ಟೆಲಿಗ್ರಾಮ್‌ನಲ್ಲಿ ನಿಮ್ಮ ಫೋನ್‌ ನಂಬರ್‌ ಅನ್ನು ಹೈಡ್‌ ಮಾಡುವುದು ಹೇಗೆ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿ ಗಮನ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ಟೆಲಿಗ್ರಾಮ್‌ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವನ್ನು ಸಹ ಕಂಡಿದೆ. ಇದೇ ಕಾರಣಕ್ಕೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ. ಇನ್ನು ಟೆಲಿಗ್ರಾಮ್‌ನಲ್ಲಿ ಬಳಕೆದಾರರು ತಮ್ಮ ಫೋನ್‌ ಸಂಖ್ಯೆಯನ್ನು ಹೈಡ್‌ ಮಾಡುವ ಅವಕಾಶ ಸಹ ನೀಡಲಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಇನ್ನು ಈ ಅಪ್ಲಿಕೇಶನ್‌ ಗೌಪ್ಯತೆ ಫೀಚರ್ಸ್‌ಗಳಲ್ಲಿ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಫೋನ್‌ ಸಂಖ್ಯೆಯನ್ನು ಹೈಡ್‌ ಮಾಡುವ ಫೀಚರ್ಸ್‌ ಕೂಡ ಒಂದಾಗಿದೆ. ಈ ಫೀಚರ್ಸ್‌ ಮೂಲಕ ನೀವು ಸಂದೇಶ ಕಳುಹಿಸುವ ಜನರಿಂದ ಅಥವಾ ನಿಮ್ಮೊಂದಿಗೆ ಸಾಮಾನ್ಯ ಗುಂಪುಗಳಲ್ಲಿರುವ ವ್ಯಕ್ತಿಗಳಿಂದ ವೈಯಕ್ತಿಕ ವಿವರಗಳನ್ನು ಮರೆಮಾಡಬಹುದಾಗಿದೆ. ಹಾಗಾದ್ರೆ ಟೆಲಿಗ್ರಾಮ್‌ನಲ್ಲಿ ನಿಮ್ಮ ಫೋನ್‌ ಸಂಖ್ಯೆಯನ್ನು ಹೈಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಗೌಪ್ಯತೆ ವಿಚಾರದಲ್ಲಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ನಿಮ್ಮ ಫೋನ್‌ ಸಂಖ್ಯೆಯನ್ನು ಹೈಡ್‌ ಮಾಡುವುದು ಕೂಡ ಒಂದಾಗಿದೆ. ಇನ್ನು ನೀವು ನಿಮ್ಮ ಫೋನ್ ಸಂಖ್ಯೆಯನ್ನು ಹೈಡ್‌ ಮಾಡುವುದರಿಂದ ಅಪರಿಚಿತರು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಪಡೆಯುವುದನ್ನು ತಡೆಯಬಹುದಾಗಿದೆ. ಇದರಿಂದ ಅಪರಿಚಿತರು ಟೆಲಿಗ್ರಾಮ್ ಅಥವಾ ಪ್ಲಾಟ್‌ಫಾರ್ಮ್‌ನ ಹೊರಗೆ ನಿಮಗೆ ಕಿರುಕುಳ ಕೊಡುವುದನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಟೆಲಿಗ್ರಾಮ್ ಸಂಖ್ಯೆಯನ್ನು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಹೈಡ್‌ ಮಾಡಬಹುದು.

ಟೆಲಿಗ್ರಾಮ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಹೈಡ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಹೈಡ್‌ ಮಾಡುವುದು ಹೇಗೆ?

ಹಂತ 1: ಟೆಲಿಗ್ರಾಮ್ ತೆರೆಯಿರಿ, ಸೆಟ್ಟಿಂಗ್‌ಗಳಿಗೆ ಹೋಗಿ, ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ.
ಇದರಲ್ಲಿ ಹ್ಯಾಂಬರ್ಗರ್ ಮೆನುವನ್ನು ರೈಟ್‌ ಸೈಡ್‌ನಿಂದ ಹೊರತೆಗೆಯಿರಿ. ಟೆಲಿಗ್ರಾಮ್ ಸೆಟ್ಟಿಂಗ್‌ಗಳನ್ನು ನಮೂದಿಸಲು ಸೆಟ್ಟಿಂಗ್‌ಗಳ ಆಯ್ಕೆಯನ್ನು ಆರಿಸಿ.

ಹಂತ 2: ಗೌಪ್ಯತೆ ಮತ್ತು ಸುರಕ್ಷತೆಗೆ ನ್ಯಾವಿಗೇಟ್ ಮಾಡಿ.

ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ, ‘ಗೌಪ್ಯತೆ ಮತ್ತು ಭದ್ರತೆ' ವಿಭಾಗವನ್ನು ಹುಡುಕಿ. ಈ ಆಯ್ಕೆಯ ಅಡಿಯಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ, ಲಾಸ್ಟ್‌ ಸೀನ್‌ ಮತ್ತು ಹೆಚ್ಚಿನವುಗಳಂತಹ ವಿವಿಧ ಅಂಶಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನೀವು ಆಯ್ಕೆ ಮಾಡುವ ಗೌಪ್ಯತೆ ಟ್ಯಾಬ್ ಅನ್ನು ನೀವು ಕಾಣಬಹುದು.

ಹಂತ 3: ‘ಫೋನ್ ಸಂಖ್ಯೆ' ಸೆಟ್ಟಿಂಗ್

ನಿಮಗೆ ಸಂಪೂರ್ಣ ಗೌಪ್ಯತೆ ಬೇಕಾದರೆ ‘ಫೋನ್ ಸಂಖ್ಯೆ' ಆಯ್ಕೆಯನ್ನು ಹುಡುಕಿ ಮತ್ತು ‘Nobody' ಎಂದು ಬದಲಾಯಿಸಿ. ಪರ್ಯಾಯವಾಗಿ, ನೀವು ಅದನ್ನು ‘ನನ್ನ ಸಂಪರ್ಕಗಳು' ಎಂದು ಸಹ ಹೊಂದಿಸಬಹುದು, ನಿಮ್ಮ ಸಂಪರ್ಕಗಳಲ್ಲಿ ನೀವು ಈಗಾಗಲೇ ಉಳಿಸಿದ ಸಂಖ್ಯೆಯನ್ನು ಮಾತ್ರ ನಿಮ್ಮ ಸಂಖ್ಯೆ ಗೋಚರಿಸುತ್ತದೆ. ನೀವು ಅದನ್ನು ಯಾರಿಗೂ ಸೆಟ್‌ ಮಾಡದಿದ್ದರೆ, ನಿಮ್ಮ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ಯಾರು ಕಂಡುಹಿಡಿಯಬಹುದು ಎಂದು ಕೇಳುವ ಹೊಸ ಆಯ್ಕೆಯು ಕೆಳಗೆ ಪಾಪ್ ಅಪ್ ಆಗುತ್ತದೆ. ಈ ಆಯ್ಕೆಯಲ್ಲಿ ನೀವು ಎಲ್ಲರೂ ಅಥವಾ ನನ್ನ ಸಂಪರ್ಕಗಳನ್ನು ಆಯ್ಕೆ ಮಾಡಬಹುದು. ಈ ಮೂಲಕ ನಿಮ್ಮ ಫೋನ್‌ ಸಂಖ್ಯೆಯನ್ನು ನೀವು ಹೈಡ್‌ ಮಾಡಬಹುದಾಗಿದೆ.

Best Mobiles in India

English summary
Telegram is a feature-packed messaging app, many of which are privacy orientated features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X