Home
ಸುದ್ದಿಜಾಲ

ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದು ಹೇಗೆ?

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇವುಗಳಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವೀಡಿಯೊ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಇನ್ನು ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಭಾರತದಲ್ಲಿ ಗ್ರಾಹಕರಿಗೆ ನಾಲ್ಕು ರೀತಿಯ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದೆ. ಇದು 199 ರೂ.ಗಳಿಂದ ಪ್ರಾರಂಭಿಸಿ 799 ರೂ.ಗಳವರೆಗೆ ನೀಡುತ್ತದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಭಾರತದಲ್ಲಿ ನಾಲ್ಕು ರೀತಿಯ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ನೆಟ್ಫ್ಲಿಕ್ಸ್ ರೂ 199 ಮೊಬೈಲ್ ಯೋಜನೆಯಡಿಯಲ್ಲಿ, ಬಳಕೆದಾರರು ಎರಡು ಪರದೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಇತರ ಮೂರು ನೆಟ್ಫ್ಲಿಕ್ಸ್ ಯೋಜನೆಗಳ ಬೆಲೆ 499ರೂ, 649ರೂ ಮತ್ತು 799 ರೂ.ಬೆಲೆಯನ್ನು ಹೊಂದಿವೆ. ಒಂದು ವೇಳೆ ನೀವು ನೆಟ್‌ಫ್ಲಿಕ್ಸ್‌ ಚಂದಾದಾರಾಗಲು ಹಣ ಪಾವತಿಸಲು ಇಷ್ಟವಿಲ್ಲದೆ ಹೋದರೆ ಉಚಿತವಾಗಿ ಚಂದಾದಾರಕೆ ಪಡೆಯುವ ಅವಕಾಶ ಕೂಡ ಇದೆ. ಅದು ಹೇಗೆ ಸಾಧ್ಯ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಸದಸ್ಯತ್ವಕ್ಕೆ ಚಂದಾದಾರರಾಗಲು, ನೀವು ನೆಟ್‌ಫ್ಲಿಕ್ಸ್ ವೆಬ್‌ಸೈಟ್‌ಗೆ ಹೋಗಬಹುದು ಮತ್ತು ನಿಮಗೆ ಸೂಕ್ತವಾದ ಚಂದಾದಾರಿಕೆ ಯೋಜನೆಯನ್ನು ಖರೀದಿಸಬಹುದು. ನೀವು ನೆಟ್‌ಫ್ಲಿಕ್ಸ್ ಯೋಜನೆಯನ್ನು ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಪೇಟಿಎಂ ಅಥವಾ ಇನ್ನಾವುದೇ ಆನ್‌ಲೈನ್ ವಹಿವಾಟು ಪ್ರಕ್ರಿಯೆಯೊಂದಿಗೆ ಖರೀದಿಸಬಹುದು. ಅಲ್ಲದೆ ನೀವು ನೆಟ್‌ಫ್ಲಿಕ್ಸ್ ಯೋಜನೆಯನ್ನು ಖರೀದಿಸಲು ಬಯಸದಿದ್ದರೆ ಮತ್ತು ಉಚಿತ ಚಂದಾದಾರಿಕೆ ಯೋಜನೆಯನ್ನು ಬಯಸಿದರೆ, ಅದನ್ನು ಪಡೆಯಲು ಹಲವು ಮಾರ್ಗಗಳಿವೆ. ರಿಲಯನ್ಸ್ ಜಿಯೋನಂತಹ ಆಪರೇಟರ್‌ಗಳಿಂದ ಹಲವಾರು ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಖರೀದಿಸಿದರೆ, ನಿಮಗೆ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ದೊರೆಯಲಿದೆ. ಅಷ್ಟಕ್ಕೂ ನಿಮಗೆ ನೆಟ್‌ಫ್ಲಿಕ್ಸ್‌ನಲ್ಲಿ ಉಚಿತ ಚದಾದಾರಿಕೆ ನೀಡುವ ಪ್ಲ್ಯಾನ್‌ಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಉಚಿತ ನೆಟ್‌ಫ್ಲಿಕ್ಸ್  ಚಂದಾದಾರಿಕೆ ನೀಡುವ ಜಿಯೋ ಫೈಬರ್ ಫ್ಲ್ಯಾನ್‌ಗಳು!

ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ನೀಡುವ ಜಿಯೋ ಫೈಬರ್ ಫ್ಲ್ಯಾನ್‌ಗಳು!

1499ರೂ ಬೆಲೆಯ ಜಿಯೋಫೈಬರ್ ಯೋಜನೆಯು ಉಚಿತ ನೆಟ್‌ಫ್ಲಿಕ್ಸ್ ಜೊತೆಗೆ ಅನಿಯಮಿತ ಡೇಟಾದೊಂದಿಗೆ 300 ಎಂಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ, 30 ದಿನಗಳ ಮಾನ್ಯತೆಯ ಅವಧಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ.

ಇದಲ್ಲದೆ 2499 ರೂ. ಜಿಯೋಫೈಬರ್ ಯೋಜನೆಯು ಉಚಿತ ನೆಟ್‌ಫ್ಲಿಕ್ಸ್ ಜೊತೆಗೆ 500mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದೊಂದಿಗೆ ಅನಿಯಮಿತ ಡೇಟಾದೊಂದಿಗೆ 30 ದಿನಗಳ ಮಾನ್ಯತೆಯ ಅವಧಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ.

ಜಿಯೋಫೈಬರ್

ಹಾಗೆಯೇ 3999ರೂ ಜಿಯೋಫೈಬರ್ ಯೋಜನೆಯು 1 ಜಿಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದೊಂದಿಗೆ ಅನಿಯಮಿತ ಡೇಟಾದೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ಅನ್ನು ನೀಡುತ್ತದೆ, 30 ದಿನಗಳ ಮಾನ್ಯತೆಯ ಅವಧಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ.

ಇನ್ನು 8499ರೂ, ಜಿಯೋಫೈಬರ್ ಯೋಜನೆಯು 1 ಜಿಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದೊಂದಿಗೆ ಅನಿಯಮಿತ ಡೇಟಾದೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ಅನ್ನು ನೀಡುತ್ತದೆ, 30 ದಿನಗಳ ಮಾನ್ಯತೆಯ ಅವಧಿಗೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಈ ಯೋಜನೆಯು ಮಾನ್ಯತೆಯ ಅವಧಿಗೆ ಒಟ್ಟು 6600GB ಡೇಟಾವನ್ನು ನೀಡುತ್ತದೆ.

ಇದಲ್ಲದೆ ಉಚಿತ JioFiber ಸಂಪರ್ಕವನ್ನು ಪಡೆಯಲು, ನೀವು Jio.com ಅಧಿಕೃತ ವೆಬ್‌ಸೈಟ್ ಅಥವಾ Mi Jio ಅಪ್ಲಿಕೇಶನ್‌ಗೆ ಹೋಗಬಹುದು. ನಿಮ್ಮ ಅಸ್ತಿತ್ವದಲ್ಲಿರುವ ಜಿಯೋಫೈಬರ್ ಗ್ರಾಹಕ ಸಂಖ್ಯೆಯನ್ನು ರೀಚಾರ್ಜ್ ಮಾಡಲು ನೀವು ಅದನ್ನು ಆನ್‌ಲೈನ್‌ನಲ್ಲಿ paytm, Google Pay, PhonePe ಮೂಲಕ ಮಾಡಬಹುದು ಅಥವಾ Jio.com ವೆಬ್‌ಸೈಟ್‌ಗೆ ಹೋಗಿ.

Best Mobiles in India

English summary
Netflix offers four subscription plans in India starting at Rs 199 and going up to Rs 799.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+