ಸಿಬಿಐಗೆ ಆನ್ಲೈನ್ ಕಂಪ್ಲೇಂಟ್ ಕೊಡಬಹುದು ಗೊತ್ತಾ?

Posted By: Varun
ಸಿಬಿಐಗೆ ಆನ್ಲೈನ್ ಕಂಪ್ಲೇಂಟ್ ಕೊಡಬಹುದು ಗೊತ್ತಾ?

ನೆನ್ನೆಯೆಲ್ಲಾ ನೀವು ಯಡಿಯೂರಪ್ಪನವರ ಮನೆಯ ಮೇಲೆ ನಡೆದ ಸಿಬಿಐ ದಾಳಿಯ ಬಗ್ಗೆ ಸಿಕ್ಕಾಪಟ್ಟೆ ಓದಿದ್ದೀರಿ. ಯಾವ ಸುದ್ದಿ ವಾಹಿನಿ, ದಿನಪತ್ರಿಕೆಗಳಲ್ಲಿ ನೋಡಿದರೂ ಅದೇ ಸಿಬಿಐ ಬಗೆಗಿನ ಮಾತು.

ಎಸ್.ಆರ್.ಹಿರೇಮಠ ಎಂಬುವವರು ಸಲ್ಲಿಸಿದ್ದ PIL ನಿಂದಾಗಿ ಸುಪ್ರೀಂ ಕೋರ್ಟ್, ಯಡಿಯೂರಪ್ಪನವರ ಮೇಲೆ ಸಿಬಿಐ ತನಿಖೆ ನಡೆಸುವಂತೆ ಆದೇಶ ನೀಡಿದ್ದರಿಂದ ಸಿಬಿಐ ಈ ದಾಳಿಯನ್ನು ನಡೆಸಿತ್ತು. ಆದರೆ ಎಲ್ಲರೂ ಕೂಡ ಎಸ್.ಆರ್.ಹಿರೇಮಠ ರವರಂತೆಯೇ ಸಾರ್ವಜನಿಕವಾಗಿ PIL ಸಲ್ಲಿಸಿಯೋ ಅಥವಾ ಸಿಬಿಐ ಸೆಲ್ ಗೆ ಹೋಗಿ ದೂರು ದಾಖಲಿಸಿಲು ಆಗುವುದಿಲ್ಲ. ಕೆಲವೊಮ್ಮೆ ಪ್ರಾಣ ಬೆದರಿಕೆಯನ್ನೂ ಎದುರಿಸಬೇಕಾಗುತ್ತದೆ.

ಹಾಗಾದರೆ ನಮ್ಮ ಸುತ್ತ ಹಲವಾರು ರೀತಿಯ ಬ್ರಷ್ಟಾಚಾರ ನಡೆಸುವ, ಲಂಚ ತೆಗೆದುಕೊಳ್ಳುವ ಸರಕಾರೀ ನೌಕರರು ಇದ್ದೇ ಇರುತ್ತಾರೆ. ಇದನ್ನು ನೋಡಿಕೊಂಡು ಸುಮ್ಮನೆ ಇರಲು ಕೂಡ ಆಗುವುದಿಲ್ಲ. ಏಕೆಂದರೆ ಇದು ನಮ್ಮದೇ ಹಣ. ಬೆವರು ಸುರಿಸಿ ಸಂಪಾದನೆ ಮಾಡಿ ಅದರಲ್ಲಿ ಕಟ್ಟಿದ ಟ್ಯಾಕ್ಸ್ ಅನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ನೋಡಿಯೇ ಹಿಂಸೆಯಾಗುತ್ತದೆ.

ಹಾಗಾದರೆ ನಿಮಗೇನಾದರೂ ಬ್ರಷ್ಟಾಚಾರದ ವಿರುದ್ಧ ಹೋರಾಡಲು ಮನಸ್ಸಿದೆಯೇ? ನೀವೂ ಸಿಬಿಐಗೆ ನೆರವಾಗಿ ಕಂಪ್ಲೇಂಟ್ ಕೊಡಬಹುದು, ಆನ್ಲೈನ್ ಮೂಲಕ. ಸಿಬಿಐ ವೆಬ್ಸೈಟಿಗೆ ಹೋಗಿ ಒಂದು ಇಮೇಲ್ ಮೂಲಕ ದೂರು ದಾಖಲಿಸಬಹುದು. ನಿಮ್ಮ ಬಗೆಗಿನ ಮಾಹಿತಿಯನ್ನು ಮಾಹಿತಿಯನ್ನ ಗೌಪ್ಯವಾಗಿ ಇಡುವಂತೆ ಸಿಬಿಐಗೆ ಕೋರಿದರೆ ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ.

ಯಾವುದೇ ಕೇಂದ್ರ ಸರಕಾರೀ ಇಲಾಖೆಗಳು, ನೌಕರ, ಇಲ್ಲವೆ ಕೇಂದ್ರ ಸರಕಾರದ ಒಡೆತನದಲ್ಲಿರುವ ಉದ್ಯಮಗಳು, ಬ್ರಷ್ಟಾಚಾರದಲ್ಲಿ ತೊಡಗಿದ್ದರೆ, ಅದರ ಬಗ್ಗೆ ನಿಮಗೆ ಮಾಹಿತಿ ಇದ್ದರೆ, ನೀವು ಸಿಬಿಐಗೆ ಮೇಲ್ ಮಾಡಿ ಅದರ ಬಗ್ಗೆ ಮಾಹಿತಿ ಕೊಡಬಹುದು.

ಸಿಬಿಐಗೆ ನೀವು ಇದೇ ರೀತಿ, ಸೈಬರ್ ಅಪರಾಧಗಳ ಬಗ್ಗೆ, ಆರ್ಥಿಕ ವಿಷಯಗಳ ಬಗ್ಗೆ, ಬ್ಯಾಂಕಿಗೆ ಸಂಬಂಧ ಪಟ್ಟ ವಂಚನೆಗಳ ಬಗ್ಗೆ ಹಾಗು ಮಾನವ ಕಳ್ಳಸಾಗಣೆಕೆಯ ಬಗೆಗಿನ ವಿಷಯಗಳ ಬಗ್ಗೆಕೂಡ ಮಾಹಿತಿ ನೀಡಬಹುದು. ಆದರೆ ಸಿಬಿಐ, ಕ್ರೈಮ್ ಗೆ ಸಂಬಂಧಿಸಿದಕಂಪ್ಲೇಂಟ್ ಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ.

ಸಿಬಿಐ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಲಿಂಕ್ ಮೂಲಕ ಪಡೆದುಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot