ಕಳೆದು ಹೋದ ಸ್ಮಾರ್ಟ್‌ಫೋನ್‌ ಹುಡುಕಲು ಈ ಕ್ರಮಗಳನ್ನ ಅನುಸರಿಸಿ!

|

ಇದು ಸ್ಮಾರ್ಟ್‌ಫೋನ್‌ ಜಮಾನ. ಸ್ಮಾರ್ಟ್‌ ಇಲ್ಲದೆ ಹೋದರೆ ಕೆಲಸವೇ ನಡೆಯುವುದಿಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಸ್ತುತ ನಾವೆಲ್ಲರೂ ಸ್ಮಾರ್ಟ್‌ಫೋನ್‌ ಮೇಲೆ ಹೆಚ್ಚಾಗಿ ಅವಲಂಭಿತವಾಗಿದ್ದು, ಅನೇಕ ಕೆಲಸಗಳನ್ನು ಫೋನ್‌ ಮೂಲಕವೇ ನಡೆಸುತ್ತೆವೆ. ಅಗತ್ಯ ದಾಖಲೆಗಳು, ಪಾಸ್‌ವರ್ಡ್‌ ಮತ್ತು ಖಾಸಗಿ ಮಾಹಿತಿ ಎಲ್ಲವನ್ನು ಫೋನಿನಲ್ಲಿಯೇ ಸ್ಟೋರ್‌ ಮಾಡಿಕೊಂಡಿರುತ್ತೆವೆ, ಹೀಗಾಗಿ ಅನಿವಾರ್ಯವಾಗಿ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸದಾ ನಿಮ್ಮ ಕೈ ನಲ್ಲಿ ರಿಂಗಣಿಸುವ ನಿಮ್ಮ ಸ್ಮಾರ್ಟ್‌ಫೋನ್‌ ಕಳೆದು ಹೋದರೆ ಕಥೆಯೇನು?

ಅವಿಭಾಜ್ಯ

ಹೌದು, ನೀವು ಅತಿಯಾಗಿ ಉಪಯೋಗಿಸುವ, ನಿಮ್ಮ ಕೆಲಸ ಕಾರ್ಯಗಳ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಸ್ಮಾರ್ಟ್‌ಫೋನ್‌ ಕಳೆದು ಹೋದರೆ ಎಲ್ಲಿಲ್ಲದೆ ಟೆನ್ಷನ್‌ ಶುರುವಾಇ ಬಿಡುತ್ತೆ. ಅಷ್ಟೇ ಯಾಕೆ ಏನು ಮಾಡುವುದು ಅಂತಾ ದಿಕ್ಕೆ ದೋಚದಂತಾಗುತ್ತೆ. ನಂತರ ಪೊಲೀಸ್‌ ಕಂಪ್ಲೀಟ್‌ ಕೊಡುವುದಕ್ಕೆ ಮುಂದಾಗುತ್ತೇವೆ. ಆದ್ರೆ ಕಳೆದುಹೋದ ಸ್ಮಾರ್ಟ್‌ಫೋನ್‌ ಹುಡುಕುವಲ್ಲಿ ಟೆಕ್‌ ದೈತ್ಯ ಗೂಗಲ್ ನೆರವಾಗಲಿದ್ದು, ಲೊಕೇಶನ್ ಟ್ರಾಕ್ ಮಾಡಬಹುದು. ಹಾಗಾದರೇ ಕಳೆದುಹೋದ ಫೋನ್‌ ಅನ್ನು ಗೂಗಲ್‌ ಲೊಕೇಶನ್ ಟ್ರಾಕ್‌ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡ್ತಿವಿ. ಮುಂದೆ ಓದಿರಿ.

ಸ್ಮಾರ್ಟ್‌ಫೋನ್‌

ನೀವು ಉಪಯೋಗಿಸುವ ಸ್ಮಾರ್ಟ್‌ಫೋನ್‌ ಅಚಾನಕ್‌ ಆಗಿ ಕಳೆದು ಹೋದರೆ ಯಾರಿಗೆ ಆದರೂ ನೋವಾಗುವುದು ಸಹಜ. ಕೆಲವರೂ ತಮ್ಮ ಕೆಲಸ ಕಾರ್ಯಗಳ ಪ್ರಮುಖ ಮಾಹಿತಿಯನ್ನ ಸ್ಮಾರ್ಟ್‌ಫೋನ್‌ನಲ್ಲಿಯೇ ಶೇಖರಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಕಳೆದು ಹೊದರೆ ತುಂಬಾನೇ ನಷ್ಟವೇ ಆಗುವುದು ಸಹಜ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ ಕಳೆದು ಹೋದರೆ ಗೂಗಲ್‌ನ ಸಹಾಯ ಪಡೆದು ಸ್ಮಾರ್ಟ್‌ಫೋನ್‌ ಹುಡುಕುವ ಪ್ರಯತ್ನ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಸ್ಮಾರ್ಟ್‌ಫೋನ್‌ ಮೂಲಕ ಕಳೆದು ಹೋದ ಫೋನ್‌ ರಿಕವರಿ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ ಮೂಲಕ ಕಳೆದು ಹೋದ ಫೋನ್‌ ರಿಕವರಿ ಮಾಡುವುದು ಹೇಗೆ?

ಹಂತ:1 ನಿಮ್ಮ ಫೋನ್‌ ಕಳೆದು ಹೋದರೆ ನಿಮ್ಮ ಸ್ನೇಹಿತರು ಅಥವಾ ನಿಮ್ಮದೇ ಇನ್ನೊಂದು ಫೋನಿನಲ್ಲಿ ನಿಮ್ಮ ಜಿ-ಮೇಲ್ ಅನ್ನು ತೆರೆಯಿರಿ

ಹಂತ:2 ನಂತರ ಸೆಕ್ಯುರಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ

ಹಂತ:3 ಯೂವರ್ ಡಿವೈಸ್‌ ಆಯ್ಕೆಯಲ್ಲಿ ಫೈಂಡ್‌ ಲಾಸ್ಟ್‌ ಫೋನ್ ಆಯ್ಕೆ ಕ್ಲಿಕ್ ಮಾಡಿ

ಹಂತ:4 ಈಗ ನಿಮ್ಮ ಕಳೆದು ಹೋದ ಫೋನ್‌ ಹತ್ತಿರದ ಲೊಕೇಶನ್‌ನಲ್ಲಿ ಇದ್ದರೆ ಗ್ರೀನ್‌ ಲೈಟ್‌ ತೋರಿಸುತ್ತದೆ. ಅನೌನ್‌ ಲೊಕೇಶನ್ ಆಗಿದ್ದರೇ ಗ್ರೇ ಬಣ್ಣ ತೋರಿಸುತ್ತದೆ.

ಹಂತ:5 ಇನ್ನು ನಿಮ್ಮ ಪೋನ್‌ ಲೊಕೇಶನ್‌ ಹತ್ತಿರವೇ ಇದ್ದಾಗ 'ಪ್ಲೇ ಸೌಂಡ್‌' ಆಯ್ಕೆ ಕ್ಲಿಕ್ ಮಾಡಿ.

ಹಂತ:6 ಆಗ ಫೋನ್‌ ಸೈಲೆಂಟ್‌ ಮೋಡ್‌ನಲ್ಲಿದ್ದರೂ ರಿಂಗ್ ಆಗುತ್ತದೆ. ಈ ಮೂಲಕ ನಿಮ್ಮ ಕಳೆದು ಹೋದ ಸ್ಮಾರ್ಟ್‌ಫೋನ್‌ ಅನ್ನು ಹುಡುಕಬಹುದಾಗಿದೆ.

ಸ್ಮಾರ್ಟ್‌ಫೋನ್‌

ಇದಲ್ಲದೆ ನಿಮ್ಮ ಕಳೆದು ಹೋದ ಸ್ಮಾರ್ಟ್‌ಫೋನ್‌ನಲ್ಲಿರುವ ಮಾಹಿತಿಯನ್ನು ಸಹ ರಕ್ಷಿಸಬಹುದಾಗಿದೆ. ಗೂಗಲ್ ಅಕೌಂಟ್ ಮೂಲಕ ಗೂಗಲ್ ಸೆಕ್ಯುರ್ ಡಿವೈಸ್‌ ಕಳೆದುಹೋದ ಫೋನಿನಲ್ಲಿರುವ ಮಾಹಿತಿಯ ಸುರಕ್ಷತೆಗಾಗಿ ಫೋನ್‌ ಅನ್ನು ಲಾಕ್ ಮಾಡಬಹುದಾಗಿದೆ. ಅಲ್ಲದೆ ನಿಮಗೆ ಇರೇಜ್‌ ದ ಡಿವೈಸ್‌ ಆಯ್ಕೆ ಸಹ ನೀಡಲಾಗಿದ್ದು, ಎಲ್ಲ ಪ್ರಯತ್ನಗಳು ಮಾಡಿದರೂ ಸ್ಮಾರ್ಟ್‌ಫೋನ್‌ ದೊರೆಯದೆ ಹೋದಾಗ ಈ ಆಯ್ಕೆ ಬಳಸಬಹುದಾಗಿದೆ. ಇದಲ್ಲದೆ ಗೂಗಲ್ ಮೂಲಕ ಫೋನ್‌ ಟ್ರಾಕ್‌ ಮಾಡಲು 'ಗೂಗಲ್ ಫೈಂಡ್ ಮೈ ಡಿವೈಸ್‌ ಆಪ್‌' ಅನ್ನು ಸಹ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಇದರ ಮೂಲಕವೂ ಸ್ಮಾರ್ಟ್‌ಫೋನ್‌ ಹುಡುಕುವ ಪ್ರಯತ್ನ ಮಾಡಬಹುದಾಗಿದೆ.

Most Read Articles
Best Mobiles in India

English summary
We love our phones too and rely on them for everything, we sharing steps you can take to help you easily locate your phone in case it goes missing.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X