ರಕ್ಷಾ ಬಂಧನ್ 2021: ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

|

ರಕ್ಷಾ ಬಂಧನ ಸಹೋದರ, ಸಹೋದರಿಯರ ಬಂಧವನ್ನು ಸಾರುವ ಹಬ್ಬ. ಅಕ್ಕ ತಮ್ಮ, ಅಣ್ಣ ತಂಗಿಯರ ಪ್ರೀತಿಗೆ ರಕ್ಷೆಯನ್ನು ನೀಡುವ ಹಬ್ಬ. ಸಹೋದರತೆಯ ಬಾಂಧವ್ಯ ಸಾರುವ ರಕ್ಷಾಬಂಧನವನ್ನು ಭಾರತದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾ ಬಂಧನ ಆಗಸ್ಟ್‌ 22 ರಂದು ಆಚರಿಸಲಾಗುತ್ತದೆ. ಇನ್ನು ಹಬ್ಬ, ಹರಿದಿನಗಳ ಸಂಧರ್ಭದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದಕ್ಕೆ ವಾಟ್ಸಾಪ್‌ ಉತ್ತಮ ವೇದಿಕೆಯಾಗಿದೆ.

ರಕ್ಷಾ ಬಂಧನ 2021

ಹೌದು, ರಕ್ಷಾ ಬಂಧನ 2021 ಅನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇನ್ನು ಈ ವರ್ಷವೂ ಕೂಡ ರಕ್ಷಾ ಬಂಧನದ ಪ್ರಯುಕ್ತ ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶವಿದೆ. ರಕ್ಷಾಬಂಧನದ ಸ್ಟಿಕ್ಕರ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ರಕ್ಷಾ ಬಂಧನ್‌ ಪ್ರಯುಕ್ತ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಕ್ಷಾ ಬಂಧನ್ 2021: ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ರಕ್ಷಾ ಬಂಧನ್ 2021: ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ 1: ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್ ಆಪ್ ತೆರೆಯಿರಿ

ಹಂತ 2: ಚಾಟ್‌ಬಾಕ್ಸ್ ತೆರೆಯಿರಿ

ಹಂತ 3: ಚಾಟ್‌ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಅಲ್ಲಿ ಎಮೋಜಿ ಆಯ್ಕೆಯನ್ನು ಟ್ಯಾಪ್ ಮಾಡಿ

ಹಂತ 4: ಮುಂದೆ, "+" ಆಯ್ಕೆಯನ್ನು ಟ್ಯಾಪ್ ಮಾಡಿ

ಹಂತ 5: ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಗೆಟ್‌ ಮೋರ್‌ ಸ್ಟಿಕ್ಕರ್‌" ಆಯ್ಕೆಯನ್ನು ಟ್ಯಾಪ್ ಮಾಡಿ

ಹಂತ 6: ವಾಟ್ಸಾಪ್‌ ನಿಮ್ಮನ್ನು ಗೂಗಲ್‌ಪ್ಲೇ ಸ್ಟೋರ್‌ಗೆ ಕರೆದೊಯ್ಯುತ್ತದೆ

ಹಂತ 7: ಪ್ಲೇ ಸ್ಟೋರ್‌ನಲ್ಲಿ ವಾಟ್ಸಾಪ್ ಸಿಕ್ಕರ್ ಪ್ಯಾಕ್‌ಗಳಿಗಾಗಿ ಸರ್ಚ್‌ ಮಾಡಿ

ಹಂತ 8: ಹಲವಾರು ಥರ್ಡ್ ಪಾರ್ಟಿ ಸ್ಟಿಕ್ಕರ್ ಪ್ಯಾಕ್ ಆಪ್‌ಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಫೋನ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡಿ

ಹಂತ 9: ಆಪ್‌ನಲ್ಲಿ ಸೂಕ್ತವಾದ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಯ್ಕೆ ಮಾಡಿ. ಈ ಸಂದರ್ಭದಲ್ಲಿ, ರಕ್ಷಾ ಬಂಧನ ಅಥವಾ ರಾಖಿ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಯ್ಕೆ ಮಾಡಿ

ಹಂತ 10: ಆಯ್ದ ಸ್ಟಿಕ್ಕರ್ ಪ್ಯಾಕ್‌ಗಳು ವಾಟ್ಸಾಪ್ ಆಪ್‌ನಲ್ಲಿ ಮೈ ಸ್ಟಿಕ್ಕರ್‌ಗಳ ವಿಭಾಗಕ್ಕೆ ಸೇರಿಸಲ್ಪಡುತ್ತವೆ

ಹಂತ 11: ನೀವು ಈಗ ಸೂಕ್ತವಾದ ಸ್ಟಿಕ್ಕರ್ ಅನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಸಂಪರ್ಕಗಳು, ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸಬಹುದು.

ರಕ್ಷಾ ಬಂಧನ್ 2021 ವಾಟ್ಸಾಪ್‌ ಸ್ಟೇಟಸ್‌ ಅನ್ನು ಶೇರ್‌ ಮಾಡುವುದು ಹೇಗೆ?

ರಕ್ಷಾ ಬಂಧನ್ 2021 ವಾಟ್ಸಾಪ್‌ ಸ್ಟೇಟಸ್‌ ಅನ್ನು ಶೇರ್‌ ಮಾಡುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅಪ್ಲಿಕೇಶನ್ ತೆರೆಯಿರಿ

ಹಂತ 2: ಸ್ಟೇಟಸ್‌ ವಿಭಾಗಕ್ಕೆ ಹೋಗಿ

ಹಂತ 3: ನಿಮ್ಮ ಫೋನ್‌ನ ಗ್ಯಾಲರಿಯಿಂದ ರಾಖಿ ವಿಡಿಯೋ ಅಪ್‌ಲೋಡ್ ಮಾಡಿ

ಹಂತ 4: ವಾಟ್ಸಾಪ್‌ ಸ್ಟೇಟಸ್‌ ಪೋಸ್ಟ್ ಮಾಡಲು ಸೆಂಡ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

ರಕ್ಷಾ ಬಂಧನ್ 2021 GIF ಗಳನ್ನು ಕಳುಹಿಸುವುದು ಹೇಗೆ?

ರಕ್ಷಾ ಬಂಧನ್ 2021 GIF ಗಳನ್ನು ಕಳುಹಿಸುವುದು ಹೇಗೆ?

ಹಂತ 1: ವಾಟ್ಸಾಪ್ ಆಪ್ ತೆರೆಯಿರಿ

ಹಂತ 2: ಚಾಟ್ ತೆರೆಯಿರಿ

ಹಂತ 3: ಜಿಐಎಫ್ ಐಕಾನ್ ಮೇಲೆ ಕ್ಲಿಕ್ ಮಾಡಿ

ಹಂತ 4: ರಕ್ಷಾ ಬಂಧನ್ ಜಿಐಎಫ್‌ಗಳಿಗಾಗಿ ಹುಡುಕಿ

Most Read Articles
Best Mobiles in India

English summary
Happy Raksha Bandhan 2021 date, timing, quotes, images, photos, messages, GIFs: Connect with your brother or sister virtually this Rakhi.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X