ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಬೇಕಾದ್ರೆ ತಪ್ಪದೆ ಈ ಕ್ರಮಗಳನ್ನು ಅನುಸರಿಸಿ!
ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ಸಮಯ ಬಳಸುವುದರಿಂದ ಕಣ್ಣಿನ ದೃಷ್ಟಿಗೆ ಸಮಸ್ಯೆ ಆಗಲಿದೆ ಅನ್ನೊದು ಹೊಸತೇನಲ್ಲ. ಮೊಬೈಲ್ ಅಥವಾ ಕಂಪ್ಯೂಟರ್‌ನ ಅತಿಯಾದ ಬಳಕೆ ಕಣ್ಣಿನ ಮೇಲೆ ಒತ್ತಡ ತರಲಿದೆ. ಇದರಿಂದ ನಿಮಗೆ ಕಣ್ಣಿನ ದೃಷ್ಟಿ ದೋಷ ಕಾಡಲಿದೆ. ಇದೇ ಕಾರಣಕ್ಕೆ ನೀವು ಸ್ಮಾರ್ಟ್‌ಫೋನ್ ಬಳಸುವಾಗ ಕಣ್ಣಿನ ರಕ್ಷಣೆಗಾಗಿ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಹೌದು, ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆ ನಿಮ್ಮ ಕಣ್ಣಿಗೆ ತೊಂದರೆ ಉಂಟುಮಾಡುವುದು ಸಾಮಾನ್ಯವಾಗಿದೆ. ಇದನ್ನು ಸ್ಮಾರ್ಟ್ ವಿಷನ್ ಸಿಂಡ್ರೋಮ್ ಅಂತಾ ಹೇಳಲಾಗುತ್ತದೆ. ಆದರೆ ಇದರಿಂದ ನಿಮಗೆ ಕುರುಡುತನ ಉಂಟಾಗುವುದಿಲ್ಲ ಬದಲಿಗೆ ನಿಮ್ಮ ದೃಷ್ಟಿಗೆ ಹಾನಿಯಾಗುವುದು ಖಂಡಿತ. ಆದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬಳಕೆ ಅತಿಯಾಗಿದ್ದರೆ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಕ್ಸ್ಟ ಸೈಜ್ ಜಾಸ್ತಿ ಮಾಡಿ
ಕಣ್ಣಿನ ಮೇಲೆ ಒತ್ತಡವನ್ನು ಕಡಿಮೆ ಮಾಡಬೇಕಾದರೆ ಸ್ಮಾರ್ಟ್‌ಫೋನ್‌ನಲ್ಲಿ ಟೆಕ್ಸ್ಟ್ ಸೈಜ್ ಅನ್ನು ಜಾಸ್ತಿ ಮಾಡುವುದು ಸೂಕ್ತ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳು ಕಾಂಟ್ರಾಸ್ಟ್, ಬ್ರೈಟ್‌ನೆಸ್ ಮತ್ತು ಟೆಕ್ಸ್ಟ್ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸಲು ನಿಮಗೆ ಅವಕಾಶ ನೀಡಿವೆ. ಆದರಿಂದ ನಿಮ್ಮ ಕಣ್ಣಿನ ಮೇಲೆ ಒತ್ತಡ ಉಂಟಾಗದಂತೆ ಮಾಡಬೇಕಾದರೆ ಟೆಕ್ಸ್ಟ್ ಸೈಜ್ ಹೆಚ್ಚಳ ಮಾಡಿರಿ. ಏಕೆಂದರೆ ಸ್ಮಾರ್ಟ್ ಸೈಜ್ ಟೆಕ್ಸ್ಟ್ ನಿಮ್ಮ ಕಣ್ಣುಗಳಿಗೆ ಹೆಚ್ಚು ಒತ್ತಡವನ್ನು ನೀಡುತ್ತದೆ.
ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ
ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡುವುದು ಕೂಡ ನಿಮ್ಮ ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಅತಿಯಾದ ಬ್ರೈಟ್‌ನೆಸ್ ನಿಮ್ಮ ಕಣ್ಣಿನ ಮೇಲೆ ಹೆಚ್ಚಿನ ಒತ್ತಡವನ್ನು ನೀಡಲಿದೆ ಅನ್ನೊದು ವರದಿಯಲ್ಲಿ ಬಹಿರಂಗವಾಗಿದೆ. ನಿಮ್ಮ ಪರಿಸರಕ್ಕೆ ಅನುಗುಣವಾಗಿ ನಿಮ್ಮ ಫೋನ್ ಬ್ರೈಟ್‌ನೆಸ್ ಅನ್ನು ಸೆಟ್ ಮಾಡುವುದಕ್ಕೆ ನೀವು ಸ್ವಯಂಚಾಲಿತ ಬ್ರೈಟ್‌ನೆಸ್ ಸೆಟ್ಟಿಂಗ್‌ಗಳನ್ನು ಸಹ ಆನ್ ಮಾಡಬಹುದು.
ಅಂತರ ಕಾಯ್ದುಕೊಳ್ಳಿ
ಸ್ಮಾರ್ಟ್‌ಫೋನ್ ಬಳಕೆ ಮಾಡುವಾಗ ಸಾದ್ಯವಾದಷ್ಟು ಕಣ್ಣು ಮತ್ತು ಫೋನ್ ನಡುವೆ ಅಂತರ ಕಾಯ್ದುಕೊಳ್ಳಿರಿ. ತಜ್ಞರ ಪ್ರಕಾರ, ನಿಮ್ಮ ಫೋನ್ ಪರದೆಯಲ್ಲಿ 16 ರಿಂದ 18 ಇಂಚುಗಳಷ್ಟು ದೂರದಿಂದ ನೀವು ಎಲ್ಲವನ್ನೂ ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ, ನಿಮ್ಮ ಫೋನ್ ಅನ್ನು ತುಂಬಾ ಹತ್ತಿರ ಹಿಡಿಯಬೇಡಿ. ತುಂಬಾ ಹತ್ತಿರದಿಂದ ನೋಡಿದಷ್ಟು ಕಣ್ಣಿನ ಮೇಲಿನ ಒತ್ತಡ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ನೀವು ತುಂಬಾ ಹತ್ತಿರದಿಂದ ನೋಡಬೇಕೆನಿಸಿದರೆ ಸ್ಕ್ರೀನ್ ಮೇಲೆ ಝೂಮ್ ಇನ್ ಮಾಡುವುದಕ್ಕೆ ಅಧ್ಯತೆ ನೀಡಿರಿ.
ನೈಟ್ ಮೋಡ್ ಬಳಸಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ನೈಟ್ ಮೋಡ್ ಫೀಚರ್ಸ್ ಅನ್ನು ಹೊಂದಿವೆ. ಇದರಿಂದ ರಾತ್ರಿಯಲ್ಲಿ ನಿಮ್ಮ ಕಣ್ಣುಗಳ ಮೇಲಿನ ಒತ್ತಡವನ್ನು ಆಟೋಮ್ಯಾಟಿಕ್ ಆಗಿ ಕಡಿಮೆ ಮಾಡಲಿದೆ. ಆದರಿಂದ ಸ್ಮಾರ್ಟ್‌ಫೋನ್‌ನಲ್ಲಿ ನೈಟ್‌ಮೋಡ್ ಫೀಚರ್ಸ್ ಆನ್ ಮಾಡುವುದು ಸೂಕ್ತವಾಗಲಿದೆ. ಇದರಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದಕ್ಕೆ ಇದು ಸುಲಭ ಮಾರ್ಗವಾಗಿದೆ.
ಕಣ್ಣು ಮಿಟುಕಿಸಲು ಮರೆಯಬೇಡಿ
ಸ್ಮಾರ್ಟ್‌ಫೋನ್ ಅನ್ನು ನೋಡುವಾಗ ಕಣ್ಣು ಮಿಟುಕಿಸದೆ ಇರಬೇಡಿ. ಯಾವುದೇ ವಿಷಯವನ್ನು ಓದುವಾಗ ನಿಯಮಿತವಾಗಿ ಕಣ್ಣು ಮಿಟುಕಿಸುವುದು ಸೂಕ್ತ. ಕಣ್ಣು ಮಿಟುಕಿಸದೆ ಮೊಬೈಲ್ ನೋಡಿದಷ್ಟು ನಿಮ್ಮ ಕಣ್ಣಿಗೆ ಅದು ತೊಂದರೆ ನೀಡಲಿದೆ. ಕಣ್ಣು ಮಿಟುಕಿಸಿಸುತ್ತಿದ್ದರೆ ಅದು ನಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿ ಬಾರಿ ನಾವು ಕಣ್ಣು ಮಿಟುಕಿಸುವಾಗ, ನಮ್ಮ ಕಣ್ಣುಗಳನ್ನು ತೇವವಾಗಿರಿಸಿಕೊಳ್ಳುತ್ತೇವೆ, ಇದರಿಂದ ನಮ್ಮ ಕಣ್ಣುಗಳನ್ನು ಪುನಃ ಕೇಂದ್ರೀಕರಿಸುವುದಕ್ಕೆ ಸಾದ್ಯವಾಗಲಿದೆ.
ಕತ್ತಲೆಯಲ್ಲಿ ಫೋನ್ ನೋಡುವುದಕ್ಕೆ ಹೋಗಬೇಡಿ
ಸ್ಮಾರ್ಟ್‌ಫೋನ್ ಅನ್ನು ಕತ್ತಲೆಯ ಸಮಯದಲ್ಲಿ ಹೆಚ್ಚು ನೋಡುವುದಕ್ಕೆ ಹೋಗಬೇಡಿ. ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್ ವೀಕ್ಷಣೆ ಮಾಡಿದಷ್ಟು ಕಣ್ಣಿನ ಮೇಲಿನ ಒತ್ತಡ ಅತಿಯಾಗಲಿದೆ ಅನ್ನೊದು ತಜ್ಞರ ಅಭಿಪ್ರಾಯವಾಗಿದೆ. ಆದರಿಂದ ಸ್ಮಾರ್ಟ್‌ಫೋನ್ ಅನ್ನು ಕತ್ತಲೆಯಲ್ಲಿ ಬಳಸುವುದಕ್ಕೆ ಅದ್ಯತೆ ನೀಡಬೇಡಿ.


Click it and Unblock the Notifications








