ಜಿ-ಮೇಲ್‌ನಲ್ಲಿ ಅನುಪಯುಕ್ತ ಇ-ಮೇಲ್‌ಗಳನ್ನು ಒಂದೇ ಬಾರಿ ಡಿಲೀಟ್ ಮಾಡುವುದು ಹೇಗೆ?
ಗೂಗಲ್ ಪರಿಚಯಿಸಿರುವ ಸೇವೆಗಳಲ್ಲಿ ಜಿಮೇಲ್ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಜಿಮೇಲ್ ಅನ್ನು ಹೆಚ್ಚಿನ ಬಳಕೆದಾರರು ತಮ್ಮ ಅವಶ್ಯಕ ಕೆಲಸ ಕಾರ್ಯಗಳಿಗೆ ಬಳಸುತ್ತಾರೆ. ಆದರೆ ಹಳೆಯ ಹಾಗೂ ಅನಗತ್ಯ ಇಮೇಲ್‌ಗಳು ಹೆಚ್ಚಾದಂತೆ ನಿಮ್ಮ ಗೂಗಲ್ ಖಾತೆಯಲ್ಲಿ ಸ್ಪೇಸ್ ಕಡಿಮೆ ಆಗಲಿದೆ. ಏಕೆಂದರೆ ಗೂಗಲ್ ಅಕೌಂಟ್ 15GB ಸ್ಟೋರೇಜ್ ಮಿತಿಯನ್ನು ಮೀರಿದರೆ ಪಾವತಿಸಬೇಕಾಗುತ್ತದೆ. ಆದರಿಂದ ನೀವು ಸ್ಟೋರೇಜ್‌ಗಾಗಿ ಪ್ರತ್ಯೇಕವಾಗಿ ಹಣ ಪಾವತಿಸಲು ಬಯಸದಿದ್ದರೆ ನಿಮ್ಮ ಅನಗತ್ಯ ಇಮೇಲ್‌ಗಳನ್ನು ಕ್ಲಿಯರ್ ಮಾಡುವ ಮೂಲಕ ಸ್ಪೇಸ್ ಅನ್ನು ಉಳಿಸಬಹುದಾಗಿದೆ.

ಹೌದು, ಗೂಗಲ್‌ನ ಜಿಮೇಲ್‌ನಲ್ಲಿ ನಿಮಗೆ ಅನಗತ್ಯ ಎನಿಸುವ ಹಾಗೂ ಹಳೆಯ ಇಮೇಲ್‌ಗಳನ್ನು ತೆರವುಗೊಳಿಸುವ ಮೂಲಕ ಸ್ಪೇಸ್ ಅನ್ನು ಉಳಿಸಬಹುದು. ಇದಕ್ಕಾಗಿ ನೀವು ಒಂದೊಂದೇ ಇಮೇಲ್‌ಗಳನ್ನು ಡಿಲೀಟ್ ಮಾಡುತ್ತಾ ಕೂರುವ ಅಗತ್ಯವಿಲ್ಲ. ಅನಗತ್ಯ ಇಮೇಲ್‌ಗಳನ್ನೆಲ್ಲ ಆಯ್ಕೆ ಮಾಡಿ ಮತ್ತು ಒಂದೇ ಬಾರಿಗೆ ಡಿಲೀಟ್ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಆದರೆ ಗೂಗಲ್ ತನ್ನ ಒಂದು ಬೆಂಬಲ ಪುಟದಲ್ಲಿ ಜಿಮೇಲ್ ಆಪ್ ನಿಂದ ನೀವು ಎಲ್ಲಾ ಸಂದೇಶಗಳನ್ನು ಒಟ್ಟಿಗೆ ಅಳಿಸಲು ಸಾಧ್ಯವಿಲ್ಲ ಎಂದು ಟಿಪ್ಪಣಿ ಮಾಡಿದೆ. ಹಾಗಾದ್ರೆ ಹೆಚ್ಚಿನ ಪ್ರಮಾಣದಲ್ಲಿ ತುಂಬಿರುವ ಇಮೇಲ್‌ಗಳನ್ನು ಡಿಲೀಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಮೇಲ್ ನಿಂದ ಇಮೇಲ್‌ಗಳನ್ನು ಬಲ್ಕ್ ಆಗಿ ಡಲೀಟ್ ಮಾಡುವುದು ಹೇಗೆ?
ಹಂತ:1 Gmail ತೆರೆಯಿರಿ, ನಿಮ್ಮ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ.
ಹಂತ:2 ಇನ್‌ಬಾಕ್ಸ್‌ಗೆ ಹೋಗಿ, ಇಲ್ಲಿ ನೀವು ಪ್ರಮೋಷನಲ್ ಇಮೇಲ್ ಗಳನ್ನು ನೋಡಬಹುದು.
ಹಂತ:3 ನೀವು ಏನನ್ನು ಡಿಲೀಟ್ ಮಾಡಬೇಕೆಂಬುದನ್ನು ಅವಲಂಬಿಸಿ ಪ್ರಮೋಷನಲ್ ಅಥವಾ ಇತರ ಟ್ಯಾಬ್‌ಗಳಿಗೆ ಹೋಗಿ.
ಹಂತ:4 ಎಲ್ಲವನ್ನು ಆಯ್ಕೆ ಮಾಡಿ ಆಯ್ಕೆಯನ್ನು ಪರಿಶೀಲಿಸಿ, ಇದು ಮೇಲಿನ ಎಡಭಾಗದಲ್ಲಿರುವ ಪೆಟ್ಟಿಗೆಯಾಗಿದೆ.
ಹಂತ:5 "ಆ ವರ್ಗದಿಂದ ಎಲ್ಲವನ್ನು (ಒಟ್ಟು ಸಂದೇಶಗಳ ಸಂಖ್ಯೆ) ಡಿಲೀಟ್ ಮಾಡಲು" ನೀವು ಆಯ್ಕೆಯನ್ನು ಪಡೆಯುತ್ತೀರಿ
ಹಂತ:6 ಆಯ್ಕೆಯನ್ನು ಆರಿಸಿ.
ಹಂತ:7 ದೃಡೀಕರಿಸಲು Okay ಕ್ಲಿಕ್ ಮಾಡಿ, ಇಮೇಲ್‌ಗಳನ್ನು ತೆರವುಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಇನ್‌ಬಾಕ್ಸ್‌ನಿಂದ ಸಂದೇಶಗಳನ್ನು ಅಳಿಸುವುದು ಹೇಗೆ?
ಹಂತ:1 ಇನ್‌ಬಾಕ್ಸ್ ಮೇಲಿನ ಎಡಭಾಗದಲ್ಲಿರುವ ಕೆಳಗಿನ ಬಾಣದ ಮೇಲೆ ಕ್ಲಿಕ್ ಮಾಡಿ
ಹಂತ:2 ನೀವು ಅಳಿಸಲು ಬಯಸುವ ಸಂದೇಶಗಳ ವಿಭಾಗಗಳನ್ನು ನೀವು ನೋಡುತ್ತೀರಿ,
ಹಂತ:3 ನೀವು ಆಯ್ಕೆ ಮಾಡಲು ಬಯಸುವ ಆಯ್ಕೆಯನ್ನು ಆರಿಸಿ.
ಹಂತ:4 ಡಿಲೀಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ದೊಡ್ಡ ಫೈಲ್‌ಗಳನ್ನು ಡಿಲೀಟ್ ಮಾಡಲು ಹೀಗೆ ಮಾಡಿ?
ಹಂತ:1 Gmail ಸರ್ಚ್ ಬಾಕ್ಸ್‌ಗೆ ಹೋಗಿ, ಕೆಳಗಿನ ಬಾಣದ ಮೇಲೆ ಒತ್ತಿರಿ.
ಹಂತ:2 ಗಾತ್ರವನ್ನು ಭರ್ತಿ ಮಾಡಿ, ಉದಾಹರಣೆಗೆ, 20MB, ಮೇಲ್‌ಗಳ ಸಮಯ ವಿಂಡೋವನ್ನು ಆಯ್ಕೆ ಮಾಡಿ
ಹಂತ:3 ಇದರಲ್ಲಿ ಎಲ್ಲಾ 25 ಎಂಬಿ ಫೈಲ್‌ಗಳು ಕಾಣಿಸುತ್ತವೆ. ಎಲ್ಲವನ್ನೂ ಆಯ್ಕೆ ಮಾಡಿ ಮತ್ತು ನೀವು ಎಲ್ಲವನ್ನೂ ಅಳಿಸಲು ಬಯಸಿದರೆ ಅಳಿಸಿ ಅಥವಾ ನಿಮ್ಮ ಪ್ರಮುಖ ಫೈಲ್‌ಗಳನ್ನು ಬ್ಯಾಕಪ್ ಮಾಡಿ ಮತ್ತು ನಂತರ ಅವುಗಳನ್ನು ಡಿಲೀಟ್ ಮಾಡಬಹುದು.
ಇಮೇಲ್ ಲಗತ್ತನ್ನು ಹೊಂದಿದ್ದರೆ, ಮತ್ತು ಇಮೇಲ್ ಓದದೇ ಇದ್ದಲ್ಲಿ, ಸಮಯ ವ್ಯಾಪ್ತಿಯಲ್ಲಿ ಟೈಪ್ ಮಾಡುವ ಮೂಲಕ ನೀವು ಹಳೆಯ ಇಮೇಲ್‌ಗಳನ್ನು ಅದೇ ರೀತಿಯಲ್ಲಿ ಡಿಲೀಟ್ ಮಾಡಬಹುದು. ಎಲ್ಲಾ ಡಿಲೀಟ್ ಮಾಡಿದ ಸಂದೇಶಗಳು ಟ್ರಾಶ್‌ಗೆ ಹೋಗುತ್ತವೆ ಮತ್ತು 30 ದಿನಗಳವರೆಗೆ ಅಲ್ಲಿಯೇ ಇರುತ್ತವೆ.

ಒಂದು ವೇಳೆ ಟ್ರಾಶ್ ಅನ್ನು ಶಾಶ್ವತವಾಗಿ ಅಳಿಸಲು ಬಯಸಿದರೆ ನೀವು ಹೀಗೆ ಮಾಡಿ?
ಹಂತ:1 ಮೇಲಿನ ಎಡಭಾಗದಲ್ಲಿರುವ ಮೆನು ಅಥವಾ ಮೂರು ಸಾಲುಗಳನ್ನು ಆಯ್ಕೆ ಮಾಡಿ.
ಹಂತ:2 ಟ್ರಾಶ್ ಆಯ್ಕೆಮಾಡಿ.
ಹಂತ:3 ಮೇಲ್ಭಾಗದಲ್ಲಿ, ಖಾಲಿ ಟ್ರಾಶ್ ಅನ್ನು ಈಗ ಟ್ಯಾಪ್ ಮಾಡಿ.
ಈ ಮೂಲಕ ನಿಮ್ಮ ಜಿಮೇಲ್‌ನಲ್ಲಿರುವ ಅನುಪಯುಕ್ತ ಇಮೇಲ್‌ಗಳನ್ನು ಡಿಲೀಟ್ ಮಾಡಬಹುದಾಗಿದೆ.


Click it and Unblock the Notifications








