ಆಫ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡಲು ಹೀಗೆ ಮಾಡಿ?
ಪ್ರಸ್ತುತ ದಿನಗಳಲ್ಲಿ ನೀವು ಯಾವುದೇ ಅಪ್ಲಿಕೇಶನ್ ತೆರೆದಾಗಲೂ ಜಾಹಿರಾತುಗಳು ಆಗಾಗ ಕಾಣಿಸಿಕೊಳ್ಳುವುದನ್ನು ಕಾಣುತ್ತೀರಿ. ಕೆಲವು ಸಮಯದಲ್ಲಿ ಕಾಣಿಸಿಕೊಳ್ಳುವ ಜಾಹಿರಾತುಗಳು ನಿಮಗೆ ಕಿರಿಕಿರಿ ಎನಿಸೋದು ಖಂಡಿತ. ಅದರಲ್ಲೂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೇಮ್‌ಗಳನ್ನು ಆಡುತ್ತಿರುವಾಗ ಮಧ್ಯದಲ್ಲಿ ಜಾಹಿರಾತು ಬಂದರೆ ಬೇಸರವಾಗೋದು ಸಹಜ. ಇದೇ ಕಾರಣಕ್ಕೆ ಕೆಲವು ಸಂದರ್ಭದಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ.

ಹೌದು, ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ ಮಾತ್ರವಲ್ಲ ಆಫ್‌ಲೈನ್ ಗೇಮ್ ಆಡುವಾಗಲೂ ಜಾಹಿರಾತುಗಳು ಆಗಾಗ ಬರುತ್ತಲೇ ಇರುತ್ತವೆ. ಇದನ್ನು ತಪ್ಪಿಸುವುದಕ್ಕಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಅವಕಾಶವಿದೆ. ಹೊಸ ಆಂಡ್ರಾಯ್ಡ್ ಆವೃತ್ತಿ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್‌ಗಳಿಂದ ಜಾಹಿರಾತನ್ನು ಕಡಿತಗೊಳಿಸಲು ನಿಮಗೆ ಅನುಮತಿಸುತ್ತದೆ. ಹಾಗಾದ್ರೆ ಆಫ್‌ಲೈನ್ ಗೇಮ್‌ನಲ್ಲಿ ಜಾಹಿರಾತು ನಿರ್ಬಂದ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಫ್‌ಲೈನ್ ಗೇಮ್‌ಗಳು ಹಾಗೂ ಆಫ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಮೊದಲೇ ಜಾಹೀರಾತುಗಳನ್ನು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಲಾಗಿರುತ್ತದೆ. ಇದನ್ನು ಆಫ್‌ಲೈನ್ ಗೇಮ್ ಆಡುವಾಗ ಮಧ್ಯಂತರದಲ್ಲಿ ಡಿಸ್‌ಪ್ಲೇ ಆಗುವಂತೆ ಸೆಟ್ ಮಾಡಲಾಗಿರುತ್ತದೆ. ಆದರೆ ಇಂಟರ್‌ನೆಟ್ ಸಂಪರ್ಕ್ ಇಲ್ಲದ ಸಮಯದಲ್ಲಿಯೂ ಈ ರೀತಿ ಆಗೋದನ್ನು ತಡೆಯಬಹುದಾಗಿದೆ. ನಿರ್ದಿಷ್ಟ ಅಪ್ಲಿಕೇಶನ್ ಅಥವಾ ಗೇಮ್‌ಗೆ ಡೇಟಾ ಮತ್ತು ವೈಫೈ ಪ್ರವೇಶವನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸುವ ಮೂಲಕ ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದಾಗಿದೆ.

ಆಫ್‌ಲೈನ್ ಗೇಮ್‌ಗಳಲ್ಲಿ ಜಾಹೀರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ರಿಸ್ಟೋರ್ ಮಾಡಿ, ಆದರೆ ಅದನ್ನು ತಕ್ಷಣವೇ ತೆರೆಯಬೇಡಿ.
ಆಫ್‌ಲೈನ್‌ನಲ್ಲಿಯೂ ಜಾಹಿರಾತು ಪ್ರದರ್ಶಿಸುವ ಅಪ್ಲಿಕೇಶನ್ ಅಥವಾ ಗೇಮ್ ಅನ್ನು ಅನ್‌ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ಏಕೆಂದರೆ ಈ ಅಪ್ಲಿಕೇಶನ್/ಗೇಮ್‌ನ ಅಪ್ಲಿಕೇಶನ್ ಡೇಟಾ ಫೋಲ್ಡರ್‌ನಲ್ಲಿ ಕ್ಲೀನ್ ಸ್ಲೇಟ್ ಅಗತ್ಯವಿದೆ. ಅಪ್ಲಿಕೇಶನ್/ಗೇಮ್ ಅನ್ನು ರಿಸ್ಟೋರ್ ಮಾಡಿದ ನಂತರ ಏಕಾಏಕಿ ತೆರೆಯಲು ಹೋಗಬಾರದು.
ಹಂತ:2 ಅಪ್ಲಿಕೇಶನ್/ಗೇಮ್‌ನ 'app info'' ಪೇಜ್ ತೆರೆಯಿರಿ
ನೀವು ಯಾವ ಅಪ್ಲಿಕೇಶನ್‌ನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡಲು ಬಯಸುತ್ತೀರೋ ಆ ಅಪ್ಲಿಕೇಶನ್‌ನ 'app info' ಪೇಜ್ ಓಪನ್ ಮಾಡಿ. ಈ ವಿಧಾನ ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸದಿದ್ದರೆ, ನಿಮ್ಮ ನಿರ್ದಿಷ್ಟ Android ಸ್ಕಿನ್/ROM ನಲ್ಲಿ ಅಪ್ಲಿಕೇಶನ್ ಮಾಹಿತಿ ಪುಟವನ್ನು ತೆರೆಯಿರಿ.
ಹಂತ:3 ಇಂಟರ್ನೆಟ್ ಸಂಪರ್ಕ ಕಡಿತ
'app info' ಪೇಜ್‌ನಲ್ಲಿ 'ನೆಟ್‌ವರ್ಕ್', 'ಮೊಬೈಲ್ ಡೇಟಾ ಮತ್ತು ವೈಫೈ' ವಿಭಾಗವನ್ನು ನೋಡಿ. ಇದರಲ್ಲಿ ವೈಫೈ ಅಥವಾ ಮೊಬೈಲ್ ಡೇಟಾದಲ್ಲಿ ಸಂಪರ್ಕಿಸಿದಾಗ ಇಂಟರ್ನೆಟ್‌ಗೆ ಆ ಅಪ್ಲಿಕೇಶನ್‌ನ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ನೀವು ಹೆಚ್ಚಿನ ಆಯ್ಕೆಗಳನ್ನು ಹುಡುಕಬೇಕು. ಇವುಗಳನ್ನು ಆಫ್ ಮಾಡುವ ಮೂಲಕ ನಿಮ್ಮ ಅಪ್ಲಿಕೇಶನ್ ಯಾವುದೇ ರೀತಿಯಲ್ಲೂ ಇಂಟರ್‌ನೆಟ್ ಕನೆಕ್ಟ್ ಆಗದಂತೆ ಮಾಡಬಹುದು. ಏಕೆಂದರೆ ಇದು ಆಫ್‌ಲೈನ್ ಅಪ್ಲಿಕೇಶನ್ ಆಗಿರುವುದರಿಂದ ಇಂಟರ್‌ನೆಟ್ ಅವಶ್ಯಕತೆ ಇರುವುದಿಲ್ಲ. ಇಂಟರ್‌ನೆಟ್ ಕನೆಕ್ಟ್ ಆದರೆ ಜಾಹಿರಾತುಗಳು ಬರುತ್ತವೆ. ಆದರಿಂದ ಇಂಟರ್‌ನೆಟ್ ಇಲ್ಲದೆ ಹೋದರೆ ಜಾಹಿರಾತು ಪ್ರದರ್ಶನಕ್ಕೆ ತಡೆ ಹಾಕಲಿದೆ.

ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್ ಬಳಸುವಾಗ ಜಾಹಿರಾತು ಕಿರಿ ಕಿರಿ ತಡೆಯಲು ಸ್ಮಾರ್ಟ್‌ಫೋನ್‌ನಲ್ಲಿ ಆಡ್ ಬ್ಲಾಕರ್ ಆಪ್ ಬಳಕೆ ಮಾಡಬಹುದಾಗಿದೆ. ಇದು ಸ್ಮಾರ್ಟ್‌ಫೋನ್ ಜಾಹಿರಾತುಗಳನ್ನು, ಇಂಟರ್ನೆಟ್ ಬಳಕೆಯ ವೇಳೆಯ ಜಾಹಿರಾತುಗಳನ್ನು ಮತ್ತು ಸರ್ಚ್ ಇಂಜಿನ್ ಆಪ್‌ಗಳಲ್ಲಿ ಬ್ರೌಸ್ ಮಾಡುವಾಗ ಕಾಣಿಸುವ ಜಾಹಿರಾತುಗಳನ್ನು ತಡೆಯಲಿದೆ. ಆಂಡ್ರಾಯ್ಡ್ ಫೋನಿನಲ್ಲಿ ad-blocker APK ಪ್ಲಸ್ ಆಪ್ ಅನ್ನು ಇನ್‌ಸ್ಟಾಲ್ ಮಾಡುವ ಮೂಲಕ ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದು. ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸುವುದು ಸೂಕ್ತ. ಏಕೆಂದರೆ ಪ್ಲೇ ಸ್ಟೋರ್‌ನಲ್ಲಿ ಅದೆಷ್ಟೊ ಆಪ್‌ಗಳು ಜಾಹೀರಾತುಗಳಿಗಾಗಿಯೇ ಮೀಸಲಿರುತ್ತವೆ. ಅವುಗಳಲ್ಲಿ ಉಪಯುಕ್ತವಾದ ಆಪ್‌ಗಳನ್ನು ನೀವು ಇನ್‍ಸ್ಟಾಲ್ ಮಾಡುವಾಗ ಅನೇಕ ಅನುಮತಿಗಳ ಕೋರಿಕೆಯನ್ನು ಆಪ್ ನಿಮ್ಮ ಮುಂದಿಡುತ್ತದೆ. ಹಾಗಾಗಿ, ಇನ್‌ಸ್ಟಾಲ್ ಮಾಡುವ ಮುನ್ನ ಜಾಗರೂಕತೆಯಿಂದ ಆ ಮಾಹಿತಿಯನ್ನು ಓದಿ ನಂತರ ಅದಕ್ಕೆ ಅನುಮತಿಯನ್ನು ನೀಡಿ. ಹೀಗೆ ಮಾಡುವ ಮೂಲಕ ನಿಮ್ಮ ಅಪ್ಲಿಕೇಶನ್‌ಗಳಲ್ಲಿ ಜಾಹಿರಾತುಗಳನ್ನು ನಿರ್ಬಂಧ ಮಾಡಬಹುದಾಗಿದೆ.


Click it and Unblock the Notifications








