ಸ್ಮಾರ್ಟ್ ಪ್ರೊಜೆಕ್ಟರ್‌ಗಳನ್ನು ಖರೀದಿಸುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ!
ಟೆಕ್ನಾಲಜಿ ಮುಂದುವರೆದಂತೆ ಹಲವು ಕ್ಷೇತ್ರಗಳಲ್ಲಿ ಪ್ರೊಜೆಕ್ಟರ್‌ಗಳ ಬಳಕೆ ಅತ್ಯಗತ್ಯವಾಗಿದೆ. ಪ್ರೊಜೆಕ್ಟರ್ ಇಂದು ಕೇವಲ ಶಿಕ್ಷಣ, ವೈದ್ಯಕೀಯ ಹಾಗೂ ವ್ಯವಹಾರಿಕ ಕ್ಷೇತ್ರಗಲಿಗೆ ಸೀಮಿತವಾಗಿಲ್ಲ, ಮನೆಯ ಮನರಂಜನಾ ವಲಯವನ್ನು ಕೂಡ ಆವರಿಸಿಕೊಂಡಿದೆ. ಮನೆಗಳಲ್ಲಿಯೂ ಕೂಡ ಪ್ರೊಜೆಕ್ಟರ್‌ಗಳ ಮೂಲಕ ಸಿನಿಮಾ ಅನುಭವ ಪಡೆಯುವವರು ಕೂಡ ಇದ್ದಾರೆ.
ಹೌದು, ಪ್ರೊಜೆಕ್ಟರ್‌ಗಳ ಬಳಕೆಯ ವ್ಯಾಪ್ತಿ ದಿನೇ ದಿನೇ ವಿಶಾಲವಾಗುತ್ತಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ವಿವಿದ ಬ್ರ್ಯಾಂಡ್‌ನ ಪ್ರೊಜೆಕ್ಟರ್‌ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ ಪ್ರೊಜೆಕ್ಟರ್‌ಗಳನ್ನು ಖರೀದಿಸುವಾಗ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಏಕೆಂದರೆ ಪ್ರೊಜೆಕ್ಟರ್‌ಗಳ ಗಾತ್ರ, ಅವುಗಳ ಸಾಮರ್ಥ್ಯ ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗಾದ್ರೆ ನೀವು ಅತ್ಯುತ್ತಮವಾದ ಪ್ರೊಜೆಕ್ಟರ್ ಅನ್ನು ಆಯ್ಕೆ ಮಾಡಬೇಕಾದರೆ ಅನುಸರಿಸಬೇಕಾದ ಕೆಲವು ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೊಜೆಕ್ಟರ್‌ಗಳ ಬಗ್ಗೆ ತಿಳುವಳಿಕೆ ಇರಲಿ
ಪ್ರೊಜೆಕ್ಟರ್‌ಗಳನ್ನು ಖರೀದಿಸುವ ಮುನ್ನ ಅವುಗಳ ಬಳಕೆಯ ಬಗ್ಗೆ ತಿಳುವಳಿಕೆ ಇರಬೇಕು. ಏಕೆಂದರೆ ಬೆಳಕಿನ ಮೂಲವು ಪ್ರೊಜೆಕ್ಟರ್‌ಗೆ ಶಕ್ತಿ ನೀಡುವ ಪ್ರಮುಖ ತಂತ್ರಜ್ಞಾನವಾಗಿದೆ. ಆದರೆ ಇಂದಿನ ದಿನಗಳಲ್ಲಿ ಲೈಟ್- ಬೇಸ್ ಪ್ರೊಜೆಕ್ಟರ್‌ಗಳು ಕಣ್ಮರೆಯಾಗಿವೆ. ಬದಲಿಗೆ ಹೆಚ್ಚಿನ ಪ್ರೊಜೆಕ್ಟರ್‌ಗಳು ಎಲ್‌ಇಡಿಯನ್ನು ಬೆಳಕಿನ ಮೂಲವಾಗಿ ಬಳಸುತ್ತವೆ. ಇದರಿಂದ ಇವುಗಳ ಲೈಫ್‌ಟೈಂ, ಕಲರ್ ಐಡೆಂಟಿಫೈ ಮತ್ತು ಬ್ರೈಟ್‌ನೆಸ್ ವಿಚಾರದಲ್ಲಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆದರಿಂದ ನೀವು ಪ್ರೊಜೆಕ್ಟರ್‌ಗಳನ್ನು ಆಯ್ಕೆ ಮಾಡುವಾಗ ಯಾವ ವಿಭಾಗದ ಪ್ರೊಜೆಕ್ಟರ್ ಆಯ್ಕೆ ಮಾಡಬೇಕೆಂಬ ವಿಚಾರದ ಬಗ್ಗೆ ನಿಖರತೆ ಇರಬೇಕಾಗುತ್ತದೆ.

ರೆಸಲ್ಯೂಶನ್ ಮತ್ತು ಸಂಪರ್ಕದ ಅರಿವಿರಲಿ
ಪ್ರೊಜೆಕ್ಟರ್‌ಗಳನ್ನು ಖರೀದಿಸುವಾಗ ಪರಿಗಣಿಸಬೇಕಾದ ಮತ್ತೊಂದು ವಿಚಾರವೆಂದರೆ ರೆಸಲ್ಯೂಶನ್. ಪ್ರೊಜೆಕ್ಟರ್‌ಗಳ ರೆಸಲ್ಯೂಶನ್ ಮೇಲೆ ಅವುಗಳ ಗುಣಮಟ್ಟವಿರುತ್ತದೆ. ಅದರಂತೆ ಹೆಚ್ಚಿನ ಬಜೆಟ್ ಮತ್ತು ಮಧ್ಯ-ಶ್ರೇಣಿಯ ಪ್ರೊಜೆಕ್ಟರ್‌ಗಳು 720p/1080p ರೆಸಲ್ಯೂಶನ್ ಅನ್ನು ನೀಡುತ್ತವೆ. ಆದರೆ ಉನ್ನತ-ಮಟ್ಟದ ಪ್ರೊಜೆಕ್ಟರ್‌ಗಳು 4K ರೆಸಲ್ಯೂಶನ್ ವರೆಗೆ ಔಟ್‌ಪುಟ್ ನೀಡಲಿವೆ. ಇನ್ನು ಕೆಲವು ಪ್ರೊಜೆಕ್ಟರ್‌ಗಳು ವೇಗದ 120Hz ರಿಫ್ರೆಶ್ ರೇಟ್ ಅನ್ನು ಸಹ ನೀಡಲಿವೆ. ಇವುಗಳಲ್ಲಿ ನಿಮಗೆ ಯಾವುದು ಸೂಕ್ತ ವೆನಿಸುತ್ತದೆ ಅದಕ್ಕೆ ನಿಮ್ಮ ಆದ್ಯತೆ ನೀಡಿರಿ.

ಅಪ್ಲಿಕೇಶನ್ ಸಾಮರ್ಥ್ಯ
ಪ್ರೊಜೆಕ್ಟರ್‌ಗಳಲ್ಲಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಅಪ್ಲಿಕೇಶನ್‌ಗಳನ್ನು ಸ್ಥಳೀಯವಾಗಿ ಚಲಾಯಿಸುವ ಸಾಮರ್ಥ್ಯ. ಇಂದಿನ ದಿನಗಳಲ್ಲಿರುವ ಮಾಡ್ರನ್ ಪ್ರೊಜೆಕ್ಟರ್‌ಗಳು Android OSನಲ್ಲಿ ರನ್ ಅಗಲಿವೆ. ಇದರಿಂದ Netflix, Prime Video, YouTube, ಮತ್ತು ಇತರ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಂತಹ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಫೈರ್ ಟಿವಿ ಸ್ಟಿಕ್ ಅಥವಾ ಬೇರೆ ಡಿವೈಸ್‌ನೊಂದಿಗೆ ಪ್ರೊಜೆಕ್ಟರ್‌ನಲ್ಲಿ ಸಂಪರ್ಕ ಸಾಧಿಸಬಹುದಾದರೂ, ಇನ್‌ಬಿಲ್ಟ್ ಅಪ್ಲಿಕೇಶನ್‌ಗಳನ್ನು ಹೊಂದಿರುವ ಪ್ರೊಜೆಕ್ಟರ್ ಆಯ್ಕೆ ಮಾಡುವುದು ಸೂಕ್ತವಾಗಿರಲಿದೆ.

ಪ್ರೊಜೆಕ್ಟರ್‌ಗಳ ಗಾತ್ರ
ಇನ್ನು ಪ್ರೊಜೆಕ್ಟರ್‌ಗಳ ರೆಸಲ್ಯೂಶನ್ ಮತ್ತು ಬ್ರೈಟ್‌ನೆಸ್ ಅನ್ನು ಅವಲಂಬಿಸಿ, ಪ್ರೊಜೆಕ್ಟರ್‌ಗಳು ಗಾತ್ರದಲ್ಲಿ ಬದಲಾವಣೆ ಆಗಲಿವೆ. ಅಲ್ಲದೆ ಸಂಯೋಜಿತ ಬ್ಯಾಟರಿಯೊಂದಿಗೆ ಬರುವ ಪ್ರೊಜೆಕ್ಟರ್‌ಗಳು ಕೂಡ ದೊರೆಯುತ್ತವೆ. ಇವುಗಳು ಕ್ಯಾಂಪಿಂಗ್‌ನಂತಹ ಚಟುವಟಿಕೆಗಳಲ್ಲಿ ಹೊರಾಂಗಣ ಬಳಕೆಗೆ ಸೂಕ್ತವಾಗಿರುತ್ತವೆ. ಇಲ್ಲಿ ನಿಮಗೆ ಯಾವ ರೀತಿಯ ಆಯ್ಕೆ ಬೇಕು ಎಂಬುದನ್ನು ನಿರ್ದರಿಸಬೇಕಾಗುತ್ತದೆ.
ಇನ್ನು ಚಿತ್ರವನ್ನು ಪ್ರಕ್ಷೇಪಿಸಲು ಅಗತ್ಯವಿರುವ ದೂರದ ಆಧಾರದ ಮೇಲೆ ಪ್ರಕ್ಷೇಪಕಗಳನ್ನು ಸಹ ಪ್ರತ್ಯೇಕಿಸಬಹುದು. ಲಾಂಗ್-ಥ್ರೋ ಪ್ರೊಜೆಕ್ಟರ್ ಅನ್ನು ಸಾಮಾನ್ಯವಾಗಿ ದೊಡ್ಡ-ಗಾತ್ರದ ಚಿತ್ರವನ್ನು ಪ್ರಕ್ಷೇಪಿಸಲು ದೂರದಲ್ಲಿ ಇರಿಸಬೇಕಾಗುತ್ತದೆ. ಆದರೆ ಶಾರ್ಟ್-ಥ್ರೋ ಪ್ರೊಜೆಕ್ಟರ್ ಅನ್ನು ಕೇವಲ ಒಂದೆರಡು ಸೆಂಟಿಮೀಟರ್ ದೂರದಲ್ಲಿಯೇ ಸೆಟ್ ಮಾಡಬಹುದು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಹೆಚ್ಚಿನ ಸಂದರ್ಭಗಳಲ್ಲಿ, ಶಾರ್ಟ್-ಥ್ರೋ ಪ್ರೊಜೆಕ್ಟರ್ ಲಾಂಗ್-ಥ್ರೋ ಪ್ರೊಜೆಕ್ಟರ್‌ಗಿಂತ ಹೆಚ್ಚು ದುಬಾರಿಯಾಗಿರುತ್ತದೆ.


Click it and Unblock the Notifications








