Instagram ರೀಲ್ಸ್: ರೀಲ್ಸ್ ವೀಡಿಯೊ ಡೌನ್‌ಲೋಡ್ ಮಾಡುವುದು ಹೇಗೆ ಗೊತ್ತಾ?

|

ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆಗಿದ್ದೆ ತಡ ಟಿಕ್‌ಟಾಕ್‌ಗಿದ್ದ ಜನಪ್ರಿಯತೆ ಅದು ಹಾಗೂ ಅದರ ಬಳಕೆದಾರರನ್ನ ಸೆಳೆಯಲು ಇತರೆ ಆಪ್‌ಗಳು ಪೈಪೋಟಿ ನಡೆಸುತ್ತಿವೆ. ಟಿಕ್‌ಟಾಕ್‌ಗಿದ್ದ ಜನಪ್ರಿಯತೆ ಟಿಕ್‌ಟಾಕ್‌ ಅನ್ನು ಬಲಸುತ್ತಿದ್ದ ಸಾಕಷ್ಟು ಬಳಕೆದಾರರಿಗೆ ಪರ್ಯಾಯ ಆಪ್‌ಗಳನ್ನ ಪರಿಚಯಿಸುವ ನಿಟ್ಟಿನಲ್ಲಿ ಸಾಕಷ್ಟು ಕಂಪೆನಿಗಳು ತಮ್ಮ ತಂತ್ರಗಾರಿಕೆಯನ್ನ ತೋರುತ್ತಿವೆ. ಸದ್ಯ ಇದೀಗ ಜನಪ್ರಿಯ ಸೊಶೀಯಲ್‌ ಮಿಡಿಯಾ ಅಪ್ಲಿಕೇಶನ್‌ ಆಗಿರುವ ಇನ್‌ಸ್ಟಾಗ್ರಾಮ್‌ ಕೂಡ ಟಿಕ್‌ಟಾಕ್‌ಗೆ ಬದಲಿ ಎನಿಸುವ ಫೀಚರ್ಸ್‌ ಪರಿಚಯಿಸಿದೆ. ಸದ್ಯ ಇನ್‌ಸ್ಟಾಗ್ರಾಮ್ ರೀಲ್ಸ್ ಎಂದು ಕರೆಯಲಾಗುವ ಹೊಸ ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದೆ.

ಇನ್‌ಸ್ಟಾಗ್ರಾಮ್‌

ಹೌದು, ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಮ್‌ ಮೂಲತಃ ಟಿಕ್‌ಟಾಕ್ ಶೈಲಿಯ ಕಿರು ವೀಡಿಯೊಗಳನ್ನು ತಯಾರಿಸುವ ತದ್ರೂಪಿ ಫೀಚರ್ಸ್‌ ರಿಲ್ಸ್‌ ಅನ್ನು ಪರಿಚಯಿಸಿದೆ. ಆದರೆ ರೀಲ್ಸ್‌ ಟಿಕ್‌ಟಾಕ್‌ ನಂತೆ ಬಳಕೆದಾರರು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಮತ್ತು ಹಂಚಿಕೊಳ್ಳಲು ಸುಲಭ ಅವಕಾಶವನ್ನ ನೀಡಿಲ್ಲ. ಹಾಗಾದ್ರೆ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ನೀವು ಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ಹೇಗೆ ಡೌನ್‌ಲೋಡ್ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

Instagram ರೀಲ್ಸ್: ಸೇವ್ ಮಾಡುವುದು ಹೇಗೆ?

Instagram ರೀಲ್ಸ್: ಸೇವ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ Instagram ಅಪ್ಲಿಕೇಶನ್‌ ಅನ್ನು ತೆರೆಯಿರಿ> ಸರ್ಚ್‌ ಅನ್ನು ಟ್ಯಾಪ್ ಮಾಡಿ> ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್ಸ್ ವೀಡಿಯೊವನ್ನು ತೆರೆಯಿರಿ.
ಹಂತ:2 ನಂತರ ನೀವು ಬಳಕೆದಾರರ ಪ್ರೊಫೈಲ್‌ಗೆ ಭೇಟಿ ನೀಡಬೇಕು> ಹೊಸ ರೀಲ್ಸ್ ಟ್ಯಾಬ್ ಅನ್ನು ಒತ್ತಿರಿ, ಅದು ಈಗ ಐಜಿಟಿವಿ ಟ್ಯಾಬ್‌ನ ಪಕ್ಕದಲ್ಲಿರಲಿದೆ ಅನ್ನೊದನ್ನ ಗಮನಿಸಬೇಕು> ನೀವು ಡೌನ್‌ಲೋಡ್ ಮಾಡಲು ಮತ್ತು ತೆರೆಯಲು ಬಯಸುವ ರೀಲ್ಸ್ ವೀಡಿಯೊವನ್ನು ಆಯ್ಕೆ ಮಾಡಿ.
ಹಂತ:3 ವೀಡಿಯೊ ಲೋಡ್ ಆದ ನಂತರ, ಮೂರು-ಚುಕ್ಕೆಗಳ ಐಕಾನ್ ಒತ್ತಿ> ಸೇವ್‌ ಟ್ಯಾಪ್ ಮಾಡಿ.
ಹಂತ:4 ಸೇವ್‌ ರೀಲ್ಸ್ ವೀಡಿಯೊವನ್ನು ಪ್ರವೇಶಿಸಲು, Instagram ನ ಹೋಮ್‌ಸ್ಕ್ರೀನ್‌ಗೆ ಹಿಂತಿರುಗಿ> ನಿಮ್ಮ ಪ್ರೊಫೈಲ್ ಐಕಾನ್ ಟ್ಯಾಪ್ ಮಾಡಿ> ಹ್ಯಾಂಬರ್ಗರ್ ಐಕಾನ್ ಟ್ಯಾಪ್ ಮಾಡಿ> ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ> ಖಾತೆಗೆ ಹೋಗಿ> ಸೇವ್‌ ಮಾಡಿದ ಪೊಲ್ಡರ್‌ಗೆ ಹೋಗಿ. ಎಲ್ಲಾ ಪೋಸ್ಟ್‌ಗಳ ಫೋಲ್ಡರ್‌ನಲ್ಲಿ ನೀವು ಇತ್ತೀಚೆಗೆ ಸೇವ್ ಮಾಡಿದ ವೀಡಿಯೊಗಳನ್ನು ಕಾಣಬಹುದಾಗಿದೆ.

Instagram ರೀಲ್ಸ್: Android ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

Instagram ರೀಲ್ಸ್: Android ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 Google Play ಗೆ ಹೋಗಿ ಮತ್ತು Instagram ವೀಡಿಯೊ ಡೌನ್‌ಲೋಡರ್ ಅನ್ನು ಡೌನ್‌ಲೋಡ್ ಮಾಡಿ - Instagram ಅನ್ನು ರೀ ಪೋಸ್ಟ್ ಮಾಡಿ.
ಹಂತ:2 ಅಪ್ಲಿಕೇಶನ್ ಇನ್‌ಸ್ಟಾಲ್‌ ಆದ ನಂತರ, ಅದನ್ನು ತೆರೆಯಿರಿ ಮತ್ತು ಅದನ್ನು ಸೆಟ್‌ ಮಾಡಿ.
ಹಂತ:3 ಅಪ್ಲಿಕೇಶನ್ ಅನ್ನು ಸೆಟ್‌ ಮಾಡಿದ ನಂತರ, Instagram ಗೆ ಹಿಂತಿರುಗಿ ಮತ್ತು ನೀವು ಡೌನ್‌ಲೋಡ್ ಮಾಡಲು ಮತ್ತು ತೆರೆಯಲು ಬಯಸುವ ರೀಲ್ಸ್ ವೀಡಿಯೊವನ್ನು ಆಯ್ಕೆ ಮಾಡಿ.
ಹಂತ:4 ಈಗ ಮೂರು-ಚುಕ್ಕೆಗಳ ಐಕಾನ್ ಒತ್ತಿ ಮತ್ತು ಕಾಪಿ ಲಿಂಕ್ ಟ್ಯಾಪ್ ಮಾಡಿ.
ಹಂತ:5 Instagram ಅಪ್ಲಿಕೇಶನ್‌ಗಾಗಿ ಇತ್ತೀಚೆಗೆ ಡೌನ್‌ಲೋಡ್ ಮಾಡಲಾದ ವೀಡಿಯೊ ಡೌನ್‌ಲೋಡರ್ ಅನ್ನು ತೆರೆಯಿರಿ ಮತ್ತು ನೀವು ಇದೀಗ ಕಾಪಿ ಮಾಡಿದ URL ಅನ್ನು ಆಟೋಮ್ಯಾಟಿಕ್ ಆಗಿ ಅಲ್ಲಿ ಪೇಸ್ಟ್‌ಮಾಡಲಾಗುತ್ತೆ.
ಹಂತ:6 ಈಗ ನಿಮ್ಮ ಫೋನ್‌ನ ಗ್ಯಾಲರಿಗೆ ಹೋಗಿ ಮತ್ತು ನೀವು ರೀಲ್ಸ್ ವೀಡಿಯೊವನ್ನು ನೋಡಬಹುದಾಗಿದೆ.

Instagram ರೀಲ್ಸ್:iPhoneನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

Instagram ರೀಲ್ಸ್:iPhoneನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 ಆಪ್ ಸ್ಟೋರ್‌ಗೆ ಹೋಗಿ ಇನ್‌ಸ್ಟಾಗ್ರಾಮ್‌ಗಾಗಿ ಇನ್‌ಸೇವರ್ ಡೌನ್‌ಲೋಡ್ ಮಾಡಿ.
ಹಂತ:2 ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು ಸೆಟ್‌ಮಾಡಿ.
ಹಂತ:3 ಅಪ್ಲಿಕೇಶನ್ ಅನ್ನು ಸೆಟ್‌ ಮಾಡಿದ ನಂತರ, Instagram ಗೆ ಹಿಂತಿರುಗಿ ಮತ್ತು ನೀವು ಡೌನ್‌ಲೋಡ್ ಮಾಡಲು ಮತ್ತು ತೆರೆಯಲು ಬಯಸುವ ರೀಲ್ಸ್ ವೀಡಿಯೊವನ್ನು ಆಯ್ಕೆ ಮಾಡಿ.
ಹಂತ:4 ಈಗ ಮೂರು-ಚುಕ್ಕೆಗಳ ಐಕಾನ್ ಒತ್ತಿ ಮತ್ತು ಕಾಪಿ ಲಿಂಕ್ ಟ್ಯಾಪ್ ಮಾಡಿ.
ಹಂತ:5 ನಂತರ Instagram ಅಪ್ಲಿಕೇಶನ್‌ಗಾಗಿ ಡೌನ್‌ಲೋಡ್ ಮಾಡಲಾದ ಇನ್‌ಸೇವರ್ ತೆರೆಯಿರಿ ಮತ್ತು ನೀವು ಕಾಪಿ ಮಾಡಿದ ಲಿಂಕ್ ಆಟೋಮ್ಯಾಟಿಕ್‌ ಆಗಿ ಪೇಸ್ಟ್‌ ಆಗಲಿದೆ.
ಹಂತ:6 ನಂತರ ವಾಚ್‌ ಇಟ್‌ ಅನ್ನು ಟ್ಯಾಪ್ ಮಾಡಿ > ಶೇರ್‌ ಟ್ಯಾಪ್ ಮಾಡಿ> ವೀಡಿಯೊ ಸೇವ್‌ ಟ್ಯಾಪ್ ಮಾಡಿ.

Best Mobiles in India

English summary
Facebook-owned Instagram has launched a new feature dubbed Reels, which is basically a clone for making TikTok-style short videos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X