ವಾಟ್ಸಾಪ್‌ನಲ್ಲಿ ಮಕ್ಕಳ ದಿನಾಚರಣೆಯ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

|

ಇಂದು ನವೆಂಬರ್‌ 14 ಅಂದರೆ ಭಾರತದಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ. ಮಕ್ಕಳ ದಿನಾಚರಣೆಯ ದಿನವನ್ನು ಇಂದು ಆಚರಿಸುತ್ತಿರುವುದರಿಂದ ತಮ್ಮ ಮನೆಯ ಮಕ್ಕಳಿಗೆ ಶುಭಾಶಯ ಕೋರುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಮಕ್ಕಳ ಸುಂದರವಾದ ಚಿತ್ರಗಳನ್ನು ಮತ್ತು ಶುಭಾಶಯಗಳನ್ನು ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಶೇರ್‌ ಮಾಡುತ್ತಿದ್ದಾರೆ. ಅಲ್ಲದೆ ವಾಟ್ಸಾಪ್‌ ಚಾಟ್‌ ಮೂಲಕ ಮಕ್ಕಳ ದಿನಾಚರಣೆಯ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನೀವು ಕಳುಹಿಸುವ ಚಿತ್ರಗಳ ಜೊತೆಗೆ, ನಿಮ್ಮ ಮಕ್ಕಳ ಚಿತ್ರಗಳು ಇರುವ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಸಹ ಕಳುಹಿಸಬಹುದಾಗಿದೆ.

ವಾಟ್ಸಾಪ್‌ ಸ್ಟಿಕ್ಕರ್‌

ಹೌದು, ಮಕ್ಕಳ ದಿನಾಚರಣೆಯ ದಿನವಾದ ಈ ದಿನದಂದು ನಿಮ್ಮ ಮಕ್ಕಳಿಗೆ ವಾಟ್ಸಾಪ್‌ ಸ್ಟಿಕ್ಕರ್‌ಗಳ ಮೂಲಕ ಶುಭಾಶಯಗಳನ್ನ ಕೋರಬಹುದಾಗಿದೆ. ಮಕ್ಕಳ ದಿನವನ್ನು ಇನ್ನಷ್ಟು ಸುಂದರವಾಗಿಸಲು ನೀವು ಕಳುಹಿಸಬಹುದಾದ ಹಲವಾರು ಅನಿಮೇಟೆಡ್ ಸ್ಟಿಕ್ಕರ್‌ಗಳು ವಾಟ್ಸಾಪ್‌ನಲ್ಲಿವೆ. ಅಲ್ಲದೆ, ನೀವು ವಾಟ್ಸಾಪ್‌ನಲ್ಲಿ ಮಕ್ಕಳ ದಿನಾಚರಣೆಗಾಗಿ ಥರ್ಡ್‌ ಪಾರ್ಟಿ ಸ್ಟಿಕ್ಕರ್‌ಗಳನ್ನು ಸಹ ಡೌನ್‌ಲೋಡ್ ಮಾಡಬಹುದಾಗಿದೆ ಜೊತೆಗೆ ನಿಮ್ಮ ಸ್ವಂತ ಸ್ಟಿಕ್ಕರ್‌ಗಳನ್ನು ಸಹ ಕ್ರಿಯೆಟ್‌ ಮಾಡಬಹುದಾಗಿದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಮೂಲಕ ಮಕ್ಕಳ ದಿನದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆ ಅನ್ನೊದನ್ನ ಹಂತ ಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

ಮಕ್ಕಳ ದಿನಾಚರಣೆಯ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಮಕ್ಕಳ ದಿನಾಚರಣೆಯ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ಮೊದಲು, ನೀವು ವಾಟ್ಸಾಪ್ ತೆರೆಯಬೇಕು ಮತ್ತು ನೀವು ಮಕ್ಕಳ ದಿನದ ಸ್ಟಿಕ್ಕರ್‌ಗಳನ್ನು ಕಳುಹಿಸಲು ಬಯಸುವ ಪಾರ್ಟಿಯನ್ನು ಸರ್ಚ್‌ ಮಾಡಬೇಕು.
ಹಂತ 2: ನಂತರ ಎಮೋಜಿ ಐಕಾನ್ ಕ್ಲಿಕ್ ಮಾಡಿ ಮತ್ತು '+' ಐಕಾನ್ ಆಯ್ಕೆಮಾಡಿ ಮತ್ತು ನೀವು ಸ್ಟಿಕ್ಕರ್‌ಗಳ ಒಂದು ಶ್ರೇಣಿಯನ್ನು ನೋಡಬಹುದು ಮತ್ತು ಅವುಗಳನ್ನು ಕಳುಹಿಸಲು ನೀವು ಮಕ್ಕಳ ದಿನದ ಸ್ಟಿಕ್ಕರ್‌ ಪ್ಯಾಕ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 3: ನಿಮ್ಮ ಆಯ್ಕೆಯ ಸ್ಟಿಕ್ಕರ್ ನಿಮಗೆ ಸಿಗದಿದ್ದರೆ, ಕೆಳಗೆ ಹೋಗಿ ಗೆಟ್ ಮೋರ್ ಸ್ಟಿಕ್ಕರ್‌ಗಳನ್ನು ಕ್ಲಿಕ್ ಮಾಡಿ, ಇದು ಸ್ಟಿಕ್ಕರ್‌ಗಳನ್ನು ಪ್ಲೇ ಸ್ಟೋರ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
ಹಂತ 4: ನಂತರ ನೀವು ಅವುಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲು ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ವಾಟ್ಸಾಪ್

ಇನ್ನು ನೀವು ನಿಮ್ಮ ಸ್ವಂತ ಮಕ್ಕಳ ಸ್ಟಿಕ್ಕರ್ ಅನ್ನು ಕ್ರಿಯೆಟ್‌ ಮಾಡಿ ಶೇರ್‌ ಮಾಡುವುದಕ್ಕೆ, ಸ್ವಂತ ಫೋಟೋಗಳೊಂದಿಗೆ ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸಬೇಕಾಗುತ್ತದೆ. ಅದಕ್ಕಾಗಿ, ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ 'ಸ್ಟಿಕ್ಕರ್ ಮೇಕ್ ಫಾರ್ ವಾಟ್ಸಾಪ್' ಮತ್ತು 'ಸ್ಟಿಕ್ಕರ್.ಲಿ' ನಂತಹ ಅನೇಕ ಅಪ್ಲಿಕೇಶನ್‌ಗಳನ್ನ ಕಾಣಬಹುದಾಗಿದೆ.

ನಿಮ್ಮ ಸ್ವಂತ ಮಕ್ಕಳ ವಾಟ್ಸಾಪ್‌ ಸ್ಟಿಕ್ಕರ್ ಕ್ರಿಯೆಟ್‌ ಮಾಡುವುದು ಹೇಗೆ?

ನಿಮ್ಮ ಸ್ವಂತ ಮಕ್ಕಳ ವಾಟ್ಸಾಪ್‌ ಸ್ಟಿಕ್ಕರ್ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ 1: ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ನಿಮ್ಮ ಆಯ್ಕೆಯ ಯಾವುದೇ ಸ್ಟಿಕ್ಕರ್ ತಯಾರಕ ಅಪ್ಲಿಕೇಶನ್ ಅನ್ನು ಸ್ಥಾಪಿಸಿ.
ಹಂತ 2: ಅಪ್ಲಿಕೇಶನ್ ತೆರೆಯಿರಿ ಮತ್ತು 'ಹೊಸ ಪ್ಯಾಕ್ ರಚಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ಪ್ಯಾಕ್‌ಗೆ ಹೆಸರನ್ನು ನೀಡಿ ಮತ್ತು ನಿಮ್ಮ ಆಯ್ಕೆಯ ಫೋಟೋದೊಂದಿಗೆ ಸ್ಟಿಕ್ಕರ್ ಮಾಡಲು 'ಸ್ಟಿಕ್ಕರ್‌ಗಳನ್ನು ಸೇರಿಸಿ' ಕ್ಲಿಕ್ ಮಾಡಿ.
ಹಂತ 4: ಅಂತಿಮವಾಗಿ, ನೀವು ಅದನ್ನು ವಾಟ್ಸಾಪ್‌ಗೆ ಸೇರಿಸಬಹುದು ಮತ್ತು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.

Best Mobiles in India

English summary
ts Children's Day in India today and most of us will be sharing lovely images and greetings to kids on this special occasion they get to celebrate.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X