ಕೋವಿಡ್‌ ವ್ಯಾಕ್ಸಿನ್‌ ಸರ್ಟಿಫಿಕೇಟ್‌ನಲ್ಲಿ ಮಾಹಿತಿ ತಪ್ಪಾಗಿದ್ದರೆ ಸರಿ ಮಾಡುವುದು ಹೇಗೆ?

|

ಕೊರೊನಾ ವ್ಯಾಕ್ಸಿನೇಶನ್‌ ಅಭಿಯಾನ ದೇಶದೆಲ್ಲೆಡೆ ವೇಗವಾಗಿ ನಡೆಯುತ್ತಿದೆ. ದೇಶದಲ್ಲಿ 45ವರ್ಷ ಮೇಲ್ಪಟ್ಟ ನಾಗರೀಕರು ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇನ್ನು ಕೊರೊನಾ ಲಸಿಕೆ ಪಡೆದ ನಂತರ ಕೊರೊನಾ ವ್ಯಾಕ್ಸಿನ್‌ ಪ್ರಮಾಣ ಪ್ರತ್ರವನ್ನು ಕೋವಿನ್‌ ಪೋರ್ಟಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಪ್ರಮಾಣ ಪತ್ರ ನೀವು ಪ್ರಯಾಣ ಮಾಡುವಾಗ ಇಲ್ಲವೇ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ. ಇದರಿಂದಾಗಿ ಕೋವಿನ್‌ ಲಸಿಕೆ ಪ್ರಮಾಣ ಪತ್ರದಲ್ಲಿ ನಿಮ್ಮ ಮಾಹಿತಿ ಸರಿಯಾಗಿರುವುದು ಅವಶ್ಯಕವಾಗಿದೆ.

ಕೋವಿನ್

ಹೌದು, ನೀವು COVID-19 ಲಸಿಕೆ ಪಡೆದರೆ, ಕೋವಿನ್ ಪೋರ್ಟಲ್‌ಗೆ ಹೋಗಿ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ ಸಾಕಷ್ಟು ಮಂದಿ ತಾವು ವ್ಯಾಕ್ಸಿನ್‌ ಪಡೆದಿರುವುದಕ್ಕೆ ಕೋವಿನ್‌ ಸರ್ಟಿಫಿಕೇಟ್ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನೀವು ಎಲ್ಲಿಗೆ ಪ್ರಯಾಣಿಸಿದರೂ ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯವಾದರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಪ್ರಮಾಣಪತ್ರದಲ್ಲಿ ನಿಮ್ಮ ಮಾಹಿತಿ ಸೂಕ್ತವಾಗಿರಬೇಕು ಒಂದು ವೇಳೆ ಹೆಸರು ತಪ್ಪಾಗಿ ನಮೂದಾಗಿದ್ದರೆ ಅದನ್ನು ಸರಿ ಮಾಡುವುದಕ್ಕೂ ಸಹ ಅವಕಾಶವನ್ನು ನೀಡಲಾಗಿದೆ. ಹಾಗಾದ್ರೆ ನಿಮ್ಮ ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪಾಗಿರುವುದನ್ನು ಸರಿ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಸಿಕೆ

ಕೋವಿಡ್‌ ಲಸಿಕೆ ಪಡೆದ ನಂತರ ಕೋವಿನ್‌ ಪೋರ್ಟಲ್‌ ಮೂಲಕ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ದರೆ ಕೆಲವರು ಕೋವಿಡ್‌ ಲಸಿಕೆಗೆ ನಮೂದಿಸುವಾಗ ಕೆಲವು ಎಡವಟ್ಟುಗಳ ಕಾರಣಕ್ಕೆ ಪ್ರಮಾಣಪತ್ರದಲ್ಲಿಯೂ ಮಾಹಿತಿ ತಪ್ಪಾಗಿರುವ ಸಾಧ್ಯತೆ ಇದೆ. ನಿ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮಾಹಿತಿ ತಪ್ಪಾಗಿ ನಮೂದಿಸಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದಕ್ಕೂ ಅವಕಾಶವಿದೆ. ಇದಕ್ಕಾಗಿ ನೀವು https://www.cowin.gov.in/ ನಲ್ಲಿರುವ ಕೋವಿನ್ ಪೋರ್ಟಲ್‌ಗೆ ಹೋಗಿ ಈ ವಿವರಗಳನ್ನು ಸರಿಪಡಿಸಬಹುದು. ನಿಮ್ಮ ವಿವರಗಳನ್ನು ಸರಿ ಪಡಿಸುವುದಕ್ಕೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ನಿಮ್ಮ COVID-19 ವ್ಯಾಕ್ಸಿನ್‌ ಪ್ರಮಾಣಪತ್ರದಲ್ಲಿ ಮಾಹಿತಿ ಸರಿಪಡಿಸುವುದು ಹೇಗೆ?

ನಿಮ್ಮ COVID-19 ವ್ಯಾಕ್ಸಿನ್‌ ಪ್ರಮಾಣಪತ್ರದಲ್ಲಿ ಮಾಹಿತಿ ಸರಿಪಡಿಸುವುದು ಹೇಗೆ?

ಹಂತ 1: ಕೋವಿನ್ ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಲಾಗಿನ್ ಮಾಡಲು ಒಟಿಪಿ ಇನ್ಪುಟ್ ಮಾಡಿ.

ಹಂತ 2: ಖಾತೆ ವಿಭಾಗಕ್ಕೆ ಹೋಗಿ "raise a request" ಕ್ಲಿಕ್ ಮಾಡಿ

ಹಂತ 3: ನಂತರ ನೀವು ಸದಸ್ಯರ ಹೆಸರನ್ನು ಆರಿಸಬೇಕಾಗುತ್ತದೆ.

ಹಂತ 4: ಮುಂದೆ ಪ್ರಮಾಣಪತ್ರ ಆಯ್ಕೆಯಲ್ಲಿ "ತಿದ್ದುಪಡಿ" ಕ್ಲಿಕ್ ಮಾಡಿ ಮತ್ತು ಕಂಟಿನ್ಯೂ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 5: ಹೆಸರು, ಹುಟ್ಟಿದ ವರ್ಷ ಮತ್ತು ಲಿಂಗ, ಇದರಲ್ಲಿ ನೀವು ಸರಿಪಡಿಸಲು ಬಯಸುವ ಕ್ಷೇತ್ರವನ್ನು ಆಯ್ಕೆ ಮಾಡಿ. ಸರಿಯಾದ ವಿವರಗಳನ್ನು ನಮೂದಿಸಿ ಮತ್ತು ನಂತರ ವಿನಂತಿಯನ್ನು ನೋಂದಾಯಿಸಲು ಕಂಟಿನ್ಯೂ ಟ್ಯಾಪ್ ಮಾಡಿ.

ಈ ಮೂಲಕ ನಿಮ್ಮ ಲಸಿಕೆ ಪ್ರಮಾಣಪತ್ರವನ್ನು ಈಗ ಸರಿಯಾದ ವಿವರಗಳೊಂದಿಗೆ ನವೀಕರಿಸಬಹುದಾಗಿದೆ.

Most Read Articles
Best Mobiles in India

Read more about:
English summary
Once you get the COVID-19 vaccine, be it Covishield, Covaxin or Sputnik, the next step is to head to the CoWIN portal and download the vaccine certificate.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X