ವೊಡಾಫೋನ್ ಐಡಿಯಾದಲ್ಲಿ ಕಾಲರ್ ಟ್ಯೂನ್ ಸೆಟ್‌ ಮಾಡುವುದು ಹೇಗೆ?

|

ಭಾರತದ ಟೆಲಿಕಾಂ ವಲಯದಲ್ಲಿ ವೊಡಾಫೋನ್ ಐಡಿಯಾ ಜನಪ್ರಿಯ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿದೆ. ಇದು ಜಿಯೋ ಮತ್ತು ಏರ್‌ಟೆಲ್‌ನಂತಹ ಟಲಿಕಾಂ ದೈತ್ಯರೊಂದಿಗೆ ಸ್ಪರ್ಧಿಸುತ್ತಿದೆ. ಇನ್ನು ವೊಡಾಫೋನ್‌ ಐಡಿಯಾ ಭಾರತದಲ್ಲಿನ ತನ್ನ ಚಂದಾದಾರರಿಗೆ ಆಕರ್ಷಕ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಸೇವೆಗಳನ್ನು ಒದಗಿಸುತ್ತಿದೆ. ಜೊತೆಗೆ ಕಾಲರ್ ಟ್ಯೂನ್‌ಗಳು, ಮೌಲ್ಯವರ್ಧಿತ ಸೇವೆಗಳು ಮತ್ತು ಹೆಚ್ಚಿನ ಆಡ್-ಆನ್ ಸೇವೆಗಳೊಂದಿಗೆ ಗಮನ ಸೆಳೆದಿದೆ.

ವೊಡಾಫೋನ್

ಹೌದು, ವೊಡಾಫೋನ್ ಐಡಿಯಾ ತನ್ನ ಚಂದಾದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಕಾಲರ್‌ ಟ್ಯೂನ್‌ ಸೇವೆ ಕೂಡ ಒಂದು. ಇನ್ನು ವೋಡಾಫೊನ್‌ ಐಡಿಯಾದಲ್ಲಿ ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳಿಗೆ ಸುಲಭವಾಗಿ ಕಾಲರ್ ಟ್ಯೂನ್‌ಗಳನ್ನು ಸೆಟ್‌ ಮಾಡಬಹುದು. ಸ್ಟ್ಯಾಂಡರ್ಡ್ ರಿಂಗಿಂಗ್ ಟೋನ್ ಕೇಳುವ ಬದಲು ನಿಮ್ಮ ಆಯ್ಕೆಯ ಹಾಡನ್ನು ಕಾಲರ್‌ ಟ್ಯೂನ್‌ ಆಗಿ ಸೆಟ್‌ ಮಾಡಬಹುದು. ನಮಗೆ ಯಾರಾದರೂ ಕರೆ ಮಾಡಿದಾಗ ನಿಮ್ಮ ಫೋನ್‌ನಿಂದ ನೀವು ಕೇಳುವ ರಿಂಗ್‌ಟೋನ್‌ಗಿಂತ ಇದು ಭಿನ್ನವಾಗಿರುತ್ತದೆ. ಹಾಗಾದ್ರೆ ವೋಡಾಫೋನ್‌ ಐಡಿಯಾದಲ್ಲಿ ಕಾಲರ್‌ ಟ್ಯೂನ್‌ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವೊಡಾಫೋನ್‌

ವೊಡಾಫೋನ್‌ ಐಡಿಯಾ ನೆಟ್‌ವರ್ಕ್‌ ಬಳಕೆದಾರರು ಕಾಲರ್‌ ಟ್ಯೂನ್‌ ಅನ್ನು ಸೆಟ್‌ ಮಾಡುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ ವಿ(Vi) ಅಪ್ಲಿಕೇಶನ್‌ನ ಸಹಾಯ ಮಾಡಲಿದೆ. ವಿ ಅಪ್ಲಿಕೇಶನ್‌ನಲ್ಲಿ ಕಾಲರ್ ಟ್ಯೂನ್ ಆನ್‌ಲೈನ್ ಸ್ಟೋರ್ ಮತ್ತು ಪ್ರತ್ಯೇಕ ವಿಭಾಗವನ್ನು ಹೊಂದಿದೆ. ಇದರ ಹೊರತಾಗಿ, ವೊಡಾಫೋನ್ ಐಡಿಯಾ ನಿಮ್ಮ ಎಲ್ಲಾ ಕರೆ ಮಾಡುವವರಿಗೆ ನಿಮ್ಮ ನೆಚ್ಚಿನ ಹಾಡನ್ನು ಸರ್ಚ್‌ ಮಾಡಲು, ಬ್ರೌಸ್ ಮಾಡಲು ಮತ್ತು ಸೆಟ್‌ ಮಾಡಲು ಸುಲಭವಾಗುವಂತೆ ಪ್ರತ್ಯೇಕ ವಿ ಕಾಲರ್‌ಟೂನ್ಸ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದೆ. ಇದರಲ್ಲಿ ನೀವು ನಿಮ್ಮ ಆಯ್ಕೆಯ ಕಾಲರ್‌ ಟ್ಯೂನ್‌ ಸೆಟ್‌ ಮಾಡಬಹುದಾಗಿದೆ.

ಅಪ್ಲಿಕೇಶನ್

ಇನ್ನು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ವಿ ಕಾಲರ್‌ಟೂನ್ಸ್‌ ಅಪ್ಲಿಕೇಶನ್‌ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಕನ್ನಡ, ಒಡಿಯಾ, ಬಂಗಾಳಿ, ಅಸ್ಸಾಮೀಸ್, ಮರಾಠಿ, ಗುಜರಾತಿ, ಭೋಜ್‌ಪುರಿ, ಮತ್ತು ಪಂಜಾಬಿ ಮುಂತಾದ ಭಾಷೆಗಳ ಹಾಡುಗಳನ್ನು ಒಳಗೊಂಡಿದೆ. ಇದರಲ್ಲಿ ನಿಮ್ಮ ಆಯ್ಕೆಯ ಕಾಲರ್ ಟ್ಯೂನ್‌ ಸೆಟ್‌ ಮಾಡಬಹುದು. ವಿ ಕಾಲರ್‌ ಟೂನ್‌ ಅಪ್ಲಿಕೇಶನ್‌ ಮೂಲಕ ಕಾಲರ್‌ ಟ್ಯೂನ್‌ ಸೆಟ್‌ ಮಾಡೋಕೆ ಈ ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.

ವೊಡಾಫೋನ್ ಐಡಿಯಾದಲ್ಲಿ ಕಾಲರ್ ಟ್ಯೂನ್ ಸೆಟ್‌ ಮಾಡುವುದು ಹೇಗೆ?

ವೊಡಾಫೋನ್ ಐಡಿಯಾದಲ್ಲಿ ಕಾಲರ್ ಟ್ಯೂನ್ ಸೆಟ್‌ ಮಾಡುವುದು ಹೇಗೆ?

ಹಂತ:1 ವಿ ಕಾಲರ್‌ ಟ್ಯೂನ್‌ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ / ಆನ್‌ಲೈನ್ ಸ್ಟೋರ್ / ವಿ ಅಪ್ಲಿಕೇಶನ್ ಕಾಲರ್ ಟ್ಯೂನ್ಸ್ ವಿಭಾಗಕ್ಕೆ ಹೋಗಿ. ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಒಟಿಪಿ ಎಂಟ್ರಿ ಮಾಡಿ.
ಹಂತ:2 ನಂತರ ಅಪ್ಲಿಕೇಶನ್‌ ಕಾಲರ್ ಟ್ಯೂನ್‌ ಲಿಸ್ಟ್‌ ಅನ್ನು ತೋರಿಸುತ್ತದೆ.
ಹಂತ:3 ಪ್ಲೇಬ್ಯಾಕ್ ಕೇಳಲು ಪ್ರತಿ ಕಾಲರ್ ಟ್ಯೂನ್‌ನಲ್ಲಿ ಪ್ಲೇ ಬಟನ್ ಕ್ಲಿಕ್ ಮಾಡಿ.
ಹಂತ:4 ನೀವು ಆಯ್ಕೆ ಮಾಡಿದ ನಂತರ, ಕರೆ ಮಾಡುವವರ ಟ್ಯೂನ್‌ಗೆ ಸೆಟ್‌ ಮಾಡಲಾದ ಬೆಲೆಗಳನ್ನು ನೋಡಲು ‘ಸೆಟ್' ಕ್ಲಿಕ್ ಮಾಡಿ. Vi 30 ದಿನಗಳು, 90 ದಿನಗಳು ಮತ್ತು ವಾರ್ಷಿಕ ಯೋಜನೆಗಳನ್ನು ನೀಡುತ್ತದೆ.
ಹಂತ:5 ನೀವು ಸಭೆಯಲ್ಲಿ ನಿರತರಾಗಿದ್ದೀರಿ, ವ್ಯವಹಾರದಲ್ಲಿ ಪ್ರಯಾಣಿಸುತ್ತಿದ್ದೀರಿ ಅಥವಾ ರಜೆಯಲ್ಲಿದ್ದೀರಿ ಎಂದು ಕಾಲರ್‌ ಟ್ಯೂನ್‌ ಮೂಲಕ ನಿಮಗೆ ಕರೆ ಮಾಡುವವರಿಗೆ ಹೇಳಲು Vi ಪ್ರೊಫೈಲ್ ಟ್ಯೂನ್‌ಗಳನ್ನು ಉಚಿತವಾಗಿ ನೀಡುತ್ತದೆ.
ಹಂತ:6 ಕ್ಯಾಟಲಾಗ್‌ನಿಂದ ಆಯ್ಕೆಮಾಡಿ ಮತ್ತು ನಿಮಗೆ ಸೂಕ್ತವಾದ ಬೆಲೆ ಆಯ್ಕೆಯನ್ನು ಆರಿಸಿ. ಹೆಚ್ಚಿನ ಕಾಲರ್ ಟ್ಯೂನ್‌ಗಳಿಗೆ 49 ರೂ. ಪಾವತಿಸಬೇಕಾಗುತ್ತದೆ. ನೀವು ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ ಅಥವಾ ನೀವು ಪೋಸ್ಟ್‌ಪೇಯ್ಡ್ ಚಂದಾದಾರರಾಗಿದ್ದರೆ ನಿಮ್ಮ ಹಣವನ್ನು ನಿಮ್ಮ ಬಾಕಿ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ.

Most Read Articles
Best Mobiles in India

English summary
Vodafone Idea has released a separate Caller Tune app for making it easier to search, browse and set your favourite song for all your callers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X