ಕ್ರಿಪ್ಟೋಕರೆನ್ಸಿಯನ್ನು ಕ್ಯಾಶ್‌ ಆಗಿ ಕನ್ವರ್ಟ್‌ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕ್ರಿಪ್ಟೊ ಕರೆನ್ಸಿ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಭಾರತದಲ್ಲೂ ಕೂಡ ಕ್ರಿಪ್ಟೋ ಕರೆನ್ಸಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದೆ. ಆದರೆ ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಕೂಡ ಇದೆ. ಏಕೆಂದರೆ ಕ್ರಿಪ್ಟೋ ಕರೆನ್ಸಿಯನ್ನು ದೈನಂದಿನ ವಹಿವಾಟುಗಳಿಗೆ ಬಳಸುವುದಕ್ಕೆ ಸಾಧ್ಯವಿಲ್ಲ. ಆದರೂ ಭಾರತದಲ್ಲಿ $10 ಶತಕೋಟಿಗೂ ಹೆಚ್ಚಿನ ಪ್ರಮಾಣದ ಹೂಡಿಕೆಯಾಗಿದೆ ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿ

ಹೌದು, ಕ್ರಿಪ್ಟೋಕರೆನ್ಸಿ ಭಾರತದಲ್ಲಿಯೂ ದಿನೇ ದಿನೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಆದರೆ ಕೆಲವರಿಗೆ ಕ್ರಿಪ್ಟೋಕರೆನ್ಸಿ ಎಂದರೆ ಏನು ಅನ್ನೊದು ತಿಳಿದಿಲ್ಲ. ಕ್ರಿಪ್ಟೋ ಕರೆನ್ಸಿ ಡಿಜಿಟಲ್‌ ರೂಪದಲ್ಲಿರುವುದರಿಂದ ಇದನ್ನು ಬಳಸುವುದು ಹೇಗೆ ಅನ್ನೊದು ಕೂಡ ತಿಳಿದಿಲ್ಲ. ಇನ್ನು ಕೆಲವರಿಗೆ ಕ್ರಿಪ್ಟೋಕರೆನ್ಸಿಯನ್ನು ಕ್ಯಾಶ್‌ ಆಗಿ ಪರಿವರ್ತನೆ ಮಾಡುವುದು ಹೇಗೆ ಎನ್ನುವ ಗೊಂದಲ ಇದ್ದೇ ಇದೆ. ಹಾಗಾದ್ರೆ ಕ್ರಿಪ್ಟೋಕರೆನ್ಸಿಯನ್ನು ಕ್ಯಾಶ್‌ ಆಗಿ ಕನ್ವರ್ಟ್‌ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ರಿಪ್ಟೋ ಕರೆನ್ಸಿ ಎಂದರೇನು?

ಕ್ರಿಪ್ಟೋ ಕರೆನ್ಸಿ ಎಂದರೇನು?

ಕ್ರಿಪ್ಟೋಕರೆನ್ಸಿಯನ್ನು ಕ್ಯಾಶ್‌ ಆಗಿ ಪರಿವರ್ತಿಸುವುದು ಹೇಗೆ ಎಂದು ತಿಳಿಯುವುದಕ್ಕಿಂತ ಮೊದಲು ಕ್ರಿಪ್ಟೋಕರೆನ್ಸಿ ಎಂದರೆ ಏನು ಅಂತಾ ತಿಳಿದುಕೊಳ್ಳುವುದು ಬಹುಳ ಮುಖ್ಯ. ಇನ್ನು ಬಹಳ ಸರಳವಾಗಿ ಹೇಳುವುದಾದರೇ ಕ್ರಿಪ್ಟೋ ಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದ್ದು, ವಿನಿಮಯಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಾಣ್ಯ ಅಥವಾ ನೋಟಿನ ರೂಪದಲ್ಲಿ ಇದು ಲಭ್ಯವಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ಮಾಡಲಾಗುತ್ತದೆ.

ಕ್ರಿಪ್ಟೋಕರೆನ್ಸಿಯನ್ನು ಕ್ಯಾಶ್‌ ಆಗಿ ಪರಿವರ್ತಿಸುವುದು ಹೇಗೆ?

ಕ್ರಿಪ್ಟೋಕರೆನ್ಸಿಯನ್ನು ಕ್ಯಾಶ್‌ ಆಗಿ ಪರಿವರ್ತಿಸುವುದು ಹೇಗೆ?

ಯಾವುದೇ ಕ್ರಿಪ್ಟೋಕರೆನ್ಸಿಯನ್ನು ನಗದಾಗಿ ಪರಿವರ್ತಿಸುವುದಕ್ಕೆ ಇರುವ ಮೊದಲ ಮಾರ್ಗ ವಿನಿಮಯ ಮಾಡಿಕೊಳ್ಳುವುದು. ಇದು ವಿದೇಶಿ ದೇಶದ ವಿಮಾನ ನಿಲ್ದಾಣಗಳಲ್ಲಿ ಕರೆನ್ಸಿ ಎಕ್ಸ್‌ಚೇಂಜ್‌ ಮಾಡಿಕೊಳ್ಳುವ ವಿಧಾನದಲ್ಲಿರಲಿದೆ. ಅಲ್ಲದೆ ನೀವು WazirX, CoinDCX, CoinSwitch Kuber, Unocoin ನಂತಹ ವಿನಿಮಯಕ್ಕೆ ನಿಮ್ಮ ಕ್ರಿಪ್ಟೋಕರೆನ್ಸಿಯನ್ನು ಡೇಪೋಸಿಟ್‌ ಮಾಡುವ ಮೂಲಕ ಕರೆನ್ಸಿಯ ರೂಪದಲ್ಲಿ ಹಣವನ್ನು ಹಿಂಪಡೆಯಬಹುದು. ಆದರೆ ಇಲ್ಲಿ ನಿಮ್ಮ ಕ್ಯಾಶ್‌ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.

ಕ್ರಿಪ್ಟೋಕರೆನ್ಸಿ ಬಿಟ್‌ ಕಾಯಿನ್‌ ಅನ್ನು ಕ್ಯಾಶ್‌ ರೂಪದಲ್ಲಿ ವರ್ಗಾಯಿಸುವುದು ಹೇಗೆ?

ಕ್ರಿಪ್ಟೋಕರೆನ್ಸಿ ಬಿಟ್‌ ಕಾಯಿನ್‌ ಅನ್ನು ಕ್ಯಾಶ್‌ ರೂಪದಲ್ಲಿ ವರ್ಗಾಯಿಸುವುದು ಹೇಗೆ?

ಹಂತ:1 ಮೊದಲಿಗೆ WazirX ಅಪ್ಲಿಕೇಶನ್ ತೆರೆಯಿರಿ ಮತ್ತು 'ಫಂಡ್ಸ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:2 ನಂತರ INR ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ನಿಮ್ಮ ಖಾತೆಯ ವಹಿವಾಟುಗಳನ್ನು ನೋಡಬಹುದು.
ಹಂತ:3 ಇನ್ನು ನೀವು 'ಡೆಪಾಸಿಟ್‌' ಮತ್ತು 'ವಿಥ್‌ ಡ್ರಾ' ಎಂಬ ಎರಡು ಆಯ್ಕೆಗಳು ಕಾಣಲಿವೆ.
ಹಂತ:4 ಇಲ್ಲಿ ನೀವು ವಿಥ್‌ಡ್ರಾ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ವಿಥ್‌ ಡ್ರಾ ಮಾಡುವ ಮೊತ್ತವನ್ನು ನಮೂದಿಸಿ.
ಹಂತ:5 ನಂತರ ನೀವು ಶೀಘ್ರದಲ್ಲೇ ಇಮೇಲ್ ಅನ್ನು ಸ್ವೀಕರಿಸುತ್ತೀರಿ, ಇದರಲ್ಲಿ ನೀವು ವಿಥ್‌ಡ್ರಾ ಮಾಡೋದನ್ನು ಅಧಿಕೃತಗೊಳಿಸಬೇಕು. ನಂತರ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ.

ಪೀರ್-ಟು-ಪೀರ್ ನೆಟ್ವರ್ಕ್ ಮೂಲಕ

ಪೀರ್-ಟು-ಪೀರ್ ನೆಟ್ವರ್ಕ್ ಮೂಲಕ

ಇನ್ನು ನೀವು ಬಹಳ ಬೇಗ ನಿಮ್ಮ ಕ್ರಿಪ್ಟೋಕರೆನ್ಸಿಯನ್ನು ಹಣವನ್ನಾಗಿ ಪರಿವರ್ತಿಸಲು ಪೀರ್‌ ಟು ಪೀರ್‌ ನೆಟ್‌ವರ್ಕ್‌ ಮಾರ್ಗ ಸೂಕ್ತವಾಗಿದೆ. ಈ ಮಾರ್ಗದ ಮೂಲಕ ನಿಮ್ಮ ಡಿಜಿಟಲ್‌ ಹಣವನ್ನು ಕ್ಯಾಶ್‌ ಆಗಿ ಪರಿವರ್ತಿಸಬಹುದಾಗಿದೆ. ಇದಲ್ಲದೆ ನೀವು ಹಣಕ್ಕಾಗಿ ಬಿಟ್‌ಕಾಯಿನ್ ಅನ್ನು ಮಾರಾಟ ಮಾಡಲು ಕೂಡ ಪೀರ್-ಟು-ಪೀರ್ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಪೀರ್-ಟು-ಪೀರ್ ವಿನಿಮಯ ವೇದಿಕೆಯಲ್ಲಿ ಸೈನ್ ಅಪ್ ಮಾಡುವ ಮೂಲಕ ಅಲ್ಲಿನ ಕೆಲವು ನಿಯಮಗಳನ್ನು ಪಾಲಿಸಿದರೆ ನಿಮ್ಮ ಬಿಟ್‌ಕಾಯಿನ್‌ ಅನ್ನು ನಗದಾಗಿ ಪರಿರ್ತಿಸಬಹುದಾಗಿದೆ.
ಆದರೆ ಪೀರ್-ಟು-ಪೀರ್ ಮಾರಾಟ ವಿಧಾನವನ್ನು ಬಳಸುವಾಗ, ವಂಚಕರ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಖರೀದಿದಾರರಿಂದ ಪಾವತಿಯನ್ನು ಪಡೆಯಲಾಗಿದೆ ಎಂದು ನೀವು ಪರಿಶೀಲಿಸುವವರೆಗೆ ನಿಮ್ಮ ಬಿಟ್‌ಕಾಯಿನ್‌ಗಳನ್ನು ಲಾಕ್‌ನಲ್ಲಿ ಇರಿಸಿಕೊಳ್ಳುವುದು ಅತ್ಯಗತ್ಯ.

ಕ್ರಿಪ್ಟೋಕರೆನ್ಸಿ

ಇನ್ನು ನೀವು ನಿಮ್ಮ ಕ್ರಿಪ್ಟೋಕರೆನ್ಸಿಯನ್ನು ನಗದು ರೂಪಕ್ಕೆ ಕನ್ವರ್ಟ್‌ ಮಾಡಿದರೆ, ನಿಮ್ಮ ಲಾಭದ ಮೇಲೆ ನೀವು ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಲೀಗಲ್ ಗ್ರೇ ಏರಿಯಾದಲ್ಲಿದೆ. ಆದರೂ ಈ ಆಸ್ತಿಯಲ್ಲಿ ಹೂಡಿಕೆ ಮಾಡುವುದು ತೆರಿಗೆಗಳ ವ್ಯಾಪ್ತಿಯಿಂದ ಹೊರಗಿಲ್ಲ.

Best Mobiles in India

Read more about:
English summary
If you're looking to convert your crypto assets into cash, here's what you need to know.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X