Home
ಸುದ್ದಿಜಾಲ

Google Chromeನಲ್ಲಿ ಸುರಕ್ಷಿತ ಪಾಸ್‌ವರ್ಡ್ ಕ್ರಿಯೆಟ್‌ ಮಾಡುವುದಕ್ಕೆ ಹೀಗೆ ಮಾಡಿ?

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಕ್ರೋಮ್‌ ಬಳಕೆದಾರರ ನೆಚ್ಚಿನ ಬ್ರೌಸರ್‌ ಆಗಿದೆ. ಇನ್ನು ಪ್ರಸ್ತುತ ದಿನಗಳಲ್ಲಿ ಡೇಟಾ ಪ್ರೈವೆಸಿ ಮತ್ತು ಸೆಕ್ಯೂರ್‌ಗಾಗಿ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಹೊಸ ಫಿಚರ್ಸ್‌ಗಳನ್ನು ಪರಿಚಯಿಸಿದೆ. ಅದರಲ್ಲೂ ಡೇಟಾ ಉಲ್ಲಂಘನೆ ಮತ್ತು ಭಿನ್ನತೆಗಳಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು, ಗೂಗಲ್ ಕ್ರೋಮ್ ಹಲವಾರು ಸುರಕ್ಷತೆ-ಸಂಬಂಧಿತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಸೆಕ್ಯೂರ್‌ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡುವುದು ಕೂಡ ಸೇರಿದೆ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಅಸ್ತಿತ್ವದಲ್ಲಿರುವ ಫೀಚರ್ಸ್‌ಗಳನ್ನು ಸುಧಾರಿಸುವುದರ ಜೊತೆಗೆ ನಿಯಮಿತವಾಗಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅಂತಹ ಒಂದು ವಿಶೇಷ ಫೀಚರ್ಸ್‌ ಎಂದರೆ ಪಾಸ್‌ವರ್ಡ್ ಮ್ಯಾನೇಜರ್‌. ಇದು ಬಳಕೆದಾರರು ಬ್ರೌಸ್ ಮಾಡುತ್ತಿರುವ ಅದೇ ಪುಟದಲ್ಲಿ ಸುರಕ್ಷಿತ ಪಾಸ್‌ವರ್ಡ್‌ಗಳನ್ನು ಕ್ರಿಯೆಟ್‌ ಮಾಡುವ ಸೂಕ್ತ ಫೀಚರ್ಸ್‌ಅನ್ನು ಸಹ ನೀಡುತ್ತದೆ. ಹಾಗಾದ್ರೆ ಗೂಗಲ್‌ ಕ್ರೋಮ್‌ ಸುರಕ್ಷಿತ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಕ್ರೋಮ್ ಬಳಕೆದಾರರ ಡೇಟಾ ಪ್ರೈವೆಸಿ ಕಾಪಾಡುವ ನಿಟ್ಟಿನಲ್ಲಿ ಪಾಸ್‌ವರ್ಡ್‌ ಮ್ಯಾನೇಜರ್‌ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಬ್ರೌಸ್‌ ಮಾಡುವ ಪೇಜ್‌ನಲ್ಲಿಯೇ ಹೊಸ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡುವುದು ಸುಲಭವಾಗಿದೆ. ಇನ್ನು ವೆಬ್ ಬ್ರೌಸರ್‌ನಲ್ಲಿ ಸ್ಟ್ರಾಂಗ್‌ ಪಾಸ್‌ವರ್ಡ್ ಅನ್ನು ರಚಿಸುವುದು ಮತ್ತು ಪಾಸ್‌ವರ್ಡ್ ನಿರ್ವಾಹಕದಲ್ಲಿ ವಿವರಗಳನ್ನು ಸಂಗ್ರಹಿಸುವುದು ಹೇಗೆ ಅನ್ನೊದನ್ನ ತಿಳಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

Google Chromeನಲ್ಲಿ ಸುರಕ್ಷಿತ ಪಾಸ್‌ವರ್ಡ್ ಕ್ರಿಯೆಟ್‌ ಮಾಡುವುದು ಹೇಗೆ?

Google Chromeನಲ್ಲಿ ಸುರಕ್ಷಿತ ಪಾಸ್‌ವರ್ಡ್ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ವೆಬ್ ಬ್ರೌಸರ್ ತೆರೆಯಿರಿ.
ಹಂತ:2 ನಂತರ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ:3 ಇಲ್ಲಿ ಕಾಣಿಸಿಕೊಳ್ಳುವ ಮೆನುವಿನಿಂದ, ‘ಪಾಸ್‌ವರ್ಡ್‌ಗಳು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:4 ಈಗ, ಪಾಸ್‌ವರ್ಡ್‌ಗಳ ಪುಟದಲ್ಲಿ, "Offer to save passwords" ಆಯ್ಕೆಯನ್ನು ಸಕ್ರಿಯಗೊಳಿಸಿ.
ಹಂತ:5 ನೀವು ಸ್ಟ್ರಾಂಗ್‌ ಪಾಸ್‌ವರ್ಡ್ ಕ್ರಿಯೆಟ್‌ ಮಾಡಲು ಬಯಸುವ ವೆಬ್‌ಸೈಟ್ ತೆರೆಯಿರಿ.
ಹಂತ:6 ಪಾಸ್‌ವರ್ಡ್ ಕ್ಷೇತ್ರದಲ್ಲಿ, Chrome ಸ್ವಯಂಚಾಲಿತವಾಗಿ ಪಾಸ್‌ವರ್ಡ್ ಅನ್ನು ಸೂಚಿಸುತ್ತದೆ.

ಪಾಸ್‌ವರ್ಡ್

ಒಂದು ವೇಳೆ ಪಾಸ್‌ವರ್ಡ್ ಅನ್ನು ಬ್ರೌಸರ್ ಸ್ವಯಂಚಾಲಿತವಾಗಿ ಸೂಚಿಸದಿದ್ದಲ್ಲಿ, ನೀವು ಪಾಸ್‌ವರ್ಡ್ ಫಿಲ್ಡ್‌ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು "ಸೂಚಿಸಿದ ಪಾಸ್‌ವರ್ಡ್" ಆಯ್ಕೆಯ ಮೇಲೆ ಕ್ಲಿಕ್ ಮಾಡಬಹುದು. ನೀವು ಸೂಚಿಸಿದ ಪಾಸ್‌ವರ್ಡ್ ಅನ್ನು ಬಳಸಲು ನಿರ್ಧರಿಸಿದರೆ, ಲಾಗಿನ್ ರುಜುವಾತುಗಳು ಅಥವಾ ವಿವರಗಳನ್ನು ಪಾಸ್‌ವರ್ಡ್ ನಿರ್ವಾಹಕದಲ್ಲಿ ಸಂಗ್ರಹಿಸಲು ಕೇಳುವ ಪಾಪ್-ಅಪ್ ಅನ್ನು Chrome ತೋರಿಸುತ್ತದೆ.

Best Mobiles in India

English summary
Google Chrome offers several security-related features and keeps adding more at regular intervals along with improving existing features.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+