Gmail ನಲ್ಲಿ ಇ-ಮೇಲ್ ಅನ್ನು ರಿಟ್ರೈವ್ ಮಾಡುವುದು ಹೇಗೆ?
ಜಾಗತಿಕವಾಗಿ ಅತೀ ಹೆಚ್ಚು ಬಳಕೆದಾರರು ಬಳಸುವ ಅಪ್ಲಿಕೇಶನ್‌ಗಳಲ್ಲಿ ಗೂಗಲ್‌ನ Gmail ಅಪ್ಲಿಕೇಶನ್ ಸಹ ಒಂದಾಗಿದೆ. ಈಗಾಲೇ Gmail ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹಲವು ಅಗತ್ಯ ಫೀಚರ್ಸ್‌ಗಳನ್ನು ನೀಡಿದೆ. ಇನ್ನು ಬಹುತೇಕ ಬಳಕೆದಾರರು ತಮ್ಮ ಸಂಸ್ಥೆ ಅಥವಾ ಸ್ನೇಹಿತರಿಗೆ ಇಲ್ಲವೇ ಯಾರಿಗೆ ಅದರೂ ಇ-ಮೇಲ್ ಮಾಡುವಾಗ ಕೆಲ ಇ-ಮೇಲ್ ಮಾಹಿತಿ ತಪ್ಪಾಗಿದ್ದರೆ ಏನು ಮಾಡುವುದು ಅನ್ನೊ ಆಲೋಚನೆಯಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಇ-ಮೇಲ್ ಕಳುಹಿಸುವಾಗ ಬಹಳ ಸೂಕ್ಷ್ಮವಾಗಿ ಗಮನಿಸಿ ಇಮೇಲ್ ಮಾಡುತ್ತಾರೆ. ಆದರೂ ಇಮೇಲ್ ಕಳುಹಿಸುವಾಗ ತಪ್ಪು ಮಾಹಿತಿ ಅಥವಾ ಇಮೇಲ್ ತಪ್ಪಾಗಿ ಸೆಂಡ್ ಆಗಿದ್ದರೆ ಅದನ್ನು ಅನ್‌ಸೆಂಡ್ ಕೂಡ ಮಾಡಬಹುದಾಗಿದೆ.

ಹೌದು, ಜಿ-ಮೇಲ್‌ನಲ್ಲಿ ನೀವು ಯಾರಿಗಾದರೂ ಇ-ಮೇಲ್ ಕಳುಹಿಸುವಾಗ ಕೆಲವೊಮ್ಮೆ ತಪ್ಪುಗಳೂ ಉಂಟಾಗುವುದು ಸಹಜ. ಇಂತಹ ಸಮಯದಲ್ಲಿ ನೀವು ಕಳುಹಿಸಿರುವ ಇ-ಮೇಲ್ ಮಾಹಿತಿ ತಪ್ಪಾಗಿದ್ದರೆ ಅದು ಅನ್‌ಸೆಂಡ್ ಬಾಕ್ಸ್‌ನಲ್ಲಿ ಬಂದು ಕುಳಿತಿರುತ್ತೆ. ಅನ್‌ಸೆಂಡ್ ಇಮೇಲ್ ಅನ್ನು ಮೇಲ್ ಕಳುಹಿಸಿದ ನಂತರ ಅದನ್ನು ಮರುಪಡೆಯಲು ನಿಮಗೆ ಸ್ವಲ್ಪ ಸಮಯ ಸಿಗುತ್ತದೆ. ಅಲ್ಲದೆ ನೀವು ಇಮೇಲ್ ಕಳುಹಿಸಿದಾಗ, ರದ್ದುಗೊಳಿಸು ಬಟನ್ ಪರದೆಯ ಮೇಲೆ ಗೋಚರಿಸುತ್ತದೆ, ನೀವು ಸೆಟ್ಟಿಂಗ್‌ಗಳಲ್ಲಿ ಟೈಮರ್ ಅನ್ನು ಹೊಂದಿಸಿದ್ದರೆ ಅದು ಗರಿಷ್ಠ 30 ಸೆಕೆಂಡುಗಳವರೆಗೆ ಲಬ್ಯವಿರಲಿದೆ. ಹಾಗಾದ್ರೆ ಇಮೇಲ್ ಅನ್ನು ಅನ್ಸೆಂಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೀವು Gmail ನಲ್ಲಿ ಇ-ಮೇಲ್ ಸೆಂಡ್ ಮಾಡಿದ ತಕ್ಷಣ Cancel ಬಟನ್ ಕೂಡ ಕಾಣಲಿದೆ. ಆದರೆ ನೀವು ಬೇರೆ ಯಾವುದೇ ಆಯ್ಕೆಯನ್ನು ಒತ್ತಿದರೆ, Cancel ಬಟನ್ ತಕ್ಷಣವೇ ಕಣ್ಮರೆಯಾಗುತ್ತದೆ. ಏಕೆಂದರೆ ನಿಮ್ಮ ಜಿ-ಮೇಲ್ ಪೇಜ್ ರಿಫ್ರೆಶ್ ಆಗುತ್ತದೆ. ಒಬ್ಬರು ಬ್ರೌಸರ್ ಅಥವಾ ಜಿಮೇಲ್ ಅಪ್ಲಿಕೇಶನ್‌ನಿಂದ ಸಂದೇಶಗಳನ್ನು ಕಳುಹಿಸಬಹುದು. ಆದರೆ Gmail ನಲ್ಲಿ ಗೂಗಲ್ ನಿಮಗೆ ಗೌಪ್ಯ ಮೋಡ್ ಅನ್ನು ಸಹ ನೀಡುತ್ತದೆ, ಇದು ಉತ್ತಮ ಆಯ್ಕೆಯಾಗಿದ್ದು, ನೀವು ಈ ಮೋಡ್ ಅನ್ನು ಸಕ್ರಿಯಗೊಳಿಸಿದರೆ, ಸ್ವೀಕರಿಸುವವರಿಗೆ ಇಮೇಲ್ ಅನ್ನು ಫಾರ್ವರ್ಡ್ ಮಾಡಲು, ನಕಲಿಸಲು, ಮುದ್ರಿಸಲು ಅಥವಾ ಡೌನ್‌ಲೋಡ್ ಮಾಡಲು ಅವಕಾಶವಿರುವುದಿಲ್ಲ. ಇದರಿಂದ ನೀವು ಕಳುಹಿಸಿರುವ ಇ-ಮೇಲ್ ತಪ್ಪಾಗಿದ್ದರೆ ಅದನ್ನು ಮರುಪಡೆಯಬಹುದು ಮತ್ತು ಅದನ್ನು ರದ್ದುಗೊಳಿಸಲು ಸಮಯವನ್ನು ಆರಿಸಿಕೊಳ್ಳಬಹುದು. ಇದು ಹೇಗೆ ಸಾಧ್ಯವಾಗಲಿದೆ ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

Gmail ನಲ್ಲಿ ಇಮೇಲ್ ಅನ್ನು ರಿಟ್ರೈವ್ ಅಥವಾ ಅನ್ಸೆಂಡ್ ಮಾಡುವುದು ಹೇಗೆ?
ಹಂತ 1: ನೀವು ಇ-ಮೇಲ್ ಕಳುಹಿಸಿದ ನಂತರ ಅದನ್ನು ನೀವು ರಿಟ್ರೈವ್ ಮಾಡಲು ಬಯಸಿದರೆ ನೀವು ಸಂದೇಶವನ್ನು ಕಳುಹಿಸಿದ ತಕ್ಷಣ, ನೀವು ಅದನ್ನು ಹಿಂತೆಗೆದುಕೊಳ್ಳಬಹುದು
ಹಂತ 2: ಇ-ಮೇಲ್‌ನ ಕೆಳಗಿನ ಎಡಭಾಗದಲ್ಲಿ, ನೀವು "Message sent " ಮತ್ತು "Cancel" ಅಥವಾ "View Message" ಆಯ್ಕೆಯನ್ನು ನೋಡುತ್ತೀರಿ.
ಹಂತ 3: ಇದರಲ್ಲಿ cancel ಬಟನ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಇ-ಮೇಲ್ ಅನ್‌ಸೆಂಡ್ ಆಗಲಿದೆ.

ಸಂದೇಶವನ್ನು ನೆನಪಿಸಿಕೊಳ್ಳಲು ಟೈಂ ಸೆಟ್ ಮಾಡುವುದು ಹೇಗೆ?
ಹಂತ 1: ನಿಮ್ಮ ನಿಮ್ಮ ಕಂಪ್ಯೂಟರ್‌ನಲ್ಲಿ, Gmail ಗೆ ಹೋಗಿ.
ಹಂತ 2: ಮೇಲಿನ ಬಲಭಾಗದಲ್ಲಿ, ಸೆಟ್ಟಿಂಗ್ಸ್ ನಲ್ಲಿ ಇ-ಮೇಲ್ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಿ ಮತ್ತು ನಂತರ ಎಲ್ಲಾ ಸೆಟ್ಟಿಂಗ್‌ಗಳನ್ನು ನೋಡಿ.
ಹಂತ 3: ಇದರಲ್ಲಿ "Cancel Send" ಪಕ್ಕದಲ್ಲಿ, 5, 10, 20, ಅಥವಾ 30 ಸೆಕೆಂಡುಗಳ ಕಳುಹಿಸುವ ರದ್ದತಿ ಅವಧಿಯನ್ನು ಆರಿಸಿ. ಈ ಮೂಲಕ ಇ-ಮೇಲ್ ಟೈಂ ರಿಮೆಂಬರ್ ಅನ್ನು ಸೆಟ್ ಮಾಡಬಹುದಾಗಿದೆ.


Click it and Unblock the Notifications