ವಾಟ್ಸಾಪ್‌ನಲ್ಲಿ ನಿಮ್ಮನ್ನು ಬ್ಲಾಕ್ ಮಾಡಿರುವವರು ಯಾರು?
ವಾಟ್ಸಾಪ್ ಜಾಲತಾಣದಲ್ಲಿ ನಿಮ್ಮ ಸ್ನೇಹಿತರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆಯೇ ಎಂಬ ಸಂಶಯ ಸುಳಿದಾಡುತ್ತಿದೆಯೇ? ನಿಮ್ಮ ಸ್ನೇಹಿತರು ನಿಮ್ಮನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ
ಬರೇ ಐದು ವಿಧಾನಗಳಲ್ಲಿ ವಾಟ್ಸಾಪ್‌ನಲ್ಲಿ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

#1
ಸಂಶಯಿತರ ಲಾಸ್ಟ್ ಸೀನ್ ಅನ್ನು ಪರಿಶೀಲಿಸಿ. ಅವರೊಂದಿಗಿನ ಸಂವಾದವನ್ನು ತೆರೆಯಿರಿ ಮತ್ತು ಅವರ ಸಂಪರ್ಕ ಹೆಸರಿನ ಬಲಗಡೆಯಲ್ಲಿ ಏನು ಕಾಣುತ್ತದೆ ಎಂಬುದನ್ನು ನೋಡಿ. ಲಾಸ್ಟ್ ಸೀನ್ ಪದಗಳನ್ನು ನೀವು ಕಂಡಲ್ಲಿ ನೀವು ಬ್ಲಾಕ್ ಆಗಿಲ್ಲ ಎಂದಾಗಿದೆ. ಈ ಪದಗಳು ನಿಮಗೆ ಕಂಡಿಲ್ಲ ಎಂದಾದಲ್ಲಿ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದರ್ಥವಾಗಿದೆ.

#2
ಪ್ರೊಫೈಲ್ ಚಿತ್ರ ತಂತ್ರಗಾರಿಕೆ ಕೂಡ ಹಿಂದಿನ ವಿಧಾನದಂತೆಯೇ ಇದ್ದು ಇದು ನಿಮ್ಮನ್ನು ಬ್ಲಾಕ್ ಮಾಡಿರುವುದರ ಬಗ್ಗೆ ನೂರು ಶೇಕಡಾ ಖಾತ್ರಿಯನ್ನು ನೀಡುತ್ತದೆ. ಸಂಶಯಿತರ ಸಂಪರ್ಕವನ್ನು ತೆರೆಯಿರಿ ಮತ್ತು ಅವರ ಪ್ರೊಫೈಲ್ ಚಿತ್ರದ ಸ್ಟೇಟಸ್ ಅನ್ನು ಪರಿಶೀಲಿಸಿ. ನಿಮಗೆ ಇದು ಕಂಡುಬಂದಿಲ್ಲ ಎಂದಾದಲ್ಲಿ ಆ ಸಂಪರ್ಕ ನಿಮ್ಮನ್ನು ಬ್ಲಾಕ್ ಮಾಡಿದೆ ಎಂದಾಗಿದೆ.

#3
ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದಾದಲ್ಲಿ, ನಿಮ್ಮ ಸಂದೇಶದ ನಂತರ ಸಿಂಗಲ್ ಟಿಕ್ ಮಾರ್ಕ್ ಮಾತ್ರ ಕಾಣುತ್ತೀರಿ.

#4
ಈ ಎಲ್ಲಾ ತಂತ್ರಗಳನ್ನು ಅನುಸರಿಸಿಕೊಂಡು ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂಬುದನ್ನು ಕಂಡುಕೊಳ್ಳಿ.

#5
ನೀವು ಕಳುಹಿಸುವ ಸಂದೇಶ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಗೆ ತಲುಪುವುದಿಲ್ಲ. ವಾಯ್ಸ್ ಕರೆಗಳನ್ನು ಅವರಿಗೆ ಮಾಡಲಾಗುವುದಿಲ್ಲ

#6
ಸ್ಟೇಟಸ್ ಅಪ್‌ಡೇಟ್ ಅನ್ನು ನಿಮಗೆ ಕಾಣಲಾಗುವುದಿಲ್ಲ, ಅಂತೆಯೇ ಲಾಸ್ಟ್ ಸೀನ್ ಮತ್ತು ಪ್ರೊಫೈಲ್ ಚಿತ್ರವನ್ನು ನಿಮಗೆ ನೋಡಲಾಗುವುದಿಲ್ಲ.



Click it and Unblock the Notifications



