ವಾಟ್ಸಾಪ್‌ನಲ್ಲಿ ಈ ಫೀಚರ್ಸ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಅಕರ್ಷಕ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ವಾಟ್ಸಾಪ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಹೊಂದಿರುವುದರಿಂದ ನಿಮ್ಮ ಚಾಟ್‌ಗಳು ಕೂಡ ಸುರಕ್ಷಿತವಾಗಿರುತ್ತವೆ. ಜೊತೆಗೆ ವಾಟ್ಸಾಪ್‌ ಮೂಲಕ ಇಮೇಜ್‌ಗಳು, ವೀಡಿಯೊಗಳು ಮತ್ತು ಆಡಿಯೊ ಕ್ಲಿಪ್‌ಗಳಂತಹ ಮೀಡಿಯಾ ಫೈಲ್‌ಗಳನ್ನು ಶೇರ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಮೂಲಕ ಬಳಕೆದಾರರು ತಮ್ಮ ಸಂಪರ್ಕಗಳೊಂದಿಗೆ ಇಮೇಜ್‌, ವೀಡಿಯೊ, ಆಡಿಯೊ ಕ್ಲಿಪ್‌ಗಳನ್ನು ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಕಸ್ಟಮೈಸ್ ಮಾಡುವುದಕ್ಕೆ ಕೂಡ ಸಾಧ್ಯವಿದೆ. ನಿಮ್ಮ ಅಭಿರುಚಿಗೆ ಅನುಗುಣವಾಗಿ, ವಾಟ್ಸಾಪ್‌ ಅನ್ನು ಕಸ್ಟಮೈಸ್‌ ಮಾಡುವುದಕ್ಕೆ ವಿವಿಧ ಸೆಟ್ಟಿಂಗ್ ಆಯ್ಕೆಗಳು ಇಲ್ಲಿವೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ನೀವು ಕಸ್ಟಮೈಸ್‌ ಮಾಡುವುದಕ್ಕೆ ಯಾವೆಲ್ಲಾ ಆಯ್ಕೆಗಳು ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಲ್‌ಪೇಪರ್ ಕಸ್ಟಮೈಸ್ ಮಾಡಿ

ವಾಲ್‌ಪೇಪರ್ ಕಸ್ಟಮೈಸ್ ಮಾಡಿ

ವಾಟ್ಸಾಪ್‌ನಲ್ಲಿ ವಾಲ್‌ಪೇಪರ್‌ ಅನ್ನು ಕಸ್ಟಮೈಸ್‌ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಅಭಿರುಚಿಗೆ ಅನುಗುಣವಾಗಿ ಚಾಟ್‌ಗಳಿಗಾಗಿ ವಾಲ್‌ಪೇಪರ್ ಅನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ವಾಲ್‌ಪೇಪರ್‌ ನಲ್ಲಿ ಕಸ್ಟಮೈಸ್‌ ಸೆಟ್‌ ಮಾಡಲು ಅಂತರ್ಗತ ಬ್ರೈಟ್, ಡಾರ್ಕ್ ಮತ್ತು ಘನ ಬಣ್ಣಗಳ ಆಯ್ಕೆಗಳಿಂದ ಆಯ್ಕೆ ಮಾಡಬಹುದು. ಹೆಚ್ಚುವರಿಯಾಗಿ, ಬಳಕೆದಾರರು ಯಾವುದೇ ಇಮೇಜ್‌ ಅನ್ನು ಕೂಡ ತಮ್ಮ ವಾಟ್ಸಾಪ್‌ ವಾಲ್‌ಪೇಪರ್‌ನಂತೆ ಸೆಟ್‌ ಮಾಡಬಹುದು. ಇದನ್ನು ನಿಮ್ಮ ವೈಯಕ್ತಿಕ ಚಾಟ್‌ಗಳಿಗಾಗಿ ಮತ್ತು ಎಲ್ಲಾ ಚಾಟ್‌ಗಳಿಗೆ ಮಕೂಡ ಇಮೇಜ್‌ ಅನ್ನು ವಾಲ್‌ಪೇಪರ್‌ ಮಾದರಿಯಲ್ಲಿ ಸೇಟ್‌ ಮಾಡುವುದಕ್ಕೆ ಅವಕಾಶವಿದೆ. ಅಲ್ಲದೆ ನೀವು ನಿಮ್ಮ ಸಂಪರ್ಕಗಳಿಗೆ ಸಂದೇಶ ಕಳುಹಿಸುವಾಗ ಆಯ್ಕೆಮಾಡಿದ ಚಿತ್ರವನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ವ್ಯೂ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ.

ವಾಟ್ಸಾಪ್‌ನಲ್ಲಿ ವಾಲ್‌ಪೇಪರ್‌ ಕಸ್ಟಮೈಸ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಾಲ್‌ಪೇಪರ್‌ ಕಸ್ಟಮೈಸ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಯಾವುದೇ ಚಾಟ್ ವಿಂಡೋವನ್ನು ತೆರೆಯಿರಿ.
ಹಂತ:3 ಇಲ್ಲಿ ನಿಮ್ಮ ಚಾಟ್ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ನಂತರ ವಾಲ್‌ಪೇಪರ್ ಮೇಲೆ ಟ್ಯಾಪ್ ಮಾಡಿ.
ಹಂತ:5 ಇದರಲ್ಲಿ ಬದಲಾವಣೆ ಆಯ್ಕೆಯನ್ನು ಆರಿಸಿ.
ಹಂತ:6 ಇಲ್ಲಿ ಬಳಕೆದಾರರು WhatsApp ನ ಅಂತರ್ಗತ ಥೀಮ್‌ಗಳಿಂದ ಆಯ್ಕೆ ಮಾಡಬಹುದು ಅಥವಾ ಅವರ ವಾಲ್‌ಪೇಪರ್‌ನಂತೆ ಯಾವುದೇ ಚಿತ್ರವನ್ನು ಆಯ್ಕೆ ಮಾಡಬಹುದು.

ವಾಟ್ಸಾಪ್‌ ನೋಟಿಫಿಕೇಶನ್ ಸೌಂಡ್‌ ಬದಲಾಯಿಸಿ

ವಾಟ್ಸಾಪ್‌ ನೋಟಿಫಿಕೇಶನ್ ಸೌಂಡ್‌ ಬದಲಾಯಿಸಿ

ವಾಟ್ಸಾಪ್‌ನಲ್ಲಿ ಒಂದು ಇಂಟರ್‌ಬಿಲ್ಟ್‌ ಮೆನು ಹೊಂದಿದೆ. ಇದರ ಮೂಲಕ ಸಂದೇಶಗಳಲ್ಲಿ ನೋಟಿಫಿಕೇಶನ್ ಸೌಂಡ್‌ ಬದಲಾಯಿಸಬಹುದಾಗಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಹಂತ:1 ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ ಮತ್ತು
ಹಂತ:2 ಬಲಭಾಗದಲ್ಲಿರುವ ಮೂರು-ಬಟನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡಿ
ಹಂತ:4 ಅಧಿಸೂಚನೆಗಳ ಆಯ್ಕೆಯನ್ನು ತೆರೆಯಿರಿ
ಹಂತ:5 ನಿಮ್ಮ WhatsApp ಅಧಿಸೂಚನೆಯ ಟೋನ್ ಅನ್ನು ನೀವು ಈಗ ಇಲ್ಲಿ ಬದಲಾಯಿಸಬಹುದು.
ಹಂತ:6 ಹೆಚ್ಚುವರಿಯಾಗಿ, ನೀವು ವೈಯಕ್ತಿಕ ಬಳಕೆದಾರರಿಗೆ ಅವರ ಚಾಟ್ ಆಯ್ಕೆಗಳಲ್ಲಿ ವಿವರಗಳನ್ನು ಪ್ರವೇಶಿಸುವ ಮೂಲಕ ಕಸ್ಟಮ್ ಟೋನ್ ಅನ್ನು ಸೆಟ್‌ ಮಾಡಬಹುದಾಗಿದೆ.

ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಿ

ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಿ

ಇದಲ್ಲದೆ ವಾಟ್ಸಾಪ್‌ನಲ್ಲಿ ಹೊಸದಾಗಿ ಸೇರಿಸಲಾದ ಸ್ಟಿಕ್ಕರ್ ಮೇಕರ್ ಟೂಲ್‌ ಅನ್ನು ಬಳಸಿಕೊಂಡು ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಲು ಅವಕಾಶ ನೀಡಲಿದೆ. ಅಪ್ಲಿಕೇಶನ್‌ನ ಸ್ಟಿಕ್ಕರ್ ವಿಭಾಗದಲ್ಲಿ ಬಳಕೆದಾರರು ಈ ಫೀಚರ್ಸ್‌ನ್ನು ಪ್ರವೇಶಿಸಬಹುದಾಗಿದೆ. ಇದಕ್ಕಾಗಿ ನೀವು ವಾಟ್ಸಾಪ್‌ನಲ್ಲಿ ಯಾವುದೇ ವಾಟ್ಸಾಪ್‌ ಚಾಟ್ ವಿಂಡೋವನ್ನು ತೆರೆಯಿರಿ, ಇಲ್ಲಿ ಪೇಪರ್‌ಕ್ಲಿಪ್ ಐಕಾನ್ ಮೇಲೆ ಟ್ಯಾಪ್ ಮಾಡಿ, ನಂತರ "ಸ್ಟಿಕ್ಕರ್" ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ಈಗ ನೀವು ಚಿತ್ರವನ್ನು ಅಪ್‌ಲೋಡ್ ಮಾಡಲು ಅಥವಾ ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್ ಅನ್ನು ಕ್ರಿಯೆಟ್‌ ಮಾಡಲು ಸಾಧ್ಯವಾಗಲಿದೆ. ಇನ್ನು ವಾಟ್ಸಾಪ್‌ ಪ್ಲಾಟ್‌ಫಾರ್ಮ್ ನಿಮಗೆ ಔಟ್‌ಲೈನ್ ಅನ್ನು ಸೇರಿಸಲು, ಚಿತ್ರವನ್ನು ಸ್ಟಿಕ್ಕರ್‌ನಲ್ಲಿ ಕ್ರಾಪ್ ಮಾಡಲು ಮತ್ತು ಎಮೋಜಿಗಳು, ಸ್ಟಿಕ್ಕರ್‌ಗಳು ಮತ್ತು ಪಠ್ಯವನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. ಈ ಫೀಚರ್ಸ್‌ ಪ್ರಸ್ತುತ ವಾಟ್ಸಾಪ್‌ ನ ವೆಬ್ ಆವೃತ್ತಿಗೆ ಮಾತ್ರ ಲಭ್ಯವಿದೆ.

ಡಿಸ್ ಅಪೀಯರಿಂಗ್ ಮೆಸೇಜ್‌ ಆನ್ ಮಾಡಿ

ಡಿಸ್ ಅಪೀಯರಿಂಗ್ ಮೆಸೇಜ್‌ ಆನ್ ಮಾಡಿ

ನಿಮ್ಮ ವಾಟ್ಸಾಪ್‌ನಲ್ಲಿ ಹೆಚ್ಚು ಹೆಚ್ಚು ಸಂದೇಶಗಳಿಂದ ಸ್ಟೋರೇಜ್‌ ಖಾಲಿಯಾಗುತ್ತಿದ್ದರೆ ಡಿಸ್‌ ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಉಪಯುಕ್ತವಾಗಲಿದೆ. ಡಿಸ್‌ಅಪಿಯರಿಂಗ್‌ ಮೆಸೇಜ್‌ ಗಳನ್ನು ಆನ್ ಮಾಡುವುದರಿಂದ ಸ್ಟೋರೇಜ್‌ ಖಾಲಿಯಾಗದಂತೆ ತಡೆಯಬಹುದಾಗಿದೆ. ನೀವು ವಾಟ್ಸಾಪ್‌ನಲ್ಲಿ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದರಿಂದ ಚಾಟ್‌ನಲ್ಲಿರುವ ಯಾವುದೇ ಹೊಸ ಸಂದೇಶಗಳು ಏಳು ದಿನಗಳ ನಂತರ ಕಣ್ಮರೆಯಾಗುತ್ತವೆ. ವಾಟ್ಸಾಪ್‌ನಲ್ಲಿ ವೈಯಕ್ತಿಕ ಚಾಟ್‌ಗಾಗಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ವಾಟ್ಸಾಪ್‌

ವಾಟ್ಸಾಪ್‌

ಹಂತ:1 ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಿರ್ದಿಷ್ಟ ಚಾಟ್ ವಿಂಡೋವನ್ನು ಆಯ್ಕೆ ಮಾಡಿ,
ಹಂತ:3 ಚಾಟ್‌ನ ಮೇಲ್ಭಾಗದಲ್ಲಿರುವ ಬಳಕೆದಾರರ ಹೆಸರಿನ ಮೇಲೆ ಟ್ಯಾಪ್ ಮಾಡಿ
ಹಂತ:4 ಇಲ್ಲಿ ನೀವು ಡಿಸ್‌ಅಪಿಯರಿಂಗ್‌ ಸಂದೇಶಗಳ ಆಯ್ಕೆಯನ್ನು ಟಾಗಲ್ ಮಾಡಲು ಸಾಧ್ಯವಾಗುತ್ತದೆ.

ಮಲ್ಟಿ ಡಿವೈಸ್‌ ಫೀಚರ್ಸ್‌

ಮಲ್ಟಿ ಡಿವೈಸ್‌ ಫೀಚರ್ಸ್‌

ವಾಟ್ಸಾಪ್‌ ತನ್ನ ಮಲ್ಟಿ ಡಿವೈಸ್‌ ಬೀಟಾ ಪ್ರೋಗ್ರಾಂ ಅನ್ನು ಈಗಾಗಲೇ ಪರಿಚಯಿಸಿದೆ. ಈ ಫೀಚರ್ಸ್‌ ಸೆಟ್ಟಿಂಗ್ಸ್‌ > ಲಿಂಕ್ಡ್ ವಿಭಾಗದಲ್ಲಿ ಗೋಚರಿಸುತ್ತದೆ. ಈ ಫೀಚರ್ಸ್‌ ಬಳಸಿಕೊಂಡು ವಾಟ್ಸಾಪ್‌ ಬಳಕೆದಾರರು ಫೋನ್‌ ಕನೆಕ್ಟ್‌ ಮಾಡದೆ ಹೋದರೂ, ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಒಬ್ಬರು ತಮ್ಮ ಖಾತೆಗೆ ನಾಲ್ಕು ಡಿವೈಸ್‌ಗಳನ್ನು ಲಿಂಕ್ ಮಾಡಬಹುದು. ಇದರಲ್ಲಿ ಬ್ರೌಸರ್‌ಗಳು ಮತ್ತು ಇತರ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ನೀವು ಕನೆಕ್ಟ್‌ ಮಾಡಿರುವ ಫೋನ್‌ನಲ್ಲಿ ಸಕ್ರಿಯ ಇಂಟರ್ನೆಟ್ ಇಲ್ಲದೆ ಹೋದರೂ ವಾಟ್ಸಾಪ್‌ ವೆಬ್, ಡೆಸ್ಕ್‌ಟಾಪ್ ಮತ್ತು ಪೋರ್ಟಲ್ ಅನ್ನು ಬಳಸಲು ಸಾಧ್ಯವಾಗಲಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ 14 ದಿನಗಳವರೆಗೆ ಸಂಪರ್ಕ ಕಡಿತಗೊಂಡಿದ್ದರೆ, ಲಿಂಕ್ ಮಾಡಲಾದ ಡಿವೈಸ್‌ಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ.

ವಾಟ್ಸಾಪ್‌ ಇಮೇಜ್‌ಗಳನ್ನು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿ?

ವಾಟ್ಸಾಪ್‌ ಇಮೇಜ್‌ಗಳನ್ನು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿ?

ನೀವು ವಾಟ್ಸಾಪ್‌ನಲ್ಲಿ ಇಮೇಜ್‌ಗಳ ಗ್ರೂಪನ್ನು ಸ್ವೀಕರಿಸಿದ್ದರೆ ಅದನ್ನು ನೇರವಾಗಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಟೋರೇಜ್‌ ಮಾಡಲು ಅವಕಾಶವಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ವೆಬ್‌ ಅನ್ನು ಬಳಸಿಕೊಂಡು ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್‌ ವೆಬ್ ಲಿಂಕ್ ಅನ್ನು ತೆರೆಯಿರಿ, ನಂತರ ಯಾವುದೇ ಚಾಟ್‌ಗೆ ಹೋಗಿ, ಗ್ರೂಪ್‌ನ ಹೆಸರಿನ ಮೇಲೆ ಕ್ಲಿಕ್ ಮಾಡಿ, ಇಲ್ಲಿ ನಿಮಗೆ "ಮೀಡಿಯಾ" ವಿಭಾಗವನ್ನು ತೋರಿಸುತ್ತದೆ. ಇದಾದ ನಂತರ, ನಿಮ್ಮ ಕರ್ಸರ್ ಅನ್ನು ಫೋಟೋದಲ್ಲಿ ಸರಿಸಿ, ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ, ಈಗ ಎಲ್ಲಾ ಫೋಟೋಗಳನ್ನು ಆಯ್ಕೆ ಮಾಡುವ ಮೂಲಕ ಡೌನ್‌ಲೋಡ್ ಮಾಡಬಹುದು.

Most Read Articles
Best Mobiles in India

English summary
How to customise the whatsapp for yourself on Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X