ಅಪ್ಲಿಕೇಶನ್ ಅನ್ನು ಮೆಮೊರಿ ಕಾರ್ಡ್‌ಗೆ ಸರಿಸುವುದು ಹೇಗೆ?

Written By:

ನಿಮ್ಮ ಫೋನ್‌ನ ಆಂತರಿಕ ಸಂಗ್ರಹಣೆಯ ಹೆಚ್ಚಿನ ಸ್ಥಳವನ್ನು ನಿಮ್ಮ ಅಪ್ಲಿಕೇಶನ್ ನುಂಗಿ ಹಾಕುತ್ತಿದೆಯೇ? ಆಂಡ್ರಾಯ್ಡ್‌ನ ಹಳೆಯ ಆವೃತ್ತಿಯನ್ನು ನೀವು ಚಾಲನೆ ಮಾಡುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಅಪ್ಲಿಕೇಶನ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಸುಲಭವಾಗಿ ರವಾನೆ ಮಾಡಬಹುದು. ಆಂಡ್ರಾಯ್ಡ್‌ನ 4.0 ಅಥವಾ 4.2 ವನ್ನು ಚಾಲನೆ ಮಾಡುತ್ತಿರುವ ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಸರಿಸುವುದು ಕಷ್ಟಾಸಾಧ್ಯ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಯೇ ಇಲ್ಲಿದೆ ಸಲಹೆ

ಗೂಗಲ್ ಈ ಫೀಚರ್ ಅನ್ನು ಆಪರೇಟಿಂಗ್ ಸಿಸ್ಟಮ್‌ನಿಂದ ತೆಗೆದು ಹಾಕಿದೆ. 4.3 ನಲ್ಲಿ ಮಾತ್ರವೇ ಇದನ್ನು ಮರುಸಕ್ರಿಯಗೊಳಿಸಬಹುದಾಗಿದೆ. ಅದೂ ಕೆಲವೊಂದು ನಿರ್ದಿಷ್ಟ ಫೋನ್‌ಗಳಲ್ಲಿ ಮಾತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಿದ್ದರೆ ನಿಮ್ಮ ಅಪ್ಲಿಕೇಶನ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಸರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ವಿಧಾನಗಳನ್ನು ಗಮನಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಟ್ಟಿಂಗ್ಸ್ ತೆರೆಯಿರಿ

ಸೆಟ್ಟಿಂಗ್ಸ್ ತೆರೆಯಿರಿ

#1

ನಿಮ್ಮ ಮುಖ್ಯ ಪರದೆಯಲ್ಲಿರುವ ಸೆಟ್ಟಿಂಗ್ಸ್ ಐಕಾನ್ ಅನ್ನು ಒತ್ತುವ ಮೂಲಕ ಸೆಟ್ಟಿಂಗ್ ಅನ್ನು ಪ್ರವೇಶಿಸಬಹುದಾಗಿದೆ.

ಅಪ್ಲಿಕೇಶನ್ಸ್, ಆಪ್ಸ್ ಅಥವಾ ಅಪ್ಲಿಕೇಶನ್ ಮ್ಯಾನೇಜರ್

ಅಪ್ಲಿಕೇಶನ್ಸ್, ಆಪ್ಸ್ ಅಥವಾ ಅಪ್ಲಿಕೇಶನ್ ಮ್ಯಾನೇಜರ್

#2

ಇದನ್ನು ಹುಡುಕಲು ನೀವು ಸ್ಕ್ರಾಲ್ ಡೌನ್ ಮಾಡಬೇಕಾಗುತ್ತದೆ. ನಿಮ್ಮ ಫೋನ್ ಹಾಗೂ ನೀವು ಬಳಸುತ್ತಿರುವ ಆವೃತ್ತಿಯನ್ನು ಅನುಸರಿಸಿ ಲೇಬಲ್ ಬದಲಾವಣೆಯಾಗುತ್ತಾ ಇರುತ್ತದೆ.

ಮ್ಯಾನೇಜ್ ಅಪ್ಲಿಕೇಶನ್ಸ್ ತಟ್ಟಿರಿ

ಮ್ಯಾನೇಜ್ ಅಪ್ಲಿಕೇಶನ್ಸ್ ತಟ್ಟಿರಿ

#3

ನೀವು ಆಂಡ್ರಾಯ್ಡ್ 2.2 ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಅಪ್ಲಿಕೇಶನ್‌ಗಳ ಪಟ್ಟಿಯನ್ನು ತೆರೆಯಲು ಇದನ್ನು ಸ್ಪರ್ಶಿಸಬೇಕಾಗುತ್ತದೆ. ನಂತರದ ಆವೃತ್ತಿಯನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೀವು ಈಗಾಗಲೇ ನೋಡುತ್ತೀರಿ.

ಅಪ್ಲಿಕೇಶನ್ ಆಯ್ಕೆಮಾಡಿ

ಅಪ್ಲಿಕೇಶನ್ ಆಯ್ಕೆಮಾಡಿ

#4

ಎಸ್‌ಡಿ ಕಾರ್ಡ್‌ಗೆ ನೀವು ಸರಿಸಬೇಕೆಂದಿರುವ ಅಪ್ಲಿಕೇಶನ್ ಸ್ಪರ್ಶಿಸಿ. "ಮೂವ್ ಟು ಎಸ್‌ಡಿ ಕಾರ್ಡ್" ಎಂದು ಹೇಳುವ ಬಟನ್‌ಗಾಗಿ ಎದುರು ನೋಡಿ. ಅಪ್ಲಿಕೇಶನ್ ಸರಿಸಲು ಅದರ ಮೇಲೆ ತಟ್ಟಿರಿ.

ಅಪ್ಲಿಕೇಶನ್ ಮೂವರ್ ಡೌನ್‌ಲೋಡ್ ಮಾಡಿ

ಅಪ್ಲಿಕೇಶನ್ ಮೂವರ್ ಡೌನ್‌ಲೋಡ್ ಮಾಡಿ

#5

Link2SD ನಂತಹ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಬಹುದು. ನಿಮ್ಮ ಯಾವ ಅಪ್ಲಿಕೇಶನ್ ಎಸ್‌ಡಿ ಕಾರ್ಡ್‌ಗೆ ಮೂವ್ ಆಗುತ್ತಿದೆ ಎಂಬುದನ್ನು ತ್ವರಿತವಾಗಿ ನೋಡಲು ಇದು ನಿಮ್ಮನ್ನು ಅನುಮತಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about how to move applications to sd card in a simple way.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot