Pulse oximeter ಖರೀದಿಸುವ ಮುನ್ನ ಇರಲಿ ಎಚ್ಚರ?

|

ಪ್ರಸ್ತುತ ದಿನಗಳಲ್ಲಿ ಕೊರೊನಾ ವೈರಸ್‌ನ ಎರಡನೆ ಅಲೆ ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಇದೇ ಕಾರಣಕ್ಕೆ ದೇಶದ ಬಹುತೇಕ ರಾಜ್ಯಗಳು ಲಾಕ್‌ಡೌನ್‌ ಮಾಡಿವೆ. ಸದ್ಯ ಕರ್ನಾಟಕ ರಾಜ್ಯದಲ್ಲಿಯೂ ಸಹ ಜನತಾ ಕರ್ಪ್ಯೂ ಜಾರಿಯಲ್ಲಿದೆ. ಇನ್ನು ಕೊರೊನಾ ವೈರಸ್‌ ಭಾರದಂತೆ ಎಚ್ಚರಿಕೆ ವಹಿಸುವುದಕ್ಕೆ ಮನೆಯಲ್ಲಿರುವುದೇ ಸೂಕ್ತವಾಗಿದೆ. ಅಲ್ಲದೆ ಆಗಾಗ ನಿಮ್ಮ ಆರೋಗ್ಯ ವನ್ನು ಮನೆಯಲ್ಲಿಯೇ ಚೆಕ್ ಮಾಡಿಕೊಳ್ಳಲು ಹೆಲ್ತ್‌ ಗ್ಯಾಜೆಟ್ಸ್‌ ಕೂಡ ಅಗತ್ಯವಾಗಿದೆ. ಅದರಲ್ಲೂ ಹೆಚ್ಚಿನ ಜನರು ಪಲ್ಸ್‌ ಆಕ್ಸಿಮೀಟರ್‌ ಅನ್ನು ಖರೀದಿಸುತ್ತಿದ್ದಾರೆ.

ಪಲ್ಸ್‌ ರೇಟ್‌

ಹೌದು, ಕರೋನವೈರಸ್ ಕಾರಣದಿಂದಾಗಿ ಮನೆಯಲ್ಲಿಯೇ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ ನೆಯಲ್ಲಿಯೇ ನಮ್ಮ ಆರೋಗ್ಯವನ್ನು ಆಗಾಗ ಚೆಕ್‌ ಮಾಡಿಕೊಳ್ಳುವ ಅವಶ್ಯಕತೆ ಕೂಡ ಇದೆ. ಅದರಲ್ಲೂ ಪಲ್ಸ್‌ ರೇಟ್‌ ಅನ್ನು ಚೆಕ್‌ ಮಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಇದೆ ಕಾರಣಕ್ಕೆ ಪ್ರತಿಯೊಬ್ಬರೂ ಪಲ್ಸ್‌ ಆಕ್ಸಿಮೀಟರ್‌ ಅನ್ನು ಕೊಂಡುಕೊಳ್ಳುತ್ತಿದ್ದಾರೆ. ಆದರೆ ನೀವು ಪಲ್ಸ್‌ ಆಕ್ಸಿಮೀಟರ್‌ ಖರೀದಿಸುವ ಮುನ್ನ ಕೆಲವು ಆಂಶಗಳನ್ನು ಮರೆಯದೆ ಗಮನಿಸಲೇಬೇಕು. ಅದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೊರೊನಾ

ಕೊರೊನಾ ಎರಡನೇ ಅಲೆಯಲ್ಲಿ ಬಹುಮುಖ್ಯವಾಗಿ ಕಾಡುತ್ತಿರುವುದು ಉಸಿರಾಟದ ಸಮಸ್ಯೆ. ಆದರಿಂದ ನಿಮ್ಮ ಪಲ್ಸ್‌ ರೇಟ್‌ ಸರಿಯಾಗಿದ್ದರೆ ನೀವು ಯೋಚಿಸುವ ಅಗತ್ಯವಿರುವುದಿಲ್ಲ. ಹಾಗಂತ ಪದೇ ಪದೇ ಆಸ್ಪತ್ರೆಗೆ ಹೋಗಬೇಕಾದ ಅಗತ್ಯವಿಲ್ಲ. ಮನೆಯಲ್ಲಿಯೇ ಪಲ್ಸ್‌ ರೇಟ್‌ ಚೆಕ್‌ ಮಾಡುವ ಪಲ್ಸ್‌ ಆಕ್ಸಿಮೀಟರ್‌ ಗಳು ಲಭ್ಯವಿವೆ. ಇವುಗಳ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ನೋವು ಉಂಟಾಗದಂತೆ ನಿಮ್ಮ ನಾಡಿ ಮತ್ತು ಆಮ್ಲಜನಕದ ಮಾಪನಗಳನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ. ಇದರಿಂದಾಗಿ ಮನೆಯಲ್ಲಿ ಆಕ್ಸಿಮೀಟರ್ ಇಡುವುದು ಅಗತ್ಯವಾಗಿರುತ್ತದೆ. ನೀವು ಪಲ್ಸ್‌ ಆಕ್ಸಿಮೀಟರ್ ಖರೀದಿಸಲು ಯೋಜಿಸುತ್ತಿದ್ದರೆ ಈ ಕೆಳಗಿನ ಆಂಶಗಳನ್ನು ಮರೆಯದೆ ಗಮನಿಸಿ.

ಪಲ್ಸ್‌ ಆಕ್ಸಿಮೀಟರ್‌ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳು!

ಪಲ್ಸ್‌ ಆಕ್ಸಿಮೀಟರ್‌ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳು!

1. ನಿಮಗೆ ಅಗತ್ಯವಿರುವ ಆಕ್ಸಿಮೀಟರ್ ಮಾದರಿಯನ್ನು ಗಮನಿಸಿ
ಫಿಂಗರ್‌ಟಿಪ್ ಪಲ್ಸ್ ಆಕ್ಸಿಮೀಟರ್, ಹ್ಯಾಂಡ್ಹೆಲ್ಡ್ ಆಕ್ಸಿಮೀಟರ್ ಮತ್ತು ಭ್ರೂಣದ ನಾಡಿ ಆಕ್ಸಿಮೀಟರ್ ಎಂಬ ಮೂರು ವಿಧದ ಆಕ್ಸಿಮೀಟರ್‌ಗಳಿವೆ. ಆದ್ದರಿಂದ, ನೀವು ಮೊದಲು ನಿಮಗೆ ಯಾವುದು ಉಪಯುಕ್ತ ಅನ್ನೊದನ್ನ ನಿರ್ಧರಿಸಬೇಕು. ಕಾರ್ಯನಿರ್ವಹಿಸಲು ಸುಲಭವಾದ ಕಾರಣ ಜನರು ಮನೆ ಬಳಕೆಗಾಗಿ ಬೆರಳ ತುದಿಯ ಆಕ್ಸಿಮೀಟರ್‌ಗಳನ್ನು ಬಳಸುತ್ತಾರೆ.

2. ಬೆಲೆ ಮತ್ತು ಫೀಚರ್ಸ್‌ಗಳನ್ನು ಪರಿಶೀಲಿಸಿ

2. ಬೆಲೆ ಮತ್ತು ಫೀಚರ್ಸ್‌ಗಳನ್ನು ಪರಿಶೀಲಿಸಿ

ಫಿಂಗರ್ ಪಲ್ಸ್ ಆಕ್ಸಿಮೀಟರ್‌ಗಳು ಹೊಲಿಕೆಯಲ್ಲಿ ಹೆಚ್ಚು ಎಲೆಯನ್ನು ಹೊಂದಿವೆ. ಇದರ ಬೆಲೆ ಶ್ರೇಣಿ ಸುಮಾರು 1000 ರೂ.ಗಳಿಂದ 5000 ರೂ. ಅದಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿವೆ. ಇದಲ್ಲದೆ ಬ್ರೈಟ್‌ನೆಸ್‌ ಮತ್ತು ಸ್ಪಷ್ಟವಾದ ಡಿಸ್‌ಪ್ಲೇ ಹೊಂದಿರುವ ಡಿವೈಸ್‌ಗಳನ್ನು ಗಮನಿಸಿ.

3. ನಿಖರತೆ

3. ನಿಖರತೆ

ಯಾವುದೇ ಹೆಲ್ತ್‌ ಡಿವೈಸ್‌ ನಿಖರವಾದ ಫಲಿತಾಂಶವನ್ನು ತೋರಿಸಬೇಕು. ಆದ್ದರಿಂದ, ಪಲ್ಸ್‌ ಆಕ್ಸಿಮೀಟರ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳಲ್ಲಿ ಇದು ಒಂದು. ಎರಡು ಆಕ್ಸಿಮೀಟರ್‌ಗಳ ಫಲಿತಾಂಶಗಳನ್ನು ಹೋಲಿಸುವ ಮೂಲಕ ನೀವು ಡಿವೈಸ್‌ಗಳ ನಿಖರತೆಯನ್ನು ಪರಿಶೀಲಿಸಬಹುದು.

4. ಪ್ರಮಾಣೀಕರಣ

4. ಪ್ರಮಾಣೀಕರಣ

ಪ್ರತಿ ಉತ್ಪನ್ನವು ಮಾರುಕಟ್ಟೆಯನ್ನು ತಲುಪುವ ಮೊದಲು ಪ್ರಮಾಣೀಕರಣ ಪರಿಶೀಲನೆ ಆಗಿರುತ್ತದೆ. ಡಿವೈಸ್‌ನ ಗುಣಮಟ್ಟ ಮತ್ತು ಮಾನದಂಡಗಳನ್ನು ಪ್ರಮಾಣೀಕರಿಸುವ ಹಲವಾರು ಸಂಸ್ಥೆಗಳು ಇವೆ, ಅದು ಬಳಸುವುದು ಒಳ್ಳೆಯದು ಎಂದು ಖಚಿತಪಡಿಸುತ್ತದೆ. ನೀವು ನೋಡಬಹುದಾದ ಕೆಲವು ವಿಶ್ವಾಸಾರ್ಹ ಪ್ರಮಾಣೀಕರಣಗಳು ಎಫ್ಡಿಎ, ರೋಹೆಚ್ಎಸ್, ಸಿಇ.ಇವುಗಳ ಪ್ರಮಾಣೀಕರಣವನ್ನು ಹೊಂದಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಿ.

5. ಬ್ರಾಂಡ್

5. ಬ್ರಾಂಡ್

ಆಕ್ಸಿಮೀಟರ್ ಖರೀದಿಸುವ ಮೊದಲು ನೀವು ಬ್ರಾಂಡ್ ಅನ್ನು ಪರಿಶೀಲಿಸಬೇಕು. ಇದು ವಿಶ್ವಾಸಾರ್ಹತೆ ಪಡೆದುಕೊಂಡಿರುವ ಕಂಪೆನಿಯ ಪ್ರಾಡಕ್ಟ್‌ ಅನ್ನೊದನ್ನ ಗಮನಿಸಬೇಕು.

Best Mobiles in India

English summary
how to choose the right pulse oximeter for home usage.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X