UMANG ಅಪ್ಲಿಕೇಶನ್‌ ಮೂಲಕ COVID-19 ಲಸಿಕೆಗಾಗಿ ಹೆಸರು ನೋಂದಾಯಿಸುವುದು ಹೇಗೆ?

|

ಕೊರೊನಾ ಎರಡನೇ ಅಲೆ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದರ ನಡುವೆ ಕೋವಿಡ್‌ ವ್ಯಾಕ್ಸಿನೇಷನ್‌ ಅಭಿಯಾನಕೂಡ ನಡೆಯುತ್ತಿದೆ. ಇನ್ನು ಇದೇ ಮೇ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು COVID-19 ವೈರಸ್‌ಗೆ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಭಾರತ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಇಂದು ಸಂಜೆ 4 ಗಂಟೆಯ ನಂತರ ಲಸಿಕೆ ಹಾಕಿಸಿಕೊಳ್ಳಲು ಬಯಸುವವರು ಕೋವಿನ್ ಪೋರ್ಟಲ್ ಅಥವಾ ಆರೋಗ್ಯಾ ಸೇತು ಅಪ್ಲಿಕೇಶನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಅಲ್ಲದೆ ಉಮಾಂಗ್ ಅಪ್ಲಿಕೇಶನ್ ಮೂಲಕ ಕೂಡ ನೀವು ಕೋವಿಡ್‌ ಲಸಿಕೆ ಪಡೆಯಲು ಹೆಸರು ನೋಂದಾಯಿಸಬಹುದಾಗಿದೆ.

ಕೋವಿಡ್‌

ಹೌದು, 18-44 ವಯಸ್ಸಿನ ಜನರು ಕೋವಿಡ್‌-19 ಲಸಿಕೆ ಪಡದುಕೊಳ್ಳಲು ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಕೋವಿನ್‌ ಪೋರ್ಟಲ್‌, ಆರೋಗ್ಯಾ ಸೇತು ಅಪ್ಲಿಕೇಶನ್‌ಗಳಲ್ಲಿ ಅವಕಾಶ ನೀಡಲಾಗಿದೆ. ಆದರೂ ನೀವು ಉಮಾಂಗ್‌ ಅಪ್ಲಿಕೇಶನ್‌ ಬಳಸಿ ನಿಮ್ಮ ಹೆಸರನ್ನು ನೋಂದಾಯಿಸಬಹುದು. ಹೆಸರು ನೋಂದಣಿಯ ನಂತರ, ನಿಗದಿತ ದಿನಾಂಕದಂದು ಎಷ್ಟು ವ್ಯಾಕ್ಸಿನೇಷನ್ ಕೇಂದ್ರಗಳು ಸಿದ್ಧವಾಗಿವೆ ಎಂಬುದರ ಆಧಾರದ ಮೇಲೆ ನೋಂದಾಯಿತ ಸದಸ್ಯರಿಗೆ ನಿಗದಿತ ದಿನಗಳಂದು ಲಸಿಕೆ ನೀಡಲಿದೆ. ಹಾಗಾದ್ರೆ ಉಮಾಂಗ್‌ ಅಪ್ಲಿಕೇಶನ್‌ ಬಳಸಿ 18-44 ವಯಸ್ಸಿನ ಜನರು ಹೆಸರು ನೋಂದಾಯಿಸಿಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

UMANG ಅಪ್ಲಿಕೇಶನ್‌ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ

UMANG ಅಪ್ಲಿಕೇಶನ್‌ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ

ಹಂತ:1 UMANG ಅಪ್ಲಿಕೇಶನ್ ತೆರೆಯಿರಿ ಮತ್ತು ಆರೋಗ್ಯ ಟ್ಯಾಬ್ ಅನ್ನು ಟ್ಯಾಪ್ ಮಾಡಿ. ಅಲ್ಲಿ ನೀವು ‘ಕೋವಿನ್' ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ:2 ‘ರಿಜಿಸ್ಟರ್ ಅಥವಾ ಲಾಗಿನ್ ಫಾರ್ ವ್ಯಾಕ್ಸಿನೇಷನ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
ಹಂತ:4 ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ‘ವೆರಿಪೈ ಒಟಿಪಿ' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಫೋಟೋ ಐಡಿ ಗುರುತು ಅಪ್‌ಲೋಡ್ ಮಾಡಿ ಮತ್ತು ನಿಮ್ಮ ಹೆಸರು, ಫೋಟೋ ಐಡಿ ಸಂಖ್ಯೆ, ಹುಟ್ಟಿದ ವರ್ಷ ಮತ್ತು ಲಿಂಗವನ್ನು ಟೈಪ್ ಮಾಡಿ. ನಂತರ ಸಲ್ಲಿಸು ಟ್ಯಾಪ್ ಮಾಡಿ.

ಟ್ಯಾಪ್

ಹಂತ:6 ಇದರ ನಂತರ, ಫಲಾನುಭವಿಯನ್ನು ಸೇರಿಸಿದ ಪಾಪ್-ಅಪ್ ಅನ್ನು ನೀವು ಪಡೆಯುತ್ತೀರಿ, ಒಕೆ ಟ್ಯಾಪ್ ಮಾಡಿ.
ಹಂತ:7 ನಂತರ ಹೊಸ ಪುಟದಲ್ಲಿ, ‘ಆಡ್‌ ಮೋರ್‌' ಬಟನ್‌ ಟ್ಯಾಪ್ ಮಾಡುವ ಮೂಲಕ ಇನ್ನೂ ನಾಲ್ಕು ಫಲಾನುಭವಿಗಳನ್ನು ಸೇರಿಸುವ ಆಯ್ಕೆಯನ್ನು ನೀವು ನೋಡುತ್ತೀರಿ.
ಹಂತ:8 ಎಲ್ಲಾ ಫಲಾನುಭವಿಗಳನ್ನು ಸೇರಿಸಿದ ನಂತರ, ನೀವು ಎಲ್ಲಾ ಫಲಾನುಭವಿಗಳನ್ನು ಆಯ್ಕೆ ಮಾಡಿ ಮತ್ತು ‘Schedule Appointment' ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:9 ನಿಮ್ಮ ಪಿನ್‌ಕೋಡ್ ಅನ್ನು ಹುಡುಕಿ ನಂತರ ದಿನಾಂಕ ಮತ್ತು ಲಸಿಕೆ ಆಯ್ಕೆಮಾಡಿ.
ಹಂತ:10 ಈಗ ನೀವು ಲಸಿಕೆ ಪಡೆಯುವ ಇನಾಕ್ಯುಲೇಷನ್ ಕೇಂದ್ರಗಳ ಪಟ್ಟಿಯನ್ನು ಪಡೆಯುತ್ತೀರಿ.

ಟ್ಯಾಪ್

ಹಂತ:11 ನಿಮ್ಮ ಆದ್ಯತೆಯ ಕೇಂದ್ರದಲ್ಲಿ ವೀಕ್ಷಣೆ ಸಮಯ ಸ್ಲಾಟ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:12 ಸಮಯ ಸ್ಲಾಟ್ ಆಯ್ಕೆಮಾಡಿ ಮತ್ತು ದೃಡೀಕರಿಸಿ ಟ್ಯಾಪ್ ಮಾಡಿ.
ಹಂತ:13 ಇದರ ನಂತರ, ನಿಮ್ಮ ನೇಮಕಾತಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ದೃಡೀಕರಣ ಸಂದೇಶವನ್ನು ನೀವು ಪಡೆಯುತ್ತೀರಿ.
ಹಂತ:14 ನೀವು ನೋಂದಾಯಿಸಿದ ನಂತರ, ನಿಮ್ಮನ್ನು ಪರಿಶೀಲಿಸಲು ನಿಮ್ಮ ಫೋಟೋ ಐಡಿಯನ್ನು ಕೊಂಡೊಯ್ಯಲು ನೆನಪಿನಲ್ಲಿಡಿ, ನೀವು ಯಾವುದೇ ಕೊಮೊರ್ಬಿಡಿಟಿಗಳನ್ನು ಹೊಂದಿದ್ದರೆ, ಅದಕ್ಕಾಗಿ ವೈದ್ಯಕೀಯ ಪ್ರಮಾಣಪತ್ರವನ್ನು ತೆಗೆದುಕೊಳ್ಳಿ.

Best Mobiles in India

English summary
How to register for the COVID-19 vaccine on the UMANG app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X