PDF ಫೈಲ್‌ಗಳ ಪಾಸ್‌ವರ್ಡ್ ಪ್ರೊಟೆಕ್ಷನ್ ತೆಗೆದುಹಾಕಬೇಕೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಇಂದಿನ ದಿನಗಳಲ್ಲಿ ಪಿಡಿಎಫ್ ಫೈಲ್‌ಗಳನ್ನು ಪಾಸ್‌ವರ್ಡ್ ಸೆಟ್ ಮಾಡಿ ಸೆಂಡ್ ಮಾಡುವುದು ಸಾಮಾನ್ಯವಾಗಿದೆ. ಪಾಸ್‌ವರ್ಡ್ ಸೆಟ್ ಆಗಿರುವ ಪಿಡಿಎಫ್ ಫೈಲ್‌ಗಳು ಸಾಕಷ್ಟು ಸುರಕ್ಷಿತವಾಗಿರಲಿವೆ. ಇದರಿಂದ ಈ ಫೈಲ್‌ಗಳನ್ನು ಪಾಸ್‌ವರ್ಡ್ ಇಲ್ಲದೆ ತೆರೆಯುವುದಕ್ಕೆ ಸಾದ್ಯವಾಗುವುದಿಲ್ಲ ಅನ್ನೋದು ಗಮನಿಸಬೇಕಾದ ಸಂಗತಿಯಾಗಿದೆ.
ಹೌದು, ಪಾಸ್‌ವರ್ಡ್ ಸೆಟ್ ಆಗಿರುವ ಪಿಡಿಎಫ್ ಫೈಲ್‌ಗಳು ಸಾಕಷ್ಟು ಸೆಕ್ಯೂರ್ ಆಗಿರುತ್ತವೆ. ಆದರೆ ಕೆಲವೊಮ್ಮೆ ಪಿಡಿಎಫ್ ಫೈಲ್‌ಗಳಿಗೆ ನೀಡಿರುವ ಪಾಸ್‌ವರ್ಡ್ ಪ್ರೊಟೆಕ್ಷನ್ ತೆಗೆದುಹಾಕುವುದಕ್ಕೆ ಕೂಡ ಅವಕಾಶವಿದೆ. ಆದರೆ ಇದಕ್ಕಾಗಿ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಪಾಸ್‌ವರ್ಡ್ ಮೂಲಕ ಪ್ರೊಟೆಕ್ಟ್ ಆಗಿರುವ ಪಿಡಿಎಫ್ ಫೈಲ್‌ನಿಂದ ಪಾಸ್‌ವರ್ಡ್ ತೆಗೆದುಹಾಕುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಾಸ್ವರ್ಡ್ ನಮೂದಿಸುವ ಮೂಲಕ ಪಿಡಿಎಫ್ ಫೈಲ್‌ಗಳನ್ನು ಪ್ರತಿಭಾರಿಯು ತೆರೆಯುವುದಕ್ಕೆ ಕಷ್ಟವಾದರೆ ಪಾಸ್‌ವರ್ಡ್ ರಿಮೂವ್ ಮಾಡಬಹುದು. ಆದರೆ ನೇರವಾಗಿ ಪಾಸ್‌ವರ್ಡ್ ಪ್ರೊಟೆಕ್ಷನ್ ತೆಗೆದುಹಾಕುವುದಕ್ಕೆ ಅವಕಾಶವಿಲ್ಲ. ಇದಕ್ಕಾಗಿ ನೀವು ಪಾಸ್‌ವರ್ಡ್ ಪ್ರೊಟೆಕ್ಟ್ ಆಗಿರುವ ಪಿಡಿಎಫ್ ಫೈಲ್ ಅನ್ನು ತೆರೆದು ನಂತರ ಕೆಲವು ಕ್ರಮಗಳನ್ನು ಅನುಸರಿಸಿ ಪಿಡಿಎಫ್ ಫೈಲ್ ಪಾಸ್‌ವರ್ಡ್‌ಗಳನ್ನು ತೆಗೆದುಹಾಕಬಹುದಾಗಿದೆ.
ಪಿಡಿಎಫ್ ಫೈಲ್ ಪಾಸ್‌ವರ್ಡ್‌ಗಳನ್ನು ರಿಮೂವ್ ಮಾಡುವುದು ಹೇಗೆ?
* ಮೊದಲಿಗೆ ಪಾಸ್‌ವರ್ಡ್ ಸೆಟ್ ಆಗಿರುವ ಪಿಡಿಎಫ್ ಫೈಲ್ ತೆರೆಯಿರಿ
* ಈ ಫೈಲ್‌ಗಳನ್ನು ಪಾಸ್‌ವರ್ಡ್ ಮೂಲಕವೇ ತೆರೆಯಬೇಕಾಗುತ್ತದೆ
* ನಂತರ ಪಿಡಿಎಫ್ ಫೈಲ್ ಅನ್ನು ಪ್ರಿಂಟ್ ಮಾಡುವ ಆಯ್ಕೆ ಟ್ಯಾಪ್ ಮಾಡಿ
* ಪ್ರಿಂಟ್ ಮಾಡಲು ಒಕೆ ಆದಾಗ ನಿಮಗೆ 'ಸೇವ್ ಪಿಡಿಎಫ್' ಆಯ್ಕೆ ಕಾಣಿಸಲಿದೆ
* ಇದರಲ್ಲಿ ಸೇವ್ ಪಿಡಿಎಫ್ ಆಯ್ಕೆಯನ್ನು ಟ್ಯಾಪ್ ಮಾಡಿ
* ಇದೀಗ ನಿಮ್ಮ ಪಿಡಿಎಫ್ ಫೈಲ್‌ನ ನಕಲಿ ಫೈಲ್ ಸೇವ್ ಆಗಲಿದೆ
ಈ ಫೈಲ್ ಅನ್ನು ನೀವು ಪಾಸ್‌ವರ್ಡ್ ಇಲ್ಲದೆ ಸುಲಭವಾಗಿ ತೆರೆಯಬಹುದಾಗಿದೆ.
ಐಫೋನ್‌ನಲ್ಲಿ PDF ಫೈಲ್ ಪಾಸ್‌ವರ್ಡ್ ರಿಮೂವ್ ಮಾಡಲು ಹೀಗೆ ಮಾಡಿ
* ಮೊದಲಿಗೆ ಐಫೋನ್‌ನಲ್ಲಿ PDF ಎಕ್ಸ್‌ಪರ್ಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
* ಇದೀಗ ಅಪ್ಲಿಕೇಶನ್‌ನ ಮೆನುಗೆ ಹೋಗಿ ಮತ್ತು ಫೈಲ್‌ಗಳ ಫೋಲ್ಡರ್ ತೆರೆಯಿರಿ
* ಇದರಲ್ಲಿ ಪಾಸ್‌ವರ್ಡ್ ತೆಗೆದುಹಾಕಲು ಬಯಸುವ PDF ಫೈಲ್ ಆಯ್ಕೆಮಾಡಿ
* ನಂತರ ಪಾಸ್‌ವರ್ಡ್ ಎಂಟ್ರಿ ಮಾಡಿ ಪಿಡಿಎಫ್ ಫೈಲ್ ತೆರೆಯಿರಿ
* ಇದೀಗ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
* ಇದರಲ್ಲಿ ಚೇಂಜ್ ಪಾಸ್ವರ್ಡ್ ಆಯ್ಕೆ ಕಾಣಿಸಲಿದೆ ಅದನ್ನು ಟ್ಯಾಪ್ ಮಾಡಿ
* ಇದೀಗ ಪಾಸ್‌ವರ್ಡ್ ತೆಗೆದುಹಾಕಿ ಕ್ಲಿಕ್ ಮಾಡಿ
* ನಿಮ್ಮ PDF ಫೈಲ್‌ನಿಂದ ಪಾಸ್‌ವರ್ಡ್ ಅನ್ನು ತೆಗೆದುಹಾಕಲಾಗುತ್ತದೆ.
ವೆಬ್‌ಪೇಜ್ ಅನ್ನು PDF ರೂಪದಲ್ಲಿ ಸೇವ್ ಮಾಡುವುದು ಹೇಗೆ?
* ಮೊದಲಿಗೆ ನೀವು PDF ಫೈಲ್‌ನಲ್ಲಿ ಸೇವ್ ಮಾಡಲು ಬಯಸುವ ವೆಬ್‌ಪೇಜ್ ಅನ್ನು ತೆರೆಯಿರಿ.
* ಇದೀಗ ಕೆಳಭಾಗದಲ್ಲಿ ಕಾಣಿಸುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮಗೆ ಶೇರ್ ಪಾಪ್-ಅಪ್ ವಿಂಡೋದ ಮೇಲ್ಭಾಗದಲ್ಲಿ "ಆಯ್ಕೆಗಳು" ಬಟನ್ ಅನ್ನು ಕಾಣಿಸಲಿದೆ
* ಆಯ್ಕೆಗಳು ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ಇದರಲ್ಲಿ PDF ಫೈಲ್ ಆಯ್ಕೆಯನ್ನು ಟ್ಯಾಪ್ ಮಾಡಿರಿ
* ಇದೀಗ ಡನ್ ಆಯ್ಕೆಯ ಬಟನ್ ಕ್ಲಿಕ್ ಮಾಡಿರಿ.
* ನಂತರ "Save it to Files" ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ವೆಬ್‌ಪೇಜ್ ಅನ್ನು PDF ಫೈಲ್ ರೂಪದಲ್ಲಿ ಸೇವ್ ಮಾಡಬಹುದಾಗಿದೆ.


Click it and Unblock the Notifications








