Home
ಸುದ್ದಿಜಾಲ

Instagram ರೀಲ್ಸ್‌ನಲ್ಲಿ ಹಾಡನ್ನು ಸೇವ್‌ ಮಾಡುವುದು ಹೇಗೆ?

ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿರುವ ಇನ್‌ಸ್ಟಾಗ್ರಾಮ್ ಈಗಾಗಲೇ ಹಲವು ಫಿಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಇತ್ತೀಚಿಗಷ್ಟೇ ತನ್ನ ಹೊಸ ಆಪ್ಡೇಟ್‌ ಅನ್ನು ಸಹ ನೀಡಿದೆ. ಇದಲ್ಲದೆ ಟಿಕ್‌ಟಾಕ್‌ಗೆ ಪರ್ಯಾಯವಾಗಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಅನ್ನು ಸಹ ಪರಿಚಯಿಸಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಟಿಕ್‌ಟಾಕ್‌ನಂತೆಯೆ ಶಾರ್ಟ್‌ ವೀಡಿಯೋಗಳನ್ನು ಕ್ರಿಯೆಟ್‌ ಮಾಡಲು ಅವಕಾಶವಿದೆ. ಅಲ್ಲದೆ ಈ ರೀಲ್ಸ್‌ನಲ್ಲಿ ಕಂಪ್ಲೀಟ್‌ ಆಡಿಯೊ ಕ್ಲಿಪ್‌ಗಳನ್ನು ಸೇವ್‌ ಮಾಡಿ ಮತ್ತು ಶೇರ್‌ಮಾಡುವ ಅವಕಾಶ ಕೂಡ ಇದೆ.

ಇನ್‌ಸ್ಟಾಗ್ರಾಮ್

ಹೌದು, ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಸಾಕಷ್ಟು ಆಪ್ಡೇಟ್‌ ಆಗಿದ್ದು, ಬಳಕೆದಾರರಿಗೆ ಹೊಸ ಅನುಭವ ಸಿಗಲಿದೆ. ಇದರಲ್ಲಿ ಆಡಿಯೊ ಬ್ರೌಸರ್ ಅನ್ನು ಆಪ್ಡೇಟ್‌ ಮಾಡಲಾಗಿದ್ದು, ಆಡಿಯೊವನ್ನು ಸೇವ್‌ ಮಾಡುವ ಮತ್ತು ನಿರ್ದಿಷ್ಟ ಆಡಿಯೊದೊಂದಿಗೆ ರೀಲ್‌ ಪೇಜ್‌ಗಳನ್ನು ಡಿಎಂಗಳ ಮೂಲಕ ಯಾರಿಗಾದರೂ ಹಂಚಿಕೊಳ್ಳುವ ಅವಕಾಶವಿದೆ. ಅಲ್ಲದೆ ನಿಮ್ಮ ಸ್ವಂತ ರೀಲ್‌ಗಳನ್ನು ಕ್ರಿಯೆಟ್‌ ಮಾಡಲು ಅವಕಾಶವಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ರೀಲ್‌ನಲ್ಲಿ ಹಾಡುಗಳನ್ನ ಸೇವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ರೀಲ್ಸ್‌ನಲ್ಲಿನ ಆಡಿಯೊ ಆಯ್ಕೆಯಲ್ಲಿ ನಿಮಗೆ "ಟ್ರೆಂಡಿಂಗ್" ಮತ್ತು "ನಿಮಗಾಗಿ" ವಿಭಾಗಗಳನ್ನು ತೋರಿಸುತ್ತದೆ. ಇದರಲ್ಲಿರುವ ಆಡಿಯೋವನ್ನು ಸೇವ್‌ ಮಾಡುವುದಕ್ಕೆ ಮೊದಲು ನೀವು ಮೂಲತಃ ಇಷ್ಟಪಡುವ ಆಡಿಯೊವನ್ನು ಹುಡುಕಲು ರೀಲ್‌ಗಳನ್ನು ನೋಡಬೇಕು. ರೀಲ್‌ಗಳನ್ನು ಹುಡುಕಲು ಡಿಸ್ಕವರಿ ಟ್ಯಾಬ್‌ಗೆ ಹೋಗಬೇಕು ಮತ್ತು ಅಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಬೇಕು. ನಂತರ ನೀವು ಬಳಕೆದಾರರ ಹೆಸರಿನಲ್ಲಿ ರೀಲ್‌ನ ಕೆಳಭಾಗದಲ್ಲಿರುವ ಆಡಿಯೊ ಶೀರ್ಷಿಕೆಯನ್ನು ಟ್ಯಾಪ್ ಮಾಡಿ, ಮತ್ತು ಇದು ನಿಮ್ಮನ್ನು ಒಂದು ನಿರ್ದಿಷ್ಟ ಆಡಿಯೊವನ್ನು ಬಳಸಿದ ಪ್ರತಿ ರೀಲ್ ಅನ್ನು ನೀವು ನೋಡಬಹುದಾದ ಪುಟಕ್ಕೆ ಕರೆದೊಯ್ಯಲಿದೆ.

ಶೇರ್

ಇನ್ನು ಈ ಪೇಜ್‌ನಲ್ಲಿ ನೀವು ಬಳಸಿರುವ ಆಡಿಯೋ ಪೇಜ್‌ಗಳನ್ನು ತೋರಿಸಲಿದೆ. ಈ ಪೇಜ್‌ ಅನ್ನು ಶೇರ್‌ ಮಾಡಿಕೊಳ್ಳಲು ಬಯಸಿದರೆ, ಮೇಲಿನ ಬಲಭಾಗದಲ್ಲಿರುವ ಕಳುಹಿಸು ಐಕಾನ್ ಮೂಲಕ ಶೇರ್‌ ಮಾಡಬಹುದು. ಅಲ್ಲದೆ ನೀವು ನಿಮ್ಮ ಸ್ನೇಹಿತರು ಮತ್ತು ಅನುಯಾಯಿಗಳಿಗೆ ಶೇರ್‌ ಮಾಡಬೇಕಾದರೆ ರೀಲ್‌ನ ಕೆಳಭಾಗದಲ್ಲಿರುವ ಪಟ್ಟಿಯಲ್ಲಿ ಹೆಸರುಗಳನ್ನ ತೋರಿಸಲಾಗುತ್ತದೆ. ಇದರಲ್ಲಿ ನೀವು ಆಯ್ಕೆ ಮಾಡಿರುವ ಆಡಿಯೋ ರೀಲ್ಸ್‌ನ ಪೇಜ್‌ಗಳನ್ನು ಡಿಎಂನಲ್ಲಿ ಕಳುಹಿಸಬಹುದು. ಅಲ್ಲದೆ ಬುಕ್ ಮಾರ್ಕ್ ಐಕಾನ್ ಮೂಲಕ ನೀವು ಆಡಿಯೊವನ್ನು ನಂತರ ಸೇವ್‌ ಮಾಡಬಹುದಾಗಿದೆ. ನೀವು ತಕ್ಷಣ ಆಡಿಯೊವನ್ನು ಬಳಸಲು ಬಯಸಿದರೆ, ಪರದೆಯ ಕೆಳಭಾಗದಲ್ಲಿರುವ "ಆಡಿಯೋ ಬಳಸಿ" ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಆಡಿಯೋ

ಒಮ್ಮೆ ನೀವು ಆಡಿಯೋ ಟ್ರ್ಯಾಕ್ ಅನ್ನು ಸೇವ್‌ ಮಾಡಿದ ನಂತರ, ಆಡಿಯೋ ಲೈಬ್ರರಿಗೆ ಹೋಗಿ ಮತ್ತು ನೀವು ಮೊದಲು ನೋಡಿದ "ಸೇವ್‌" ವಿಭಾಗವನ್ನು ಟ್ಯಾಪ್ ಮಾಡುವ ಮೂಲಕ ಅದನ್ನು ನಂತರ ನಿಮ್ಮ ರೀಲ್ಸ್‌ನಲ್ಲಿ ಬಳಸಬಹುದು. ಇದು ನೀವು ಸೇವ್‌ ಮಾಡಿದ ಆಡಿಯೊದ ಪಟ್ಟಿಯನ್ನು ನಿಮಗೆ ತೋರಿಸುತ್ತದೆ ಮತ್ತು ನೀವು ಪ್ರಸ್ತುತ ಮಾಡುತ್ತಿರುವ ರೀಲ್‌ಗೆ ಅವುಗಳನ್ನು ಸೇರಿಸಲು ನಿಮಗೆ ಅವಕಾಶವನ್ನು ಸಹ ನೀಡಲಿದೆ. ಅಲ್ಲದೆ ನೀವು ಸೇವ್‌ ಮಾಡಿದ ಆಡಿಯೊವನ್ನು ನಿಮ್ಮ ಪ್ರೊಫೈಲ್‌ನಲ್ಲಿ ನಿಮ್ಮ ಮೆನುವನ್ನು ಎಳೆಯುವ ಮೂಲಕ ಮತ್ತು "ಸೇವ್‌" ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ನೀವು ಕಾಣಬಹುದು. ನಿರ್ದಿಷ್ಟವಾಗಿ ನೀವು ರೀಲ್ಸ್‌ನಿಂದ ಸೇವ್‌ ಮಾಡಿದ ಟ್ರ್ಯಾಕ್‌ಗಳಿಗಾಗಿ "ಆಡಿಯೋ" ಎಂಬ ಪ್ರತ್ಯೇಕ ವಿಭಾಗವಿದೆ, ಆದ್ದರಿಂದ ನೀವು ರೀಲ್‌ಗಳ ಮೂಲಕ ಹೋಗದೆ ನೀವು ಸೇವ್‌ ಮಾಡಿದ್ದನ್ನು ಕಾಣಬಹುದಾಗಿದೆ.

Best Mobiles in India

English summary
Instagram it’ll allow you to do things like save and share whole audio clips from other Reels. Here’s how to do that.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+