ವಾಟ್ಸಾಪ್‌ನಲ್ಲಿ ಒಟಿಪಿ ಸ್ಕ್ಯಾಮ್‌ ತಡೆಯುವುದು ಹೇಗೆ?

|

ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ ವಾಟ್ಸಾಪ್‌. ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇನ್ನು ವಾಟ್ಸಾಪ್‌ ಅನ್ನು ಹೆಚ್ಚಿನ ಜನರು ಬಳಸುವುದರಿಂದ ಹ್ಯಾಕರ್ಸ್‌ ಮತ್ತು ಸ್ಕ್ಯಾಮರ್ಸ್‌ ಇದನ್ನು ಗುರಿಯಾಗಿಸಿಕೊಳ್ಳುವುದು ಸಹಜ. ಅಲ್ಲದೆ ಹೆಚ್ಚಿನ ಬಳಕೆದಾರರು ಎಚ್ಚರಿಕೆಯಿಂದಿಲ್ಲದ ಕಾರಣ ಹ್ಯಾಕರ್‌ಗಳು ಸುಲಭವಾಗಿ ವಾಟ್ಸಾಪ್‌ ಅಕೌಂಟ್‌ ಅನ್ನು ಪ್ರವೇಶಿಸುತ್ತಾರೆ. ಅದರಲ್ಲೂ ಸ್ಕ್ಯಾಮರ್‌ಗಳು ಮತ್ತು ಹ್ಯಾಕರ್‌ಗಳು ನಮ್ಮ ವಾಟ್ಸಾಪ್ ಖಾತೆಗಳನ್ನು ಒಟಿಪಿ ಮೂಲಕ ಹ್ಯಾಕ್‌ ಮಾಡುತ್ತಾರೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಆಪ್‌ ಆಗಿದೆ. ಬಳಕೆದಾರರ ಹಿತದೃಷ್ಟಿಯಿಂದ ಸಾಕಷ್ಟು ಸೆಕ್ಯುರ್‌ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಆದರು ಒಟಿಪಿ ಮೂಲಕ ವಾಟ್ಸಾಪ್‌ ಬಳಕೆದಾರರನ್ನು ಯಾಮಾರಿಸಿ ಹ್ಯಾಕ್‌ ಮಾಡುತ್ತಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ಬಳಕೆದಾರರು ಒಟಿಪಿ ಸ್ಕ್ಯಾಮ್‌ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಮುಖ್ಯವಾಗಿದೆ. ಅಷ್ಟಕ್ಕೂ ಒಟಿಪಿ ಸ್ಕ್ಯಾಮ್‌ ಎಂದರೇನು? ಅದನ್ನು ತಡೆಗಟ್ಟುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಟಿಪಿ ಸ್ಕ್ಯಾಮ್‌ ಎಂದರೇನು?

ಒಟಿಪಿ ಸ್ಕ್ಯಾಮ್‌ ಎಂದರೇನು?

ನೀವು ಹೊಸದಾಗಿ ಅಥವಾ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅನ್ನು ಸೆಟ್‌ ಮಾಡಿದಾಗಲೆಲ್ಲಾ, ಒಮ್ಮೆ ನೀವು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಹಾಕಿದ ನಂತರ, ವಾಟ್ಸಾಪ್ ನಿಮ್ಮ ಸಂಖ್ಯೆಗೆ ಒಟಿಪಿ ಕಳುಹಿಸುತ್ತದೆ. ವಾಟ್ಸಾಪ್ ಅನ್ನು ಸೆಟ್‌ ಮಾಡಲು ಈ ಒಟಿಪಿ ಯನ್ನು ಟೈಪ್ ಮಾಡಬೇಕಾಗಿದೆ. ಆ ಒಟಿಪಿಯನ್ನು ವಾಟ್ಸಾಪ್ ಮತ್ತು ವಾಟ್ಸಾಪ್ ನಿಂದ ಪಡೆಯಲು ನಿಮ್ಮ ಫೋನ್ ಸಂಖ್ಯೆಯನ್ನು ನೀವು ಹಾಕಬೇಕು. ಹ್ಯಾಕರ್‌ಗಳು ಮತ್ತು ಸ್ಕ್ಯಾಮರ್‌ಗಳು ಈ ಒಟಿಪಿ ಫೀಚರ್ಸ್‌ ಅನ್ನು ಪ್ರವೇಶಿಸಲು ಬಳಸುತ್ತಿದ್ದಾರೆ.

ಹ್ಯಾಕರ್‌ಗಳು

ಹ್ಯಾಕರ್‌ಗಳು ನಿಮ್ಮನ್ನು ಇನ್ಯಾವುದೋ ಮೆಸೇಜ್‌ ಪ್ಲಾಟ್‌ಫಾರ್ಮ್‌ಗಳಿಂದ ಕಟ್ಯಾಂಕ್ಟ್‌ ಮಾಡುತ್ತಾರೆ. ಅಲ್ಲದೆ ನಿಮ್ಮ ವಾಟ್ಸಾಪ್‌ ಅಕೌಂಟ್‌ ಲಾಕ್ ಆಗಿರುವುದರಿಂದ, ನಿಮ್ಮ ಸಂಖ್ಯೆಯಲ್ಲಿ ಒಟಿಪಿಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ಆದ್ದರಿಂದ, ನೀವು ಅವರೊಂದಿಗೆ ಹಂಚಿಕೊಳ್ಳಬೇಕಾದ ಓಟಿಪಿಯನ್ನು ಅವರ ಪರವಾಗಿ ಸ್ವೀಕರಿಸುತ್ತೀರಿ. ಅಲ್ಲದೆ ಈ ಒಟಿಪಿಯನ್ನು ಅವರೊಂದಿಗೆ ಹಂಚಿಕೊಳ್ಳಲು ಹ್ಯಾಕರ್ / ಸ್ಕ್ಯಾಮರ್ ನಿಮ್ಮನ್ನು ಕೇಳುತ್ತಾರೆ. ನೀವು ಅದನ್ನು ಮಾಡಿದ ಕ್ಷಣದಿಂದಲೇ, ನಿಮ್ಮ ವಾಟ್ಸಾಪ್‌ನಿಂದ ನೀವು ಲಾಗ್ ಔಟ್ ಆಗುತ್ತೀರಿ ಮತ್ತು ನೀವು ಈ ಡಿವೈಸ್‌ನಿಂದ ಲಾಗ್ ಔಟ್ ಆಗಿದ್ದೀರಿ ಎಂಬ ಸಂದೇಶವನ್ನು ನೀವು ಅಪ್ಲಿಕೇಶನ್‌ನಲ್ಲಿ ನೋಡುತ್ತೀರಿ. ಈ ಮೂಲಕ ಹ್ಯಾಕರ್‌ ನಿಮ್ಮ ಸಂಖ್ಯೆನ್ನು ಬಳಸಿ ಮತ್ತೊಂದು ಡಿವೈಸ್‌ನಲ್ಲಿ ವಾಟ್ಸಾಪ್‌ ಅಕೌಂಟ್‌ ತೆರೆದಿರುತ್ತಾನೆ.

ಒಟಿಪಿ ಸ್ಕ್ಯಾಮ್‌ ತಡೆಯುವುದು ಹೇಗೆ?

ಒಟಿಪಿ ಸ್ಕ್ಯಾಮ್‌ ತಡೆಯುವುದು ಹೇಗೆ?

ನೀವು ಈ ರೀತಿಯ ಸ್ಕ್ಯಾಮ್‌ಗೆ ಬಲಿಯಾಗಿದ್ದರೆ ನೀವು ಮಾಡಬೇಕಾಗಿರುವುದು ನಿಮ್ಮ ವಾಟ್ಸಾಪ್ ಅನ್ನು ತಕ್ಷಣ ರಿ ಸೆಟ್‌ ಮಾಡಿ ಮತ್ತು ಮತ್ತೆ ಲಾಗ್ ಇನ್ ಮಾಡಿ. ನಿಮ್ಮ ನೋಂದಾಯಿತ ಸಂಖ್ಯೆಯನ್ನು ಆಡ್‌ ಮಾಡಿ, ನಂತರ ನೀವು ಒಟಿಪಿ ಸ್ವೀಕರಿಸುತ್ತೀರಿ. ಈ ಒಟಿಪಿ ಬಳಸಿ ನಿಮ್ಮ ಸಾಧನದಲ್ಲಿ ವಾಟ್ಸಾಪ್‌ಗೆ ಲಾಗ್ ಇನ್ ಮಾಡಿ. ಇದು ನಿಮ್ಮ ಸಂಖ್ಯೆಯೊಂದಿಗೆ ಅವರು ಬಳಸುತ್ತಿರುವ ಯಾವುದೇ ಸಾಧನದಿಂದ ಹ್ಯಾಕರ್ ಅನ್ನು ಲಾಕ್ ಮಾಡುತ್ತದೆ. ಇನ್ನು ನಿಮ್ಮ ವಾಟ್ಸಾಪ್‌ನಲ್ಲಿ ಹೆಚ್ಚುವರಿ ಸುರಕ್ಷಿತವಾಗಿರಲು ಎರಡು ಅಂಶಗಳ ದೃಡೀಕರಣವನ್ನು ಸಕ್ರಿಯಗೊಳಿಸಬೇಕು. ವಾಟ್ಸಾಪ್ ನಿಮ್ಮ ಖಾಸಗಿ ಚಾಟ್‌ಗಳು ಮತ್ತು ಮಾಧ್ಯಮಗಳನ್ನು ಹೊಂದಿದೆ ಮತ್ತು ಹ್ಯಾಕರ್‌ಗಳು ಯಾವುದೇ ವಿಧಾನದಿಂದ ಇದಕ್ಕೆ ಪ್ರವೇಶ ಪಡೆದರೆ ಅದು ಅಪಾಯಕಾರಿಯಾಗಿದ್ದು, ಜಾಗರೂಕರಾಗಿರುವುದು ಅವಶ್ಯವಾಗಿದೆ.

Best Mobiles in India

English summary
Scamsters on WhatsApp have been always devising new ways to dupe people and take over their messaging accounts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X