Home
ಸುದ್ದಿಜಾಲ

ಕ್ಲಬ್‌ಹೌಸ್‌ನಲ್ಲಿ ಓಪನ್‌ ಮತ್ತು ಕ್ಲೋಸ್‌ ರೂಮ್‌ ಅನ್ನು ಪ್ರಾರಂಭಿಸುವುದು ಹೇಗೆ?

ಕ್ಲಬ್‌ಹೌಸ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಅಪ್ಲಿಕೇಶನ್‌ ಆಗಿದೆ. ಶರವೇಗದಲ್ಲಿ ಮುನ್ನುಗ್ಗುತ್ತಿರುವ ಲೈವ್‌ ಆಡಿಯೋ ಚಾಟ್‌ ಅಪ್ಲಿಕೇಶನ್‌ ಕ್ಲಬ್‌ಹೌಸ್‌ ಹೆಚ್ಚಿನ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಆರಂಭದಲ್ಲಿ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಆಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮೇ ತಿಂಗಳಲ್ಲಿ ಲಭ್ಯವಾಯ್ತು. ಅಂದಿನಿಂದ ಫೇಸ್ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ಗಳಿಗೂ ಪೈಪೋಟಿ ನೀಡುತ್ತಾ ಬಂದಿದೆ. ಕ್ಲಬ್‌ಹೌಸ್‌ ಆಂಡ್ರಾಯ್ಡ್ ಆಪ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.

ಕ್ಲಬ್‌ಹೌಸ್‌

ಹೌದು, ಕ್ಲಬ್‌ಹೌಸ್‌ ಲೈವ್‌ ಆಡಿಯೋ ಚಾಟ್‌ ಅಪ್ಲಿಕೇಶನ್‌ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನು ಕ್ಲಬ್‌ಹೌಸ್‌ನಲ್ಲಿ, 'ರೂಮ್' ನಲ್ಲಿ ಸಂಭಾಷಣೆ ನಡೆಯುತ್ತದೆ. ಇದರಲ್ಲಿ ಓಪನ್ ರೂಂ ಮತ್ತು ಕ್ಲೋಸ್ಡ್‌ ರೂಮ್‌ ಎಂಬ ಆಯ್ಕೆಗಳಿವೆ. ಇದರಲ್ಲಿ ಓಪನ್‌ ರೂಮ್‌ ಎಂದರೆ ಯಾರು ಬೇಕಾದರೂ ಸಂಭಾಷಣೆಗೆ ಸೇರಬಹುದು. ಆದರೆ ಮುಚ್ಚಿದ ಕೋಣೆಯಲ್ಲಿ ಬಳಕೆದಾರರು ಅದನ್ನು ತಮ್ಮ ಆಯ್ದ ಸ್ನೇಹಿತರು ಅಥವಾ ಅನುಯಾಯಿಗಳಿಗೆ ಸೀಮಿತಗೊಳಿಸಬಹುದು. ಹಾಗಾದ್ರೆ ಕ್ಲಬ್‌ಹೌಸ್‌ನಲ್ಲಿ ಓಪನ್‌ ರೂಮ್‌ ಮತ್ತು ಮುಚ್ಚಿದ ರೂಮ್‌ ಅನ್ನು ಪ್ರಾರಂಭಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕ್ಲಬ್‌ಹೌಸ್‌

ಕ್ಲಬ್‌ಹೌಸ್‌ನಲ್ಲಿ ಒಪನ್‌ ರೂಮ್‌ಗಳಲ್ಲಿ ಕೂಡ ಮುಕ್ತ ಸಂವಾದ ನಡೆಯಲಿದೆ. ಹಾಗೆಯೇ ಮುಚ್ಚಿದ ರೂ್‌ಗಳಲ್ಲಿ ನಿಮ್ಮ ಸ್ನೇಹಿತರು, ಅನುಯಾಯಿಗಳ ಜೊತೆಗೆ ಮಾತ್ರ ಸಂವಾದ ನಡೆಸಬಹುದಾಗಿದೆ. ಇನ್ನು ಕ್ಲಬ್‌ಹೌಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಪೂರ್ವನಿಯೋಜಿತವಾಗಿ ಎಲ್ಲಾ ಕೊಠಡಿಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ತೆರೆಯಲು ಸೆಟ್‌ ಮಾಡಲಾಗಿರುತ್ತದೆ. ಆದರೆ ರೂಮ್‌ ಅನ್ನು ಪ್ರಾರಂಭಿಸುವಾಗ ನೀವು ಸೆಟ್ಟಿಂಗ್ ಅನ್ನು ಬದಲಾಯಿಸಬೇಕಾಗುತ್ತದೆ. ಇನ್ನು ಕ್ಲಬ್‌ಹೌಸ್‌ನಲ್ಲಿ ಒಪನ್‌ ರೂಮ್‌ ಪ್ರಾರಂಭಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಕ್ಲಬ್‌ಹೌಸ್‌ನಲ್ಲಿ ಓಪನ್‌ ರೂಮ್‌ ಅನ್ನು ಪ್ರಾರಂಭಿಸುವುದು ಹೇಗೆ?

ಕ್ಲಬ್‌ಹೌಸ್‌ನಲ್ಲಿ ಓಪನ್‌ ರೂಮ್‌ ಅನ್ನು ಪ್ರಾರಂಭಿಸುವುದು ಹೇಗೆ?

ಹಂತ:1 ಕ್ಲಬ್ ಹೌಸ್ ಆಪ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ ಹೋಮ್‌ಪೇಜ್‌ನಲ್ಲಿರುವ +ರೂಂ ಐಕಾನ್ ಅನ್ನು ಟ್ಯಾಪ್ ಮಾಡಿ
ಹಂತ:3 ಸಬ್‌ ಮೆನುವಿನಿಂದ ಕ್ಲಬ್‌ ಆಯ್ಕೆಯನ್ನು ಆರಿಸಿ. ನೀವು ಬಯಸಿದಲ್ಲಿ ನೀವು ಒಂದು ವಿಷಯವನ್ನು ಕೂಡ ಸೇರಿಸಬಹುದು.
ಹಂತ:4 ಲೆಟ್ಸ್ ಗೋ ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:5 + ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ನಿಮ್ಮ ಸ್ನೇಹಿತರನ್ನು ಪಿಂಗ್ ಮಾಡುವ ಮೂಲಕ ನೀವು ಈಗ ಜನರನ್ನು ಆಹ್ವಾನಿಸಬಹುದು.

ಕ್ಲಬ್‌ಹೌಸ್‌ನಲ್ಲಿ ಮುಚ್ಚಿದ ಕೋಣೆಯನ್ನು ಪ್ರಾರಂಭಿಸುವುದು ಹೇಗೆ?

ಕ್ಲಬ್‌ಹೌಸ್‌ನಲ್ಲಿ ಮುಚ್ಚಿದ ಕೋಣೆಯನ್ನು ಪ್ರಾರಂಭಿಸುವುದು ಹೇಗೆ?

ಹಂತ:1 ಕ್ಲಬ್ ಹೌಸ್ ಆಪ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ ಮುಖಪುಟದಲ್ಲಿರುವ + ರೂಂ ಐಕಾನ್ ಅನ್ನು ಟ್ಯಾಪ್ ಮಾಡಿ
ಹಂತ:3 ಸಬ್‌ ಮೆನುವಿನಿಂದ ಮುಚ್ಚಿದ ಆಯ್ಕೆಯನ್ನು ಆರಿಸಿ. ನೀವು ಬಯಸಿದಲ್ಲಿ ನೀವು ಒಂದು ವಿಷಯವನ್ನು ಕೂಡ ಸೇರಿಸಬಹುದು.
ಹಂತ:4 ಜನರನ್ನು ಆಯ್ಕೆ ಮಾಡು ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಕೋಣೆಯ ಭಾಗವಾಗಿರಲು ನೀವು ಆಹ್ವಾನಿಸಲು ಬಯಸುವ ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿ.
ಹಂತ:5 ಲೆಟ್ಸ್ ಗೋ ಆಯ್ಕೆಯನ್ನು ಟ್ಯಾಪ್ ಮಾಡಿ. + ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ನಿಮ್ಮ ಸ್ನೇಹಿತರನ್ನು ಪಿಂಗ್ ಮಾಡುವ ಮೂಲಕ ನೀವು ಈಗ ಹೆಚ್ಚಿನ ಜನರನ್ನು ಆಹ್ವಾನಿಸಬಹುದು.

ಆಪ್‌ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುವ ಬಳಕೆದಾರರು ಒಂದು ಕೊಠಡಿಯಿಂದ ಮುಚ್ಚಿದ ಕೊಠಡಿಯನ್ನು ಒಟ್ಟಿಗೆ ಆರಂಭಿಸಬಹುದು. ನೀವು ಅವರ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಸ್ಟಾರ್ಟ್ ಕ್ಲೋಸ್ಡ್ ರೂಮ್ ಟುಗೆದರ್ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಕ್ಲಬ್‌ಗಳಿಂದ ರೂಮ್ಸ್‌ಗಳನ್ನು ಪ್ರಾರಂಭಿಸುವುದು ಹೇಗೆ?

ನಿಮ್ಮ ಕ್ಲಬ್‌ಗಳಿಂದ ರೂಮ್ಸ್‌ಗಳನ್ನು ಪ್ರಾರಂಭಿಸುವುದು ಹೇಗೆ?

ಹಂತ:1 ಕ್ಲಬ್ ಹೌಸ್ ಆಪ್ ತೆರೆಯಿರಿ.
ಹಂತ:2 ಅಪ್ಲಿಕೇಶನ್‌ ಮುಖಪುಟದಲ್ಲಿರುವ + ರೂಂ ಐಕಾನ್ ಅನ್ನು ಟ್ಯಾಪ್ ಮಾಡಿ
ಹಂತ:3 ಸಬ್‌ ಮೆನುವಿನಿಂದ ಕ್ಲಬ್ ಅನ್ನು ಆಯ್ಕೆ ಮಾಡಿ. ನೀವು ಬಯಸಿದಲ್ಲಿ ನೀವು ಒಂದು ವಿಷಯವನ್ನು ಕೂಡ ಸೇರಿಸಬಹುದು.
ಹಂತ:4 ಕೊಠಡಿಯನ್ನು ತೆರೆಯಲು ಲೆಟ್ಸ್ ಗೋ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಸಂದರ್ಶಕರಿಗೆ ಮತ್ತು ಲಿಂಕ್ ಹಂಚಿಕೊಳ್ಳಲು ಕೊಠಡಿಯನ್ನು ತೆರೆಯಲು ನೀವು ಮೂರು ಚುಕ್ಕೆಗಳ ಆಯ್ಕೆಯನ್ನು ಕ್ಲಿಕ್ ಮಾಡಬಹುದು. + ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ನಿಮ್ಮ ಸ್ನೇಹಿತರನ್ನು ಪಿಂಗ್ ಮಾಡುವ ಮೂಲಕ ನೀವು ಈಗ ಹೆಚ್ಚಿನ ಜನರನ್ನು ಆಹ್ವಾನಿಸಬಹುದು.

Best Mobiles in India

English summary
Clubhouse recently ended the invite-only system and made the app available for all users.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+