ನಿಮ್ಮ ಆದಾಯ ತೆರಿಗೆ ಮರುಪಾವತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಡಿಜಿಟಲೀಕರಣ ಆಗುತ್ತಿದೆ. ಸರ್ಕಾರ ಕೂಡ ಎಲ್ಲಾ ಇಲಾಖೆಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದು, ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಸರ್ಕಾರ ಆನ್‌ಲೈನ್‌ನಲ್ಲಿಯೇ ಐಟಿ ರಿಟರ್ನ್ಸ್‌ ಮಾಡುವ ಅವಕಾಶವನ್ನು ಸಹ ನೀಡಿದೆ. ಸದ್ಯ 2020-21 (FY2019-20) ಮೌಲ್ಯಮಾಪನ ವರ್ಷಕ್ಕೆ ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ. ಈ ಗಡುವು ದಿನಾಂಕ ಕಳೆದ ನಂತರ, ನೀವು 10,000 ರೂ.ಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಆದಾಯ ತೆರಿಗೆ ಮರುಪಾವತಿ ಮಾಡವುದಕ್ಕೆ ಇಂದೇ ಕೊನೆ ದಿನವಾಗಿದ್ದು. ನೀವು ಆನ್‌ಲೈನ್‌ನಲ್ಲಿಯೇ ತೆರಿಗೆ ಮರುಪಾವತಿ ಮಾಡಬಹುದಾಗಿದೆ.

ಆದಾಯ

ಹೌದು, ನಿಮ್ಮ ಆದಾಯ ತೆರಿಗೆ ಮರುಪಾವತಿಯನ್ನು ಆನ್‌ಲೈನ್‌ನಲ್ಲಿಯೇ ಮಾಡಬಹುದಾಗಿದೆ. COVID-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಆದಾಯ ತೆರಿಗೆ ಇಲಾಖೆ IT ರಿಟರ್ನ್ಸ್‌ ಸಲ್ಲಿಸುವ ಗಡುವನ್ನು ಡಿಸೆಂಬರ್ 31 ಕ್ಕೆ ವಿಸ್ತರಿಸಿತ್ತು. ಸದ್ಯ ಆನ್‌ಲೈನ್‌ನಲ್ಲಿಯೇ ಆದಾಯ ತೆರಿಗೆಯನ್ನು ಮರುಪಾವತಿಯನ್ನು ಕೆಲವು ಹಂತಗಳನ್ನ ಅನುಸರಿಸಿ ಮಾಡಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಸಲ್ಲಿಸುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ ?

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ ?

ಹಂತ 1: ಆದಾಯ ತೆರಿಗೆ ಇಲಾಖೆ ಪೋರ್ಟಲ್ (www.incometaxindiaefiling.gov.in) ಗೆ ಹೋಗಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನೀವು ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಪ್ಯಾನ್ ಬಳಸಿ ಪೋರ್ಟಲ್‌ನಲ್ಲಿ ನೋಂದಾಯಿಸಿ.

ಹಂತ 2: ಪೋರ್ಟಲ್ ಒಳಗೆ, ‘ಡೌನ್‌ಲೋಡ್' ವಿಭಾಗವನ್ನು ತೆರೆಯಿರಿ ಮತ್ತು ಸಂಬಂಧಿತ ಮೌಲ್ಯಮಾಪನ ವರ್ಷದ ಅಡಿಯಲ್ಲಿ ಇ-ಫೈಲಿಂಗ್‌ಗೆ ಹೋಗಿ ಮತ್ತು ಸೂಕ್ತವಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡಿ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ ನೀವು ಐಟಿಆರ್ -1 Return Preparation Software ಅನ್ನು ಡೌನ್‌ಲೋಡ್ ಮಾಡಬಹುದು.

ಹಂತ 3: ಈಗ ಡೌನ್‌ಲೋಡ್ ಮಾಡಿದ Return Preparation Software (ಎಕ್ಸೆಲ್ ಯುಟಿಲಿಟಿ) ತೆರೆಯಿರಿ ಮತ್ತು ಎಲ್ಲಾ ಸೂಚನೆಗಳನ್ನು ಅನುಸರಿಸಿ ಮತ್ತು ಅದೇ ಸಮಯದಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ನಿಮ್ಮ ಫಾರ್ಮ್ 16 ರಿಂದ ಉಪಯುಕ್ತತೆಗೆ ಸೇರಿಸಿ.

ಲೆಕ್ಕಾಚಾರ

ಹಂತ 4: ಈಗ ನೀವು ಪಾವತಿಸಬೇಕಾದ ತೆರಿಗೆಯನ್ನು ಲೆಕ್ಕಾಚಾರ ಮಾಡಬಹುದು, ತೆರಿಗೆ ಪಾವತಿಸಬಹುದು ಮತ್ತು ತೆರಿಗೆ ರಿಟರ್ನ್‌ನಲ್ಲಿ ಸಂಬಂಧಿತ ಚಲನ್ ವಿವರಗಳನ್ನು ನಮೂದಿಸಬಹುದು. ಯಾವುದೇ ತೆರಿಗೆ ಹೊಣೆಗಾರಿಕೆ ಇಲ್ಲದಿದ್ದರೆ, ನೀವು ಮುಂದೆ ಹೋಗಿ ಈ ಹಂತವನ್ನು ಬಿಟ್ಟುಬಿಡಬಹುದು.

ಹಂತ 5: ಈಗ ‘ಎಕ್ಸ್‌ಎಂಎಲ್ ಫೈಲ್ ರಚಿಸಿ' ಬಟನ್ ಟ್ಯಾಪ್ ಮಾಡಿ, ಅದು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ವಯಂಚಾಲಿತವಾಗಿ ಸೇವ್‌ ಆಗಲಿದೆ.

ಹಂತ 6: ಐಟಿಆರ್ ಪೋರ್ಟಲ್‌ಗೆ ಹಿಂತಿರುಗಿ ಮತ್ತು ‘ಸಲ್ಲಿಕೆ ರಿಟರ್ನ್' ವಿಭಾಗಕ್ಕೆ ಹೋಗಿ.

ಅಪ್‌ಲೋಡ್

ಹಂತ 7: ನೀವು ರಚಿಸಿದ XML ಫೈಲ್ ಅನ್ನು ಅಪ್‌ಲೋಡ್ ಮಾಡಿ. ತದನಂತರ ಫೈಲ್ಗೆ ಡಿಜಿಟಲ್ ಸಹಿ ಮಾಡಿ. ನಿಮ್ಮಲ್ಲಿ ಡಿಜಿಟಲ್ ಸಹಿ ಇಲ್ಲದಿದ್ದರೆ, ನೀವು ಈ ಹಂತವನ್ನು ಬಿಟ್ಟುಬಿಡಬಹುದು.

ಹಂತ 8: ಸಲ್ಲಿಸುವಾಗ, ಐಟಿಆರ್-ಪರಿಶೀಲನೆಯನ್ನು ರಚಿಸಲಾಗುತ್ತದೆ ಮತ್ತು ನಿಮ್ಮ ನೋಂದಾಯಿತ ಇಮೇಲ್ ಖಾತೆಗೆ ಕಳುಹಿಸಲಾಗುತ್ತದೆ. ಇದನ್ನು ಪುಟದಿಂದಲೇ ಡೌನ್‌ಲೋಡ್ ಮಾಡಬಹುದು.

ಹಂತ 9: ಇದರ ನಂತರ, ನೀವು ರಿಟರ್ನ್ ಅನ್ನು ಇ-ವೆರಿಫೈ ಮಾಡಬೇಕಾಗುತ್ತದೆ, ಇದನ್ನು ಆರು ವಿಧಾನಗಳ ಮೂಲಕ ಮಾಡಬಹುದು. ಈ ವಿಧಾನಗಳಲ್ಲಿ ನೆಟ್‌ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಆಧಾರ್ ಒಟಿಪಿ, ಬ್ಯಾಂಕ್ ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಸೇರಿವೆ. ನಿಮಗೆ ಇ-ಪರಿಶೀಲನೆ ಮಾಡಲು ಸಾಧ್ಯವಾಗದಿದ್ದರೆ, ನೀವು ಐಟಿಆರ್ -5 ಸ್ವೀಕೃತಿಯ ಭೌತಿಕ ನಕಲನ್ನು ಬೆಂಗಳೂರಿನ ಸಿಪಿಸಿಗೆ ಕಳುಹಿಸಬೇಕಾಗುತ್ತದೆ.

ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು  ಪರಿಶೀಲಿಸುವುದು ಹೇಗೆ?

ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಪರಿಶೀಲಿಸುವುದು ಹೇಗೆ?

ಹಂತ:1 ಐಟಿಆರ್ ಪೋರ್ಟಲ್ ತೆರೆಯಿರಿ.
ಹಂತ:2 ಐಟಿಆರ್ ಸ್ಥಿತಿ ಟ್ಯಾಬ್‌ನಲ್ಲಿ ಟ್ಯಾಪ್ ಮಾಡಿ.
ಹಂತ:3 ನಿಮ್ಮ ಪ್ಯಾನ್ ಸಂಖ್ಯೆ, ಐಟಿಆರ್ ಸ್ವೀಕೃತಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ:4 ಈಗ ನಿಮ್ಮ ಫೈಲಿಂಗ್‌ನ ಸ್ಥಿತಿಯನ್ನು ನಿಮಗೆ ತೋರಿಸಲಾಗುತ್ತದೆ.

Best Mobiles in India

English summary
Here's how you can file your income tax return online for the assessment year 2020-21 (FY 2019-20) in a few simple steps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X