ಮನೆಯಲ್ಲಿಯೇ ಕುಳಿತು ಪಿಪಿಎಫ್ ಖಾತೆ ತೆರೆಯಲು ಈ ಕ್ರಮ ಅನುಸರಿಸಿ!

|

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ನಿರ್ವಹಣೆಗಾಗಿ ಇಂತಿಷ್ಟು ಹಣವನ್ನು ಉಳಿತಾಯ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಹೆಚ್ಚಿನ ಜನರು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್, ಅನ್ನು ಅವಲಂಬಿಸಿದ್ದಾರೆ. ಜನರು ಹಣವನ್ನು ಉಳಿಸಲು ಮತ್ತು ಬಡ್ಡಿದರದಲ್ಲಿ ಬೆಳೆಯುವುದಕ್ಕೆ ಮತ್ತು ಬ್ಯಾಂಕುಗಳಲ್ಲಿ ಇತರ ಉಳಿತಾಯದ ಆಯ್ಕೆಗಳಿಗಿಂತ ಭಿನ್ನವಾಗಿ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಅತ್ಯಂತ ಪ್ರಯೋಜನಕಾರಿ ಆಯ್ಕೆಗಳಲ್ಲಿ ಒಂದಾಗಿದೆ.

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌

ಹೌದು, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅವಶ್ಯಕವಾಗಿದೆ. ಇದನ್ನು ಸುರಕ್ಷಿತ ಹೂಡಿಕೆಯ ಉತ್ಪನ್ನ ಎಂದು ವರ್ಗೀಕರಿಸಲು ಕಾರಣವೆಂದರೆ ಭಾರತ ಸರ್ಕಾರವು ನಿಧಿಯಲ್ಲಿ ಹೂಡಿಕೆಗಳನ್ನು ಖಾತರಿಪಡಿಸುತ್ತದೆ. ಇನ್ನು ನೀವು ಹೊರಗೆ ಹೋಗದೆ ನಿಮ್ಮ ಮನೆಯಿಂದಲೇ ಸುಲಭವಾಗಿ ಪಿಪಿಎಫ್ ಖಾತೆಯನ್ನು ಆನ್‌ಲೈನ್‌ನಲ್ಲಿ ತೆರೆಯಬಹುದು. ಸದ್ಯ ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಪಿಪಿಎಫ್ ಖಾತೆ ತೆರೆಯಲು ಅವಕಾಶ ಮಾಡಿಕೊಡುತ್ತದೆ. ಹಾಗಾದ್ರೆ ಆಕ್ಸಿಸ್‌ ಬ್ಯಾಂಕ್‌ ಖಾತೆಯಲ್ಲಿ ನೀವು ಪಿಪಿಎಫ್‌ ಅನ್ನು ತೆರೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸುರಕ್ಷತೆ

ಸುರಕ್ಷತೆ, ಆದಾಯ ಮತ್ತು ತೆರಿಗೆ ಉಳಿತಾಯವನ್ನು ಸಂಯೋಜಿಸುವ ಭಾರತದ ಅತ್ಯಂತ ಜನಪ್ರಿಯ ದೀರ್ಘಕಾಲೀನ ಉಳಿತಾಯ ಮತ್ತು ಹೂಡಿಕೆ ಉತ್ಪನ್ನಗಳಲ್ಲಿ ಒಂದು ಪಿಪಿಎಫ್ ಖಾತೆಯಾಗಿದೆ. ಎನ್‌ಎಸ್‌ಸಿ, ಅಂಚೆ ಕಚೇರಿ ಉಳಿತಾಯ ಯೋಜನೆ ಮತ್ತು ಇತರವುಗಳನ್ನು ಒಳಗೊಂಡಂತೆ ಭಾರತದಲ್ಲಿ ಲಭ್ಯವಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಪಿಪಿಎಫ್ ಅನ್ನು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, PPF ಖಾತೆಯನ್ನು ತೆರೆಯುವುದರಿಂದ ನಿಮಗೆ 5 ವಿಭಿನ್ನ ಅನುಕೂಲಗಳಿವೆ ಅವುಗಳು ಯಾವುವು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

PPF ಖಾತೆಯನ್ನು ತೆರೆಯುವುದರಿಂದ ಸಿಗುವ 5 ಉಪಯೋಗಗಳು!

PPF ಖಾತೆಯನ್ನು ತೆರೆಯುವುದರಿಂದ ಸಿಗುವ 5 ಉಪಯೋಗಗಳು!

* ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಿರಿ
* ಗಳಿಸಿದ ಬಡ್ಡಿ ಮತ್ತು ಮುಕ್ತಾಯದ ಆದಾಯವನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ
* 500 ಕ್ಕಿಂತ ಕಡಿಮೆ ಮೊತ್ತದಿಂದ ಪ್ರಾರಂಭಿಸಿ
* 15 ವರ್ಷಗಳ ಅವಧಿಗೆ ಆದರ್ಶ ದೀರ್ಘಾವಧಿಯ ಹೂಡಿಕೆಯನ್ನು ರಚಿಸಿ
* ನಿಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ತಕ್ಷಣವೇ ಹಣವನ್ನು ವರ್ಗಾಯಿಸಿ

ಹಣಕಾಸು

ಆದಾಗ್ಯೂ, ಪಿಪಿಎಫ್‌ನಲ್ಲಿ ಹೂಡಿಕೆದಾರರು ತಿಳಿದುಕೊಳ್ಳಬೇಕಾದ ಇತರ ವಿಷಯಗಳಿವೆ. ಇದರಲ್ಲಿ ಮೊದಲನೆಯದು ಇದು ಹೂಡಿಕೆ ಲಾಕ್-ಇನ್ ಅವಧಿಯನ್ನು 15 ವರ್ಷಗಳವರೆಗೆ ಹೊಂದಿದೆ. ಆದರೆ, ಅದು ಯಾವುದೇ ಸಮಸ್ಯೆಯಾಗಬಾರದು ಏಕೆಂದರೆ ಪಿಪಿಎಫ್ ಖಾತೆಯ ಗುರಿಯು ನಿವೃತ್ತಿಯ ನಂತರ ವ್ಯಕ್ತಿಗೆ ಬೃಹತ್ ನಿಧಿಯನ್ನು ನಿರ್ಮಿಸುವುದು. ವಾಸ್ತವವಾಗಿ, ಹಿಂಪಡೆಯುವಿಕೆಯನ್ನು ಅನುಮತಿಸಲಾಗಿದೆ. ಆದರೆ ಅದು 7 ನೇ ವರ್ಷದ ನಂತರ ಸಂಭವಿಸಬಹುದು. ಹಣಕಾಸು ವರ್ಷದಲ್ಲಿ ಕೇವಲ ಒಂದು ವಾಪಸಾತಿಗೆ ಮಾತ್ರ ಅವಕಾಶವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶಗಳೆಂದರೆ.

ಬ್ಯಾಲೆನ್ಸ್

* ತಿಂಗಳಿನ 5 ನೇ ಮತ್ತು ಕೊನೆಯ ದಿನದ ನಡುವಿನ ಕಡಿಮೆ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ
* ಕನಿಷ್ಠ ಕೊಡುಗೆ 500ರೂ ಆಗಿದ್ದರೆ, ಗರಿಷ್ಠ PP 150,000ರೂ ಅನ್ನು ಒಂದು ವರ್ಷದಲ್ಲಿ PPF ಖಾತೆಯಲ್ಲಿ ಹೂಡಿಕೆ ಮಾಡಬಹುದು
* ನಿರ್ದಿಷ್ಟ ವರ್ಷದಲ್ಲಿ ಪಾವತಿ ತಪ್ಪಿಹೋದರೆ, ತಪ್ಪಿದ ಪ್ರತಿ ವರ್ಷಕ್ಕೆ 50 + ಕನಿಷ್ಠ ಕೊಡುಗೆ (500ರೂ.) ದಂಡ ವಿಧಿಸಲಾಗುತ್ತದೆ.
* ಹೂಡಿಕೆದಾರರು ತಮ್ಮ ಪಿಪಿಎಫ್ ಖಾತೆಯನ್ನು ಮುಚ್ಚಲು ಬಯಸಿದರೆ, 5 ನೇ ಹಣಕಾಸು ವರ್ಷದ ನಂತರ ಅವರು ಅದನ್ನು ಮಾಡಬಹುದು. ಆದಾಗ್ಯೂ, ಇದನ್ನು ಕೇವಲ 2 ಕಾರಣಗಳಿಗಾಗಿ ಅನುಮತಿಸಲಾಗಿದೆ 1) ಖಾತೆದಾರರು, ಸಂಗಾತಿ, ಅವಲಂಬಿತ ಮಕ್ಕಳು ಮತ್ತು ಪೋಷಕರ ಗಂಭೀರ ಕಾಯಿಲೆಗಳ ಚಿಕಿತ್ಸೆ; 2) ಉನ್ನತ ಶಿಕ್ಷಣಕ್ಕಾಗಿ ಮಾತ್ರ ಕ್ಲೋಸ್‌ ಮಾಡಬಹುದಾಗಿದೆ.
ಜೂನ್ 30, 2021 ರ ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ, ಪಿಪಿಎಫ್ ಬಡ್ಡಿದರವನ್ನು 7.10%ಎಂದು ನಿಗದಿಪಡಿಸಲಾಗಿದೆ.

Most Read Articles
Best Mobiles in India

Read more about:
English summary
Public Provident Fund or PPF, is one of the most beneficial options for people to save money.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X