Paytm ನಲ್ಲಿ ಪ್ರೈಮರಿ ಬ್ಯಾಂಕ್ ಅಕೌಂಟ್ ಬದಲಾಯಿಸುವುದು ಹೇಗೆ?
Paytm ಜನಪ್ರಿಯ ನಗದು ಪಾವತಿ ಆಪ್ಲಿಕೇಶನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆದ್ರೆ ಕೆಲ ದಿನಗಳ ಹಿಂದೆಯಷ್ಟೇ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಪೇಟಿಎಂ ಅನ್ನು ಕಿತ್ತೆಸೆದಿತ್ತು. ತನ್ನ ಮಾರ್ಗ ಸೂಚಿಗಳನ್ನ ಪಾಲಿಸುವಲ್ಲಿ ಪೇಟಿಎಂ ವಿಫಲವಾಗಿದೆ ಎಂದು ಕಾರಣ ನೀಡಿತ್ತು. ಆದರೆ ಎರಡು ದಿನಗಳ ನಂತರ ಮತ್ತೆ ಪೆಟಿಎಂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಪೇಟಿಎಂ ಕುರಿತು ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಇಷ್ಟು ದಿನ ಪೇಟಿಎಂಗೆ ಸೆಟ್ ಮಾಡಿದ್ದ ಪ್ರೈಮರಿ ಬ್ಯಾಂಕ್ ಅಕೌಂಟ್‌ಗಳನ್ನ ಬದಲಾಯಿಸುವುದರ ಕಡೆಗೆ ಗ್ರಾಹಕರು ಗಮನ ಹರಿಸಿದ್ದಾರೆ.

ಹೌದು, ಪೇಟಿಎಂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತೆ ಕಾಣಿಸಿಕೊಂಡಿರಬಹುದು, ಆದರೆ ಗ್ರಾಹಕರ ಹಲವು ಅನುಮಾನಗಳು ಇನ್ನು ಬದಲಾಗಿಲ್ಲ. ಇದೇ ಕಾರಣಕ್ಕೆ ಪೇಟಿಎಂ ನಲ್ಲಿ ಇರುವ ನಿಮ್ಮ ಪ್ರೈಮರಿ ಬ್ಯಾಂಕ್ ಅಕೌಂಟ್ ಅನ್ನು ಪೇಟಿಎಂ ಸೇವೆಯಿಂದ ತೆಗೆದುಹಾಕಲು ನೀವು ಬಯಸಿದರೆ, ಅದನ್ನು ಯಾವುದೇ ಸಮಯದಲ್ಲಿ ಮಾಡಬಹುದು. ಇದಕ್ಕಾಗಿ ನೀವು ಹಲವು ಹಂತಗಳನ್ನ ಅನುಸರಿಸಬೇಕಿದೆ. ಅದು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೇಟಿಎಂನಲ್ಲಿ ಪ್ರೈಮರಿ ಅಕೌಂಟ್ ಅಂದರೆ ನೀವು ಡಿಜಿಟಲ್ ವ್ಯಾಲೆಟ್ ಅನ್ನು ಸ್ಥಾಪಿಸುವಾಗ ನೀವು ಸೇರಿಸುವ ಪ್ರಾಥಮಿಕ ಬ್ಯಾಂಕ್ ಖಾತೆಯಾಗಿದೆ. ನಿಮ್ಮ Paytm UPI ಗೆ ಲಿಂಕ್ ಮಾಡಲು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸೇರಿಸಲು ನಿಮ್ಮನ್ನು ಕೇಳಲಾಗುತ್ತದೆ. ಇದನ್ನೇ ಪೇಟಿಎಂ ಅಪ್ಲಿಕೇಶನ್ ಡೀಫಾಲ್ಟ್ ಬ್ಯಾಂಕ್ ಖಾತೆ ಸಂಖ್ಯೆಯಾಗಿ ಪರಿಗಣಿಸಿರುತ್ತದೆ. ಅಲ್ಲದೆ ನೀವು Paytm ಗೆ ಅನೇಕ ಬ್ಯಾಂಕ್ ಖಾತೆಗಳನ್ನು ಸೇರಿಸಿದರೆ, ನಂತರ ನೀವು ಯಾವ ಅಕೌಂಟ್ ಮೂಲಕ ಹಣಕಾಸು ವ್ಯವಹಾರಗಳನ್ನು ನಡೆಸುಯತ್ತೀರೋ ಅದನ್ನು ಪ್ರೈಮರಿ ಬ್ಯಾಂಕ್ ಅಕೌಂಟ್ ಆಗಿ ಆಯ್ಕೆ ಮಾಡಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

Paytm ನಲ್ಲಿ ಪ್ರೈಮರಿ ಬ್ಯಾಂಕ್ ಅಕೌಂಟ್ ಬದಲಾಯಿಸುವುದು ಹೇಗೆ?
ಹಂತ:1 ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇನ್ನಾವುದೇ ಡಿವೈಸ್‌ನಲ್ಲಿ Paytm ಅಪ್ಲಿಕೇಶನ್ ತೆರೆಯಿರಿ
ಹಂತ:2 ಈಗ, ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ
ಹಂತ:3 ನೀವು ಸೆಟ್ಟಿಂಗ್‌ಗಳನ್ನು ತೆರೆದ ನಂತರ, ಪೇಮೆಂಟ್ ಸೆಟ್ಟಿಂಗ್‌ಗಳಿಗೆ ಹೋಗಿ ನಿಮ್ಮ ಸೇವಿಂಗ್ ಪೇಮೆಂಟ್ ವಿವರಗಳನ್ನು ತೆರೆಯಿರಿ
ಹಂತ:4 ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾದ ಎಲ್ಲಾ ಬ್ಯಾಂಕ್ ಖಾತೆ ಸಂಖ್ಯೆಗಳ ಪಟ್ಟಿ ಮತ್ತು ಅಸ್ತಿತ್ವದಲ್ಲಿರುವ ಪ್ರೈಮರಿ ಬ್ಯಾಂಕ್ ಅಕೌಂಟ್ ಇಲ್ಲಿ ಕಾಣಲಿದೆ.
ಹಂತ:5 ಈಗ, ನೀವು Paytm UPI ಗಾಗಿ ಸೇರಿಸಲು ಬಯಸುವ ಪ್ರಾಥಮಿಕ ಬ್ಯಾಂಕ್ ಖಾತೆಯನ್ನು ಆರಿಸಿ ಮತ್ತು ಅದನ್ನು ದೃಡೀಕರಿಸಬೇಕಾಗುತ್ತದೆ.

Paytm ನಲ್ಲಿ ಪ್ರೈಮರಿ ಬ್ಯಾಂಕ್ ಅಕೌಂಟ್ ಅನ್ನು ತೆಗೆದುಹಾಕುವ ಕ್ರಮಗಳು!
ಹಂತ:1 ನೀವು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇನ್ನಾವುದೇ ಡಿವೈಸ್‌ನಲ್ಲಿ Paytm ಅಪ್ಲಿಕೇಶನ್ ತೆರೆಯಿರಿ
ಹಂತ:2 ಪ್ರೊಫೈಲ್ ಐಕಾನ್‌ನಲ್ಲಿ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ
ಹಂತ:3 ನೀವು ಸೆಟ್ಟಿಂಗ್‌ಗಳನ್ನು ತೆರೆದ ನಂತರ, ನಿಮ್ಮ ಸೇವಿಂಗ್ ಪೇಮೆಂಟ್ ವಿವರಗಳನ್ನು ತೆರೆಯಿರಿ
ಹಂತ:4 ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾದ ಎಲ್ಲಾ ಬ್ಯಾಂಕ್ ಖಾತೆ ಸಂಖ್ಯೆಗಳ ಪಟ್ಟಿ ಮತ್ತು ಅಸ್ತಿತ್ವದಲ್ಲಿರುವ ಪ್ರೈಮರಿ ಬ್ಯಾಂಕ್ ಅಕೌಂಟ್ ಇಲ್ಲಿ ಕಾಣಲಿದೆ.
ಹಂತ:5 Paytm UPI ನಲ್ಲಿ ನೋಂದಾಯಿಸಲಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಆಯ್ಕೆಮಾಡಿ
ಹಂತ:6 Remove bank ಆಯ್ಕೆಯನ್ನು ಟ್ಯಾಪ್ ಮಾಡಿ ಮಾಡಿದರೆ ನಿಮ್ಮ ಪ್ರೈಮರಿ ಬ್ಯಾಂಕ್ ಅಕೌಂಟ್ ಅನ್ನು ತೆಗೆದುಹಾಕಬಹುದಾಗಿದೆ.


Click it and Unblock the Notifications