Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಪರ್ಸನಲ್‌ ಚಾಟ್‌ಗೆ ಕಸ್ಟಮ್ ವಾಲ್‌ಪೇಪರ್‌ ಸೆಟ್‌ ಮಾಡುವುದು ಹೇಗೆ?

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಮಾದರಿಯ ಫೀಚರ್ಸ್‌ ಪರಿಚಯಿಸಿದೆ. ಕಾಲಕಾಲಕ್ಕೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಕಸ್ಟಮ್‌ ವಾಲ್‌ ಪೇಪರ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಈ ಫೀಚರ್ಸ್‌ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿದೆ. ಈ ಫೀಚರ್ಸ್‌ ವಾಟ್ಸಾಪ್‌ನ ವಾಲ್‌ಪೇಪರ್‌ಗಳಲ್ಲಿ ಸಾಕಷ್ಟು ಆಪ್ಡೇಟ್‌ ಅನ್ನು ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಇತ್ತೀಚಿಗಷ್ಟೇ ಕಸ್ಟಮ್‌ ವಾಲ್‌ ಪೇಪರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ನೀವು ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವವರೆಗೆ ಈ ಫೀಚರ್ಸ್‌ ಲಭ್ಯವಾಗಲಿದೆ. ಈ ಫೀಚರ್ಸ್‌ ಮೂಲಕ ನೀವು ನಿಮ್ಮ ವಾಲ್‌ಪೇಪರ್‌ಗಳನ್ನು ನಿಮ್ಮ ಇಚ್ಚೆಯಂತೆ ಕಸ್ಟಮೈಸ್ ಮಾಡಲು ನಿಮಗೆ ಸಾಧ್ಯವಾಗಲಿದೆ. ಇನ್ನು ಈ ಫೀಚರ್ಸ್‌ ಬಳಸಿ ವೈಯುಕ್ತಿಕ ಚಾಟ್‌ಗಳಲ್ಲೂ ವಾಲ್‌ಪೇಪರ್‌ ಬದಲಾಯಿಸಬಹುದಾಗಿದೆ. ಹಾಗಾದ್ರೆ ಕಸ್ಟಮ್‌ ವಾಲ್‌ ಪೇಪರ್‌ ಫೀಚರ್ಸ್‌ನಲ್ಲಿ ವೈಯುಕ್ತಿಕ ಚಾಟ್‌ಗಳಲ್ಲಿ ವಾಲ್‌ಪೇಪರ್‌ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ವಾಲ್‌ಪೇಪರ್‌ಗಳಲ್ಲಿನ ಸುದಾರಣೆಯಲ್ಲಿ ಚಾಟ್‌ಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳು, ಡೂಡಲ್ ವಾಲ್‌ಪೇಪರ್‌ಗಳು, ವಾಲ್‌ಪೇಪರ್ಸ್‌ ಗ್ಯಾಲರಿಯಲ್ಲಿ ಹೊಸ ಸ್ಟಾಕ್ ಮತ್ತು ಅಪ್ಲಿಕೇಶನ್‌ನಲ್ಲಿ ಲೈಟ್ ಮತ್ತು ಡಾರ್ಕ್ ಮೋಡ್‌ಗಾಗಿ ಪ್ರತ್ಯೇಕ ವಾಲ್‌ಪೇಪರ್‌ಗಳನ್ನು ಹೊಂದಿಸುವ ಆಯ್ಕೆ ಸೇರಿವೆ. ಹೊಸ ನವೀಕರಣದೊಂದಿಗೆ, ನೀವು ವಿಭಿನ್ನ ಚಾಟ್‌ಗಳಿಗಾಗಿ ವಿಭಿನ್ನ ವಾಲ್‌ಪೇಪರ್‌ಗಳನ್ನು ಹೊಂದಿಸಬಹುದಾಗಿದ್ದು, ನಿಮ್ಮ ಚಾಟ್‌ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ.

ವಾಟ್ಸಾಪ್‌ನಲ್ಲಿ ಪರ್ಸನಲ್‌ ಚಾಟ್‌ಗಳಿಗೆ ಕಸ್ಟಮ್ ವಾಲ್‌ಪೇಪರ್‌ ಸೆಟ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಪರ್ಸನಲ್‌ ಚಾಟ್‌ಗಳಿಗೆ ಕಸ್ಟಮ್ ವಾಲ್‌ಪೇಪರ್‌ ಸೆಟ್‌ ಮಾಡುವುದು ಹೇಗೆ?

ಹಂತ:1 ನೀವು ವಾಲ್‌ಪೇಪರ್ ಅನ್ನು ಕಸ್ಟಮೈಸ್ ಮಾಡಲು ಬಯಸುವ ಚಾಟ್ ತೆರೆಯಿರಿ.

ಹಂತ:2 ಸಂಪರ್ಕ ಮಾಹಿತಿಯನ್ನು ಪಡೆಯಲು ಸಂಪರ್ಕ ಹೆಸರನ್ನು ಟ್ಯಾಪ್ ಮಾಡಿ.

ಹಂತ:3 ವಾಲ್‌ಪೇಪರ್ ಮತ್ತು ಸೌಂಡ್ ಕ್ಲಿಕ್ ಮಾಡಿ.

ಹಂತ:4 ‘ಹೊಸ ವಾಲ್‌ಪೇಪರ್ ಆಯ್ಕೆಮಾಡಿ' ಕ್ಲಿಕ್ ಮಾಡಿ.

ವಾಲ್‌ಪೇಪರ್

ವಾಲ್‌ಪೇಪರ್ ಆರ್ಕೈವ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಸ್ಟಾಕ್ ವಾಲ್‌ಪೇಪರ್‌ಗಳಿಂದ ಲೈಟ್‌, ಡಾರ್ಕ್‌ ಮತ್ತು ಘನ ಬಣ್ಣಗಳ ನಡುವೆ ಅಥವಾ ಹಳೆಯ ವಾಲ್‌ಪೇಪರ್‌ಗಳಿಂದ ಆಯ್ಕೆ ಮಾಡಬಹುದು. ಕಸ್ಟಮ್ ವಾಲ್‌ಪೇಪರ್ ಆಗಿ ಮಾಡಲು ನೀವು ನಿಮ್ಮ ಫೋನ್ ಗ್ಯಾಲರಿಯಿಂದ ಫೋಟೋವನ್ನು ಸಹ ನೀವು ಆಯ್ಕೆ ಮಾಡಬಹುದು. ನೀವು ಆರಿಸಿದ ನಂತರ ಸ್ಕ್ರೀನ್‌ ಅನ್ನು ಪ್ರಿ ವ್ಯೂ ಮಾಡಲು ಎಡ ಅಥವಾ ಬಲಕ್ಕೆ ಸ್ವೈಪ್ ಮಾಡಬಹುದು.

ವಾಲ್‌ಪೇಪರ್

ಅಲ್ಲದೆ ನೀವು ನಿರ್ಧರಿಸಿದಾಗ, ನೀವು ‘ಸೆಟ್' ಅನ್ನು ಟ್ಯಾಪ್ ಮಾಡಿ ಮತ್ತು ಬ್ರೈಟ್‌ನೆಶ್‌ಗಾಗಿ ವಾಲ್‌ಪೇಪರ್ ಡಿಮ್ಮಿಂಗ್ ಅನ್ನು ಸೆಟ್‌ಮಾಡಬಹುದು. ಈಗ ನೀವು ವಿಭಿನ್ನ ಚಾಟ್‌ಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳನ್ನು ಹೊಂದಿಸಬಹುದು. ಆದಾಗ್ಯೂ, ಗ್ರೂಪ್‌ ಚಾಟ್‌ಗಳಿಗಾಗಿ, ನೀವು ಆಡ್ಮಿನ್‌ ಆಗಿದ್ದರೆ ಮಾತ್ರ ನೀವು ವಾಲ್‌ಪೇಪರ್ ಅನ್ನು ಬದಲಾಯಿಸಬಹುದಾಗಿದೆ.

Best Mobiles in India

English summary
WhatsApp allows you to set custom wallpapers for individual chats on both iPhones and Android smartphones and this is how you can do it.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+