ವಿಂಡೋಸ್‌ನಲ್ಲಿ ಹಾರ್ಡ್ ಡಿಸ್ಕ್ ಸ್ಪೇಸ್‌ ಕ್ಲಿಯರ್‌ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಬಳಕೆ ಸಾಕಷ್ಟು ಹೆಚ್ಚಾಗಿದೆ. ಇನ್ನು ವಿಂಡೋಸ್ ಪಿಸಿ ಬಳಸುವ ಪ್ರತಿಯೊಬ್ಬರೂ ಅವರು ಬಳಸುತ್ತಿರುವ ಡಿವೈಸ್‌ನಲ್ಲಿ ಕನಿಷ್ಠ 1TB ಹಾರ್ಡ್‌ ಡಿಸ್ಕ್ ಡ್ರೈವ್‌ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದರಿಂದ ಸಾಕಷ್ಟು ಸ್ಥಳಾವಕಾಶ ಸಿಗಲಿದೆ. ಆದರೆ ಇದು ನೀವು ಕಾರ್ಯನಿರ್ವಹಿಸುತ್ತಾ ನಿಮ್ಮ ಫೈಲ್‌ಗಳ ಸಂಗ್ರಹ ಜಾಸ್ತಿಯಾದಂತೆ ನಿಮ್ಮ ಹಾರ್ಡ್‌ ಡಿಸ್ಕ್‌ ಡ್ರೈವ್‌ ಸ್ಪೇಸ್‌ ಫುಲ್‌ ಆಗಲಿದೆ. ಇದು ನಿಮ್ಮ ಕಂಪ್ಯೂಟರ್ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತದೆ.

ಹಾರ್ಡ್‌ ಡಿಸ್ಕ್‌ ಡ್ರೈವ್‌ ಸ್ಪೇಸ್

ಹೌದು, ನೀವು ಬಳಸುವ ವಿಂಡೋಸ್‌ ಪಿಸಿ ಅತವಾ ಲ್ಯಾಪ್‌ಟಾಪ್‌ನಲ್ಲಿ ಹಾರ್ಡ್‌ ಡಿಸ್ಕ್‌ ಡ್ರೈವ್‌ ಸ್ಪೇಸ್‌ ಫುಲ್‌ ಆದಾಗ ಲ್ಯಾಪ್‌ಟಾಪ್‌ ಕಾರ್ಯದ ವೇಗ ನಿಧಾನವಾಗಲಿದೆ. ಇದರಿಂದ ಹೆಚ್ಚಿನ ಬಳಕೆದಾರರು ತಮ್ಮ ಡಿವೈಸ್‌ನಲ್ಲಿರುವ ಅನಗತ್ಯ ಡೇಟಾವನ್ನು ಡಿಲೀಟ್‌ ಮಾಡುತ್ತಾರೆ. ಈ ಮೂಲಕ ಹಾರ್ಡ್‌ ಡಿಸ್ಕ್‌ ಡ್ರೈವ್‌ನಲ್ಲಿ ಸ್ಪೇಸ್‌ ಉಳಿಸಲು ಪ್ರಯತ್ನಿಸುತ್ತಾರೆ. ಆದರೆ ಬಳಕೆದಾರರು ತಮ್ಮ ಹಾರ್ಡ್ ಡಿಸ್ಕ್‌ನಲ್ಲಿ ಸ್ಪೇಸ್‌ ಫ್ರಿ ಮಾಡಲು ವಿಂಡೋಸ್‌ನಲ್ಲಿರುವ ಕೆಲವು ಡಿವೈಸ್‌ಗಳನ್ನು ಸಹ ಬಳಸಿಕೊಳ್ಳಬಹುದು. ಹಾಗಾದ್ರೆ ಇಂಟರ್‌ ಹಾರ್ಡ್‌ ಡಿಸ್ಕ್‌ ಡ್ರೈವ್‌ನಲ್ಲಿ ಜಾಗವನ್ನು ಉಳಿಸಲು ನೀವು ಬಳಸಬಹುದಾದ ವಿಭಿನ್ನ ವಿಧಾನಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

1. ಡಿಸ್ಕ್ ಕ್ಲೀನಪ್ ಟೂಲ್‌ ಬಳಸಿ ಹಾರ್ಡ್‌ ಡಿಸ್ಕ್‌ ಡ್ರೈವ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

1. ಡಿಸ್ಕ್ ಕ್ಲೀನಪ್ ಟೂಲ್‌ ಬಳಸಿ ಹಾರ್ಡ್‌ ಡಿಸ್ಕ್‌ ಡ್ರೈವ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?

ಹಾರ್ಡ್ ಡಿಸ್ಕ್ ಜಾಗವನ್ನು ಕ್ಲಿಯರ್‌ ಮಾಡುವ ವಿಷಯ ಬಂದಾಗ ಡಿಸ್ಕ್ ಕ್ಲೀನಪ್ ಟೂಲ್ ಅತ್ಯಂತ ಜನಪ್ರಿಯ ವಿಂಡೋಸ್ ಫೀಚರ್ಸ್‌ ಆಗಿದ್ದು, ಬಳಕೆದಾರರು ತಮ್ಮ ಪಿಸಿಯಿಂದ ಜಂಕ್ ಫೈಲ್‌ಗಳನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ. ಡಿಸ್ಕ್ ಕ್ಲೀನಪ್ ಟೂಲ್‌ ಬಳಸಿ ಹಾರ್ಡ್‌ ಡಿಸ್ಕ್‌ ಡ್ರೈವ್‌ ಸ್ಪೇಸ್‌ ಫ್ರೀ, ಮಾಡುವುದಕ್ಕೆ ಈ ಹಂತಗಳನ್ನ ಅನುಸರಿಸಿ.

ಹಂತ 1: ನಿಮ್ಮ ಸ್ಟಾರ್ಟ್‌ ಮೆನುವಿನಲ್ಲಿರುವ ಸರ್ಚ್‌ ಬಾರ್‌ನಲ್ಲಿ ಡಿಸ್ಕ್ ಕ್ಲೀನಪ್ ಟೂಲ್ ಎಂದು ಟೈಪ್‌ ಮಾಡಿ ಸರ್ಚ್‌ ಮಾಡಿ. ನಂತರ ಪ್ರೊಗ್ರಾಂ ರನ್‌ ಆಗಲಿದೆ. ಇದರಲ್ಲಿ ನೀವು ಜಾಗವನ್ನು ಮುಕ್ತಗೊಳಿಸಲು ಬಯಸುವ ಡ್ರೈವ್ ಅನ್ನು ಆಯ್ಕೆ ಮಾಡಿ.

ಹಂತ 2: OK ಬಟನ್‌ ಅನ್ನು ಕ್ಲಿಕ್ ಮಾಡುವುದರಿಂದ ಡಿಲೀಟ್‌ ಫೈಲ್ಸ್‌ ಮೆನು ಬರುತ್ತದೆ. ನೀವು ಡಿಲೀಟ್‌ ಮಾಡಲು ಬಯಸುವ ಫೈಲ್‌ಗಳನ್ನು ಇಲ್ಲಿ ಆಯ್ಕೆ ಮಾಡಿ. "ಡೌನ್‌ಲೋಡ್‌ಗಳು" ಆಯ್ಕೆಯನ್ನು ಹೊರತುಪಡಿಸಿ ಎಲ್ಲವನ್ನು ಟಿಕ್ ಮಾಡಲು ಅವಕಾಶವಿದೆ. ಏಕೆಂದರೆ ಅದು ವೆಬ್‌ನಿಂದ ನೀವು ಡೌನ್‌ಲೋಡ್ ಮಾಡಿದ ಫೈಲ್‌ಗಳನ್ನು ಹೊಂದಿದೆ.

ಹಂತ 3: ನಂತರ OK ಬಟನ್‌ ಅನ್ನು ಕ್ಲಿಕ್ ಮಾಡಿ ಮತ್ತು ಡಿಸ್ಕ್ ಕ್ಲೀನಪ್‌ ಟೂಲ್‌ ನಿಮ್ಮ ಆಯ್ದ ಫೈಲ್‌ಗಳನ್ನು ಅಳಿಸುತ್ತದೆ. ಒಮ್ಮೆ ಡಿಲೀಟ್‌ ಮಾಡಿದ ನಂತರ, ಅದು ಆಟೋಮ್ಯಾಟಿಕ್‌ ಆಗಿ ಕ್ಲೋಸ್‌ ಆಗಲಿದೆ.

2. ನೀವು ಬಳಸದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ.

2. ನೀವು ಬಳಸದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ.

ಅಪ್ಲಿಕೇಶನ್‌ಗಳು ಮತ್ತು ಗೇಮ್‌ ಅಪ್ಲಿಕೇಶನ್‌ಗಳು ನಿಮ್ಮ PC ಯಲ್ಲಿ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಇವುಗಳನ್ನು ಅನ್‌ಇನ್‌ಸ್ಟಾಲ್‌ ಮಾಡುವುದರಿಂದ ನಿಮ್ಮ ಹಾರ್ಡ್ ಡಿಸ್ಕ್ ಸ್ಪೇಸ್‌ ಅನ್ನು ಫ್ರೀ ಗೊಳಿಸಬಹುದಾಗಿದೆ.

ಹಂತ 1: ನಿಮ್ಮ ವಿಂಡೋಸ್ ಡಿವಯಸ್‌ನಲ್ಲಿ ಸ್ಟಾರ್ಟ್‌ ಮೆನುವಿನಿಂದ ಸೆಟ್ಟಿಂಗ್ಸ್‌‌ಗಳಿಗೆ ಹೋಗಿ.

ಹಂತ 2: ಸೆಟ್ಟಿಂಗ್ಸ್‌ಗಳ ಮೆನುವಿನಲ್ಲಿ, ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್‌ ಆಗಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ತೆರೆಯಿರಿ ಅಲ್ಲಿ "ಅಪ್ಲಿಕೇಶನ್‌ಗಳು ಮತ್ತು ಫೀಚರ್ಸ್‌ಗಳು" ಆಯ್ಕೆಮಾಡಿ.

ಹಂತ 3: ನೀವು ತೆಗೆದುಹಾಕಲು ಬಯಸುವ ಅಪ್ಲಿಕೇಶನ್‌ಗಾಗಿ ಸರ್ಚ್‌ ಮಾಡಿ ಮತ್ತು ಅನ್‌ಇನ್‌ಸ್ಟಾಲ್‌ ಬಟನ್ ಕ್ಲಿಕ್ ಮಾಡಿ. ಇದರಿಂದ ನಿಮ್ಮ ಹಾರ್ಡ್‌ ಡ್ರೈವ್‌ ಡಿಸ್ಕ್‌ನಲ್ಲಿ ಸ್ಪೇಸ್‌ ಅನ್ನು ಉಳಿಸಬಹುದಾಗಿದೆ.

3. ಸ್ಟೋರೇಜ್‌ ಸೆನ್ಸ್‌ ಅನ್ನು ಬಳಸುವುದು.

3. ಸ್ಟೋರೇಜ್‌ ಸೆನ್ಸ್‌ ಅನ್ನು ಬಳಸುವುದು.

ಇನ್ನು ನೀವು ವಿಂಡೋಸ್ 10 ನಲ್ಲಿದ್ದರೆ ಶೇಖರಣಾ ಸೆನ್ಸ್ ಹೆಸರಿನ ಫಿಚರ್ಸ್‌ಗೆ ನೀವು ಪ್ರವೇಶವನ್ನು ಪಡೆಯಬಹುದು. ಇದು ಡಿಸ್ಕ್ ಕ್ಲೀನಪ್ ಟೂಲ್‌ ನಂತೆಯೆ ಕಾರ್ಯನಿರ್ವಹಿಸುತ್ತದೆ. ವಿಮಡೋಸ್‌ 10ನಲ್ಲಿ ಸ್ಟೋರೇಜ್‌ ಸೆನ್ಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಹಂತಗಳಲ್ಲಿ ತಿಳಿಯಿರಿ.

ಹಂತ 1: ಸರ್ಚ್‌ ಬಾರ್‌ನಲ್ಲಿ ಸ್ಟೋರೇಜ್‌ ಎಂದು ಟೈಪ್‌ ಮಾಡಿ ಕ್ಲಿಕ್ ಮಾಡಿ. ಸ್ಟೋರೇಜ್‌ ಸೆಟ್ಟಿಂಗ್ಸ್‌ಗಳನ್ನು ತೆರೆಯಿರಿ.

ಹಂತ 2: ಒಮ್ಮೆ ನೀವು ಶೇಖರಣಾ ಸೆಟ್ಟಿಂಗ್‌ಗಳಲ್ಲಿದ್ದರೆ ನಿಮ್ಮ ಪಿಸಿಯಲ್ಲಿ ತಾತ್ಕಾಲಿಕ ಜಂಕ್ ಫೈಲ್‌ಗಳ ಪಟ್ಟಿಯನ್ನು ತರಲು "ತಾತ್ಕಾಲಿಕ ಫೈಲ್‌ಗಳು" ಕ್ಲಿಕ್ ಮಾಡಿ ಇದರಿಂದ ನೀವು ಅವುಗಳನ್ನು ತೆಗೆದುಹಾಕಬಹುದು.

ಹಂತ 3: ನೀವು ತಾತ್ಕಾಲಿಕ ಫೈಲ್‌ಗಳನ್ನು ಕ್ಲಿಕ್ ಮಾಡಿದ ನಂತರ ವಿಂಡೋಸ್ ನಿಮ್ಮ PC ಯಲ್ಲಿ ಅವುಗಳನ್ನು ಹುಡುಕಲು ಪ್ರಾರಂಭಿಸುತ್ತದೆ. ಸ್ಕ್ಯಾನ್ ಪೂರ್ಣಗೊಂಡ ನಂತರ ನೀವು ಅಳಿಸಲು ಬಯಸುವ ಫೈಲ್‌ಗಳನ್ನು ಆಯ್ಕೆ ಮಾಡಿ ಮತ್ತು ಫೈಲ್‌ಗಳನ್ನು ತೆಗೆದುಹಾಕಿ ಬಟನ್ ಒತ್ತಿ ಮತ್ತು ಫೈಲ್‌ಗಳನ್ನು ಅಳಿಸಲು ಕಾಯಿರಿ.

ಹಂತ 4: ಜಾಗವನ್ನು ಸ್ವಯಂಚಾಲಿತವಾಗಿ ಮುಕ್ತಗೊಳಿಸಲು ಮತ್ತು ನಿಮ್ಮ PC ಯಲ್ಲಿ ತಾತ್ಕಾಲಿಕ ಫೈಲ್‌ಗಳನ್ನು ತೊಡೆದುಹಾಕಲು ಶೇಖರಣಾ ಸೆನ್ಸ್ ಅನ್ನು ಆನ್ ಮಾಡಿ.

Best Mobiles in India

English summary
most of the users prefer deleting or moving the unnecessary data that’s stored on our device there comes a time when nothing is left to delete. In such times users can make use of the tools that come with Windows to free space on their hard disk.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X