Home
ಸುದ್ದಿಜಾಲ

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ನಿವು ಎಲ್ಲಿಗೆ ಹೊಗಬೇಕಾದರೂ ಗೂಗಲ್‌ ಮ್ಯಾಪ್‌ ಸಾಕಷ್ಟು ಉಪಯುಕ್ತವಾಗಿದೆ. ಗೂಗಲ್‌ ಮ್ಯಾಪ್‌ ಇರುವುದರಿಮದ ಇತರರನ್ನು ವಿಳಾಸ ಕೇಳಿ ಮಾರ್ಗ ಹುಡುಕಬೇಕಾದ ಅನಿವಾರ್ಯತೆ ಕೂಡ ತಪ್ಪಿದೆ. ಇನ್ನು ಗೂಗಲ್‌ ಮ್ಯಾಪ್‌ ಅನ್ನು ಬಳಸಿ ಪ್ರಯಾಣಿಸಿದರೆ ನಿಮ್ಮ ಪ್ರಯಾನದ ಸಮಯ ಕೂಡ ಉಳಿತಾಯವಾಗಲಿದೆ. ಸಾಧ್ಯವಾದಷ್ಟು ವೇಗವಾಗಿ ಸಾಗುವ ಮಾರ್ಗಗಳನ್ನ ಗೂಗಲ್‌ ಮ್ಯಾಪ್‌ ತೊರಿಸುವುದರಿಂದ ಇದು ಸಾಧ್ಯವಾಗಿದೆ. ಇನ್ನು ಗೂಗಲ್‌ ಮ್ಯಾಪ್‌ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಮ್ಯಾಪ್‌ನಲ್ಲಿ ಹೋಮ್ ಅಡ್ರೆಸ್‌ ಅನ್ನು ಎಡಿಟ್‌ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ.

ಗೂಗಲ್‌ ಮ್ಯಾಪ್

ಹೌದು, ಗೂಗಲ್‌ ಮ್ಯಾಪ್‌ ಸಾಕಷ್ಟು ಉಪಯುಕ್ತವಾಗಿದೆ. ಗೂಗಲ್‌ ಮ್ಯಾಪ್‌ ಬಳಸಿ ಪ್ರಯಾಣ ಮಾಡುವುದು ಇದೀಗ ಸಾಕಷ್ಟು ಸುಲಭವಾಗಿದೆ. ಇದಲ್ಲದೆ ನೀವು ಎಲ್ಲಿದ್ದರೂ ಒಂದೇ ಕ್ಲಿಕ್‌ನಲ್ಲಿ ನಿಮ್ಮನ್ನು ನಿಮ್ಮ ಮನೆಗೆ ಕರೆದೊಯ್ಯಲು ಸಹ ಗೂಗಲ್‌ ಮ್ಯಾಪ್‌ಗೆ ನಿರ್ದೆಶಿಸುವ ಅವಕಾಶ ಕೂಡ ಇದೆ. ಆದರೆ ನಿಮ್ಮ ಮನೆಯ ವಿಳಾಸ ಅಥವಾ ಕೆಲಸದ ವಿಳಾಸ ತಪ್ಪಾಗಿದ್ದರೆ ಏನು ಮಾಡುವುದು? ನೀವು ಅದನ್ನು ಎಡಿಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಸದ್ಯ ಗೂಗಲ್‌ ಮ್ಯಾಪ್‌ನಲ್ಲಿ ಮನೆಯಿಂದ ಕಚೇರಿಗೆ ಒಂದೇ ಕ್ಲಿಕ್‌ನಲ್ಲಿ ದಾರಿ ತೋರುವ ಅವಕಾಶ ಕುಡ ಇದೆ. ನಿವು ಒಂದು ಬಾರಿ ಹೋಮ್‌ ಅಡ್ರೆಸ್‌ ಹಾಗೂ ನಿಮ್ಮ ಕಚೇರಿ ಸ್ಥಳದ ವಿಳಾಸವನ್ನು ನಮೂದಿಸಿದರೆ ಸಾಕು ಅಲ್ಲಿಗೆ ಸಂಬಂಧಿಸಿದ ಮಾರ್ಗವನ್ನು ತೋರಿಸುತ್ತದೆ. ಅಲ್ಲದೆ ಇದು ನಿಮ್ಮ ಗೂಗಲ್‌ ಮ್ಯಾಪ್‌ನಲ್ಲಿ ಸೇವ್‌ ಆಗಿರುವುದಲ್ಲದೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಸುಲಭವಾಗಿ ಉಪಯುಕ್ತವಾಗಲಿದೆ. ಆದರೆ ಕೆಲವೊಮ್ಮೆ ಮನೆ ವಿಳಾಸ ತಪ್ಪಾಗಿ ಬಿಟ್ಟರೆ ಅದೇ ಮಾರ್ಗಕ್ಕೆ ನಿಮ್ಮನ್ನ ಗೂಗಲ್‌ ಮ್ಯಾಪ್‌ ಕರೆದೊಯ್ಯಲಿದೆ. ಇದೇ ಕಾರಣಕ್ಕೆ ಗೂಗಲ್‌ ಮ್ಯಾಪ್‌ನಲ್ಲಿ ಹೋಮ್‌ ಅಡ್ರೆಸ್‌ ಎಡಿಟ್‌ ಮಾಡುವುದು ಮುಖ್ಯ ವೆನಿಸುತ್ತದೆ.

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡುವುದು ಹೇಗೆ?

ಹಂತ:1 ನಿಮ್ಮ Android ಫೋನ್‌ನಲ್ಲಿ Google ಮ್ಯಾಪ್‌ಅನ್ನು ಪ್ರಾರಂಭಿಸಿ
ಹಂತ:2 ಕೆಳಭಾಗದಲ್ಲಿ ಲಭ್ಯವಿರುವ ಸೇವ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳನ್ನು ತೋರಿಸುವ ಲೇಬಲ್‌ಗೆ ಸ್ವೈಪ್ ಮಾಡಿ.
ಹಂತ:4 ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್‌ ಎಡಿಟ್‌ ಅನ್ನು ಆಯ್ಕೆಮಾಡಿ.

ವಿಳಾಸ

ಹಂತ:5 ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್‌ ವರ್ಕ್‌ ಅನ್ನು ಆಯ್ಕೆಮಾಡಿ.
ಹಂತ:6 ಪ್ರಸ್ತುತ ವಿಳಾಸವನ್ನು ತೆರವುಗೊಳಿಸಿ, ನಂತರ ಹೊಸದನ್ನು ಸೇರಿಸಿ. ನೀವು ಮ್ಯಾಪ್‌ನಲ್ಲಿ ಹುಡುಕಬಹುದು ಅಥವಾ ಸರಳವಾಗಿ ಆಯ್ಕೆ ಮಾಡಬಹುದು.
ಹಂತ:7 ಇದಾದ ನಂತರ ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಸಹ ನೀವು ಡಿಲೀಟ್‌ ಮಾಡಬಹುದು. ನಿಮಗೆ ಬೇಕಾಗಿರುವುದು ಮನೆಗಾಗಿ ತೆಗೆದುಹಾಕಿ ಆಯ್ಕೆಯನ್ನು ಆರಿಸಿ ಅಥವಾ ಉಳಿಸಿದ -> ಲೇಬಲ್ ಅಡಿಯಲ್ಲಿ ಕೆಲಸ ಮಾಡಬಹುದಾಗಿದೆ.

Best Mobiles in India

English summary
Google Maps is the easiest way to get directions to your favorite locations, and the most convenient thing for you is telling your map app to take you home with a single click no matter wherever you are.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+