ನಿಮ್ಮ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ? ಕ್ಷಣಾರ್ಧದಲ್ಲೇ ಪ್ರಧಾನಿ ಮೋದಿಗೆ ದೂರು ನೀಡಿ
ಸರ್, ನಮ್ಮ ಸಮಸ್ಯೆ ಯಾರಿಗೆ ಹೇಳೋದು? ಸರ್ಕಾರಿ ಕಚೇರಿಗಳಿಗೆ (Government Office) ಓಡಾಡಿ ನನ್ನ ಚಪ್ಪಲಿ ಸವೆದರೂ 'ನಾಳೆ ಬಾ..' ಎಂಬ ಉತ್ತರ ನಿಂತೇ ಇಲ್ಲ. ಅಧಿಕಾರಿಗಳಿಗೆ (Government Officials) ನಮ್ಮ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಇದೀಗ ಚುನಾವಣಾ ಸಮಯ (Election Time), ಈ ಟೈಮ್‌ನಲ್ಲಿ ಜನಪ್ರತಿನಿಧಿಗಳು (Political Leaders) ಸಹ ನಮ್ಮ ಕೈಗೆ ಸಿಗಲ್ಲ. ಇನ್ನೂ, ನಮ್ಮ ಪ್ರಾಬ್ಲಂ ಯಾರಿಗೆ ಹೇಳಲಿ ಸ್ವಾಮಿ!
ಇದು ಒಬ್ಬರ ಅಥವಾ ಕೆಲವರ ಅಳಲಲ್ಲ. ಹಲವರು 'ನಾಳೆ ಬಾ..' ಎಂಬ ಸನ್ನಿವೇಶ ಎದುರಿಸುವಂತಾಗಿದೆ. ಹಲವು ಬಾರಿ ಸರ್ಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ದೂರು ನೀಡಿದರೂ ಅವರ ನಮ್ಮ ಪತ್ರಕ್ಕೆ ಸೊಪ್ಪೇ ಹಾಕಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂದು ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ವಾಪಸ್ ಬರುವವರೇ ಹೆಚ್ಚು. ಇನ್ಮುಂದೆ ಇದಕ್ಕೆ ಅವಕಾಶವೇ ಇಲ್ಲ.

ಹೌದು, ನಿಮ್ಮ ದೂರುಗಳನ್ನು ಅಧಿಕಾರಿಗಳು ಸ್ಪಂದಿಸದಿದ್ದಾಗ ನೀವು ನೇರವಾಗಿ ಪ್ರಧಾನಿ ಕಚೇರಿಗೆ (PMO Office) ದೂರು ನೀಡಬಹುದು. ಆನ್‌ಲೈನ್ (Online) ಮೂಲಕ ಪಿಎಂ ಕಚೇರಿಯಲ್ಲಿ (PM Modi Office) ದೂರು ಸಲ್ಲಿಸಬಹುದು. ಇದರ ಹೊರತಾಗಿಯೂ ಭಾರತೀಯ ಡಾಕ್ ಇಲಾಖೆ ಹಾಗೂ ಫ್ಯಾಕ್ಸ್ ಮೂಲಕ ತಮ್ಮ ದೂರು ದಾಖಲಿಸಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಮೂರು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.
ಸ್ಥಳೀಯ ಅಧಿಕಾರಿಗಳೇ ನಮ್ಮ ಸಮಸ್ಯೆಗೆ ಸ್ಪಂದಿಸಲ್ಲ. ಇನ್ನೂ ದಿಲ್ಲಿಯಲ್ಲಿರುವ ಪ್ರಧಾನಿ ಮೋದಿ ನಮ್ಮ ದೂರು ಆಲಿಸುತ್ತಾರೆಯೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಖಂಡಿತವಾಗಿಯೂ ಪ್ರಧಾನಿ ಕಚೇರಿ ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಿಮಗೆ ಪರಿಹಾರವೂ ಸಿಗುತ್ತದೆ. ಎಕ್ಸ್ ಖಾತೆಯಲ್ಲಿ ಮೋದಿಯವರನ್ನು ಟ್ಯಾಗ್ ಮಾಡಿ ಸಮಸ್ಯೆ ಹೇಳಿಕೊಂಡರೆ ಅದಕ್ಕೆ ಪ್ರತಿಕ್ರಿಯಿಸುವ ಅವರು, ಇನ್ನೂ ನೀವು ದಾಖಲ ಸಮೇತ ಕೊಟ್ಟ ದೂರಿಗೆ ಸ್ವಂದಿಸುವುದಿಲ್ಲವೇ? ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪ್ರಧಾನಿ ಕಚೇರಿ ಸ್ಪಂದಿಸುತ್ತದೆ.
ನೀವು ಪ್ರಧಾನಿ ಕಚೇರಿಗೆ ದೂರು ನೀಡಿದರೆ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ, ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ನೀವು ಯಾವುದೇ ಸಮಸ್ಯೆಗೆ ಸಿಲುಕಿಕೊಂಡಿದ್ದರೂ ಆನ್‌ಲೈನ್‌ನಲ್ಲಿ ಮೂಲಕ ದೂರು ನೀಡಬಹುದು. ಹಾಗಿದ್ರೆ, ಯಾವ ರೀತಿ ದೂರು ನೀಡಬೇಕೆಂಬ ಕುತೂಹಲ ನಿಮಲ್ಲಿದೆಯೇ? ಜಸ್ಟ್, ನಾವು ಈ ಹೇಳುವ ವಿಧಾನ ಪಾಲಿಸಿ ಸಾಕು.
ದೂರು ನೀಡಲು ಹೀಗೆ ಮಾಡಿ
ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಲು ವೆಬ್‌ಸೈಟ್ ನೀಡಲಾಗಿದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ದೂರನ್ನು ನೀವು ನೋಂದಾಯಿಸಬಹುದು. ಅದು ಹೇಗೆ ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ.
- ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಅಪ್ಲಿಕೇಶನ್ ಓಪನ್ ಮಾಡಿ.
- ಬಳಿಕ ಸರ್ಚ್ ಬಾರ್‌ನಲ್ಲಿ https://www.pmindia.gov.in/hi. ಟೈಪ್ ಮಾಡಿ ಒಕೆ ಕೊಡಿ.
- ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಲು ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಗ ನೀವು ಪ್ರಧಾನಿಗೆ ಬರೆಯುವ ಆಯ್ಕೆಯನ್ನು ಪಡೆಯುತ್ತೀರಿ.
- ಬಳಿಕ, CPGRAMS ಪೇಜ್ ತೆರೆಯುತ್ತದೆ.
- ಅಲ್ಲಿ ನಿಮ್ಮ ದೂರು ದಾಖಲಾಗುತ್ತದೆ
- ಕೂಡಲೇ ನೋಂದಣಿ ಸಂಖ್ಯೆಯನ್ನು ರಚಿಸಲಾಗುತ್ತದೆ.
- ಬಳಿಕ, ನೀವು ದೂರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು (ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ದೂರಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತುಂಬಬೇಕು).
ಹೀಗೆ ಮಾಡಿದ್ರೆ ನಿಮ್ಮ ದೂರು ನೇರವಾಗಿ ಪ್ರಧಾನಿ ಕಚೇರಿಗೆ ತಲುಪುತ್ತದೆ. ಪ್ರಧಾನಿ ಕಚೇರಿಯಲ್ಲಿ ನಿಮ್ಮ ದೂರುಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಒಂದು ತಂಡ ಇರುತ್ತದೆ. ಆ ತಂಡವು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂವಹನ ಮಾಡುತ್ತದೆ. ನಿಮ್ಮ ದೂರು ತಲುಪಿದ ತಕ್ಷಣ, ಈ ಬಗ್ಗೆ ವಿಚಾರಣೆ ಮಾಡುತ್ತಾರೆ. ನಿಮ್ಮ ದೂರು ನಿಜವೆಂದು ಕಂಡುಬಂದರೆ, ಮುಂದಿನ ಕ್ರಮ ಕೈಗೊಳ್ಳುತ್ತಾರೆ.


Click it and Unblock the Notifications








