Smartphone screen: ಮೊಬೈಲ್ ಸ್ಕ್ರೀನ್ ಒರೆಸುವ ಮುನ್ನ ಈ ವಿಚಾರಗಳ ಬಗ್ಗೆ ಗಮನವಿರಲಿ! ಎಚ್ಚರ ತಪ್ಪಿದ್ರೆ ಗೋವಿಂದ!
ಸ್ಮಾರ್ಟ್‌ಫೋನ್ ಬಳಸುವವರಿಗೆ ಅದರ ಡಿಸ್‌ಪ್ಲೇ ಸ್ಕ್ರೀನ್ ಅನ್ನು ಕ್ಲಿನ್ ಆಗಿ ಇಟ್ಟುಕೊಳ್ಳುವುದೇ ಒಂದು ಸವಾಲ್ ಆಗಿದೆ. ಸಾಮಾನ್ಯವಾಗಿ ಪ್ರಾರಂಭದಲ್ಲಿ ಸಾಕಷ್ಟು ಕ್ಲಿನ್ ಆಂಡ್ ಕ್ಲಿಯರ್ ಆಗಿರುವ ಫೋನ್ ಸ್ಕ್ರೀನ್ ಬಳಸುತ್ತಾ ಹೋದಂತೆ ಗೀರುಗಳು, ಧೂಳು ಇತ್ಯಾಧಿಯಿಂದ ಕೂಡಿರುತ್ತದೆ. ಆದರಿಂದ ಮೊಬೈಲ್ ಬಳಕೆದಾರರು ಆಗಾಗ ತಮ್ಮ ಫೋನ್ ಸ್ಕ್ರೀನ್ ಸ್ವಚ್ಛಗೊಳಿಸುವುದು ಸೂಕ್ತ.
ಹೌದು, ಸ್ಮಾರ್ಟ್‌ಫೋನ್ (Smartphone) ಸ್ಕ್ರೀನ್ ಅನ್ನು ಆಗಾಗ ಸ್ವಚ್ಛಗೊಳಿಸುವುದು ಸಾಮಾನ್ಯವಾಗಿದೆ. ಹಾಗಂತ ಬೇಕಾಬಿಟ್ಟಿಯಾಗಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಅನ್ನು ಕ್ಲಿನ್ ಮಾಡಲು ಹೋಗಬಾರದು. ಇದರಿಂದ ಸ್ಕ್ರೀನ್ ಮೇಲೆ ಗೀರುಗಳು ಬೀಳುವ ಸಾಧ್ಯತೆ ಇರುತ್ತದೆ. ಆದರಿಂದ ಮೊಬೈಲ್ ಸ್ಕ್ರೀನ್ ಕ್ಲಿನ್ ಮಾಡಬೇಕಾದರೆ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುವ ಮುನ್ನ ನೀವು ಅನುಸರಿಸಬೇಕಾದ ನಿಯಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸ್ಮಾರ್ಟ್‌ಫೋನ್ ನಮ್ಮ ದಿನನಿತ್ಯದ ಅತ್ಯಗತ್ಯ ಡಿವೈಸ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇಂದಿನ ಜಮಾನದಲ್ಲಿ ಮೊಬೈಲ್ ಅನ್ನು ಕೇವಲ ಕರೆ ಮಾಡುವುದಕ್ಕೆ ಬಳಸುವುದಿಲ್ಲ, ಶಾಪಿಂಗ್ ಮಾಡುವುದರಿಂದ ಹಿಡಿದು ಒಟಿಟಿಯಲ್ಲಿ ಸಿನಿಮಾ ನೋಡುವ ತನಕ, ನ್ಯಾವಿಗೇಷನ್ ನಿಂದ ಹಿಡಿದು ಫೋಟೋಗ್ರಫಿಯವರೆಗ ಬಳಸುತ್ತಲೇ ಇರುತ್ತೇವೆ. ಇದರಿಂದ ಮೊಬೈಲ್ ಸ್ಕ್ರೀನ್ ಮೇಲೆ ಧೂಳು, ಸ್ಮಡ್ಜ್‌ಗಳು ಮತ್ತು ಬ್ಯಾಕ್ಟೀರಿಯಾಗಳು ಮಾತ್ರವಲ್ಲ ಸೂಕ್ಷ್ಮಾಣುಗಳು ಕೂಡ ಸ್ಕ್ರೀನ್ ಸೇರಬಹುದು. ಇದರಿಂದ ಸ್ಕ್ರೀನ್ ಅನ್ನು ಆಗಾಗ ಕ್ಲೀನ್ ಮಾಡುವುದು ಮೊಬೈಲ್ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ಉತ್ತಮವಾಗಿದೆ.

ಸ್ಮಾರ್ಟ್‌ಫೋನ್ ಸ್ಕ್ರೀನ್ ಸ್ವಚ್ಛಗೊಳಿಸುವುದು ಹೇಗೆ?
* ಮೈಕ್ರೋಫೈಬರ್ ಬಟ್ಟೆ ಬಳಕೆ ಮಾಡಿ
ಮೈಕ್ರೋಫೈಬರ್‌ನ ಮೃದು ಫೈಬರ್‌ಗಳು ಸ್ಕ್ರೀನ್ ಅನ್ನು ಸ್ಕ್ರಾಚ್ ಮಾಡದೆಯೇ ಧೂಳನ್ನು ಕ್ಲಿಯರ್ ಮಾಡಲಿದೆ.
* ಡಿಸ್ಟಿಲ್ಲ್ಡ್ ವಾಟರ್ ಬಳಸಿ
ಮೊಬೈಲ್ ಸ್ಕ್ರೀನ್ ಕ್ಲೀನ್ ಮಾಡುವಾಗ ಡಿಸ್ಟಿಲ್ಲ್ಡ್ ವಾಟರ್ ಬಳಸುವುದು ಸೂಕ್ತ. ಏಕೆಂದತೆ ಇದು ಮೊಬೈಲ್ ಸ್ಕ್ರೀನ್ ಮೇಲೆ ಗೆರೆಗಳನ್ನು ಬಿಡಬಹುದಾದ ಖನಿಜ ನಿಕ್ಷೇಪಗಳನ್ನು ತಪ್ಪಿಸಲು ಸಹಾಯ ಮಾಡಲಿದೆ.
* ಐಸೊಪ್ರೊಪಿಲ್ ಆಲ್ಕೋಹಾಲ್ (70%)
ಮೊಬೈಲ್ ಸ್ಕ್ರೀನ್ ಸೂಕ್ಷ್ಮವಾಗಿ ಕ್ಲೀನ್ ಆಗಬೇಕಾದರೆ ಸೋಂಕುನಿವಾರಕಕ್ಕಾಗಿ 70% ಐಸೊಪ್ರೊಪಿಲ್ ಆಲ್ಕೋಹಾಲ್ ದ್ರಾವಣವನ್ನು ಮಿತವಾಗಿ ಬಳಸಬೇಕು. ಆದರೆ ಇದನ್ನು ಹೆಚ್ಚಿನ ಸಾಂದ್ರತೆಯಲ್ಲಿ ಬಳಸಬಾರದು.
* ಕಠಿಣ ರಾಸಾಯನಿಕಗಳನ್ನು ತಪ್ಪಿಸಿ
ಮೊಬೈಲ್ ಸ್ಕ್ರೀನ್ ಕ್ಲೀನ್ ಮಾಡುವುದಕ್ಕೆ ಕಿಟಕಿ ಕ್ಲೀನರ್, ಬ್ಲೀಚ್ ಮತ್ತು ಇತರ ಕಠಿಣ ರಾಸಾಯನಿಕಗಳನ್ನು ಬಳಸಬೇಡಿ.
*ಫೋನ್ ಆಫ್ ಮಾಡಿ
ಆಕಸ್ಮಿಕ ಸ್ಪರ್ಶ ಅಥವಾ ನೀರಿನ ಹಾನಿಯನ್ನು ತಪ್ಪಿಸಲು ನಿಮ್ಮ ಫೋನ್ ಅನ್ನು ಯಾವಾಗಲೂ ಆಫ್ ಮಾಡಿ. ಸ್ವಚ್ಛಗೊಳಿಸಿದ ನಂತರ ಆನ್ ಮಾಡಿ.
ಇದಲ್ಲದೆ ಧೂಳು ಮತ್ತು ಸ್ಮಡ್ಜ್‌ಗಳನ್ನು ತೆಗೆದುಹಾಕಲು ಒಣ ಮೈಕ್ರೋಫೈಬರ್ ಬಟ್ಟೆಯಿಂದ ಕ್ಲೀನ್ ಮಾಡಿರಿ.

ಮೊಬೈಲ್ ಸ್ಕ್ರೀನ್ ಅನ್ನು ಈ ರೀತಿ ಕ್ಲೀನ್ ಮಾಡುವುದಕ್ಕೆ ಹೋಗಬೇಡಿ.
ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಅನ್ನು ಯಾವುದೇ ಕಾರಣಕ್ಕೂ ಪೇಪರ್ ಟವೆಲ್‌ಗಳು ಮತ್ತು ಟಿಶ್ಯೂಗಳ ಮೂಲಕ ಕ್ಲೀನ್ ಮಾಡುವುದಕ್ಕೆ ಹೋಗಬೇಡಿ. ಟವೆಲ್‌ಗಳಿಂದ ಒರೆಸಲು ಹೋದರೆ ಸ್ಕ್ರೀನ್ ಮೇಲೆ ಗೀರುಗಳು ಬೀಳುವ ಸಾದ್ಯತೆಯಿದೆ. ಇದಲ್ಲದೆ ಮನೆಯಲ್ಲಿರುವ ಬ್ಲೀಚ್, ವಿಂಡೋ ಕ್ಲೀನರ್‌ಗಳು ಅಥವಾ ಡಿಶ್ ಸೋಪ್‌ಗಳನ್ನು ಬಳಕೆ ಮಾಡಿ ಮೊಬೈಲ್ ಕ್ಲೀನ್ ಮಾಡುವುದಕ್ಕೆ ಹೋಗಬಾರದು.
ಇದಲ್ಲದೆ ನಿಮ್ಮ ಫೋನ್ ಸ್ಕ್ರೀನ್ ಮೇಲೆ ನೇರವಾಗಿ ಯಾವುದೇ ದ್ರವಗಳನ್ನು ಸಿಂಪಡಿಸಬೇಡಿ. ಇದು ನಿಮ್ಮ ಡಿವೈಸ್‌ನ ಒಳಭಾಗಕ್ಕೆ ಹೋಗಿ ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ. ಇನ್ನು ನಿಮ್ಮ ಸ್ಕ್ರೀನ್ ಅನ್ನು ಪ್ರತಿನಿತ್ಯವೂ ದಿನದ ಕೊನೆಯಲ್ಲಿ ಕ್ಲೀನ್ ಮಾಡಿಕೊಳ್ಳುವುದು ಉತ್ತಮವಾದ ಅಭ್ಯಾಸ.


Click it and Unblock the Notifications








