Home
ಸುದ್ದಿಜಾಲ

ಗೂಗಲ್‌ ಫೋಟೋಸ್‌ನಲ್ಲಿ ಫೋಟೋ ಆಲ್ಬಮ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ!

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಒಂದಾದ ಗೂಗಲ್‌ ಫೋಟೋಸ್‌ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ನಿಫ್ಟಿ ಫೀಚರ್ಸ್‌ ಕೂಡ ಒಂದಾಗಿದೆ. ಈ ಫೀಚರ್ಸ್‌ ನಿಮಗೆ ಗೂಗಲ್‌ ಫೋಟೋಸ್‌ನಲ್ಲಿ ಆಲ್ಬಮ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಈ ಆಲ್ಬಮ್‌ ಅನ್ನು ಎಲ್ಲರಿಗೂ ಶೇರ್‌ ಮಾಡಹುದಾಗಿದೆ.

ಹೌದು, ಗೂಗಲ್‌ ಫೋಟೋಸ್‌ನಲ್ಲಿ ಆಲ್ಬಮ್‌ ಅನ್ನು ಕ್ರಿಯೆಟ್‌ ಮಾಡಬಹುದು. ಅಲ್ಲದೆ ಈ ಆಲ್ಬಮ್‌ ಅನ್ನು ಬೇರೆಯವರಿಗೆ ಕೂಡ ಶೇರ್‌ ಮಾಡಬಹುದಾಗಿದೆ. ಇದರಿಂದ ನೀವು ಮತ್ತು ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ಚಿತ್ರಗಳನ್ನು ಒಂದೇ ಆಲ್ಬಮ್‌ನಲ್ಲಿ ಸೇರಿಸಬಹುದು. ಹಾಗಾದ್ರೆ ಗೂಗಲ್‌ ಫೋಟೋಸ್‌ನಲ್ಲಿ shared albums ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಫೋಟೋಸ್‌ನಲ್ಲಿ ಫೋಟೋ ಆಲ್ಬಮ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ!

ಗೂಗಲ್‌ ಫೋಟೋಸ್‌ನಲ್ಲಿ shared albums ಕ್ರಿಯೆಟ್‌ ಮಾಡುವುದು ಹೇಗೆ?
* ಮೊದಲಿಗೆ ನಿಮ್ಮ Android ಸ್ಮಾರ್ಟ್‌ಫೋನ್ ಅಥವಾ iPhone ನಲ್ಲಿ Google ಫೋಟೋಸ್‌ ಪ್ರಾರಂಭಿಸಿ
* ಹೊಸ shared albumsಗೆ ನೀವು ಸೇರಿಸಲು ಬಯಸುವ ಫೋಟೋಗಳು ಅಥವಾ ವೀಡಿಯೊಗಳನ್ನು ಆಯ್ಕೆಮಾಡಿ.
* ಇದರಲ್ಲಿ ನೀವು ಹಲವು ಚಿತ್ರಗಳನ್ನು ಸೇರಿಸಲು ಬಯಸಿದರೆ, ಥಂಬ್‌ನೇಲ್‌ನ ಮೇಲಿನ ಎಡಭಾಗದಲ್ಲಿರುವ ಚೆಕ್‌ಬಾಕ್ಸ್‌ಗಳನ್ನು ಬಳಸಿಕೊಂಡು ಅವುಗಳನ್ನು ಆಯ್ಕೆಮಾಡಿ.
* ನಂತರ ಮೇಲಿನ ಬಾರ್‌ನಲ್ಲಿ ಗೋಚರಿಸುವ '+' ಬಟನ್ ಮೇಲೆ ಟ್ಯಾಪ್ ಮಾಡಿ
* ಇದೀಗ ಕಾಣಿಸಿಕೊಳ್ಳುವ ಮೆನುವಿನಲ್ಲಿ, 'ಹಂಚಿಕೊಂಡ ಆಲ್ಬಮ್' ಮೇಲೆ ಟ್ಯಾಪ್ ಮಾಡಿ.
* ನಂತರ, shared albums ಆಲ್ಬಮ್‌ಗೆ ಹೆಸರನ್ನು ನೀಡಿರಿ.
* ಇದಕ್ಕಾಗಿ ಮೇಲಿನ ಬಲಭಾಗದಲ್ಲಿರುವ 'shared' ಬಟನ್ ಒತ್ತಿರಿ.
* ನಂತರ, ಕ್ರಿಯೇಟ್‌ ಮಾಡಿದ ಆಲ್ಬಮ್ ಅನ್ನು ಹಂಚಿಕೊಳ್ಳುವ ಆಯ್ಕೆ ಕಾಣಿಸಿಕೊಳ್ಳಲಿದೆ
* ಇದರಲ್ಲಿ, ನೀವು ಆಲ್ಬಮ್‌ಗೆ ಲಿಂಕ್ ಪಡೆಯಬಹುದು
* ಇಲ್ಲವೇ ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಕಳುಹಿಸಲು ಆಯ್ಕೆ ಮಾಡಬಹುದು.
* ಮುಂದಿನ ವಿಂಡೋದಲ್ಲಿ, ನೀವು ಅವರ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ಹೊಸ ಜನರನ್ನು ಸೇರ್ಪಡೆ ಮಾಡಬಹುದು.

ಗೂಗಲ್‌ ಫೋಟೋಸ್‌ನಲ್ಲಿ ಫೋಟೋ ಆಲ್ಬಮ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ!

ಇನ್ನು ಈ ಫೋಟೋಸ್‌ ಶೇರ್‌ ಲಿಂಕ್‌ ಹೊಂದಿರುವ ಪ್ರತಿಯೊಬ್ಬರೂ ಆಲ್ಬಮ್‌ಗೆ ಸೇರಿಸಲಾದ ಫೋಟೋಗಳನ್ನು ನೋಡಲು ಸಾಧ್ಯವಾಗಲಿದೆ. ಆದರೆ ನೀವು ಪ್ರವೇಶವನ್ನು ಅನುಮತಿಸಿದವರಿಗೆ ಮಾತ್ರ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸುವುದಕ್ಕೆ ಅವಕಾಶ ಸಿಗಲಿದೆ.

ಇದಲ್ಲದೆ ಗೂಗಲ್‌ ಇತ್ತೀಚಿಗೆ ತನ್ನ ಬಾರ್ಡ್ ಅನ್ನು ಈಗ ಜೆಮಿನಿ ಅಡ್ವಾನ್ಸ್ಡ್ ಎಂದು ಮರು ನಾಮಕಾರಣ ಮಾಡಿದೆ. ಅಲ್ಲದೆ ಇದಕ್ಕಾಗಿ ಆಂಡ್ರಾಯ್ಡ್‌ನಲ್ಲಿ ಹೊಸ ಜೆಮಿನಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. iOS ನಲ್ಲಿನ ಗೂಗಲ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಜೆಮಿನಿ ಅಡ್ವಾನ್ಸ್‌ ಅನ್ನು ಪ್ರವೇಶಿಸಬಹುದಾಗಿದೆ. ಗೂಗಲ್ ಜೆಮಿನಿಯ ಹೊಸ ಆವೃತ್ತಿಯನ್ನು ಅಲ್ಟ್ರಾ ಎಂದು ಹೆಸರಿಸಲಾಗಿದೆ. ಈ ಮಾದರಿಯು ಗೂಗಲ್‌ನ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಅತ್ಯಾಧುನಿಕ AI ಮಾದರಿಯಾಗಿದೆ ಎಂದು ಗೂಗಲ್ ಹೇಳಿದೆ.

ಇದು ಸಂಕೀರ್ಣ ಕಾರ್ಯಗಳಲ್ಲಿ ಹೆಚ್ಚು ಪ್ರವೀಣವಾಗಿದ್ದು, ಬಳಕೆದಾರರು ಸುದೀರ್ಘವಾದ, ಹೆಚ್ಚು ವಿವರವಾದ ಸಂಭಾಷಣೆಗಳನ್ನು ಹೊಂದಬಹುದು ಎಂದು ಗೂಗಲ್ ಹೇಳಿಕೊಂಡಿದೆ. ಇದರೊಂದಿಗೆ ಜೆಮಿನಿ ಅಡ್ವಾನ್ಸ್ಡ್ ಹೆಚ್ಚು ಸನ್ನಿವೇಶವನ್ನು ಹೊಂದಿದ್ದು, ಸುಧಾರಿತ ಕೋಡಿಂಗ್‌ನಲ್ಲಿ ಉತ್ತಮವಾಗಿದೆ. ಗೂಗಲ್‌ ತನ್ನ ಬ್ಲಾಗ್‌ನಲ್ಲಿ ವಿವರಿಸಿರುವಂತೆ ಜೆಮಿನಿ ಅಡ್ವಾನ್ಸ್ಡ್‌ ಹೆಚ್ಚು ವಿಕಸನಗೊಂಡಿದೆ. ಇದು ಸಂಪೂರ್ಣ ಎಕೋ ಸಿಸ್ಟಂ ಅನ್ನು ಬೆಂಬಲಿಸಲಿದ್ದು, ಮೊಬೈಲ್‌ನಲ್ಲಿಯೂ ಕೂಡ ಬಳಕೆಮಾಡಬಹುದಾಗಿದೆ. ಇನ್ನು ಪ್ರತಿದಿನ ಶತಕೋಟಿ ಜನರು ಬಳಸುವ ಉತ್ಪನ್ನಗಳಿಂದ, ಡೆವಲಪರ್‌ಗಳು ಮತ್ತು ವ್ಯವಹಾರಗಳಿಗೆ ಸಹಾಯ ಮಾಡುವ API ಗಳು ಮತ್ತು ಪ್ಲಾಟ್‌ಫಾರ್ಮ್‌ಗಳವರೆಗೆ ಜೆಮಿನಿ ಅಡ್ವಾನ್ಸ್‌ ಅನ್ನು ವಿಸ್ತರಿಸಲಾಗಿದೆ.

Best Mobiles in India

English summary
How to quickly create a shared albums on Google Photos: Details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+