ್‌ ಬೈ ಯುಪಿಐ ಮೂಲಕ ತಿಳಿಯಬಹುದಾಗಿದೆ. ಸದ್ಯ ಗೂಗಲ್‌ ಪೇ ಈ ಅಪ್ಲಿಕೇಶನ್‌ ಮೂಲಕ 2020 ಖರ್ಚು ವೆಚ್ಚದ ಒಳನೋಟಗಳನ್ನು ನೋಡಲು ಅವಕಾಶ ನೀಡಿದೆ. ಇನ್ನು 2020 ರಿವೈಂಡ್ ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿನ ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ ಬ್ಯಾನರ್ ಆಗಿ ಪ್ರದರ್ಶಿಸಲಾಗುತ್ತಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಪೇ

ಗೂಗಲ್‌ ಪೇ ರಿವೈಂಡ್ ವಿಭಾಗವು ನೀವು ಅಪ್ಲಿಕೇಶನ್‌ನಲ್ಲಿ ಎಷ್ಟು ದಿನಗಳನ್ನು ಕಳೆದಿದ್ದೀರಿ ಎಂಬುದರ ಕುರಿತು ಒಳನೋಟಗಳನ್ನು ನೀಡುತ್ತದೆ. ಇದು ಬಳಕೆದಾರರು ಗಳಿಸಿದ ಬ್ಯಾಡ್ಜ್‌ಗಳ ಜೊತೆಗೆ ಖರ್ಚು ವಿಭಾಗಗಳು ಮತ್ತು ವರ್ಷದ ಒಟ್ಟು ರಿವಾರ್ಡ್‌ಗಳನ್ನು ಸಹ ತೋರಿಸುತ್ತದೆ. ಇನ್ನು ರಿವೈಂಡ್ 2020 ಗುಂಡಿಯನ್ನು ಪ್ರವೇಶಿಸುವುದು ಸಾಕಷ್ಟು ಸುಲಭವಾಗಿದೆ. ಇದಕ್ಕಾಗಿ ಬಳಕೆದಾರರು ಗೂಗಲ್ ಪೇ ಅಪ್ಲಿಕೇಶನ್ ಅನ್ನು ತೆರೆಯಬೇಕು. ಗೂಗಲ್ ಪೇ ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿ ಪ್ರದರ್ಶಿಸಲಾದ ಬ್ಯಾನರ್‌ನಲ್ಲಿ ರಿವೈಂಡ್ ಬಟನ್ ಟ್ಯಾಪ್ ಮಾಡಿ. ಅದು "ನಿಮ್ಮ 2020 ಸಾರಾಂಶವನ್ನು ಪರಿಶೀಲಿಸಿ" ಎಂದು ಬರೆಯಲಾಗಿದೆ. ಬಳಕೆದಾರರು Google Pay ಅಪ್ಲಿಕೇಶನ್ ಬಳಸಿದ ದಿನಗಳ ಸಂಖ್ಯೆಯನ್ನು ಅಪ್ಲಿಕೇಶನ್ ಪ್ರದರ್ಶಿಸುತ್ತದೆ. ನಂತರ ಅನ್ವೇಷಿಸಲು ಸ್ಟಾರ್ಟ್‌ ಬಟನ್‌ ಟ್ಯಾಪ್ ಮಾಡಿ.

ಸಂವಹನ

ಇದಲ್ಲದೆ ನೀವು ಸ್ಥಳೀಯ ವ್ಯಾಪಾರಿಗಳೊಂದಿಗೆ ಸಂವಹನ ನಡೆಸಿದ್ದರೆ ಮತ್ತು ನೀವು ಮಾಡಿದ ವಹಿವಾಟುಗಳ ಸಂಖ್ಯೆಯನ್ನು ಅಪ್ಲಿಕೇಶನ್ ನಿಮ್ಮ ಚಟುವಟಿಕೆಯನ್ನು ತೋರಿಸುತ್ತದೆ. ಕ್ಯಾಶ್‌ಬ್ಯಾಕ್ ಮೂಲಕ ಬಳಕೆದಾರರು ವರ್ಷದಲ್ಲಿ ಎಷ್ಟು ಹಣವನ್ನು ಉಳಿಸಿದ್ದಾರೆ ಎಂಬ ಮಾಹಿತಿಯನ್ನು ಸಹ ಇದು ನೀಡುತ್ತದೆ. ನೀವು ಪ್ಲಾಟ್‌ಫಾರ್ಮ್‌ನಲ್ಲಿ ಗೋ ಇಂಡಿಯಾವನ್ನು ಆಡಿದ್ದರೆ, ಆಟದಲ್ಲಿ ನೀವು ಎಷ್ಟು ನಗರಗಳಿಗೆ ಪ್ರಯಾಣಿಸಿದ್ದೀರಿ ಎಂಬುದರ ಕುರಿತು ಗೂಗಲ್ ಪೇ ಮಾಹಿತಿಯನ್ನು ನೀಡುತ್ತದೆ. ವಹಿವಾಟುಗಳ ಸಂಖ್ಯೆ ಮತ್ತು ನಿಮ್ಮ ಕೊಡುಗೆಯನ್ನು ಆಧರಿಸಿ, ಗೂಗಲ್ ಸಾಮಾಜಿಕ ಕನೆಕ್ಟರ್, ಸ್ಥಳೀಯ ಕೊಡುಗೆದಾರರು ಮತ್ತು ಸೂಪರ್ ಸೇವರ್‌ನಂತಹ ರಿವಾರ್ಡ್‌ಗಳಾಗಿ ಬ್ಯಾಚ್‌ಗಳನ್ನು ನೀಡುತ್ತದೆ.

ಅಪ್ಲಿಕೇಶನ್

ಇನ್ನು ಈ ಅಪ್ಲಿಕೇಶನ್ ಮೂಲಕ ನೀವು ಎಷ್ಟು ಸಂವಹನ ನಡೆಸಿದ್ದೀರಿ ಎಂಬುದರ ಕುರಿತು ಗೂಗಲ್ ಪೇ ಸಹ ಮಾಹಿತಿಯನ್ನು ನೀಡುತ್ತದೆ. ಮುಂದೆ ಅಥವಾ ಹಿಂದಕ್ಕೆ ಹೋಗಲು ಬಳಕೆದಾರರು ಬಲಕ್ಕೆ ಅಥವಾ ಎಡಕ್ಕೆ ಸ್ವೈಪ್ ಮಾಡಬಹುದು. ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದ ತಿಂಗಳ ಜೊತೆಗೆ ಬಳಕೆದಾರರ ಮಾಸಿಕ ಖರ್ಚಿನ ಸ್ಥೂಲ ಗ್ರಾಫ್ ಅನ್ನು ತೋರಿಸುವ ಮೂಲಕ ಗೂಗಲ್ ಪೇ ಬಳಕೆದಾರರಿಗೆ ತಮ್ಮ ಮಾಸಿಕ ಖರ್ಚು ಪ್ರವೃತ್ತಿಯನ್ನು ತೋರಿಸುತ್ತದೆ.

Best Mobiles in India

English summary
Google Pay users who mindlessly use the app to make payments and transactions are in for a surprise.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X