ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಆ್ಯಕ್ಟಿವ್ ಮಾಡಲು ಈ ನಿಯಮಗಳನ್ನು ಪಾಲಿಸಿ!
ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸುರಕ್ಷಿತವಾಗಿರಿಸುವುದು ಕೂಡ ಸೇರಿದೆ. ಇದಕ್ಕಾಗಿ ಕೆಲವು ಫೀಚರ್ಸ್‌ಗಳನ್ನು ಕೂಡ ಬ್ಯಾಂಕ್‌ಗಳು ಪರಿಚಯಿಸಿವೆ.
ಹೌದು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸುರಕ್ಷಿತವಾಗಿರುವುದಕ್ಕಾಗಿ ಅವಕಾಶವಿದೆ. ಅದರಂತೆ ನೀವು ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಕ್ಟಿವ್ ಗೊಳಿಸುವ ಮತ್ತು ಡಿಆ್ಯಕ್ಟಿವ್ ಮಾಡುವ ಅವಕಾಶ ಲಭ್ಯವಿದೆ. ಇದರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾವತಿಗಳನ್ನು ಮಾಡುವಾಗ ನಿಮಗೆ ಸುರಕ್ಷತೆ ನೀಡಲಿದೆ. ಹಾಗಾದ್ರೆ ನಿಮ್ಮ ಕಾರ್ಡ್ ವಹಿವಾಟುಗಳನ್ನು ಆ್ಯಕ್ಟಿವ್ ಮತ್ತು ಡಿಆ್ಯಕ್ಟಿವ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

SBI ಕ್ರೆಡಿಟ್ ಕಾರ್ಡ್ ಅನ್ನು ಆ್ಯಕ್ಟಿವ್ ಮಾಡುವುದು ಹೇಗೆ?
ನೀವು SBI ಕಾರ್ಡ್ ಅಪ್ಲಿಕೇಶನ್ ಬಳಸಿ ಕ್ರೆಡಿಟ್ ಕಾರ್ಡ್ ಅನ್ನು ಆ್ಯಕ್ಟಿವ್ ಮಾಡಲು ಹೀಗೆ ಮಾಡಿ
* ಮೊದಲಿಗೆ SBI ಕಾರ್ಡ್ ಅಪ್ಲಿಕೇಶನ್‌ನಲ್ಲಿ ಲಾಗಿನ್ ಆಗಿರಿ
* ನಂತರ 'ಮ್ಯಾನೇಜ್ ಕಾರ್ಡ್ ಯೂಸೇಜ್' ಆಯ್ಕೆಮಾಡಿ
* ಇದೀಗ 'ಮ್ಯಾನೇಜ್ ಕಾರ್ಡ್ ಟ್ರಾನ್ಸಕ್ಷನ್' ಆಯ್ಕೆಮಾಡಿ
* ಇದರಲ್ಲಿ ನೀವು ಆ್ಯಕ್ಟಿವ್ ಅಥವಾ ಡಿ ಆ್ಯಕ್ಟಿವ್ ಅನ್ನು ಆಯ್ಕೆ ಮಾಡಬಹುದು.
SBI ಕಾರ್ಡ್ ವೆಬ್‌ಸೈಟ್ ಮೂಲಕ ಕ್ರೆಡಿಟ್ ಕಾರ್ಡ್ ಆ್ಯಕ್ಟಿವ್ ಮಾಡಲು ಹೀಗೆ ಮಾಡಿ
* SBI ಕಾರ್ಡ್ ವೆಬ್‌ಸೈಟ್ ಲಾಗಿನ್ ಮಾಡಿ
* ಮೇನ್‌ಪೇಜ್‌ನಲ್ಲಿ 'ಮ್ಯಾನೇಜ್ ಕಾರ್ಡ್ ಯೂಸೇಜ್ ' ಅನ್ನು ಆಯ್ಕೆಮಾಡಿ
* ನಂತರ 'ಮ್ಯಾನೇಜ್ ಕಾರ್ಡ್ ಟ್ರಾನ್ಸಕ್ಷನ್' ಮೇಲೆ ಕ್ಲಿಕ್ ಮಾಡಿ
ಇದರಲ್ಲಿ ನೀವು ಆ್ಯಕ್ಟಿವ್ ಹಾಗೂ ಡಿಆ್ಯಕ್ಟಿವ್ ಆಯ್ಕೆಯನ್ನು ಕ್ಲಿಕ್ ಮಾಡಬಹುದು.
SBI ಡೆಬಿಟ್ ಕಾರ್ಡ್ ಅನ್ನು ಆ್ಯಕ್ಟಿವ್ ಮಾಡುವುದು ಹೇಗೆ?
* ಮೊದಲಿಗೆ SBI ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ https://www.onlinesbi.sbi ಗೆ ಲಾಗಿನ್ ಮಾಡಿ
* ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಎಂಟ್ರಿ ಮಾಡಿ
* ನಂತರ ಮೆನು ಆಯ್ಕೆಮಾಡಿ
* ಇದರಲ್ಲಿ E-ಸರ್ವಿಸ್ ಆಯ್ಕೆ ಮಾಡಿ ನಂತರ ATM ಕಾರ್ಡ್ ಸರ್ವಿಸ್ ಆಯ್ಕೆ ಮಾಡಿ
* ನಂತರ ATM ಕಾರ್ಡ್ ಮಿತಿಯನ್ನು ಆಯ್ಕೆಮಾಡಿ
* ಇದರಲ್ಲಿ ಕಾರ್ಡ್ ಸಂಖ್ಯೆಯನ್ನು ಆಯ್ಕೆಮಾಡಿ
* ನಂತರ ನಿಮ್ಮ ಸೇವೆಗಳನ್ನು ಆಯ್ಕೆಮಾಡಿಕೊಂಡು ಕಾರ್ಡ್ ಅನ್ನು ಸಕ್ರಿಯಗೊಳಿಸಿ / ನಿಷ್ಕ್ರಿಯಗೊಳಿಸಿ ಮತ್ತು ಸಲ್ಲಿಸಿ ಆಯ್ಕೆಮಾಡಬಹುದಾಗಿದೆ.

HDFC ಬ್ಯಾಂಕ್ ಡೆಬಿಟ್ ಕಾರ್ಡ್ ಆ್ಯಕ್ಟಿವ್ ಮಾಡುವುದು ಹೇಗೆ?
* ಮೊದಲಿಗೆ HDFC ಬ್ಯಾಂಕ್ ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ
* ಇದರಲ್ಲಿ ಕಾರ್ಡ್‌ಗಳ ಅಡಿಯಲ್ಲಿ ಡೆಬಿಟ್ ಕಾರ್ಡ್ ವಿಭಾಗಕ್ಕೆ ಭೇಟಿ ನೀಡಿ
* ನಂತರ ನಿಮ್ಮ ಕಾರ್ಡ್ ಬಳಕೆ/ಮಿತಿಗಳನ್ನು ಸೆಟ್ ಮಾಡಿರಿ
* ಇದರಲ್ಲಿ ಡೆಬಿಟ್ ಕಾರ್ಡ್ ಆಯ್ಕೆಮಾಡಿ
* ನಂತರ ಎಟಿಎಂ ಬಳಕೆಯನ್ನು ಆಯ್ಕೆ ಮಾಡಿ
* ಇದೀಗ ವಹಿವಾಟಿನ ಮಿತಿಗಳನ್ನು ಸೆಟ್ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ
* ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆ್ಯಕ್ಟಿವ್ ಮಾಡಲು ಹೀಗೆ ಮಾಡಿ
* ಮೊದಲಿಗೆ ನಿಮ್ಮ ಕಸ್ಟಮರ್ ಐಡಿಯನ್ನು ಬಳಸಿಕೊಂಡು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿರಿ.
* ನಂತರ ಕಾರ್ಡ್‌ಗಳ ಟ್ಯಾಬ್‌ಗೆ ಹೋಗಿ
* ಇದರಲ್ಲಿ ರಿಕ್ವೆಸ್ಟ್, ಕಾರ್ಡ್ ಯೂಸೇಜ್ ಹಾಗೂ ಲಿಮಿಟ್‌ಗಳನ್ನು ಸೆಟ್ ಮಾಡಿರಿ
* ಇದರಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನಿಮ್ಮ ವಹಿವಾಟುಗಳನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.


Click it and Unblock the Notifications








