Home
ಸುದ್ದಿಜಾಲ

ಲ್ಯಾಪ್‌ಟಾಪ್‌ ಮೂಲಕ ವಾಟ್ಸಾಪ್ ವೀಡಿಯೊ ಕಾಲ್‌ ಮಾಡುವುದು ಹೇಗೆ?

ವಾಟ್ಸಾಪ್‌ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ ಆಗಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರನ್ನು ಆಕರ್ಷಿಸಿದೆ. ಇದೇ ಕಾರಣಕ್ಕೆ ತನ್ನ ಪ್ರತಿಸ್ಪರ್ಧಿ ಅಪ್ಲಿಕೇಶನ್‌ಗಳಿಗಿಂತ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಪರಿಚಯಿಸಿರುವ ಅತ್ಯಮೂಲ್ಯ ಫೀಚರ್ಸ್‌ಗಳಲ್ಲಿ ವೀಡಿಯೋ ಕಾಲಿಂಗ್‌ ಫೀಚರ್ಸ್‌ ಕೂಡ ಒಂದಾಗಿದೆ. ವಾಟ್ಸಾಪ್ ವಿಡಿಯೋ ಕರೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೆಚ್ಚು ಬಳಸಲಾಗುವ ಫೀಚರ್ಸ್‌ ಆಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಜನಪ್ರಿಯ ಫೀಚರ್ಸ್‌ಗಳಲ್ಲಿ ವೀಡಿಯೊ ಕಾಲಿಂಗ್‌ ಫೀಚರ್ಸ್‌ ಕೂಡ ಒಂದಾಗಿದೆ. ಅದರಲ್ಲೂ ಇತ್ತೀಚಿಗೆ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಾಗಿ ವೀಡಿಯೊ ಕಾಲ್‌ ಮಾಡುವ ಫೀಚರ್ಸ್‌ ಪರಿಚಯಿಸಿತು. ಆದರೆ ದುರದೃಷ್ಟವಶಾತ್, ವಾಟ್ಸಾಪ್ ವೆಬ್ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಕಾಲ್‌ ಫೀಚರ್ಸ್‌ ಇನ್ನೂ ಲಭ್ಯವಿಲ್ಲ. ಆದಾಗ್ಯೂ ಬಳಕೆದಾರರು ಪ್ರಸ್ತುತ ಡೆಸ್ಕ್‌ಟಾಪ್ ಆಪ್ ಅನ್ನು ತಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಡಿಯೊ ಕಾಲ್‌ ಮಾಡಬಹುದು. ವಾಟ್ಸಾಪ್ ಡೆಸ್ಕ್‌ಟಾಪ್ ಆಪ್ ವೀಡಿಯೋ ಕಾಲಿಂಗ್ ವೈಶಿಷ್ಟ್ಯವು ವಿಂಡೋಸ್ ಹಾಗೂ ಮ್ಯಾಕ್‌ನಲ್ಲಿ ಮನಬಂದಂತೆ ಕಾರ್ಯನಿರ್ವಹಿಸುತ್ತದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಡೆಸ್ಕ್‌ಟಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ವಾಟ್ಸಾಪ್‌ ಡೆಸ್ಕ್‌ಟಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ನಿಮ್ಮ ವಿಂಡೋಸ್ / ಮ್ಯಾಕ್ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ವಾಟ್ಸಾಪ್ ಡೆಸ್ಕ್‌ಟಾಪ್ ಡೌನ್‌ಲೋಡ್ ಮಾಡಿ.

ಹಂತ 2: ವಾಟ್ಸಾಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ಪಿಸಿಯಲ್ಲಿ ಇನ್‌ಸ್ಟಾಲ್ ಮಾಡಿ

ಹಂತ 3: ಬಳಕೆದಾರ ಹೆಸರು, ಫೋನ್ ಸಂಖ್ಯೆ ಮತ್ತು ಇತರವುಗಳನ್ನು ಒಳಗೊಂಡಂತೆ ನಿಮ್ಮ ರುಜುವಾತುಗಳೊಂದಿಗೆ ಲಾಗಿನ್ ಮಾಡಿ.

ವಿಂಡೋಸ್ 10 64-ಬಿಟ್ ಆವೃತ್ತಿ 1903 ಅಥವಾ ಹೊಸ ಮತ್ತು ಮ್ಯಾಕೋಸ್ 10.13 ಅಥವಾ ಹೊಸ ಆವೃತ್ತಿಗಳಲ್ಲಿ ಮಾತ್ರ ವೀಡಿಯೊ ಕರೆ ಬೆಂಬಲ ಲಭ್ಯವಿದೆ ಎಂಬುದನ್ನು ಗಮನಿಸಬೇಕು. ವಾಟ್ಸಾಪ್‌ ಡೆಸ್ಕ್‌ಟಾಪ್ ಒಬ್ಬರಿಂದ ಒಬ್ಬರಿಗೆ ಮಾತ್ರ ಕರೆ ಮಾಡಲು ಅನುಮತಿಸುತ್ತದೆ ಎಂಬುದನ್ನು ಬಳಕೆದಾರರು ಗಮನಿಸಬೇಕು. ಸದ್ಯ ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ಅಧಿಕೃತವಾಗಿ ಗ್ರೂಪ್‌ ಕಾಲ್‌ ಬೆಂಬಲವನ್ನು ಬಿಡುಗಡೆ ಮಾಡಬೇಕಿದೆ.

ಪಿಸಿ ಮೂಲಕ ವಾಟ್ಸಾಪ್ ವೀಡಿಯೊ ಕರೆ ಮಾಡುವುದು ಹೇಗೆ?

ಪಿಸಿ ಮೂಲಕ ವಾಟ್ಸಾಪ್ ವೀಡಿಯೊ ಕರೆ ಮಾಡುವುದು ಹೇಗೆ?

ಹಂತ 1: ನಿಮ್ಮ PC ಯಲ್ಲಿ Windows ಅಥವಾ Mac ಗಾಗಿ ವಾಟ್ಸಾಪ್‌ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ

ಹಂತ 2: ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಫೋನ್‌ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ

ಹಂತ 3: ನಿಮ್ಮ WhatsApp ಖಾತೆ ಈಗ ಡೆಸ್ಕ್‌ಟಾಪ್‌ನಲ್ಲಿ ತೆರೆಯುತ್ತದೆ

ಹಂತ 4: ಚಾಟ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿ ಪ್ರದರ್ಶಿಸಲಾದ ವೀಡಿಯೊ ಕರೆ ಐಕಾನ್ ಮೇಲೆ ಕ್ಲಿಕ್ ಮಾಡಿ

ಹಂತ 5: ನೀವು ಈಗ ನಿಮ್ಮ ಪಿಸಿ ಬಳಸಿ ವಾಟ್ಸಾಪ್ ವಿಡಿಯೋ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ.

PC ಯಲ್ಲಿ WhatsApp ವೀಡಿಯೊ ಕರೆಗಳಿಗೆ ಸಿಸ್ಟಮ್ ಅವಶ್ಯಕತೆಗಳು

PC ಯಲ್ಲಿ WhatsApp ವೀಡಿಯೊ ಕರೆಗಳಿಗೆ ಸಿಸ್ಟಮ್ ಅವಶ್ಯಕತೆಗಳು

*ಆಡಿಯೋ ಔಟ್ಪುಟ್ ಸಾಧನ ಮತ್ತು ಕರೆಗಳಿಗಾಗಿ ಮೈಕ್ರೊಫೋನ್

*ನಿಮ್ಮ ಪಿಸಿ ಅಂತರ್ನಿರ್ಮಿತ ಅಥವಾ ಬಾಹ್ಯ ವೆಬ್‌ಕ್ಯಾಮ್ ಹೊಂದಿರಬೇಕು

*ಸಕ್ರಿಯ ಇಂಟರ್ನೆಟ್ ಸಂಪರ್ಕ.

ಇದೆಲ್ಲದರ ಮೂಲಕ ವಾಟ್ಸಾಪ್‌ ವೆಬ್‌ ಆವೃತ್ತಿಯಲ್ಲಿ ವೀಡಿಯೊ ಕಾಲ್‌ ಅನ್ನು ಮಾಡಬಹುದಾಗಿದೆ. ಆದರೆ ವಾಟ್ಸಾಪ್‌ ಡೆಸ್ಕ್‌ಟಾಪ್ ಆವೃತ್ತಿ ಮೂಲಕ ಕೇವಲ ಒಬ್ಬರಿಗೆ ಮಾತ್ರ ನೀವು ವೀಡಿಯೊ ಕಾಲ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಗ್ರೂಪ್‌ ವೀಡಿಯೊ ಕಾಲ್‌ ಫೀಚರ್ಸ್‌ ಇನ್ನು ಕೂಡ ವಾಟ್ಸಾಪ್‌ ವೆಬ್‌ನಲ್ಲಿ ಲಭ್ಯವಿಲ್ಲ ಅನ್ನೊದನ್ನ ಸಹ ನಾವು ಗಮನಿಸಬೇಕಿದೆ.

Best Mobiles in India

English summary
Want to make video call on WhatsApp via Windows or Mac? Here’s a step-by-step guide as to how you can make video call via laptop/ PC.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+