Home
ಸುದ್ದಿಜಾಲ

ಹೀಗೆ ಮಾಡಿದ್ರೆ ಒಂದು ವರ್ಷದ ಅವಧಿಗೆ ZEE5 ಪ್ರೀಮಿಯಂ ಚಂದಾದಾರಿಕೆ ಉಚಿತ!

ಪ್ರಸ್ತುತ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿವೆ. ಇದರಲ್ಲಿ ZEE5 ಸೇವೆಯು ಕೂಡ ಒಂದಾಗಿದೆ. ZEE5 ಕೂಡ ಕೈಗೆಟಕುವ ಬೆಲೆಯ ಚಂದಾದಾರಿಕೆ ಪ್ಲಾನ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ನೀವು ಕೆಲವು ಮಾರ್ಗಗಳನ್ನು ಅನುಸರಿಸಿದರೆ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿಯು ಕೂಡ ಪಡೆದುಕೊಳ್ಳಬಹುದು.

ಹೌದು, ZEE5 ಪ್ರೀಮಿಯಂ ಉಚಿತ ಚಂದಾದಾರಿಕೆಯನ್ನು ಈಗಾಗಲೇ ಕೆಲವು ಟೆಲಿಕಾಂ ಆಪರೇಟರ್‌ಗಳು ತಮ್ಮ ಪ್ಲಾನ್‌ಗಳಲ್ಲಿ ನೀಡುತ್ತಿದ್ದಾರೆ. ಇದರೊಂದಿಗೆ ಇನ್ನು ಕೆಲವು ಸೇವೆಗಳಲ್ಲಿ ಕೂಡ ZEE5 ಒಟಿಟಿ ಪ್ಲಾಟ್‌ಫಾರ್ಮ್‌ ಅನ್ನು ಯಾವುದೇ ಚಂದಾದಾರಿಕೆ ಇಲ್ಲದೆ ಉಚಿತವಾಗಿ ಪ್ರವೇಶಿಸುವುದಕ್ಕೆ ಸಾದ್ಯವಾಗಲಿದೆ. ಹಾಗಾದ್ರೆ ಯಾವೆಲ್ಲಾ ಪ್ಲಾನ್‌ಗಳ ಮೂಲಕ ನೀವು ZEE5 ಪ್ರೀಮಿಯಂ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೀಗೆ ಮಾಡಿದ್ರೆ ಒಂದು ವರ್ಷದ ಅವಧಿಗೆ ZEE5 ಪ್ರೀಮಿಯಂ ಚಂದಾದಾರಿಕೆ ಉಚಿತ!

ಪೇಟಿಎಂ ಆಫರ್: ಪೇಟಿಎಂ ತನ್ನ ಫಸ್ಟ್‌ ಆಫರ್‌ನಲ್ಲಿ ZEE5 ಪ್ರೀಮಿಯಂಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಪೇಟಿಎಂ ಫಸ್ಟ್‌ ಚಂದಾದರಿಕೆಯು 6 ತಿಂಗಳಿಗೆ 899ರೂ. ಬೆಲೆಯಲ್ಲಿ ಬರಲಿದೆ. ಇದರಲ್ಲಿ ನೀವು ಹಲವು ವಿಶೇಷ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಉಚಿತವಾಗಿ ಒಂದು ವರ್ಷದ ZEE5 ಪ್ರೀಮಿಯಂ ಚಂದಾರಿಕೆಯು ಕೂಡ ಸೇರಿದೆ.

ಟೈಮ್ಸ್ ಪ್ರೈಮ್ ಆಫರ್: ZEE5 ಪ್ರೀಮಿಯಂ ಉಚಿತವಾಗಿ ದೊರೆಯಬೇಕಾದರೆ ನೀವು ಟೈಮ್ಸ್ ಪ್ರೈಮ್ ಆಫರ್‌ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ನೀವು 999ರೂ. ಬೆಲೆ ನೀಡಿ ಟೈಮ್ಸ್‌ ಪ್ರೈಮ್‌ ಅನ್ನು ಖರೀದಿಸಿದರೆ ಒಂದು ವರ್ಷದ ಅವಧಿಗೆ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಹೀಗೆ ಮಾಡಿದ್ರೆ ಒಂದು ವರ್ಷದ ಅವಧಿಗೆ ZEE5 ಪ್ರೀಮಿಯಂ ಚಂದಾದಾರಿಕೆ ಉಚಿತ!

ವೋಡಾಫೋನ್‌ ಐಡಿಯಾ ಪ್ಲಾನ್‌: ZEE5 ಪ್ರೀಮಿಯಂ ಚಂದಾದಾರಿಕೆಯನ್ನು ವಿ ಟೆಲಿಕಾಂನ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಮೂಲಕ ಕೂಡ ಪಡೆದುಕೊಳ್ಳಬಹುದು. ವಿ ಟೆಲಿಕಾಂನ 401ರೂ, 501ರೂ, 701ರೂ ಮತ್ತು 1,101ರೂ. ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಲ್ಲಿ ಒಂದು ವರ್ಷದ ZEE5 ಪ್ರೀಮಿಯಂ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

ರಿಲಯನ್ಸ್ ಜಿಯೋಫೈಬರ್ ಕೂಡ ತನ್ನ ಪ್ಲಾನ್‌ಗಳಲ್ಲಿ ZEE5 ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಇದಕ್ಕಾಗಿ ನೀವು ಜಿಯೋಫೈಬರ್‌ನ 999ರೂ, 1,499ರೂ, 2,499ರೂ, 3,999ರೂಬೆಲೆ ಪ್ಲಾನ್‌ಗಳನ್ನು ಖರೀದಿಸಿದರೆ ನಿಮಗೆ ZEE5 ಉಚಿತವಾಗಿ ಲಭ್ಯವಾಗಲಿದೆ.

SBI ಕಾರ್ಡ್ ZEE5 ಪ್ರೀಮಿಯಂ ಆಫರ್: SBI ಕ್ರೆಡಿಟ್ ಕಾರ್ಡ್ ಹೊಂದಿರುವವರು ಕೂಡ ತಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ಒಂದು ವರ್ಷದ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅದರಂತೆ SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕೇವಲ 2500 ಪಾಯಿಂಟ್ಸ್‌ಗಳಿದ್ದರೆ ಸಾಕು ZEE5 ಪ್ರೀಮಿಯಂ ಚಂದಾದಾರಿಕೆ ಲಭ್ಯವಾಗಲಿದೆ. ಒಂದು ವೇಳೆ ನೀವು 1250 ಪಾಯಿಂಟ್‌ಗಳಿದ್ದರೆ, ಹೆಚ್ಚುವರಿಯಾಗಿ 500ರೂ. ಪಾವತಿಸುವ ಮೂಲಕ 12 ತಿಂಗಳ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು.

ಹೀಗೆ ಮಾಡಿದ್ರೆ ಒಂದು ವರ್ಷದ ಅವಧಿಗೆ ZEE5 ಪ್ರೀಮಿಯಂ ಚಂದಾದಾರಿಕೆ ಉಚಿತ!

ಏರ್‌ಟೆಲ್‌ ಮೂಲಕ ZEE5 ಉಚಿತ ಚಂದಾದಾರಿಕೆಯನ್ನು ಆಕ್ಟಿವ್‌ ಮಾಡುವುದು ಹೇಗೆ?

* ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಟೆಲ್‌ ಥ್ಯಾಂಕ್ಸ್‌ ಅಪ್ಲಿಕೇಶನ್‌ ತೆರೆಯಿರಿ.
* ಮೇಲಿನ ಬಲ ಮೂಲೆಯಲ್ಲಿರುವ ಡಿಸ್ಕವರ್ ಏರ್‌ಟೆಲ್ ಥ್ಯಾಂಕ್ಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಿ.
* ಇದರಲ್ಲಿ ZEE5 ಪ್ರೀಮಿಯಂ ಚಂದಾದಾರಿಕೆ ಟ್ಯಾಬ್ ಕಾಣಲಿದೆ, ಇಲ್ಲಿ ಕ್ಲೈಮ್ ಬಟನ್ ಮೇಲೆ ಕ್ಲಿಕ್ ಮಾಡಿ.
* ಇದೀಗ ಆಕ್ಟಿವ್‌ ನೌ ಬಟನ್‌ ಟ್ಯಾಪ್‌ ಮಾಡಿ
* ನಂತರ ನಿಮ್ಮ ಏರ್‌ಟೆಲ್ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
* ಇದೀಗ ZEE5 ಅಪ್ಲಿಕೇಶನ್‌ಗೆ ಹೋಗಿ ಮತ್ತು ಮೊಬೈಲ್ ಸಂಖ್ಯೆಯ ಮೂಲಕ ಲಾಗ್ ಇನ್ ಮಾಡಿ.
ಈ ಮೂಲಕ ನಿಮ್ಮ ZEE5 ಪ್ರೀಮಿಯಂ ಚಂದಾದಾರಿಕೆಯು ಸಕ್ರಿಯವಾಗಲಿದೆ.

Best Mobiles in India

English summary
How to Get ZEE5 Premium Subscription Free of Cost!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+