ವಾಟ್ಸಾಪ್‌ನಲ್ಲಿ ದೀಪಾವಳಿ ಸ್ಟಿಕ್ಕರ್ ಡೌನ್‌ಲೋಡ್ ಮಾಡುವುದು ಹೇಗೆ?
ದೀಪಾವಳಿ ಸಂಭ್ರಮಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಆದರೆ ದೇಶದೆಲ್ಲೆಡೆ ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಹಬ್ಬದ ಸಂಭ್ರಮಕ್ಕೆ ಸ್ವಲ್ಪ ತಡೆ ಬಿದ್ದಿದೆ. ಹೆಚ್ಚಿನ ಜನರು ಒಂದೇ ಕಡೆ ಸೇರದೇ ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬ ಆಚರಿಸಬೇಕಾಗಿದೆ. ಆದರೂ ದೀಪಾವಳಿ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಶುಭಾಶಯ ಕೋರುವುದಕ್ಕೆ ವಾಟ್ಸಾಪ್ ಉತ್ತಮ ವೇದಿಕೆಯಾಗಿದೆ. ಇನ್ನು ದೀಪಾವಳಿಯ ಸಂದರ್ಭದಲ್ಲಿ ವಾಟ್ಸಾಪ್ ಮೂಲಕ ಶುಭಾಶಯ ಕೋರುವುದಕ್ಕೆ, ವಾಟ್ಸಾಪ್ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಆನಿಮೇಟೆಡ್ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ.

ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ದೀಪಾವಳಿ ಪ್ರಯುಕ್ತ ಹಲವಾರು ಆನಿಮೇಟೆಡ್ ಸ್ಟಿಕ್ಕರ್‌ಳನ್ನ ಪರಿಚಯಿಸಿದೆ. ಸದ್ಯ ನಿಮ್ಮ ಭಾವನೆಗಳಿಗೆ ಅನುಗಣವಾಗಿ ಸ್ಟಿಕ್ಕರ್‌ಗಳನ್ನ ಕಳುಹಿಸುವ ಆಯ್ಕೆ ವಾಟ್ಸಾಪ್‌ನಲ್ಲಿ ಲಭ್ಯವಿದೆ. ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನ ಸೂಚಿಸುವ ಸ್ಟಿಕ್ಕರ್‌ಗಳನ್ನ ವಾಟ್ಸಾಪ್‌ನಲ್ಲಿ ನೀವು ಕಳುಹಿಸಬಹುದಾಗಿದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಮೂಲಕ ದೀಪಾವಳಿ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.
ದೀಪಾವಳಿ 2020 ಇತರ ವರ್ಷಗಳಿಗಿಂತ ಭಿನ್ನವಾಗಿರಲಿದೆ. ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಹಬ್ಬದ ಸಂಭ್ರಮವನ್ನ ಒಂದೇ ಕಡೆ ಸೇರಿ ಸಂಭ್ರಮಿಸುವುದಕ್ಕೆ ಕಡಿವಾಣ ಬಿದ್ದಿದೆ. ಆದರೆ ವಾಟ್ಸಾಪ್ ಮೂಲಕ ಸ್ಟಿಕ್ಕರ್‌ಗಳನ್ನು ಕಳುಹಿಸುವ ಮೂಲಕ ನಾವು ವರ್ಚುವಲ್ ದೀಪಾವಳಿಯನ್ನು ಆಚರಿಸಬಹುದಾಗಿದೆ. ಅಷ್ಟಕ್ಕೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಮೂಲಕ ದೀಪಾವಳಿ ಸ್ಟಿಕ್ಕರ್ ಕಳುಹಿಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಸ್ಮಾರ್ಟ್‌ಫೋನ್‌ನಲ್ಲಿ ದೀಪಾವಳಿ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆ?
ಹಂತ 1: ಮೊದಲು ನೀವು ವಾಟ್ಸಾಪ್ ತೆರೆಯಬೇಕು ಮತ್ತು ನೀವು ದೀಪಾವಳಿ ಸ್ಟಿಕ್ಕರ್‌ಗಳನ್ನು ಕಳುಹಿಸಲು ಬಯಸುವ ವ್ಯಕ್ತಿಯನ್ನು ಸರ್ಚ್ ಮಾಡಬೇಕು.
ಹಂತ 2: ನಂತರ ಎಮೋಜಿ ಐಕಾನ್ ಕ್ಲಿಕ್ ಮಾಡಿ ಮತ್ತು '+' ಐಕಾನ್ ಆಯ್ಕೆಮಾಡಿ ಮತ್ತು ನೀವು ಸ್ಟಿಕ್ಕರ್‌ಗಳ ಒಂದು ಶ್ರೇಣಿಯನ್ನು ನೋಡಬಹುದು ಮತ್ತು ಅವುಗಳನ್ನು ಕಳುಹಿಸಲು ನೀವು ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 3: ನಿಮ್ಮ ಆಯ್ಕೆಯ ಸ್ಟಿಕ್ಕರ್ ನಿಮಗೆ ಸಿಗದಿದ್ದರೆ, ಕೆಳಗೆ ಹೋಗಿ ಗೆಟ್ ಮೋರ್ ಸ್ಟಿಕ್ಕರ್‌ಗಳನ್ನು ಕ್ಲಿಕ್ ಮಾಡಿ, ಇದು ಸ್ಟಿಕ್ಕರ್‌ಗಳನ್ನು ಪ್ಲೇ ಸ್ಟೋರ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
ಹಂತ 4: ನಂತರ ನೀವು ಅವುಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲು ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ನಿಮ್ಮ ಸ್ವಂತ ದೀಪಾವಳಿ ಸ್ಟಿಕ್ಕರ್ ತಯಾರಿಸುವುದು ಮತ್ತು ಕಳುಹಿಸುವುದು ಹೇಗೆ?
ಇದಲ್ಲದೆ, ಒಬ್ಬರು ತಮ್ಮದೇ ಆದ ಫೋಟೋಗಳೊಂದಿಗೆ ಕಸ್ಟಮ್ ಸ್ಟಿಕ್ಕರ್‌ಗಳನ್ನು ಸಹ ಮಾಡಬಹುದು. ಅದಕ್ಕಾಗಿ, ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ 'ಸ್ಟಿಕ್ಕರ್ ಮೇಕ್ ಫಾರ್ ವಾಟ್ಸಾಪ್' ಮತ್ತು 'ಸ್ಟಿಕ್ಕರ್.ಲಿ' ನಂತಹ ಅನೇಕ ಅಪ್ಲಿಕೇಶನ್‌ಗಳಿವೆ. ಹಾಗಾದ್ರೆ ನಿಮ್ಮ ಸ್ವಂತ ದೀಪಾವಳಿ ಸ್ಟಿಕ್ಕರ್ ಮಾಡುವುದು ಹೇಗೆ ಅನ್ನೊದು ಇಲ್ಲಿದೆ.
ಹಂತ 1: ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ನಿಮ್ಮ ಆಯ್ಕೆಯ ಯಾವುದೇ ಸ್ಟಿಕ್ಕರ್ ತಯಾರಕ ಅಪ್ಲಿಕೇಶನ್ ಅನ್ನು ಸ್ಥಾಪಿಸಿ.
ಹಂತ 2: ಅಪ್ಲಿಕೇಶನ್ ತೆರೆಯಿರಿ ಮತ್ತು 'ಹೊಸ ಪ್ಯಾಕ್ ರಚಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ಪ್ಯಾಕ್‌ಗೆ ಹೆಸರನ್ನು ನೀಡಿ ಮತ್ತು ನಿಮ್ಮ ಆಯ್ಕೆಯ ಫೋಟೋದೊಂದಿಗೆ ಸ್ಟಿಕ್ಕರ್ ಮಾಡಲು 'ಸ್ಟಿಕ್ಕರ್‌ಗಳನ್ನು ಸೇರಿಸಿ' ಕ್ಲಿಕ್ ಮಾಡಿ.
ಹಂತ 4: ಅಂತಿಮವಾಗಿ, ನೀವು ಅದನ್ನು ವಾಟ್ಸಾಪ್‌ಗೆ ಸೇರಿಸಬಹುದು ಮತ್ತು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.


Click it and Unblock the Notifications








