ಮಿಸ್ಡ್‌ ಕಾಲ್‌ ಮೂಲಕ ನಿಮ್ಮ ವಾಟ್ಸಾಪ್‌ ಖಾತೆಯನ್ನು ನೋಂದಾಯಿಸಲು ಹೀಗೆ ಮಾಡಿ?

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ವಾಟ್ಸಾಪ್‌ನಲ್ಲಿ ನಿಮ್ಮ ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಬೇಕಾದರೆ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಅಲ್ಲದೆ ನೀವು ಈಗಾಗಲೇ ವಾಟ್ಸಾಪ್‌ ಅಕೌಂಟ್‌ ಹೊಂದಿದ್ದು, ರೀ ಎಂಟ್ರಿ ಮಾಡಿದಾಗಲೂ ನಿಮ್ಮ ಫೋನ್ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಿದೆ. ಇದು ನಿಮ್ಮ ಅಕೌಂಟ್‌ ಅನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲಿದೆ.

ವಾಟ್ಸಾಪ್‌

ಹೌದು, ನೀವು ವಾಟ್ಸಾಪ್‌ ಅಕೌಂಟ್‌ ಕ್ರಿಯೆಟ್‌ ಮಾಡಬೇಕಾದರೆ ಮೊಬೈಲ್‌ ಸಂಖ್ಯೆಯನ್ನು ಹೊಂದುವುದು ಅಗತ್ಯ. ನಿಮ್ಮ ಸಂಖ್ಯೆಯನ್ನು ನಮೂದಿಸುವ ಮೂಲಕ ಖಚಿತಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಅಲ್ಲದೆ ನಿಮ್ಮ ಖಾತೆಯನ್ನು ಯಶಸ್ವಿಯಾಗಿ ನೋಂದಾಯಿಸಲು, ನಿಮ್ಮ ಡಿವೈಸ್‌ನಲ್ಲಿ ಸಕ್ರಿಯ ಸಿಮ್ ಕಾರ್ಡ್ ಅನ್ನು ನೀವು ಹೊಂದಿರಬೇಕು. ನೀವು ಮೊಬೈಲ್‌ನಂಬರ್‌ ಅನ್ನು ನೋಂದಾಯಿಸಲು ಸಂದೇಶವನ್ನು ಕಳುಹಿಸಲಾಗುತ್ತದೆ. ಆದರೆ ನೀವು ಮಿಸ್ಡ್‌ ಕಾಲ್‌ ಮೂಲಕ ಕೂಡ ನಿಮ್ಮ ವಾಟ್ಸಾಪ್‌ ಅಕೌಂಟ್‌ ಕ್ರಿಯೆಟ್‌ ಮಾಡಬಹುದು ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ನೀವು ವಾಟ್ಸಾಪ್‌ ಅಕೌಂಟ್‌ ಕ್ರಿಯೆಟ್‌ ಮಾಡುವಾ ಎರಡು ವಿಧದ ಮಾದರಿಗಳನ್ನು ನೋಡಬಹುದು. ಮೊದಲನೆಯದಾಗಿ ನೀವು ಹೊಸ ಖಾತೆಯನ್ನು ರಚಿಸುವಾಗ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಖಾತೆಯನ್ನು ರೀ ಎಂಟ್ರಿ ಮಾಡುವಾಗ ರಿಜಿಸ್ಟರ್‌ ಸ್ಕ್ರೀನ್‌ ಕಾಣಲಿದೆ. ಇಲ್ಲಿ ನೀವು ಫೋನ್ ಸಂಖ್ಯೆಯನ್ನು ಹೊಂದಿದ್ದೀರಿ ಎಂದು ಖಚಿತಪಡಿಸಲು, SMS ಅಥವಾ ಫೋನ್ ಕರೆ ಮೂಲಕ ನಿಮಗೆ ಕಳುಹಿಸಲಾದ 6-ಅಂಕಿಯ ನೋಂದಣಿ ಕೋಡ್ ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನೋಂದಣಿ ಕೋಡ್‌ನೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸುವುದು ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಆದರೆ ನಿಮ್ಮ ಫೋನ್‌ನಲ್ಲಿ ಕೋಡ್ ಅನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುವುದು ಬಹುಮುಖ್ಯವಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಯಶಸ್ವಿಯಾಗಿ ನೋಂದಾಯಿಸಿದ ನಂತರ ಎರಡು-ಹಂತದ ಪರಿಶೀಲನೆ ಪರದೆಯು ಕಾಣಿಸಿಕೊಳ್ಳುತ್ತದೆ. ಎರಡು-ಹಂತದ ಪರಿಶೀಲನೆಯು ನಿಮ್ಮ ವಾಟ್ಸಾಪ್‌ ಖಾತೆಗೆ ಹೆಚ್ಚಿನ ಭದ್ರತೆಯನ್ನು ಸೇರಿಸುವ ಐಚ್ಛಿಕ ವೈಶಿಷ್ಟ್ಯವಾಗಿದೆ. ಇನ್ನು ವಾಟ್ಸಾಪ್‌ನಲ್ಲಿ ಫೋನ್‌ ಸಂಖ್ಯೆಯನ್ನು ಸಕ್ರಿಯಗೊಳಿಸುವುದಕ್ಕಾಗಿ ಫೋನ್ ಕರೆ ಅಥವಾ SMS ಮೂಲಕ ನಿಮ್ಮ ಫೋನ್ ಸಂಖ್ಯೆಯನ್ನು ನೀವು ಹೊಂದಿರುವಿರಿ ಎಂದು ನೀವು ಪರಿಶೀಲಿಸಬಹುದು. ಫೋನ್ ಕರೆ ಮೂಲಕ ನಿಮ್ಮ ಖಾತೆಯನ್ನು ಪರಿಶೀಲಿಸುವ ಆಯ್ಕೆಯನ್ನು ನೀವು ಹೊಂದಿದ್ದರೆ, ನೀವು ವಾಟ್ಸಾಪ್‌ನಿಂದ ಮಿಸ್ಡ್ ಕಾಲ್ ಮೂಲಕ ಪರಿಶೀಲನೆಯನ್ನು ಪೂರ್ಣಗೊಳಿಸಬಹುದು.

ಎಸ್‌ಎಂಎಸ್‌

ಒಂದು ವೇಳೆ ನೀವು ಈ ಎಸ್‌ಎಂಎಸ್‌ ಹಾಗೂ ಮಿಸ್ಡ್‌ ಕಾಲ್‌ ಎರಡೂ ಅನುಮತಿಗಳನ್ನು ಅನುಮತಿಸಿದರೆ, ನೀವು ಫೋನ್ ಕರೆಯನ್ನು ಸ್ವೀಕರಿಸುತ್ತೀರಿ ಮತ್ತು ನೋಂದಣಿಯನ್ನು ಪೂರ್ಣಗೊಳಿಸಿದ ನಂತರ ಆಟೋಮ್ಯಾಟಿಕ್‌ ಕಾಲ್‌ ಡಿಸ್‌ಕನೆಕ್ಟ್‌ ಆಗಲಿದೆ. ಹಾಗಂತ ನೀವು ಫೋನ್ ಕರೆಯನ್ನು ಸ್ವೀಕರಿಸುವ ಅಗತ್ಯವಿಲ್ಲ. ನೋಂದಣಿಯನ್ನು ಪೂರ್ಣಗೊಳಿಸುವ ಮೊದಲು ಈ ಅನುಮತಿಗಳನ್ನು ನಿರಾಕರಿಸಲು ನೀವು ಆರಿಸಿದರೆ, ನೀವು SMS ಮೂಲಕ ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಬೇಕು. ಪ್ರಾಂಪ್ಟ್ ಮಾಡಿದಾಗ, ನೋಂದಣಿಯನ್ನು ಪೂರ್ಣಗೊಳಿಸಲು SMS ಮೂಲಕ ನಿಮಗೆ ಕಳುಹಿಸಲಾದ 6-ಅಂಕಿಯ ನೋಂದಣಿ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.

Best Mobiles in India

English summary
Users can register their WhatsApp account with just a missed call.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X