Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲಿ ಅನಗತ್ಯ ಪೋಸ್ಟ್‌ಗಳನ್ನ ಹೈಡ್‌ ಮಾಡುವುದು ಹೇಗೆ?

ಫೇಸ್‌ಬುಕ್‌ ಸಾಮಾಜಿಕ ಜಾಲತಾಣಗಳ ದಿಗ್ಗಜ ಎಂದೆನಿಸಿಕೊಂಡಿದೆ. ಫೇಸ್‌ಬುಕ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಅತ್ಯುತ್ತಮ ಸೇವೆಗಳನ್ನು ಅಳವಡಿಸಿದೆ. ಫೇಸ್‌ಬುಕ್ ಬಳಕೆದಾರರು ಫೋಸ್ಟ್‌ ಮಾಡುವ ಎಲ್ಲಾ ಫೋಸ್ಟ್‌ಗಳನ್ನ ಒಳಗೊಂಡಿರುತ್ತೆ. ಆದ್ರೆ ಕೆಲವೊಮ್ಮೆ ನೀವು ಮಾಡಿರುವ ನಿಮಗೆ ಅನಗತ್ಯ ಎನಿಸುವ ಫೋಸ್ಟ್‌ಗಳನ್ನ ಡಿಲೀಟ್ ‌ಮಾಡುವ ಅವಕಾಶ ಕೂಡ ಇದೆ. ಆದರೆ ಈ ಅವಕಾಶದ ಬಗ್ಗೆ ಹೆಚ್ಚಿನ ಮಾಹಿತಿ ಕೆಲವರಿಗೆ ತಿಳಿದಿರೊಲ್ಲ. ಹೀಗೆ ಅನಗತ್ಯ ಫೋಸ್ಟ್‌ಗಳಿಂದ ಕಿರಿಕಿರಿ ಅನಿಸಿದೆಯಾ? ನಿಮ್ಮ ಅನಗತ್ಯ ಫೋಸ್ಟ್‌ಗಳನ್ನ ಮರೆಮಾಡಬೇಕೆ?

ಪೇಸ್‌ಬುಕ್‌

ಹೌದು, ಫೇಸ್‌ಬುಕ್‌ನಲ್ಲಿ ನಿಮ್ಮ ಹಳೆಯ ಫೊಸ್ಟ್‌ಗಳನ್ನು ಡಿಲೀಟ್ ಮಾಡದೆ ಹಾಗೇಯೇ ಪೇಸ್‌ಬುಕ್‌ ಖಾತೆಯಿಂದ ಮರೆಯಾಗುವಂತೆ‌ ಮಾಡಬಹುದಾಗಿದೆ. ಅದಕ್ಕಾಗಿ ಫೇಸ್‌ಬುಕ್ ಈಗಾಗಲೇ ''Manage Activity' ಟೂಲ್ ಒಂದನ್ನು ಪರಿಚಯಿಸಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಹಳೆಯ ಫೊಸ್ಟ್‌ಗಳು ನಿಮಗೆ ಅನಗತ್ಯ ಎನಿಸಿದರೆ ಅವುಗಳನ್ನು ಹೈಡ್‌ ಮಾಡಬಹುದಾಗಿದೆ. ಹಾಗಾದರೆ ಫೇಸ್‌ಬುಕ್‌ನಲ್ಲಿ ಅನಗತ್ಯ ಫೋಸ್ಟ್‌ಗಳನ್ನ ಕ್ಲಿಯರ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಏನಿದು ಫೇಸ್‌ಬುಕ್‌ Manage Activity ಟೂಲ್?

ಏನಿದು ಫೇಸ್‌ಬುಕ್‌ Manage Activity ಟೂಲ್?

ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಯನ್ನು ನಿರ್ವಹಣೆ ಮಾಡುವುದಕ್ಕಾಗಿ ಪರಿಚಯಿಸಿರುವ ಟೂಲ್‌ ಇದಾಗಿದೆ. ಈ ಟೂಲ್‌ ಮೂಲಕ ಬಳಕೆದಾರರು ತಮ್ಮ ಫೋಸ್ಟ್‌ಗಳನ್ನ ನಿರ್ವಹಣೆ ಮಾಡಬಹುದಾಗಿದೆ. ನಿಮಗೆ ಅನವಶ್ಯಕೆ ಎನಿಸುವ ಫೋಸ್ಟ್‌ಗಳನ್ನ ಹೈಡ್‌ ಮಾಡುವುದು ಇಲ್ಲವೇ ಆರ್ಕೈವ್‌ ಮಾಡುವುದು ಅಥವಾ ಥ್ರ್ಯಾಶ್‌ ಔಟ್‌ ಮಾಡುವುದಕ್ಕೆ ಇದು ಸಹಾಯಕವಾಗಲಿದೆ.

ಫೇಸ್‌ಬುಕ್‌

ಫೇಸ್‌ಬುಕ್‌ನಲ್ಲಿ ಬಳಕೆದಾರರು ಸಾಮಾನ್ಯವಾಗಿ ತಮ್ಮ ನೆಚ್ಚಿನ ಇಮೇಜ್‌ಗಳು, ಕೆಲವು ಸಮಾರಂಭದ ಫೋಟೊಗಳು ಇತರೆ ಸಂದೇಶಗಳನ್ನ ಪೋಸ್ಟ್‌ ಮಾಡಿರುತ್ತಾರೆ. ಆದರೆ ಕೆಲವೊಮ್ಮೆ ನಿಮ್ಮ ಫೇಸ್‌ಬುಕ್‌ ಖಾತೆಯನ್ನು ಬೇರೆಯವರು ನೊಡುವ ಸಂದರ್ಭ ಬಂದಾಗ ಕೆಲ ಅನಗತ್ಯ ಪೋಸ್ಟ್‌ಗಳು ನಿಮಗೆ ಕಿರಿಕಿರಿ ಎನಿಸಬಹುದು. ಇದೇ ಕಾರಣಕ್ಕೆ ನೀವು ಈ ಹಿಂದೆ ಮಾಡಿರುವ ಅನಗತ್ಯ ಎನಿಸುವ ಪೋಸ್ಟ್‌ಗಳನ್ನ ಡಿಲೀಟ್‌ ಮಾಡುವುದು ಉತ್ತಮ, ಇಲ್ಲವೇ ಅರ್ಕೈವ್‌ ಉತ್ತಮ ಎನಿಸಿಕೊಳ್ಳಲಿದೆ. ಇದಕ್ಕೆ ಫೇಸ್‌ಬುಕ್‌ Manage Activity ಟೂಲ್ ಉಪಯುಕ್ತವಾಗಲಿದೆ. ಹಾಗಾದ್ರೆ ಫೇಸ್‌ಬುಕ್‌ Manage Activity ಟೂಲ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯಿರಿ.

ಫೇಸ್‌ಬುಕ್ ಪ್ರೊಫೈಲ್‌ನಿಂದ ಹಳೆಯ ಅನಗತ್ಯ ಪೋಸ್ಟ್‌ಗಳನ್ನು ಹೈಡ್‌ ಮಾಡುವುದು ಹೇಗೆ

ಫೇಸ್‌ಬುಕ್ ಪ್ರೊಫೈಲ್‌ನಿಂದ ಹಳೆಯ ಅನಗತ್ಯ ಪೋಸ್ಟ್‌ಗಳನ್ನು ಹೈಡ್‌ ಮಾಡುವುದು ಹೇಗೆ

ಹಂತ 1: ಫೇಸ್‌ಬುಕ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ತೆರೆಯಿರಿ

ಹಂತ 2: ಆಕ್ಟಿವಿಟಿ ಲಾಗ್ ಟ್ಯಾಪ್ ಮಾಡಿ> Manage Activity> ನಿಮ್ಮ ಪೋಸ್ಟ್‌ಗಳು

ಹಂತ 3: ಫಿಲ್ಟರ್‌ಗಳನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಪೋಸ್ಟ್‌ಗಳನ್ನು ಸಂಘಟಿಸಲು ನಿಮಗೆ ಯಾವುದೇ ಮಾನದಂಡಗಳಿದ್ದರೆ "ಜನರು" ಅಥವಾ "ದಿನಾಂಕ" ದಿಂದ ಆಯ್ಕೆ ಮಾಡಿ ಅಥವಾ ನೀವು "categories" ಅನ್ನು ಟ್ಯಾಪ್ ಮಾಡಿ.

ಹಂತ 4: ಈಗ ಪೋಸ್ಟ್‌ಗಳನ್ನು ಆಯ್ಕೆ ಮಾಡಿ ಮತ್ತು "ಆರ್ಕೈವ್" ಅಥವಾ "ಅನುಪಯುಕ್ತ" ಆಯ್ಕೆಗಳನ್ನು ಟ್ಯಾಪ್ ಮಾಡಿ.

ಇದೀಗ ನಿಮ್ಮ ಅನಗತ್ಯ ಪೋಸ್ಟ್‌ಗಳು ಹೈಡ್‌ ಆಗಲಿವೆ.

Best Mobiles in India

English summary
Facebook "Manage Activity" that will let users delete old posts, helping you streamline your posts the way you want them to be.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+