ಇನ್‌ಸ್ಟಾಗ್ರಾಮ್‌ನಲ್ಲಿ 'ಆಡ್ ಯುವರ್ಸ್' ಸ್ಟಿಕ್ಕರ್ ಬಳಸುವುದು ಹೇಗೆ?
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಕೇಶನ್ ಕೂಡ ಒಂದಾಗಿದೆ. ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿರುವ ಇನ್‌ಸ್ಟಾಗ್ರಾಮ್ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಸಕ್ರಿಯ ಬಳಕೆದಾರರಿಗೆ 'ಆಡ್ ಯುವರ್ಸ್' ಸ್ಟಿಕ್ಕರ್ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೂಲಕ ಬಳಕೆದಾರರು ಸೂರ್ಯಾಸ್ತದ ಚಿತ್ರಗಳು, ಮೀಮ್‌ಗಳು ಅಥವಾ ನಿಮ್ಮ ಮೆಚ್ಚಿನ ಮ್ಯೂಸಿಕ್ ಟ್ರ್ಯಾಕ್ ಅನ್ನು ಪೋಸ್ಟ್ ಮಾಡಬಹುದಾಗಿದೆ.

ಹೌದು, ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ 'ಆಡ್ ಯುವರ್ಸ್' ಸ್ಟಿಕ್ಕರ್ ಅನ್ನು ಪರಿಚಯಿಸಿದೆ. ಇದರ ಮೂಲಕ ನಿಮ್ಮ ಸ್ಟೋರಿಗಳಿಗೆ ಬೇಕಾದ ಸ್ಟಿಕ್ಕರ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಬ್ರೆಜಿಲ್‌ನಲ್ಲಿ ಈ ಫೀಚರ್ಸ್ ಅನ್ನು ಪರೀಕ್ಷಿಸಿದ ನಂತರ ಇನ್‌ಸ್ಟಾಗ್ರಾಮ್ ಈಗ ಜಾಗತಿಕವಾಗಿ ಕಸ್ಟಮ್ ಪ್ರಾಂಪ್ಟ್‌ಗಳು ಮತ್ತು ಪಬ್ಲಿಕ್ ರೆಸ್ಪಾನ್ಸ್‌ಗಳೊಂದಿಗೆ 'ಆಡ್ ಯುವರ್ಸ್ ' ಸ್ಟಿಕ್ಕರ್ ಅನ್ನು ಹೊರತಂದಿದೆ. ಹಾಗಾದ್ರೆ ಆಡ್ ಯುವರ್ಸ್ ಸ್ಟಿಕ್ಕರ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ 'ಆಡ್ ಯುವರ್ಸ್' ಸ್ಟಿಕ್ಕರ್ ಬಳಸುವುದು ಹೇಗೆ?
ಇನ್‌ಸ್ಟಾಗ್ರಾಮ್‌ನಲ್ಲಿರುವ ಆಡ್ ಯುವರ್ಸ್ ಸ್ಟಿಕ್ಕರ್ ಹೊಸ ಫೀಚರ್ಸ್ ಆಗಿದೆ. ಇದು ಬಳಕೆದಾರರಿಗೆ ಚಿತ್ರಗಳೊಂದಿಗೆ ಸ್ಟೋರಿಗಳಿಗೆ ರಿಯಾಕ್ಟ್ ಮಾಡಲು ಅನುವು ಮಾಡಿಕೊಡಲಿದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ಸ್ಟೋರಿಗಳಿಗೆ ಪ್ರತಿಕ್ರಿಯೆಯನ್ನು ಇವುಗಳ ಮೂಲಕ ನೀಡಬಹುದಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಯಾರಾದರೂ ನಿಮ್ಮ ಸ್ಟಿಕ್ಕರ್‌ಗಳ ಜೊತೆಗೆ ಹಿಂದಿನ ಎಲ್ಲಾ ಸ್ಟೋರಿಗಳನ್ನು ಸಹ ವೀಕ್ಷಿಸಬಹುದಾಗಿದೆ. ಅದೇ ಥೀಮ್ ಅಥವಾ ವಿಷಯದ ಆಧಾರದ ಮೇಲೆ ವಿಷಯವನ್ನು ಅನ್ವೇಷಿಸಲು ಇದು ಅನುಕೂಲಕರವಾಗಿದೆ. ಆದರೆ ನೀವು ಪ್ರೈವೇಟ್ ಅಕೌಂಟ್ ಅನ್ನು ಹೊಂದಿದ್ದರೆ, ಇತರರು ಸ್ಟಿಕ್ಕರ್‌ಗೆ ಸೇರಿಸಲಾದ ಸ್ಟೋರಿಗಳನ್ನು ನೋಡಬಹುದಾಗಿದೆ. ಆದರೆ ನಿಮ್ಮ ಬೇಸ್ ಸ್ಟೋರಿ ನಿಮ್ಮ ಅನುಯಾಯಿಗಳಿಗೆ ಮಾತ್ರ ಗೋಚರಿಸುತ್ತದೆ.

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಡ್ ಯುವರ್ಸ್ ಸ್ಟಿಕ್ಕರ್ ಅನ್ನು ಬಳಸುವುದಕ್ಕೆ ಮೊದಲಿಗೆ ಸ್ಟೋರಿ ಇಂಟರ್ಫೇಸ್ ತೆರೆಯಿರಿ. ನಂತರ ಮೇಲಿನ ಪಟ್ಟಿಯಿಂದ ಸ್ಟಿಕ್ಕರ್ ಐಕಾನ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಇದೀಗ ನೀವು ಮೇಲ್ಭಾಗದಲ್ಲಿ ಹೊಸ 'ಆಡ್ ಯುವರ್ಸ್ ' ಸ್ಟಿಕ್ಕರ್ ಕಾಣಬಹುದಾಗಿದೆ. ನಂತರ ಹೊಸ 'ಆಡ್ ಯುವರ್ಸ್' ಥ್ರೆಡ್ ಅನ್ನು ಕ್ರಿಯೆಟ್ ಅದನ್ನು ಟ್ಯಾಪ್ ಮಾಡಿ. ಸ್ಟಿಕ್ಕರ್ ಕಾಣಿಸಿಕೊಂಡಾಗ, ಪ್ರಾಂಪ್ಟ್ ಅನ್ನು ಟೈಪ್ ಮಾಡಿ, ಸ್ಟಿಕ್ಕರ್ ಅನ್ನು ಪರದೆಯ ಮೇಲೆ ಎಲ್ಲಿಯಾದರೂ ಇರಿಸಿ ಮತ್ತು ಸ್ಟೋರಿಯನ್ನು ಪೋಸ್ಟ್ ಮಾಡಿರಿ.

ಇದಲ್ಲದೆ ಇನ್‌ಸ್ಟಾಗ್ರಾಮ್ ಇತ್ತೀಚೆಗೆ ಸ್ಟಿಕ್ಕರ್‌ಗಳಿಗೆ ಪ್ರಮುಖ ಫಿಚರ್ಸ್‌ಗಳನ್ನು ಸೇರಿಸುತ್ತಿದೆ. ಈಗ, ಇನ್‌ಸ್ಟಾಗ್ರಾಮ್‌ನಲ್ಲಿ ಯಾರಾದರೂ ವೆಬ್ ಲಿಂಕ್‌ಗಳನ್ನು ಲಿಂಕ್ ಸ್ಟಿಕ್ಕರ್ ಮತ್ತು ಸ್ಟೋರಿಗಳಲ್ಲಿ ಪೋಸ್ಟ್ ಮೂಲಕ ಶೇರ್ ಮಾಡಲು ಶೇರ್ ಸ್ಟಿಕ್ಕರ್ ಅನ್ನು ಬಳಸಬಹುದು. ಈ ಮೂಲಕ ನಿಮ್ಮ ಸ್ಟೋರಿಗಳಲ್ಲಿಯೇ ಲಿಂಕ್‌ಗಳನ್ನು ಸ್ಟಿಕ್ಕರ್‌ಗಳ ಮೂಲಕ ಶೇರ್ ಮಾಡಬಹುದು. ಇದರಿಂದ ನೀವು ಯಾವ ವಿಚಾರದ ಬಗ್ಗೆ ಹೇಳುತ್ತಿರಿ ಅನ್ನೊದು ಶೇರ್ ಸ್ಟಿಕ್ಕರ್‌ನಲ್ಲಿಯೇ ತಿಳಿಯಬಹುದಾಗಿದೆ.

ಇನ್ನು ಇನ್‌ಸ್ಟಾಗ್ರಾಮ್ ಶೀಘ್ರದಲ್ಲೇ ಇಂಟರೆಸ್ಟ್-ಬೇಸ್ಡ್ ಸರ್ಚ್ ಫೀಚರ್ಸ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಇದು ಬಳಕೆದಾರರ ಆಸಕ್ತಿಗೆ ತಕ್ಕಂತೆ ಕಂಟೆಂಟ್ ಅನ್ನು ಸರ್ಚ್ ಮಾಡಲು ಅವಕಾಶ ನೀಡಲಿದೆ. ಪ್ರಸ್ತುತ, ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಯಾವುದೇ ಒಂದು ಕಂಟೆಂಟ್ ಅನ್ನು ಸರ್ಚ್ ಮಾಡಿದ್ರೆ , ಅದಕ್ಕೆ ಸಂಬಂಧಿಸಿದ ಪೇಜ್‌ಗಳನ್ನು ಮಾತ್ರ ತೋರಿಸಲಿದೆ. ಆದರೆ ಇಂಟರೆಸ್ಟ್-ಬೇಸ್ಡ್ ಸರ್ಚ್ ಇಂಟರೆಸ್ಟ್-ಬೇಸ್ಡ್ ಸರ್ಚ್ ಮೊದಲು ಪೋಸ್ಟ್‌ಗಳು, ಖಾತೆಗಳು, ಪುಟಗಳು ಅಥವಾ ವಿಷಯದ ಮೇಲೆ ಲಭ್ಯವಿರುವ ಇತರ ಮಾಹಿತಿಯನ್ನು ತೋರಿಸುತ್ತದೆ. ಇನ್ನು ಈ ಇಂಟರೆಸ್ಟ್-ಬೇಸ್ಡ್ ಸರ್ಚ್ ಸದ್ಯಕ್ಕೆ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಾಗಲಿದೆ. ಜೊತೆಗೆ ಕೆಲವೇ ಕೆಲವು ಭಾಷೆಗಳನ್ನು ಮಾತ್ರ ಬೆಂಬಲಿಸುವ ಸಾಧ್ಯತೆ ಇದೆ.

ಇದಲ್ಲದೆ ಇನ್‌ಸ್ಟಾಗ್ರಾಮ್ ಸೆಲ್ NFT ಕಲೆಕ್ಟಿಬ್ಲೆಸ್ ಫೀಚರ್ಸ್ ಸೇರಿಸುವ ಪ್ರಯತ್ನದಲ್ಲಿದೆ. ಇದು ಬಳಕೆದಾರರಿಗೆ ಡಿಜಿಟಲ್ ಐಟಂ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸೇಲ್ ಮಾಡುವುದಕ್ಕೆ ಪೋಸ್ಟ್ ಮಾಡಲು ಅನುಮತಿಸುತ್ತದೆ. ಇದರಲ್ಲಿ ಪಟ್ಟಿ ಮಾಡಲಾದ NFT ಐಟಂಗಳು 'ಕಲೆಕ್ಟಿಬಲ್' ಲೇಬಲ್ ಅನ್ನು ಒಳಗೊಂಡಿರುತ್ತವೆ. ಸದ್ಯ ಇನ್‌ಸ್ಟಾಗ್ರಾಮ್ ಈ ಹೊಸ ಫೀಚರ್ಸ್ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ಕೂಡ ಕನ್ಫರ್ಮ್ ಆಗಿಲ್ಲ.


Click it and Unblock the Notifications








