ಕದ್ದು ಮುಚ್ಚಿ ಬೇನಾಮಿ ಇಮೇಲ್ ಕಳಿಸೋದು ಹೇಗೆ?

ನಿಮ್ಮ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ಪತ್ರ ಸ್ವೀಕರಿಸುವವರಿಗೆ ತಲುಪುತ್ತದೆ. ಪತ್ರ ಪಡೆಯುವವ ಬುದ್ಧಿವಂತನಾದರೆ ನಿಮ್ಮ ಕಂಪ್ಯೂಟರ್ ನ ಗೌಪ್ಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು.
ನೀವು ಕಳಿಸುವ ಪತ್ರದಲ್ಲಿ ಗೌಪ್ಯ ವಿಷಯಗಳಿದ್ದರೆ ಹಾಗೂ ಬೇನಾಮಿಯಾಗಿ ಒಳ್ಳೆ ಕೆಲಸಕ್ಕೆ ತಿಳಿದವರಿಗೆ ಇಮೇಲ್ ಕಳಿಸುವುದು ಹೇಗೆ ಎಂಬುದನ್ನು ಗಿಜ್ ಬಾಟ್ ನಿಮಗೆ ಹಂತ ಹಂತವಾಗಿ ಹೇಳಿಕೊಡುತ್ತದೆ. ಸಿಸ್ಟಮ್ ಮುಂದೆ ಕುಳಿತು ಕಲಿತುಕೊಳ್ಳಿ
ಮೊದಲ ಹಂತ: send-email.org ವೆಬ್ ತಾಣ ಓಪನ್ ಮಾಡಿ
ಎರಡನೇ ಹಂತ: To ಎಂಬ ಕಡೆ ನೀವು ಯಾರಿಗೆ ಮೇಲ್ ಕಳಿಸಬೇಕೋ ಅವರ ಮೇಲ್ ಐಡಿ ಹಾಕಿ ಉದಾ: [email protected] OR [email protected]..ಇತ್ಯಾದಿ
ಮೂರನೇ ಹಂತ: ಒಂದು ಪದದಲ್ಲಿ ಪತ್ರದ ವಿಷಯ ತಿಳಿಸಿ
ನಾಲ್ಕನೇ ಹಂತ: ನಿಮ್ಮ ಪತ್ರದ ವಿಷಯ ತುಂಬಿಸಿ. ನಿಮ್ಮ ಪತ್ರದ ಪದಗಳ ಮಿತಿ 500 ಪದಗಳು(ಸಂಖ್ಯೆಗಳನ್ನು ಸೇರಿಸಿ)
ಐದನೇ ಹಂತ: ಚಿತ್ರದಲ್ಲಿ ಕಾಣುವ ವೇರಿಫಿಕೇಷನ್ ಕೋಡ್ ಹಾಕಿ, ಸ್ವಲ್ಪ ನಿಧಾನವಾದರೂ ಸರಿಯಾದ ಕೋಡ್ ಹಾಕಿ
ಆರನೇ ಹಂತ: ವೆರಿಫಿಕೇಷನ್ ಕೋಡ್ ಕೆಳಗಡೆ ಇರುವ send ಬಟನ್ ಒತ್ತಿ.. ಬೇನಾಮಿಯಾಗಿ ಮೇಲ್ ಕಳಿಸಿ
ಎಚ್ಚರಿಕೆ: ಬೇನಾಮಿಯಾಗಿ ಅನಾಮಧೇಯ ಇಮೇಲ್ ಸೌಲಭ್ಯವನ್ನು ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುವಂತಿಲ್ಲ. ನಿಯಮ ಮೀರಿ ಬಳಸಿದರೂ ಐಪಿ ಅಡ್ರೆಸ್ ಮೂಲಕವಾಗಿ ನಿಮ್ಮ ಗುರುತು ಪತ್ತೆ ಸುಲಭವಾಗಿ ಸಿಕ್ಕಿಬೀಳುತ್ತದೆ.


Click it and Unblock the Notifications