ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾವನ್ನು ಪಿಸಿಯಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

|

ಯುವ ಜನತೆಯ ನೆಚ್ಚಿನ ಗೇಮ್‌ ಎನಿಸಿಕೊಂಡಿದ್ದ ಪಬ್‌ಜಿ ಭಾರತಕ್ಕೆ ಹೊಸ ರೂಪದಲ್ಲಿ ರೀ ಎಂಟ್ರಿ ನೀಡಿರೋದು ನಿಮಗೆಲ್ಲಾ ತಿಳಿದೆ ಇದೆ. ಪಬ್‌ಜಿ ಮಾದರಿಯನ್ನೇ ಹೊಲುವ ಬ್ರಾಟಲ್‌ಗ್ರೌಡ್‌ ಮೊಬೈಲ್‌ ಇಂಡಿಯಾ ಇದೀಗ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ ಅಧಿಕೃತವಾಗಿ ಲಭ್ಯವಿದೆ. ಈ ಮೂಲಕ ಕ್ರಾಫ್ಟನ್‌ ಮತ್ತೊಮ್ಮೆ ಭಾರತದ ಯುವಜನತೆಯ ಮನಸ್ಸು ಗೆಲ್ಲೊಕೆ ಮುಂದಾಗಿದೆ. ಸದ್ಯ ಈ ಗೇಮ್‌ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಪಬ್‌ಜಿ

ಹೌದು, ಪಬ್‌ಜಿ ಗೇಮ್‌ನ ಪರ್ಯಾಯ ರೂಪ ಬ್ಯಾಟಲ್‌ಗ್ರೌಂಡ್‌ ಇದೀಗ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಧಿಕೃತವಾಗಿದೆ. ಇನ್ನು ಹೆಚ್ಚಿನ ಗೇಮರ್‌ಗಳು ಉನ್ನತ ಮಟ್ಟದ ಗೇಮಿಂಗ್ ಅನುಭವಕ್ಕಾಗಿ ಲ್ಯಾಪ್‌ಟಾಪ್‌ನಲ್ಲಿ ಗೇಮ್‌ ಆಡಲು ಬಯಸುತ್ತಾರೆ. ಇದಕ್ಕಾಗಿ ಆಂಡ್ರಾಯ್ಡ್ ಎಮ್ಯುಲೇಟರ್‌ಗಳ ಅಗತ್ಯವಿದೆ. ಸದ್ಯ ಬ್ಲೂಸ್ಟ್ಯಾಕ್ಸ್, ಗೇಮ್‌ಲೂಪ್ ಮತ್ತು ನೋಕ್ಸ್ ಪ್ಲೇಯರ್ ಸೇರಿದಂತೆ ನೀವು ಪರಿಗಣಿಸಬಹುದಾದ ವಿವಿಧ ಆಂಡ್ರಾಯ್ಡ್ ಎಮ್ಯುಲೇಟರ್‌ಗಳಿವೆ. ಈ ಎಮ್ಯುಲೇಟರ್‌ಗಳು ವಿಂಡೋಸ್ ಮತ್ತು ಪಿಸಿ ಎರಡರಲ್ಲೂ ಲಭ್ಯವಿದೆ. ಹಾಗಾದ್ರೆ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾ ಗೇಮ್‌ ಅನ್ನು ಪಿಸಿಯಲ್ಲಿ ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾವನ್ನು ಪಿಸಿಯಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ

ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾವನ್ನು ಪಿಸಿಯಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ

ಹಂತ 1: ಪ್ಲಾಟ್‌ಫಾರ್ಮ್‌ನ ಅಧಿಕೃತ ವೆಬ್‌ಸೈಟ್‌ನಿಂದ ನಿಮ್ಮ ಆಯ್ಕೆಯ ಆಂಡ್ರಾಯ್ಡ್ ಎಮ್ಯುಲೇಟರ್ ಅನ್ನು ಡೌನ್‌ಲೋಡ್ ಮಾಡಿ. ಉದಾಹರಣೆಗೆ, ನೀವು ಬ್ಲೂಸ್ಟ್ಯಾಕ್‌ಗಳನ್ನು ಬಳಸಲು ಬಯಸಿದರೆ, ನೀವು http://www.bluestacks.com ಗೆ ಭೇಟಿ ನೀಡಬೇಕು ಮತ್ತು ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ.

ಹಂತ 2: ನಿಮ್ಮ ಪಿಸಿಯಲ್ಲಿ ಎಮ್ಯುಲೇಟರ್ ಅನ್ನು ಇನ್‌ಸ್ಟಾಲ್‌ ಮಾಡಿ ಮತ್ತು ಅದನ್ನು ತೆರೆಯಿರಿ.

ಹಂತ 3: ಈಗ, ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ. ನಿಮ್ಮ ಗೂಗಲ್‌ ಪ್ಲೇಸ್ಟೋರ್‌ ಖಾತೆಗೆ ನೀವು ಲಾಗ್ ಇನ್ ಆಗಬೇಕಾಗುತ್ತದೆ.

ಬ್ಯಾಟಲ್‌ಗ್ರೌಂಡ್‌

ಹಂತ 4: ನೀವು ಸೈನ್ ಇನ್ ಮಾಡಿದ ನಂತರ, ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾವನ್ನು ಸರ್ಚ್‌ ಮಾಡಿ.

ಹಂತ 5: ಇನ್‌ಸ್ಟಾಲ್‌ ಬಟನ್ ಟ್ಯಾಪ್ ಮಾಡಿ ಮತ್ತು ಗೇಮ್‌ ನಿಮ್ಮ ಪಿಸಿಯಲ್ಲಿ ಡೌನ್‌ಲೋಡ್ ಮಾಡಲು ಪ್ರಾರಂಭಿಸುತ್ತದೆ. ನೀವು ಎಲ್ಲಾ ಸೆಟ್‌ ಮಾಡಿದ ಮೇಲೆ ಹೆಚ್ಚುವರಿ ಫೈಲ್ ಅನ್ನು ಡೌನ್‌ಲೋಡ್ ಮಾಡಲು ನೀವು ಆಟವನ್ನು ಪ್ರಾರಂಭಿಸಬೇಕಾಗುತ್ತದೆ.

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು ಆಡಲು ಪ್ರಾರಂಭಿಸಲು ಬಳಕೆದಾರರು ತಮ್ಮ ಫೇಸ್‌ಬುಕ್ ಅಥವಾ ಟ್ವಿಟರ್ ಐಡಿಯೊಂದಿಗೆ ಲಾಗ್ ಇನ್ ಮಾಡಬಹುದಾಗಿದೆ.

Best Mobiles in India

English summary
Krafton has finally launched its long-awaited PUBG adaptation for India; Battlegrounds Mobile India. Here is how you can play the game on your PC.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X