ಸೈಬರ್‌ ವಂಚನೆಯಿಂದ ರಕ್ಷಣೆ ಪಡೆದುಕೊಳ್ಳುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಖದೀಮರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದಲ್ಲ ಒಮದು ರೀತಿಯಲ್ಲಿ ಗ್ರಾಹಕರನ್ನ ಯಾಮಾರಿಸಿ ಸೈಬರ್‌ ವಂಚನೆ ನಡೆಯುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕುವುದಕ್ಕೆ ಸಾರ್ವಜನಿಕರಲ್ಲಿ ಇರುವ ಅಮಾಯಕತೆಯೆ ಕಾರಣ ಅನ್ನೊದು ಎಲ್ಲರಿಗೂ ತಿಳಿದಿರುವ ವಿಚಾರ. ಬಳಕೆದಾರರ ಅಮಾಯಕತೆ, ಆಸೆ, ತಂತ್ರಜ್ಞಾನ ಬಳಕೆ ಇತಿಮಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚನೆ ಜಾಲ ಊಹೆಗೆ ನಿಲುಕದ ಸ್ಥಿತಿಗೆ ತಲುಪಿದೆ. ವಂಚನೆಯನ್ನೇ ಕೆಲಸವನ್ನಾಗಿಸಿಕೊಂಡಿರುವ ವಂಚಕರು ನಾನಾ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಸೈಬರ್‌

ಹೌದು, ಇತ್ತೀಚಿಗೆ ವಂಚನೆ ನಡೆಸುವವರಿಗೆ ನೂರಾರು ಜಾಲಗಳಿವೆ. ಆದರಲ್ಲೂ ಕೊರೊನಾ ನಂತರ ಹೆಚ್ಚಿನ ಮಂದಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದು, ಇಂತಹವರನ್ನೇ ಸೈಬರ್‌ ವಂಚಕರು ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ನಡೆಯುವ ಮಿಟಿಂಗ್‌ ಅನ್ನೇ ಹೈಜಾಕ್‌ ಮಾಡುತ್ತಿದ್ದಾರೆ. ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳನ್ನೇ ಹ್ಯಾಕ್‌ ಮಾಡಿ ದತ್ತಾಂಶ ಕದಿಯುತ್ತಿದ್ದಾರೆ. ಇದೆಲ್ಲದವೂ ಒಮದು ಕಡೆ ಆದರೆ ಗ್ರಾಹಕರಿಗೆ ಭಾರಿ ಬಹುಮಾನ, ಬ್ಯಾಂಕ್‌ ಲೋನ್‌ ಮುಮತಾದ ಹೆಸರಿನಲ್ಲಿ ಯಾಮಾರಿಸಿ ಗ್ರಾಃಕರಿಂದ ಹಣ ಪೀಕುವುದು ಕೂಡ ನಡೆಯುತ್ತಿದೆ. ಹಾಗಾದ್ರೆ ಸೈಬರ್ ವಂಚನೆ ಜಾಲದಿಂದ ತಪ್ಪಿಸಿಕೊಳ್ಳುವುದು ಹೇಗೆ ಅನ್ನೊದಕ್ಕೆ ಈ ಲೇಖನದಲ್ಲಿ ಮಾಹಿತಿ ನೀಡ್ತೀವಿ ಓದಿರಿ.

ಫೇಸ್‌ಬುಕ್

ಮೊದಲನೆಯದಾಗಿ ಫೇಸ್‌ಬುಕ್, ಇನ್‌ಸ್ಟಗ್ರಾಂನಂತಹ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಚಯವಾದ ವ್ಯಕ್ತಿಗಳನ್ನ ತಕ್ಷಣ ನಂಬಬಾರದು. ಸೈಬರ್‌ ವಂಚಕರು ಕೂಡ ನಿಮ್ಮನ್ನು ವಂಚಿಸುವುದಕ್ಕಾಗಿ ಫೇಕ್‌ ಅಕೌಂಟ್‌ ಕ್ರಿಯೆಟ್‌ ಮಾಡಿ ಸ್ನೇಹಿತರಾಗಿರುತ್ತಾರೆ. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿಯೇ ನಕಲಿ ಅಕೌಂಟ್‌ ಕ್ರಿಯೆಟ್‌ ಮಾಡಿ ಹಣಕ್ಕಾಗಿ ರಿಕ್ವೆಸ್ಟ್‌ ಕಳುಹಿಸಿರುವ ಘಟನೆ ಕೂಡ ನಮ್ಮ ಕಣ್ನ ಮುಂದಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಅವರಿಗೆ ಸ್ಪಂದಿಸಬಾರದು ಎಂಬುದನ್ನು ತಿಳಿದಿರಿ.

ಆನ್‌ಲೈನ್‌

ಇನ್ನು ಯಾರೇ ಆಗಿರಲಿ ನಿಮ್ಮ ಯಾವುದೇ ಖಾಸಗಿ ವಿಷಯಗಳನ್ನು ಹಂಚಿಕೊಳ್ಳಬಾರದು. ಆದರಲ್ಲೂ, ಆನ್‌ಲೈನ್‌ನಲ್ಲಿ ಪರಿಚಯವಾಗುವ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಖಾಸಾಗಿ ಮಾಹಿತಿ ಸಿಗದಂತೆ ಎಚ್ಚರ ವಹಿಸಿ. ಇನ್ನು ನಿಮಗೆ ಕರೆ ಮಾಡುವ ಅಪರಿಚಿತ ವ್ಯಕ್ತಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ನಿರ್ಲಕ್ಷ್ಯ ತೋರುವುದು ಒಳ್ಳೆಯದು. ಬಹುತೇಕ ವಂಚಕರು ನಿಮಗೆ ತಿಳಿಯದ ಭಾಷೆಯಲ್ಲಿ ಹೆದರಿಸಿ ಅಥವಾ ಆಸೆ ಹುಟ್ಟಿಸಿ ನಿಮ್ಮಿಂದ ಹಣವನ್ನು ಸುಲಿಗೆ ಮಾಡುತ್ತಾರೆ.

ಬ್ಯಾಂಕ್‌

ಎಲ್ಲದಕ್ಕಿಂತ ಮುಖ್ಯವಾಗಿ ಬ್ಯಾಂಕ್‌ ಖಾತೆ ವಿವರ ಹಂಚಿಕೊಳ್ಳದಿರುವುದು ಬಹಳ ಅವಶ್ಯಕವಾಗಿದೆ. ಯಾವ ಬ್ಯಾಂಕ್ ಅಧಿಕಾರಿ ಕೂಡ ನಿಮ್ಮಿಂದ ಯಾವುದೇ ಮಾಹಿತಿಯನ್ನು ಪೋನ್ ಅಥವಾ ಇ ಮೇಲ್ ಮೂಲಕ ಪಡೆಯುವುದಿಲ್ಲ. ಹಾಗಾಗಿ, ನಿಮ್ಮ ಯಾವುದೇ ಚಿಕ್ಕ ಬ್ಯಾಂಕ್ ಮಾಹಿತಿಯನ್ನೂ ಕೂಡ ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದಲ್ಲದೆ ದುಬಾರಿ ಮೌಲ್ಯದ ಉಡುಗೊರೆ ನೀಡುವ ಆಮಿಷವು ವಂಚನೆಯ ದಾರಿ ಎಂಬುದು ನಿಮಗೆ ನೆನಪಿರಲಿ. ನಿಮ್ಮ ಮೊಬೈಲ್ ನಂಬರ್‌ಗೆ ಬಹುಮಾನ ಬಂದಿದೆ ಎಂಬುದು ಅಪ್ಪಟ ಸುಳ್ಳು. ಅದು ಕೂಡ ಯಾರೋ ಒಬ್ಬ ನಿಮಗೆ ಬಹುಮಾನ ಬಂದಿದೆ ಎಂದು ಕರೆ ಮಾಡುವುದು ಅಪ್ಪಟ ನಕಲಿ ಎಂಬುದು ನೆನಪಿರಲಿ.

ಸಾಮಾಜಿಕ

ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಶೇರ್‌ ಮಾಡಬಾರದು, ತಮ್ಮ ಮೊಬೈಲ್‌ ನಂಬರ್‌ ನೊಂದಾಯಿಸದಿರುವುದು ಸೂಕ್ತ. ಮಹಿಳೆಯರು ಈ ಬಗ್ಗೆ ಮತ್ತಷ್ಟು ಜಾಗೃತರಾಗಿದ್ದರೆ ಒಳ್ಳೆಯದು. ಇದರಿಂದ ನಿಮ್ಮನ್ನು ವಂಚಿಸಲು ಅವರಿಗೆ ಸುಲಭ ದಾರಿ ಸಿಗದು. ನಿಮ್ಮ ಎಟಿಎಂ ಕಾರ್ಡ್‌ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕಾರ್ಡ್ ಮೇಲಿನ ಯಾವುದೇ ನಂಬರ್ ಅನ್ನು ಇತರರ ಬಳಿ ಹಂಚಿಕೊಳ್ಳಬಾರದು. ಅದರಲ್ಲಿ ಒಟಿಪಿಯನ್ನು ಮಾತ್ರ ಹಂಚಿಕೊಳ್ಳಲೇಬಾರದು. ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರಗಳನ್ನು ಅಳವಡಿಸಿರುವ ಬಗ್ಗೆ ಒಮ್ಮೆ ಚೆಕ್ ಮಾಡಿದರೆ ಒಳಿತು.

Best Mobiles in India

English summary
In times of great social importance, it’s common for predators to strike. True to form, cyber criminals have developed a brand new scam.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X