Home
ಸುದ್ದಿಜಾಲ

ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಅಮೆಜಾನ್‌ ಪ್ರೈಮ್‌ ವಿಡಿಯೋ!

ಜನಪ್ರಿಯ ಆನ್ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಅಮೆಜಾನ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫಿಚರ್ಸ್‌ ಒಂದನ್ನ ಪರಿಚಯಿಸಿದೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್‌ನಂತೆಯೇ, ಅಮೆಜಾನ್ ಸಹ ಬಳಕೆದಾರರಿಗೆ ಪ್ರೈಮ್ ವೀಡಿಯೊ ಪ್ರೊಫೈಲ್‌ಗಳನ್ನು ಕ್ರಿಯೆಟ್‌ ಮಾಡಲು ಅವಕಾಶವನ್ನ ನೀಡಿದೆ. ಇನ್ನು ಈ ಫೀಚರ್ಸ್‌ನ್ನು ಇದೇ ವರ್ಷ ಕಳೆದ ಮಾರ್ಚ್‌ನಲ್ಲಿ ಭಾರತ ಸೇರಿದಂತೆ ಆಯ್ದ ಕೆಲವೇ ಕೆಲ ಮಾರುಕಟ್ಟೆಗಳಲ್ಲಿ ಮೊದಲು ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಅಮೆಜಾನ್ ಪ್ರೈಮ್ ವಿಡಿಯೋ ಪ್ರೊಫೈಲ್‌ ಅನ್ನು ಕಳೆದ ವಾರ ಜಾಗತಿಕವಾಗಿ ಪರಿಚಯಿಸಲಾಗಿದೆ.

ವೀಡಿಯೋ

ಹೌದು, ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಪ್ರೈಮ್‌ ವೀಡಿಯೋ ಪ್ರೊಫೈಲ್‌ ಕ್ರಿಯೆಟ್‌ ಮಾಡುವ ಅವಕಾಸವನ್ನ ಅಮೆಜಾನ್‌ ಪ್ರೈಮ್ ವಿಡಿಯೋ ಇದೀಗ ಪರಿಚಯಿಸಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಅಮೆಜಾನ್‌ ಫ್ರೈಮ್‌ ವೀಡಿಯೋ ಪ್ರೊಫೈಲ್‌ಗಳು ಸಾಕಷ್ಟು ನಿದಾನಗತಿಯನ್ನ ಹೊಂದಿತ್ತು. ಆದರೆ ಇದೀಗ ಇದನ್ನ ಮಲಟ್ಇ ವೀಡಿಯೋ ಮಾಡುವ ಅವಕಾಸ ನೀಡಲಾಗಿದೆ. ಒಂದೇ ಅಮೆಜಾನ್ ಪ್ರೈಮ್ ವಿಡಿಯೋ ಖಾತೆಯಲ್ಲಿ ಅನೇಕ ಬಳಕೆದಾರರು ಇದ್ದರೆ ಈ ಫೀಚರ್ಸ್‌ ಇನ್ನ ಸಹಾಯಕವಾಗಲಿದೆ. ಅಲ್ಲದೆ ಮಕ್ಕಳ ಚಟವಟಿಕೆಗಳ ಮೇಲೆ ಪ್ಯಾಮಿಲಿ ಕಂಟ್ರೋಲ್‌ ಮಾಡಲು ಅವಕಾಶವನ್ನ ಸಹ ಕಲ್ಪಿಸಲಾಗಿದೆ. ಅಷ್ಟಕ್ಕೂ ಇದರ ವಿಶೇಷತೆ ಏನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಡಿಯೋ

ಸದ್ಯ ಅಮೆಜಾನ್ ಪ್ರೈಮ್ ವಿಡಿಯೋ ಪ್ರೊಫೈಲ್‌ಗಳನ್ನು ಅದರ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳು, ಫೈರ್ ಟಿವಿ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್ ಟಿವಿಯಂತಹ ವಿಭಿನ್ನ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ರಚಿಸಬಹುದು ಮತ್ತು ನಿರ್ವಹಿಸಬಹುದಾಗಿದೆ. ಹಾಗಾದ್ರೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಳಕೆದಾರರ ಪ್ರೊಫೈಲ್‌ಗಳನ್ನು ನೀವು ರಚಿಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

Android, iOS ಆಪ್‌ನಲ್ಲಿ ಪ್ರೈಮ್‌ ವೀಡಿಯೋ ಪ್ರೊಫೈಲ್‌ ಕ್ರಿಯೆಟ್ ಮಾಡುವುದು ಹೇಗೆ?

Android, iOS ಆಪ್‌ನಲ್ಲಿ ಪ್ರೈಮ್‌ ವೀಡಿಯೋ ಪ್ರೊಫೈಲ್‌ ಕ್ರಿಯೆಟ್ ಮಾಡುವುದು ಹೇಗೆ?

ಹಂತ:1 ನಿಮ್ಮ ಫೋನ್‌ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಅಪ್ಲಿಕೇಶನ್ ತೆರೆಯಿರಿ
ಹಂತ:2 ಅಪ್ಲಿಕೇಶನ್‌ನಲ್ಲಿ ‘my stuff' ಅನ್ನು ಆಯ್ಕೆಮಾಡಿ
ಹಂತ:3 ನಂತರ ಹೊಸ ಪ್ರೊಫೈಲ್ ಕ್ರಿಯೆಟ್‌ ಮಾಡಲು ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ‘+' ಐಕಾನ್ ಕ್ಲಿಕ್ ಮಾಡಿ.

ಆಂಡ್ರಾಯ್ಡ್ ಟಿವಿ, ಫೈರ್ ಟಿವಿ ಪ್ರೈಮ್‌‌ ವೀಡಿಯೋ ಪ್ರೊಫೈಲ್‌ ಕ್ರಿಯೆಟ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಟಿವಿ, ಫೈರ್ ಟಿವಿ ಪ್ರೈಮ್‌‌ ವೀಡಿಯೋ ಪ್ರೊಫೈಲ್‌ ಕ್ರಿಯೆಟ್ ಮಾಡುವುದು ಹೇಗೆ?

ಹಂತ:1 ನಿಮ್ಮ ಟಿವಿಯಲ್ಲಿ ಪ್ರೈಮ್ ವಿಡಿಯೋ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ನಲ್ಲಿನ ಡ್ರಾಪ್-ಡೌನ್ ಮೆನುವಿನಿಂದ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಹೊಸ ಪ್ರೈಮ್‌ ವೀಡಿಯೊ ಪ್ರೊಫೈಲ್ ರಚಿಸಲು ‘+' ಐಕಾನ್ ಆಯ್ಕೆಮಾಡಿ.

ಅಮೆಜಾನ್ ಪ್ರೈಮ್ ವಿಡಿಯೋ

ಸದ್ಯ ಅಮೆಜಾನ್ ಪ್ರೈಮ್ ವಿಡಿಯೋ ಬಳಕೆದಾರರು ಬಳಕೆದಾರರ ಪ್ರೊಫೈಲ್‌ಗಳನ್ನು ಒಂದೇ ವಿಭಾಗದಿಂದಲೇ ನಿರ್ವಹಿಸಬಹುದು, ಎಡಿಟ್‌ ಮಾಡಬಹುದು ಮತ್ತು ತೆಗೆದುಹಾಕಬಹುದಾಗಿದೆ. ಅಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋ ಒಂದು ಖಾತೆಯಲ್ಲಿ ಆರು ಪ್ರೊಫೈಲ್‌ಗಳನ್ನು ಬೆಂಬಲಿಸುತ್ತದೆ. ಇದು ಒಂದು ಡೀಫಾಲ್ಟ್ ಪ್ರೈಮರಿ ಪ್ರೊಫೈಲ್ ಮತ್ತು ಐದು ಹೆಚ್ಚುವರಿ ಪ್ರೊಫೈಲ್‌ಗಳನ್ನು ಒಳಗೊಂಡಿದೆ. ಪ್ರತಿ ಪ್ರೈಮ್ ವೀಡಿಯೊ ಪ್ರೊಫೈಲ್ ವೈಯಕ್ತಿಕಗೊಳಿಸಿದ ವಿಷಯ, ಶಿಫಾರಸುಗಳು, ವಾಚಿಂಗ್ ಹಿಸ್ಟರಿ, ಪ್ರಗತಿ ಮತ್ತು ವೀಕ್ಷಣೆ ಪಟ್ಟಿಯನ್ನು ಹೊಂದಿರುತ್ತದೆ.

ಅಮೆಜಾನ್

ಇದಲ್ಲದೆ ಕಿಡ್ಸ್‌ಪ್ರೊಫೈಲ್‌ಗಳನ್ನು ಸಹ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ರಚಿಸಬಹುದಾಗಿದೆ. ಈ ಪ್ರೊಫೈಲ್ 12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ವಯಸ್ಸಿಗೆ ಸೂಕ್ತವಾದ ವಿಷಯಕ್ಕೆ ಮಾತ್ರ ಪ್ರವೇಶವನ್ನು ಹೊಂದಿರುತ್ತದೆ. ಮಕ್ಕಳ ಪ್ರೊಫೈಲ್‌ಗಳಲ್ಲಿ ಸರ್ಚಿಂಗ್‌ ರಿಸಲ್ಟ್‌, ಮತ್ತು ಸಲಹೆಗಳನ್ನು ಸಹ ಫಿಲ್ಟರ್ ಮಾಡಲಾಗುತ್ತದೆ. ಆದಾಗ್ಯೂ, ವಯಸ್ಕರ ಪ್ರೊಫೈಲ್‌ನಂತಹವುಗಳನ್ನು ಒಳಗೊಂಡಂತೆ ಪ್ರೈಮ್ ವೀಡಿಯೊ ಅಪ್ಲಿಕೇಶನ್‌ನಲ್ಲಿ ಮಕ್ಕಳ ಪ್ರೊಫೈಲ್‌ಗಳು ಎಲ್ಲಾ ಡೌನ್‌ಲೋಡ್‌ಗಳನ್ನು ಪ್ರವೇಶಿಸಲು ಅವಕಾಶವಿದೆ. ಆದರೆ ಮಕ್ಕಳ ಪ್ರೊಫೈಲ್‌ಗಳಲ್ಲಿ ಶೀರ್ಷಿಕೆಗಳನ್ನು ಖರೀದಿಸುವುದನ್ನು ಪೋಷಕರು ನಿರ್ಬಂಧಿಸಬಹುದಾಗಿದೆ.

Best Mobiles in India

English summary
Amazon Prime Video supports up to six user profiles on one account. Here's how you can create Prime Video profiles on different platforms.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+